ಸೈಟು ಯಾಕೆ ಕೊಳ್ಳಬೇಕು ?
ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದಬೇಕೆಂದು ಅಸೆ ಇರುತ್ತದೆ. ಎಷ್ಟು ದಿನ ಬಾಡಿಗೆ ಮನೆಯಲ್ಲಿ ಇರುವುದು, ಒಂದು ಸ್ವಂತ ಸೂರಿರಲಿ ಎಂದು ಬಯಸುತ್ತಾರೆ. ಮನೆ ಕಟ್ಟಲು ಸೈಟು ಬೇಕೇ ಬೇಕು. ಕಾರಣಾಂತರಗಳಿಂದ ಮನೆ ಕಟ್ಟಲಾಗದವರು ಮುಂದೆ ಅದನ್ನು ಮಾರಿದಾಗ ಒಳ್ಳೆಯ ಮೊತ್ತದ ಲಾಭವನ್ನು ಗಳಿಸುತ್ತಾರೆ.
ನಿವೇಶನ ಖರೀದಿ ಮಾಡಿದರೆ ಲಾಭ ಇದೆಯೇ ?
- ಸೈಟಿನ ಮೇಲೆ ಇನ್ವೆಸ್ಟ್ ಮಾಡಿದರೆ ಖಂಡಿತವಾಗಿ ಲಾಭದ ಪ್ರಮಾಣ ಹೆಚ್ಚಿಗೆ ಇದ್ದೇ ಇರುತ್ತದೆ,
- ನೀವು ಬ್ಯಾಂಕು ಅಥವಾ ಬೇರೆ ಯಾವುದೇ ಫಿಕ್ಸಡ್ ಡಿಪಾಸಿಟ್ ಸ್ಕೀಮ್ನಲ್ಲಿ ಹಣ ಹೂಡಿದಾಗ ಲಾಭದ ಪ್ರಮಾಣ ಸ್ವಲ್ಪ ಕಡಿಮೆ ಇರುತ್ತದೆ.
- ಆದೇ ನೀವು ಸೈಟಿನ ಮೇಲೆ ಇನ್ವೆಸ್ಟ್ ಮಾಡಿದಾಗ ನಿಮಗೆ 50%, 100%, 150%, 200% ಹೆಚ್ಚಿಗೆ ಆಗಬಹುದು.
- ನೀವು ಇವತ್ತು ಸೈಟು ಖರೀದಿಸಿದರೆ ನಿವೃತ್ತಿಯಾದ ನಂತರ ಒಂದು ಆಸರೆಯಾಗಬಹುದು, ಅಥವಾ ನಿಮ್ಮ ಮಗನಿಗೆ ಅಥವಾ ಮಗಳಿಗೆ ಉಡುಗೊರೆ ಕೊಡಬಹುದು.
ಬೆಂಗಳೂರು-ಮೈಸೂರು ರಸ್ತೆಯು ಹತ್ತು ಹಲವು ಕಾರಣಗಳಿಂದ ನಿವೇಶನ ಖರೀದಿದಾರರಿಗೆ ಅಚ್ಚುಮೆಚ್ಚಿನ ಸ್ಥಳವಾಗಿ ಪರಿಣಮಿಸಿದೆ. ಇಲ್ಲಿ ನಿವೇಶನ ಖರೀದಿಸುವುದರಿಂದ ಹಲವು ಲಾಭಗಳಿವೆ, ಬೆಂಗಳೂರು -ಮೈಸೂರು ರಸ್ತೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಗೃಹ ನಿರ್ಮಾಣ ಚಟುವಟಿಕೆಗಳು ಚುರುಕುಗೊಂಡಿವೆ. ಬೆಂಗಳೂರಿನ ನೈರುತ್ಯ ಭಾಗವನ್ನು ಮೈಸೂರು, ಮಂಡ್ಯ, ರಾಮನಗರಗಳೊಂದಿಗೆ ಸಂಪರ್ಕಿಸುವ ಮೈಸೂರು ರಸ್ತೆಯು ಕನೆಕ್ಟಿವಿಟಿ, ಮೂಲಸೌಕರ್ಯ ಇತ್ಯಾದಿಗಳಿಂದ ಸೈಟು ಖರೀದಿಸಲು ಜನರನ್ನು ಆಕರ್ಷಿಸುತ್ತಿದೆ. ಸಿರ್ಸಿ ಸರ್ಕಲ್ ನಿಂದ ಬಿಡದಿವರೆಗೂ ಮೈಸೂರು ರಸ್ತೆಯು ಅಗಾಧ ರೀತಿಯಲ್ಲಿ ಬೆಳೆದಿದೆ. ಈ ರಸ್ತೆಯಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ ಕೆಂಗೇರಿ, ಕೆಂಗೇರಿ ಸ್ಯಾಟಲೈಟ್ ಪ್ರದೇಶ ಮುಂತಾದ ಪ್ರಮುಖ ಬಡಾವಣೆಗಳಿವೆ. ಮೈಸೂರು ರಸ್ತೆಯು ಸಕಲ ರೀತಿಯಲ್ಲಿ ಅಭಿವೃದ್ಧಿಗೊಂಡು ವಸತಿ ಯೋಗ್ಯ ಪ್ರದೇಶವಾಗಿ ರೂಪುಗೊಂಡಿದೆ.
ಮೈಸೂರು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಇತ್ತೀಚೆಗೆ ಬಹುಬೇಗ ಅಭಿವೃದ್ದಿ ಹೊಂದುತ್ತಿವೆ. ಮೆಟ್ರೋ ರೈಲಿನ ಸಂಪರ್ಕ ಬಂದ ಮೇಲಂತೂ ಇಲ್ಲಿ ನಿವೇಶನ ಹಾಗೂ ಮನೆಗಳಿಗೆ ತುಂಬಾ ಬೇಡಿಕೆ ಬಂದಿದೆ, ಬೆಲೆಯೂ ಹೆಚ್ಚಾಗಿದೆ. ಮೆಟ್ರೋ ರೈಲು ಈಗ ಕೆಂಗೇರಿವರೆಗೂ ಸಂಚರಿಸುತ್ತಿದ್ದು ಮುಂದೆ ಬಿಡದಿವರೆಗೂ ವಿಸ್ತರಿಸುವ ಸಾಧ್ಯತೆ ಇದೆ. ಆಗ ರಿಯಲ್ ಎಸ್ಟೇಟ್ ಚಟುವಟಿಕೆ ಇನ್ನೂ ಹೆಚ್ಚಾಗಲಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಹೇಳುತ್ತಾರೆ. ಬಸ್, ರೈಲು ಮತ್ತು ಮೆಟ್ರೊ ನಿಲ್ದಾಣಗಳು ಹತ್ತಿರದಲ್ಲಿರುವುದರಿಂದ ಜನರಿಗೆ ಈ ಪ್ರದೇಶವು ಜನರಿಗೆ ಪ್ರಯೋಜನಕಾರಿಯಾಗಿದೆ. ಮೈಸೂರು ರಸ್ತೆಯಲ್ಲಿ ಆರ್ ವಿ ಎಂಜನಿಯರಿಂಗ್ ಕಾಲೇಜು, ಪಿಇಎಸ್ ಯೂನಿವರ್ಸಿಟಿ, ಆರ್ಕಿಡ್ ಇಂಟರ್ ನ್ಯಾಷನಲ್, ಡಾನ್ ಬಾಸ್ಕೊ ಟೆಕ್ನಾಲಜಿ ಇನ್ಸ್ಟಿಟ್ಯೂಟ್, ಕೈಸ್ಟ್ ಯೂನಿವರ್ಸಿಟಿ ಸೇರಿದಂತೆ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹತ್ತಿರದಲ್ಲಿವೆ. ಎಚ್ ಕೆ ಆಸ್ಪತ್ರೆ, ರಾಜರಾಜೇಶ್ವರಿ ದಂತ ಮತ್ತು ವೈದ್ಯಕೀಯ ಕಾಲೇಜು, ಗುರುಕುಲ ಅಂತಾರಾಷ್ಟೀಯ ಶಾಲೆ, ಸಾಯಿ ಸ್ಪೋರ್ಟ್ ಸೆಂಟರ್, ಯುನಿಟಿ ಆಸ್ಪತ್ರೆ, ಬ್ರೂಕ್ ಫೀಲ್ಡ್ ಹಾಸ್ಪಿಟಲ್, ಇಂಡಸ್ ವೆಸ್ಟ್ ಹಾಸ್ಪಿಟಲ್ ಸೇರಿದಂತೆ ಹಲವು ಆಸ್ಪತ್ರೆಗಳು ಹತ್ತಿರದಲ್ಲಿವೆ. ಗೋಪಾಲನ್ ಆರ್ಕೆಡ್ ಮಾಲ್, ಕಂಟ್ರಿ ಕ್ಲಬ್, ವಂಡರ್ ಲಾ ಸನಿಹದಲ್ಲಿವೆ. ದೊಡ್ಡ ಆಲದ ಮರ, ರಾಜರಾಜೇಶ್ವರಿ ದೇವಾಲಯ ಮುಂತಾದ ಧಾರ್ಮಿಕ ಸ್ಥಳಗಳು ಮೈಸೂರು ರಸ್ತೆಯಲ್ಲಿವೆ. ಕ್ರೀಡಾ ಸಾಮಗ್ರಿಗಳ ಮಾರಾಟಕ್ಕೆ ಹೆಸರಾದ ಡೆಕಥ್ಲಾನ್ ಇವೆಲ್ಲವೂ ಕೇವಲ 8 ರಿಂದ 10 ನಿಮಿಷದ ಹಾದಿಯಲ್ಲಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆಟುಕುವ ದರದಲ್ಲಿ ಸೈಟುಗಳು ದೊರೆಯುತ್ತಿರುವುದು ಖರೀದಿದಾರರಿಗೆ ಶುಭ ಸಮಾಚಾರ. ಹೂಡಿಕೆಗೆ ಬಡಾವಣೆ ಪ್ರಶಸ್ತ ತಾಣವಾಗಿದೆ. ಮೈಸೂರು ರಸ್ತೆಯಲ್ಲಿ ಬಸ್, ರೈಲು, ಮೆಟ್ರೋ ರೈಲು ಸೌಲಭ್ಯಗಳಿಂದ ನಗರದ ಇತರ ಪ್ರದೇಶಗಳಿಗೆ ಸಂಪರ್ಕ ಸುಲಭ ಸಾಧ್ಯವಾಗಿದೆ. ಈ ಎಲ್ಲ ಕಾರಣಗಳಿಂದ ಜನರು ಮೈಸೂರು ರಸ್ತೆಯಲ್ಲಿ ನಿವೇಶನ ಖರೀದಿಸುತ್ತಿರುವುದು ಹೆಚ್ಚುತ್ತಿದೆ. ಇಲ್ಲಿ ಹೂಡಿಕೆಯ ದೃಷ್ಟಿಯಿಂದಲೂ ಸೈಟ್ ಖರೀದಿಸುವವರು ಇದ್ದಾರೆ ಮತ್ತು ಮೈಸೂರು ರಸ್ತೆಯನ್ನು ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಮುಖ ಹಬ್ ಆಗಿ ಪರಿವರ್ತಿಸಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಮೈಸೂರು ರಸ್ತೆಯಲ್ಲೇ ಸೈಟು ಖರೀದಿ ಮಾಡಿದರೆ ಅನುಕೂಲವೇನು ?
ಈಗಿರುವ ಬೆಂಗಳೂರು - ಮೈಸೂರು ರಸ್ತೆಯನ್ನು ಹತ್ತು ಪಥಗಳ ರಾಷ್ಟ್ರೀಯ ಹೆದ್ದಾರಿಯಾಗಿ ನಿರ್ಮಿಸಲಾಗುತ್ತಿದೆ. ಅದರ ಕಾಮಗಾರಿ ಬಹುಪಾಲು ಮುಗಿದಿದ್ದು ಈ ವರ್ಷದ ಅಕ್ಟೋಬರ್ ವೇಳೆಗೆ ಸಂಚಾರ ಆರಂಭವಾಗಲಿದೆ.
ಇಲ್ಲಿ ತುರ್ತಾಗಿ ವಸತಿ ನಿವೇಶನಗಳು ಬೇಕಾಗಿರುವುದರಿಂದ ನಾಳಿನ ಉಜ್ವಲ ಭವಿಷ್ಯಕ್ಕೆ ಈ ಪ್ರದೇಶದಲ್ಲಿ ಸೈಟುಗಳ ಮೇಲೆ ಹಣ ಹೂಡಿದರೆ ಹೆಚ್ಚು ಲಾಭವಾಗುವುದು ಖಂಡಿತ. ಇನ್ನು ಕೆಲವೇ ವರ್ಷಗಳಲ್ಲಿ ಸೈಟುಗಳ ಬೆಲೆ ದುಪ್ಪಟ್ಟಾಗುವುದರಲ್ಲಿ ಅನುಮಾನವೇ ಇಲ್ಲ. ಮೈಸೂರು ರಸ್ತೆಗೆ ಹತ್ತಿರವಾಗಿ, ಕೆಂಗೇರಿಯಿಂದ ಕೇವಲ 10 ನಿಮಿಷದ ದೂರದಲ್ಲಿ ಲೇಔಟ್ ನಿರ್ಮಿಸಲಾಗಿದೆ.
ನೋಂದಣಿಗೆ ಮತ್ತು ಮನೆ ಕಟ್ಟಲು ಸಿದ್ಧವಾಗಿವೆ. ಸೈಟುಗಳು ಚದರ ಅಡಿಗೆ ರೂ.1499 ದರ ನಿಗದಿಯಾಗಿರುತ್ತದೆ.
ಬಡಾವಣೆಯ ವೈಶಿಷ್ಟ್ಯಗಳು :
30 ಮತ್ತು 25 ಅಡಿಯ ಡಾಂಬರ್ ರಸ್ತೆಗಳು, ಅಕ್ಕಪಕ್ಕ ಮರಗಳಿವೆ. ಒಳಚರಂಡಿ, ವಿದ್ಯುತ್ ಸಂಪರ್ಕ ವ್ಯವಸ್ಥೆ ಇದೆ. ಪ್ರತಿ ನಿವೇಶನಕ್ಕೂ ಪ್ರತ್ಯೇಕ ನೀರಿನ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ನೀರು ಸರಾಗವಾಗಿ ಹರಿದುಹೋಗಲು ಡ್ರೈನೇಜ್ ವ್ಯವಸ್ಥೆ ಇದೆ. ಇಲ್ಲಿ ಅತ್ಯಂತ ಕಡಿಮೆ ಬೆಲೆಗೆ ನಿವೇಶನ ಖರೀದಿಸಿ ಕೂಡಲೇ ನೋಂದಾಯಿಸಿಕೊಳ್ಳಬಹುದು ಹಾಗೂ ಮನೆಯನ್ನೂ ಕಟ್ಟಲೂ ಪ್ರಾರಂಭಿಸಬಹುದು.
*ಷರತ್ತುಗಳು ಅನ್ವಯಿಸುತ್ತದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 93411 18999