Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜೀವನಶೈಲಿ » ಜೀವನಶೈಲಿ ಸುದ್ದಿ

ಪ್ರತಿಭಾ ಸಂಪನ್ನರ ಸೃಷ್ಟಿಯಲ್ಲ, ಶೋಧ ಬೆರಳಚ್ಚು ವಿಶ್ಲೇಷಣೆ, ಅಗ್ನಿ ಮತ್ತು ಧ್ವನಿ ಚಿಕಿತ್ಸೆ, ಹೆತ್ತವರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ತರಬೇತಿ ಕಾರ್ಯಕ್ರಮ


07 Sep 2020

Light For You

‘ಬೆಳಕು, ನಿಮಗಾಗಿ’ ಎಂಬ ಧ್ಯೇಯದೊಂದಿಗೆ ಶುಭಸಂಕಲ್ಪ ಸಂಸ್ಥೆಯು ಸುಮಾರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಅದು ನಿಮ್ಮನ್ನು ಬಲಿಷ್ಠರನ್ನಾಗಿ, ಆತ್ಮವಿಶ್ವಾಸವುಳ್ಳ ವ್ಯಕ್ತಿಯನ್ನಾಗಿ ರೂಪಿಸುವ ಜತೆಗೆ, ನಾವು ಗಳಿಸಬೇಕಾದ ಶಕ್ತಿ ಮತ್ತು ಚೈತನ್ಯಕ್ಕೆ ಆಂತರಿಕವಾಗಿಯೇ ಇಚ್ಛಾಶಕ್ತಿಯನ್ನು ತುಂಬುವ ಕೆಲಸ ಮಾಡುತ್ತದೆ.

ನಿಮ್ಮ ಈ ಬದುಕಿಗೆ ಏನು ಕಾರಣ? ಪ್ರಕೃತಿ - ಆತ್ಮ, ವಿಜ್ಞಾನ - ಧರ್ಮದ ನಡುವಿನ ಸಂಬಂಧಗಳೇನು? ನಿತ್ಯ ಜೀವನದಲ್ಲಿ ಮಾನವೀಯ ಮೌಲ್ಯಗಳ ಅನುಷ್ಠಾನ ಹೇಗೆ? ಪ್ರತಿಯೊಂದು ಧರ್ಮ ಹಾಗೂ ಸಂಸ್ಕೃತಿಯನ್ನು ಏಕೆ ಮತ್ತು ಹೇಗೆ ಗೌರವಿಸಬೇಕು? ಯಾವುದೇ ಭೇದ-ಭಾವ ತೋರದೆ ಮನುಕುಲದ ಸೇವೆ ಮಾಡುವುದು ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನಾವು ನಿಮಗೆ ನೆರವಾಗುತ್ತೇವೆ.

Light For You ನಿಮ್ಮ ಆಂತರಿಕ ಗುಣಗಳು, ಶಕ್ತಿ ಹಾಗೂ ಸಾಮರ್ಥ್ಯಗಳನ್ನು ಗುರುತಿಸುವ ಜತೆಗೆ ಮಾನವೀಯ ಮೌಲ್ಯಗಳನ್ನು ವರ್ಧಿಸಿ, ಪೂರ್ಣ ಸಾಮರ್ಥ್ಯವನ್ನು ಶ್ರುತಪಡಿಸಿ, ಮಹತ್ವವಾದುದನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ಜೀವನದಲ್ಲಿ ಎದುರಾಗುವ ಯಾವುದೇ ಸವಾಲನ್ನು ಎದುರಿಸಿ ಮುನ್ನುಗ್ಗುವ ಧೈರ್ಯ, ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ  ಮಾಡುತ್ತದೆ. ಸಂತೃಪ್ತಿ, ಯಶಸ್ಸು ಹಾಗೂ ಸಂತೋಷದಿಂದ ಕೂಡಿದ ಆದರ್ಶ ಜೀವನವನ್ನು ನಡೆಸಲು ದಾರಿ ತೋರಿಸುತ್ತದೆ.

ಈ ಪೀಳಿಗೆಯ ಸಮಸ್ಯೆಗಳನ್ನು ಗುರುತಿಸಿ, ಪ್ರಸಕ್ತ ಶೈಕ್ಷಣಿಕ ಪದ್ಧತಿಯನ್ನು ಭಾರತೀಯತೆಯನ್ನು ತುಂಬುವುದು Light For You ಸಂಸ್ಥೆಯ ಉದ್ದೇಶ. ಮಾನವ ಸಹಜವಾದ ಮೂಲ ಗುಣಗಳನ್ನು ಬಲಪಡಿಸಿ, ವ್ಯಕ್ತಿಗತ ದೌರ್ಬಲ್ಯಗಳ ನಿವಾರಣೆಗೆ ಶ್ರಮಿಸುವ ಜತೆಗೆ, ಸಮಸ್ಯೆಗಳನ್ನು ನಿವಾರಿಸಿಕೊಂಡು ಪೂರ್ಣ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಮಾಡುತ್ತೇವೆ. ಈ ಪರಿಕಲ್ಪನೆ ವಿಶಿಷ್ಟವೂ ವಿಶೇಷವೂ ಆಗಿದೆ. Light For You ಸಂಸ್ಥೆ ಅನುಸರಿಸುವ ವಿಧಾನ ಸರಳವೂ, ವೈಜ್ಞಾನಿಕವೂ ಶಕ್ತಿಶಾಲಿಯೂ ಆಗಿದ್ದು, ದೈನಂದಿನ ಗುರಿಗಳನ್ನು ಸಾಧಿಸಲು ಪೂರಕವಾಗಿದೆ. ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಅಪಾರ ಅನುಭವದೊಂದಿಗೆ Light For You ಸಂಸ್ಥೆ ಜೀವನವನ್ನು ಉತ್ತಮಗೊಳಿಸುವ ಸಲುವಾಗಿ ವ್ಯಕ್ತಿಗತವಾದ ತರಬೇತಿ ವಿನ್ಯಾಸಗಳನ್ನು ರೂಪಿಸಿದೆ. ಇವುಗಳ ಅನುಸರಣೆ ಮಕ್ಕಳಿಗೆ ಸುಲಭವೂ, ಹಿರಿಯರಿಗೆ ಶಕ್ತಿವರ್ಧಕವೂ ಆಗಿರುತ್ತದೆ.

Light For You ಸಂಸ್ಥೆಯಲ್ಲಿ ಅಗ್ನಿ ಮತ್ತು ಧ್ವನಿ ಸಂಯೋಜನೆಯ ಹೋಮ (Fire & Sound Therapy) ಚಿಕಿತ್ಸೆ, ಬೆರಳಚ್ಚು ವಿಶ್ಲೇಷಣೆ ಹಾಗೂ ವಿದ್ಯಾರ್ಥಿ ತರಬೇತಿ ಕಾರ್ಯಕ್ರಮ ಇತ್ಯಾದಿಗಳನ್ನು ಯಶಸ್ವಿಯಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ.

Light For You ಸಂಸ್ಥೆಯ ಸಂಸ್ಥಾಪಕರಾಗಿರುವ ಶ್ರೀಮತಿ ಜ್ಯೋತಿ ವಾಸುದೇವ್ ಅವರು ಸ್ವತಂತ್ರವಾಗಿ ಹಾಗೂ ಆಶಾವಾದಿಯಾಗಿ ಮನುಕುಲಕ್ಕೆ ನೆರವಾಗಲು ಸ್ವಯಂಪ್ರೇರಿತರಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ, ಮಾನವನ ವರ್ತನೆಗಳ ಸಂಶೋಧಕರಾಗಿ, ಆಯುಷ್, ರಾಜ್ ಹಾಗೂ ಪವರ್ ಟಿವಿಗಳಲ್ಲಿ ಸ್ಫೂರ್ತಿದಾಯಕ ಮಾತುಗಳಿಂದ ವಾಗ್ಮಿಯಾಗಿ ಸುಮಾರು 23 ವರ್ಷಗಳ ಅಪಾರ ಅನುಭವ ಗಳಿಸಿದ್ದಾರೆ. ಈ ಜೀವನದ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವ ಆಸಕ್ತಿ ಅವರಲ್ಲಿ ಎಳವೆಯಿಂದಲೇ ಬೆಳೆದಿತ್ತು. ಹಲವು ವಿದ್ಯಾಸಂಸ್ಥೆಗಳಿಂದ 24ಕ್ಕೂ ಹೆಚ್ಚು ಕೋರ್ಸ್ ಗಳ ಅಧ್ಯಯನ ಮಾಡಿರುವ ಅವರು, ಆತ್ಮೋನ್ನತಿ, ಮಕ್ಕಳ ಲಾಲನೆ-ಪಾಲನೆ ಹಾಗೂ ಸಮಗ್ರ ಅಭಿವೃದ್ಧಿಯ ವಿಷಯ ತಜ್ಞರೂ ಆಗಿದ್ದಾರೆ.

ಬೆರಳಚ್ಚು ವಿಶ್ಲೇಷಣೆ (Fingerprint Analysis)

ಪ್ರತಿಯೊಂದು ಬೆರಳಚ್ಚು ಕೂಡ ವಿಶಿಷ್ಟವಾಗಿರುತ್ತದೆ ಹಾಗೂ ಅದಕ್ಕೆ ವಿಶ್ಲೇಷಣೆಯೂ ಇರುತ್ತದೆ. ನಮ್ಮ ಬೆರಳಚ್ಚು ನಮ್ಮ ವಿಶಿಷ್ಟ ಗುರುತು. ಅದು ವ್ಯಕ್ತಿತ್ವವನ್ನು ವಿಶೇಷವಾಗಿ ಪ್ರತಿನಿಧಿಸುತ್ತದೆ. ಬೆರಳಿನ ಪ್ರತಿ ಗೆರೆಯೂ ಆಯಾ ವ್ಯಕ್ತಿಯ ಶಕ್ತಿ ಹಾಗೂ ದೌರ್ಬಲ್ಯಗಳನ್ನು ಸೂಚಿಸುತ್ತದೆ. ತಂತಜ್ಞಾನ, ಪರಿಕರ ಹಾಗೂ ಭಾರತೀಯ ಶಿಕ್ಷಣದಲ್ಲಿ ಹಲವು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ನಾವು Light For You ಸಂಸ್ಥೆಯಲ್ಲಿ ಒಂದು ವೈಜ್ಞಾನಿಕ ವಿಧಾನವನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಮೂಲಕ ವ್ಯಕ್ತಿಯ ಸಾಮರ್ಥ್ಯವನ್ನು ಗುರುತಿಸಿ, ಸದ್ಬಳಕೆ ಮಾಡಿಕೊಳ್ಳಲು ಮಾರ್ಗದರ್ಶನ ನೀಡಿ, ಶಿಕ್ಷಣ, ವೃತ್ತಿ ಮತ್ತು ಜೀವನವನ್ನು ಯಶಸ್ವಿಯಾಗಿ ಮುನ್ನಡೆಸಲು ನೆರವಾಗುತ್ತಿದ್ದೇವೆ.

ನಿಮ್ಮ ನೈಜ ಸ್ವರೂಪವೇನು? ಬದುಕಿನಲ್ಲಿ ಯಾವ ದಾರಿಯನ್ನು ಆಯ್ದುಕೊಳ್ಳಬೇಕು? ನಿಮ್ಮ ಶಕ್ತಿ –ಸಾಮರ್ಥ್ಯಗಳೇನು? ಸಾಧ್ಯತೆಗಳೇನು? ಯಾವ ವೃತ್ತಿ ಸೂಕ್ತ ಇತ್ಯಾದಿ ವಿಚಾರಗಳ ಕುರಿತು ನಿಮಗೆ ಸ್ಪಷ್ಟತೆ ಬೇಕೆ? ನಿಮ್ಮಲ್ಲಿ ನಂಬಿಕೆ ಇರಿಸಿಕೊಳ್ಳಿ, ಜತೆಗೆ, ನಮ್ಮಲ್ಲಿ ವಿಶ್ವಾಸವಿಡಿ. ನಿಮ್ಮ ಭವಿಷ್ಯ ಸ್ಪಷ್ಟವಾಗಿ ನಿಮ್ಮ ಅಂಗೈಯಲ್ಲೇ ಇದೆ. ನಿಮ್ಮ ಬೆರಳ ತುದಿಗಳು ನಿಮ್ಮ ಮನಸ್ಸಿನ ಪ್ರತಿರೂಪಗಳಾಗಿರುತ್ತವೆ. ಅವುಗಳನ್ನು ಅರಿತು, ಸಂತೋಷಕರವಾದ ಜೀವನವನ್ನು ರೂಪಿಸಿಕೊಳ್ಳಿ. ನಿಮ್ಮ ಭವಿಷ್ಯದ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿ. ಎರಡನೇ ಯೋಚನೆ ಇಲ್ಲದಂತೆ ಗುರಿ ತಲುಪಿ. ಈ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸುವಂತಾಗಬೇಕು ಎನ್ನುವುದೇ ನಮ್ಮ ಪ್ರಯತ್ನದ ಉದ್ದೇಶ.

ವಿಧಾನ

ನಾವು ಆರಂಭದಲ್ಲಿ ನಿಮ್ಮ ಎರಡೂ ಕೈಗಳ ಎಲ್ಲ ಹತ್ತು ಬೆರಳಚ್ಚುಗಳನ್ನೂ ಪಡೆಯುತ್ತೇವೆ. ಅವುಗಳಲ್ಲಿರುವ ಗೆರೆಗಳ ಸಂಖ್ಯೆ, ವಿನ್ಯಾಸ, ಶೈಲಿ ಇತ್ಯಾದಿಗಳನ್ನು ವಿಶ್ಲೇಷಣೆ ಮಾಡಿ, ನಿಮ್ಮ ಬುದ್ಧಿಮತ್ತೆಯನ್ನು ಪತ್ತೆ ಮಾಡಿ, ವಿದ್ಯೆ ಹಾಗೂ ಶಿಕ್ಷಣಕ್ಕೆ ಮಾರ್ಗದರ್ಶನ ನೀಡುತ್ತೇವೆ. ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಗಳಿಸಿರುವ ಈ ವಿಧಾನ ಪೇಟೆಂಟ್ ಹೊಂದಿದೆ. ಈ ವಿಶ್ಲೇಷಣೆಯು ಜೀವನದ ಪ್ರಮುಖ ವಿಚಾರಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಸಾಮರ್ಥ್ಯವನ್ನು ಗುರುತಿಸಿದ ಮೇಲೆ, ಅದರ ಮೇಲೆ ಗಮನ ಕೇಂದ್ರೀಕರಿಸಿ ಶ್ರಮಿಸುವಂತಾಗಲು ನಿಮಗೆ ನಾವು ಸಮಾಲೋಚನೆ ಹಾಗೂ ತರಬೇತಿಯನ್ನು ಒದಗಿಸುತ್ತೇವೆ. ತಮ್ಮ ಮಕ್ಕಳ ಸಾಮರ್ಥ್ಯ ಏನೆಂಬುದನ್ನು ಹೆತ್ತವರಿಗೆ ಮನವರಿಕೆ ಮಾಡಿಸಿ, ಅವರಿಂದ ಏನು ನಿರೀಕ್ಷೆ ಮಾಡಬೇಕೆಂಬುದನ್ನು ತಿಳಿಸುತ್ತೇವೆ. ಇದರಿಂದ ಮಕ್ಕಳಿಗೂ ಒತ್ತಡ ರಹಿತವಾಗಿ ಕಲಿಯುವ ಅವಕಾಶ ಸಿಗುತ್ತದೆ. ಬೆರಳಚ್ಚು ವಿಶ್ಲೇಷಣೆಯ ಮೂಲಕ ಮಕ್ಕಳ ಸಾಮರ್ಥ್ಯ ಮತ್ತು ಬಹುವಿಧದ ಬುದ್ಧಿಮತ್ತೆಯನ್ನು ಅನ್ವೇಷಿಸಲು ಸಾಧ್ಯವಾಗುತ್ತದೆ. ಈ ವಿಧಾನ ವೈಜ್ಞಾನಿಕವಾಗಿದ್ದು, ಜನ್ಮದಿನಾಂಕ, ಸಮಯ, ಸ್ಥಳ, ರಾಶಿ ಹಾಗೂ ನಕ್ಷತ್ರ ಇತ್ಯಾದಿ ಯಾವುದೇ ಮಾಹಿತಿಯ ಅಗತ್ಯವಿರುವುದಿಲ್ಲ. ಎಲ್ಲ ಹತ್ತು ಬೆರಳಚ್ಚುಗಳನ್ನು ಸ್ಕ್ಯಾನ್ ಮಾಡಿ, ನಿಮ್ಮ ಪ್ರತಿಭೆಗಳನ್ನು ಗುರುತಿಸಿ, ಸಮಸ್ಯೆಗಳಿಂದ ಹೊರಬಂದು ಜೀವನದಲ್ಲಿ ಅಭಿವೃದ್ಧಿ ಸಾಧಿಸಲು ಈ ವಿಧಾನ ಪೂರಕವಾಗಿದೆ.

ಈ ವಿಶ್ಲೇಷಣೆ ಉತ್ತಮ ಅಂಕ ಗಳಿಕೆ, ನಾಯಕತ್ವ ಗುಣ ವೃದ್ಧಿ ಮತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ಸುಧಾರಣೆಗೆ ಅವಕಾಶ ಕಲ್ಪಿಸುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

  • IQ, AQ, EQ ಹಾಗೂ CQ
  • ಹುಟ್ಟಿನಿಂದ ಬಂದ ಹಾಗೂ ಪ್ರಯತ್ನಪೂರ್ವಕವಾಗಿ ಗಳಿಸಿದ ಸಾಮರ್ಥ್ಯ
  • ಬಹುವಿಧದ ಬುದ್ಧಿಮತ್ತೆ
  • ಶಕ್ತಿ ಹಾಗೂ ದೌರ್ಬಲ್ಯಗಳ ಅರಿವು
  • ವರ್ತನೆಯ ವಿನ್ಯಾಸಗಳು
  • ಯೋಗ್ಯ ವೃತ್ತಿ ಆಯ್ಕೆಗಳು
  • ಶೈಕ್ಷಣಿಕ ಸ್ವರೂಪ
  • ಕಲಿಕೆ ಮತ್ತು ನಾಯಕತ್ವ ಶೈಲಿ
  • ಸಮಯ, ವೆಚ್ಚ ಮತ್ತು ಗುಣಮಟ್ಟದ ಅರಿವು

ಅಗ್ನಿ ಮತ್ತು ಧ್ವನಿ (ಹೋಮ) ಚಿಕಿತ್ಸೆ (Fire & Sound Therapy)

ಭೂಮಿಯ ಘಟಕಗಳಾದ ಅಗ್ನಿ ಮತ್ತು ಧ್ವನಿಯ ನೆರವಿನಿಂದ ಸಮಸ್ಯೆಗಳನ್ನು ನಿವಾರಿಸುವ ಕಲೆ ಇದು. ಈ ಪ್ರಪಂಚದ ಪ್ರತಿಯೊಂದು ಘಟಕವೂ ತನ್ನದೇ ಆದ ಚಿಕಿತ್ಸಕ ಗುಣವನ್ನು ಹೊಂದಿದೆ. ಇದನ್ನು ನಾವು ನಿಖರವಾದ ಸಂಯೋಜನೆಗಳೊಂದಿಗೆ ಬಳಸಿ ಸಮಸ್ಯಾ ಪರಿಹಾರಕ್ಕೆ ಮತ್ತು ಶಕ್ತಿ ವರ್ಧನೆಗೆ ಬಳಸುತ್ತೇವೆ. ಇದು ಪರಿಸರದ ವಿಷಕಾರಿ ಸ್ಥಿತಿಯನ್ನು ನಿವಾರಿಸಿ, ಮನುಷ್ಯನ ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರುವಂತಹ ಶಕ್ತಿಯ ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತದೆ. ಅಗ್ನಿ ಮತ್ತು ಧ್ವನಿ ಸಂಯೋಜನೆಯ ಚಿಕಿತ್ಸೆಯು ನೀವು ವಾಸಿಸುವ ಪರಿಸರದ ಮೇಲೆ ಚಿಕಿತ್ಸಕ ಪರಿಣಾಮಗಳನ್ನು ಬೀರಿ, ನಿಮ್ಮೆಲ್ಲ ದೋಷಗಳನ್ನು ನಿವಾರಿಸುತ್ತದೆ.

Light For You ಸಂಸ್ಥೆಯಲ್ಲಿ, ಬೆಂಕಿ ಮತ್ತು ಶಬ್ದದಂತಹ ಅಂಶಗಳನ್ನು ಬಳಸಿಕೊಂಡು ಒಂದು ಧನಾತ್ಮಕ ವಾತಾವರಣವನ್ನು ಸೃಜಿಸಲಾಗುತ್ತದೆ. ಇದನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕೆಂಬ ಕುರಿತಾಗಿಯೂ ತರಬೇತಿ ನೀಡಲಾಗುತ್ತದೆ. ನೀವು ಪರಿಹಾರದ ಭಾಗವಾಗಿಲ್ಲದಿದ್ದರೆ ನೀವು ಸಮಸ್ಯೆಯ ಭಾಗವಾಗಿದ್ದೀರಿ ಎಂದೇ ಅರ್ಥ. ಎಲ್ಲ ಸಮಸ್ಯೆಗಳಿಗೂ ಅಗ್ನಿ ಮತ್ತು ಧ್ವನಿ ಚಿಕಿತ್ಸೆಯಲ್ಲಿ ಪರಿಹಾರವಿದೆ.

ಅಗ್ನಿ ಮತ್ತು ಧ್ವನಿ (ಮಂತ್ರಪೂರ್ವಕವಾದ ಹೋಮ) ಚಿಕಿತ್ಸೆಯು ಅತ್ಯಂತ ಪುರಾತನವಾದ ಪದ್ಧತಿ ಎನಿಸಿದೆ. ನಮ್ಮ ಪೂರ್ವಜರಿಗೆ ಅದು ಜೀವನ ವಿಧಾನವೇ ಆಗಿತ್ತು. ಹೋಮದ ಆಚರಣೆಯು ನಿಮಗೆ ಯಶಸ್ವಿ ಹಾಗೂ ಸಾಮರಸ್ಯದ ಜೀವನವನ್ನು ಮುನ್ನಡೆಸಲು ಸಹಾಯಕವಾಗುತ್ತದೆ. ಅಗ್ನಿ ಮತ್ತು ಧ್ವನಿ ಚಿಕಿತ್ಸೆಯು ನಿಮ್ಮ ಶರೀರದಲ್ಲಿ ಮತ್ತು ಪರಿಸರದಲ್ಲಿ ಧನಾತ್ಮಕ ಶಕ್ತಿಯನ್ನು ಸೃಷ್ಟಿಸಿ, ವರ್ಧಿಸುತ್ತದೆ. ಇದು ನಮ್ಮಲ್ಲಿ ಹೊಸ ಯೋಚನೆ-ಯೋಜನೆಗಳನ್ನು ಪ್ರಚೋದಿಸುತ್ತದೆ. ಹೊಸ ಅವಕಾಶಗಳಿಗೆ ಕಾರಣವಾಗುತ್ತದೆ, ಹಳೆಯ ನೋವುಗಳು ಮತ್ತು ಕರ್ಮದ ಬಂಧನಗಳನ್ನು ನಾಶಪಡಿಸುತ್ತದೆ ಮತ್ತು ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಶಕ್ತಿ ನೀಡುತ್ತದೆ. ಪ್ರತಿ ವ್ಯಕ್ತಿಗೂ ಸಮರ್ಪಕವಾದ ಮಂತ್ರೋಚ್ಚಾರ ಮತ್ತು ತಂತ್ರವನ್ನು ನಾವು ಕಲಿಸುತ್ತೇವೆ,

ಅಗ್ನಿ: ಅಗ್ನಿಯು ನಮ್ಮ ಎಲ್ಲ ಪೂರ್ವ ಕರ್ಮಗಳ ಬಂಧನವನ್ನು ಮತ್ತು ನೋವುಗಳನ್ನು ಸುಡುತ್ತದೆ. ಇದರೊಂದಿಗೆ ಆತ್ಮಜ್ಯೋತಿಯನ್ನು ಬೆಳಗಿಸುತ್ತದೆ. ಅಗ್ನಿಯ ಜ್ವಾಲೆಗಳು ನಮ್ಮ ಆರೋಗ್ಯಕ್ಕೂ ಪೂರಕವಾಗಿರುತ್ತವೆ. ಅಗ್ನಿಯ ಮುಂದೆ ಕುಳಿತುಕೊಳ್ಳುವುದರಿಂದ ರಕ್ತದೊತ್ತಡವು ಕಡಿಮೆಯಾಗಿ, ದೇಹಕ್ಕೆ ವಿಶ್ರಾಂತಿ ಲಭಿಸುತ್ತದೆ. ನಿಮ್ಮ ಯೋಚನಾಲಹರಿಯನ್ನು ಸ್ಥಿರಗೊಳಿಸುತ್ತದೆ. ಅಗ್ನಿಯು ನಮ್ಮ ದೇಹ ಮತ್ತು ಮನಸ್ಸಿನಲ್ಲಿರುವ ನಕಾರಾತ್ಮಕ ಶಕ್ತಿಯನ್ನೂ ನಿವಾರಿಸುತ್ತದೆ.

ಧ್ವನಿ: ಇಲ್ಲಿ ನಾವು ಇವುಗಳನ್ನು ಮಂತ್ರಗಳೆಂದು ಕರೆಯುತ್ತೇವೆ. ಕೆಲವು ಮಂತ್ರಗಳನ್ನು ಉಚ್ಚರಿಸಿದಾಗ ದೇಹ ಮತ್ತು ಮನಸ್ಸು ಧನಾತ್ಮಕ ಕಂಪನಗಳನ್ನು ಆಕರ್ಷಿಸಲು ಸಿದ್ಧವಾಗುತ್ತವೆ. ನಮ್ಮ ಶರೀರವು ಅಗತ್ಯವಾದ ಧನಾತ್ಮಕ ಶಕ್ತಿಯನ್ನು ಉತ್ಪಾದಿಸಲು ಈ ಸಂಯೋಜನೆಯು ಕಾರಣವಾಗುತ್ತದೆ. ಅಥರ್ವ ವೇದದಿಂದ ಆಯ್ದುಕೊಂಡ ಮಂತ್ರಗಳು ಅಗ್ನಿ ಮತ್ತು ಧ್ವನಿ ಚಿಕಿತ್ಸೆಯಲ್ಲಿ ಬಳಕೆಯಾಗುತ್ತವೆ. ಈ ಮಂತ್ರಗಳ ಉಚ್ಚಾರಣೆಯಿಂದ ಪ್ರಕೃತಿಯಲ್ಲಿರುವ ಧನಾತ್ಮಕ ಶಕ್ತಿ ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಅಗ್ನಿ ಮತ್ತು ಮಂತ್ರದ ಶಕ್ತಿಯ ಪರಿಣಾಮ, ನಮ್ಮ ಶರೀರವು ವಿಶ್ರಾಂತ ಸ್ಥಿತಿಯಲ್ಲಿದ್ದು, ಎಲ್ಲ ಧನಾತ್ಮಕ ಅಂಶಗಳನ್ನು ಸ್ವೀಕರಿಸಿ, ನಮ್ಮ ಭವಿಷ್ಯವನ್ನು ಬದಲಿಸಿಕೊಳ್ಳಲು ವೇದಿಕೆ ರೂಪಿಸುತ್ತದೆ. ಇದರ ಸತತ ಅಭ್ಯಾಸದಿಂದ ಅಲ್ಪಾವಧಿಯಲ್ಲಿ ಅಸಾಧಾರಣ ಫಲಿತಾಂಶವನ್ನು ಕಾಣಲು ಸಾಧ್ಯವಿದೆ.

ಅಗ್ನಿ ಮತ್ತು ಧ್ವನಿ ಚಿಕಿತ್ಸೆಯ ಲಾಭಗಳು

  • ಮೆದುಳಿನ ಕೋಶಗಳ ನವೀಕರಣ. ಈ ಮೂಲಕ ಸ್ಮರಣಶಕ್ತಿ ಹಾಗೂ ಏಕಾಗ್ರತೆ ವೃದ್ಧಿ
  • ಆರೋಗ್ಯ ಸಮಸ್ಯೆಗಳ ನಿವಾರಣೆ, ರೋಗನಿರೋಧಕ ವ್ಯವಸ್ಥೆಯ ವೃದ್ಧಿ
  • ಶಾಂತಿ-ಸಮಾಧಾನಗಳನ್ನು ಉದ್ದೀಪಿಸಿ, ಆತ್ಮಶಕ್ತಿಯ ಪರಿಣಾಮಕಾರಿತ್ವ ವೃದ್ಧಿ
  • ರಕ್ತ ಶುದ್ಧಿ, ರಕ್ತ ಪರಿಚಲನೆ ಹೆಚ್ಚಿ, ಹಲವು ತೀವ್ರ ಆರೋಗ್ಯ ಸಮಸ್ಯೆಗಳ ಪರಿಹಾರ
  • ಧನಾತ್ಮಕ ಶಕ್ತಿ ಸಂಚಯನ
  • ಆರ್ಥಿಕ ಸ್ಥಿತಿ ಸುಧಾರಣೆ, ಉದ್ಯೋಗಿಗಳಿಗೆ ಹೇರಳ ಅವಕಾಶಗಳ ಸೃಷ್ಟಿ
  • ನೆಮ್ಮದಿ ಹಾಗೂ ಅಭಿವೃದ್ಧಿ
  • ಪಾರಿಸರಿಕ ಅಪಾಯಗಳ ಸಾಧ್ಯತೆ ದೂರ
  • ಉದ್ಯಮದ ಪ್ರಮಾಣ ವೃದ್ಧಿ
  • ಈ ಚಿಕಿತ್ಸೆಯ ಸಂದರ್ಭದಲ್ಲಿ ಗಿಡಗಳಿಗೂ ಪೋಷಣೆ ಸಿಗುತ್ತದೆ. ಬೆಳೆ ಸಮೃದ್ಧವಾಗುತ್ತದೆ.
  • ರೋಗಕಾರಕ ಬ್ಯಾಕ್ಟೀರಿಯಾಗಳು ದುರ್ಬಲಗೊಳ್ಳುತ್ತವೆ.

ವಿದ್ಯಾರ್ಥಿ ತರಬೇತಿ ಕಾರ್ಯಕ್ರಮ (Student Training Program)

ಈ ದಿನಗಳಲ್ಲಿ ಮಕ್ಕಳು ಮೊಬೈಲ್ ನಂತಹ ಗ್ಯಾಜೆಟ್ ಗಳತ್ತ ಆಕರ್ಷಿತರಾಗಿದ್ದಾರೆ. ಇದರಿಂದಾಗಿ ಅವರು ಶಿಕ್ಷಣದ ಮೇಲೆ ಗಮನ ಮತ್ತು ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಪರಿಣಾಮವಾಗಿ, ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದು, ಹೆತ್ತವರು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ತಮ್ಮ ಮಕ್ಕಳ ಸ್ಮರಣಶಕ್ತಿ ದುರ್ಬಲವಾಗಿದೆ, ನಿರ್ಧಾರಗಳನ್ನು ಕೈಗೊಳ್ಳಲು ಅವರು ಅಸಮರ್ಥರಾಗಿದ್ದಾರೆ ಹಾಗೂ ತಾರತಮ್ಯ ಕೌಶಲಗಳನ್ನು ಹೊಂದಿಲ್ಲ ಎಂದು ಹಲವು ಹೆತ್ತವರು ದೂರಿಕೊಳ್ಳುತ್ತಿದ್ದಾರೆ. ಹಲವು ಮಕ್ಕಳು ಮೊಂಡುತನ ಪ್ರದರ್ಶಿಸುತ್ತಾರೆ ಹಾಗೂ ನಾಚಿಕೆ ಸ್ವಭಾವವನ್ನೂ ಹೊಂದಿರುತ್ತಾರೆ.

ನಮ್ಮಲ್ಲಿ ವಿಶ್ವಾಸವಿಡಿ. Light For You ಅಭಿವೃದ್ಧಿಪಡಿಸಿದ ಅಭ್ಯಾಸದ ವಿನ್ಯಾಸವನ್ನು ವಾರದಲ್ಲಿ ಕನಿಷ್ಠ ಮೂರು ಗಂಟೆಗಳ ಕಾಲ ಅನುಷ್ಠಾನ ಮಾಡಿದಲ್ಲಿ, ನಿಮ್ಮ ಮಕ್ಕಳು ಅತ್ಯದ್ಭುತ ಪ್ರಗತಿಯನ್ನು ಸಾಧಿಸುವರು, ಅವರು ಮಾಡಬೇಕಾದ ಎಲ್ಲ ಕೆಲಸಗಳ ಅಗತ್ಯವನ್ನು ನಾವು ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ.

ಮುಖ್ಯವಾಗಿ ನಾವು, ಮಕ್ಕಳು ಹೇಗೆ

  • ಓದಬೇಕು?
  • ಗಮನವನ್ನು ಕೇಂದ್ರೀಕರಿಸಿ, ಏಕಾಗ್ರತೆ ವೃದ್ಧಿಸಿ ಮನನ ಮಾಡಿಕೊಳ್ಳಬೇಕು?
  • ಸೂಕ್ತ ನಿರ್ಧಾರ ಕೈಗೊಳ್ಳಬೇಕು?
  • ಸರಿಯಾದ ಗುರಿಯನ್ನು ನಿಗದಿಗೊಳಿಸಬೇಕು?
  • ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು?
  • ಹೆತ್ತವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಬೇಕು?
  • ಸರಿಯಾದ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು?
  • ಶಿಕ್ಷಣಕ್ಕೆ ಸಂಬಂಧಿಸಿ ಒತ್ತಡವನ್ನು ಕಡಿಮೆಗೊಳಿಸಿಕೊಳ್ಳಬೇಕು
  • ಎಂಬುದನ್ನು ಕಲಿಸುತ್ತೇವೆ.

ಪಾಲಕರ ತರಬೇತಿ ಕಾರ್ಯಕ್ರಮ (Parents Training Program)

ಎಲ್ಲ ಪಾಲಕರೂ ತಮ್ಮ ಮಕ್ಕಳು ಯಶಸ್ವಿಯಾಗಿರಬೇಕೆಂದು ಬಯಸುತ್ತಾರೆ. ಆದರೆ, ತಮ್ಮ ಮಕ್ಕಳು ಎಲ್ಲರಂತೆಯೇ ಕೆಲವು ಸಾಮರ್ಥ್ಯಗಳನ್ನು ಹೊಂದಿರುತ್ತಾರೆ, ಅವರಲ್ಲಿ ಕೆಲವು ದೌರ್ಬಲ್ಯಗಳೂ ಇರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. ಸಾಮರ್ಥ್ಯ ವೃದ್ಧಿಗೆ ಹಾಗೂ ದೌರ್ಬಲ್ಯಗಳ ಪರಿಹಾರಕ್ಕೆ ಪರಿಹರಿಸಿದರೆ ಮಕ್ಕಳ ಜೀವನ ಅದ್ಭುತವಾಗಿ ರೂಪುಗೊಳ್ಳುವುದು. ಮಕ್ಕಳಿಗೂ ಬದುಕಿನ ಕುರಿತಾಗಿ ತಮ್ಮದೇ ಆದ ದೃಷ್ಟಿಕೋನವಿರುತ್ತದೆ ಎನ್ನುವುದನ್ನೂ ಬಹುತೇಕ ಹೆತ್ತವರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಹೀಗಾಗಿ, ಮಕ್ಕಳ ಪಾಲನೆ-ಪೋಷಣೆಯ ಪ್ರಧಾನ ಅಂಶಗಳತ್ತ ಗಮನ ಹರಿಸಿ, ಮಕ್ಕಳು ತಮ್ಮ ಮಾತು ಕೇಳುವಂತೆ ಹೇಗೆ ಮಾಡಬೇಕು ಎಂಬುದರ ಕುರಿತು ನಾವು ತರಬೇತಿ ನೀಡುತ್ತೇವೆ.

ಇದರಿಂದೇನು ಲಾಭ?

  • ಜೀವನದ ಸವಾಲುಗಳನ್ನು ಎದುರಿಸುವಲ್ಲಿ ಮಕ್ಕಳು ಸರಿಯಾದ ವರ್ತನೆ ಹಾಗೂ ಮನೋಭಾವವನ್ನು ಹೊಂದುವರು. ಇದರಿಂದ ಅವರು ಸಂತೋಷವಾಗಿರುತ್ತಾರೆ, ಸ್ವತಂತ್ರರಾಗುತ್ತಾರೆ, ಯಶಸ್ವಿಯಾಗುತ್ತಾರೆ ಹಾಗೂ ಶ್ರೀಮಂತರಾಗುತ್ತಾರೆ.
  • ವೃತ್ತಿ ಹಾಗೂ ಕೌಟುಂಬಿಕ ಜೀವನದ ಮಧ್ಯೆ ಸಮತೋಲನ ಸಾಧಿಸಲು ಪೋಷಕರಿಗೂ ಸಾಧ್ಯವಾಗುತ್ತದೆ.
  • ಮಕ್ಕಳ ಪಾಲನೆ, ಪೋಷಣೆಯ ಗುಣಮಟ್ಟ ವೃದ್ಧಿಸುತ್ತದೆ.
  • ಒತ್ತಡ ನಿವಾರಣೆ ತಂತ್ರಗಳನ್ನು ಕಲಿಸಿ, ವೈಯಕ್ತಿಕ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ.
  • ಕೌಟುಂಬಿಕ ಸಾಮರಸ್ಯ ಹಾಗೂ ಸಂಬಂಧ ಸುಧಾರಣೆಗೆ ಅನುಕೂಲವಾಗುತ್ತದೆ.

ಶಿಕ್ಷಕರ ತರಬೇತಿ ಕಾರ್ಯಕ್ರಮ (Teachers Training Program)

ಸಾಧಾರಣವಾಗಿ, ಮಕ್ಕಳು ಶಾಲೆ-ಕಾಲೇಜುಗಳಲ್ಲಿ ಕಲಿಯುತ್ತಲೇ ತಮ್ಮ ಬಾಲ್ಯ ಮತ್ತು ಕೌಮಾರ್ಯದ ಗರಿಷ್ಠ ಅವಧಿಯನ್ನು ಕಳೆಯುತ್ತಾರೆ. ವಿದ್ಯಾರ್ಥಿಗಳು ಗಳಿಸುವ ಯಶಸ್ಸು ಶಿಕ್ಷಕರು ಅವರನ್ನು ಹೇಗೆ ತರಬೇತಿಗೊಳಿಸಿ ರೂಪಿಸುತ್ತಾರೆ ಎನ್ನುವುದನ್ನು ಅವಲಂಬಿಸಿದೆ. Light For You ಸಂಸ್ಥೆಯಲ್ಲಿ ನಾವು ತರಬೇತುದಾರರಿಗೆ ತರಬೇತಿ (train the trainer) ಎನ್ನುವ ವಿಶೇಷ ಕಾರ್ಯಕ್ರಮವನ್ನು ಶಿಕ್ಷಕರಿಗಾಗಿಯೇ ರೂಪಿಸಿದ್ದೇವೆ.

ಇದು ಹೇಗೆ ಸಹಾಯ ಮಾಡುತ್ತದೆ?

  • ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವಿನ ಸಂಬಂಧ ವೃದ್ಧಿಯಾಗುತ್ತದೆ ಹಾಗೂ ಆಶಾದಾಯಕವಾಗಿರುತ್ತದೆ.
  • ಮಕ್ಕಳು ಮತ್ತು ಅವರ ಹೆತ್ತವರಲ್ಲಿ ಧನಾತ್ಮಕ ಮನೋಭಾವ ಮೂಡಿಸುತ್ತದೆ.
  • ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ ಕಲಿಕೆ ಸ್ವಾಭಾವಿಕವೂ ಪರಿಣಾಮಕಾರಿಯೂ ಆಗುವಂತೆ ಮಾಡುತ್ತದೆ.
  • ಶಿಕ್ಷಕರ ವೈಯಕ್ತಿಕ ದಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಒತ್ತಡ ನಿವಾರಣೆ ತಂತ್ರಗಳನ್ನು ಕಲಿಸುತ್ತದೆ.
  • ಸಂಬಂಧಗಳು ಹಾಗೂ ಹೊಂದಾಣಿಕೆಯನ್ನು ವೃದ್ಧಿಸಿ, ವೈಯಕ್ತಿಕ ಗುರಿಗಳನ್ನು ಸಾಧಿಸಲು ಅನುಕೂಲ ಕಲ್ಪಿಸುತ್ತದೆ.

ಏಕಾಗ್ರತೆ ಹಾಗೂ ಗಮನ ಹರಿಸುವ ಸಾಮರ್ಥ್ಯದ ಅಭಾವವಿರುವ ಮಕ್ಕಳಿಗೆ ಹದಿನೈದು ನಿಮಿಷಗಳ ದೀರ್ಘ ಉಸಿರಾಟ ಹೆಚ್ಚು ಸಹಾಯಕವಾಗುವುದು. ಒಂದು ಸಲಕ್ಕೆ ಒಂದೆರಡು ಪುಟಗಳನ್ನು ಅಥವಾ ಒಂದು ಅಧ್ಯಾಯವನ್ನು ಮಾತ್ರ ಓದುವ ಅಭ್ಯಾಸ ರೂಢಿಸಿಕೊಳ್ಳಿ. ಬಳಿಕ ಪುಸ್ತಕವನ್ನು ಮುಚ್ಚಿ, ನೀವು ಓದಿರುವುದನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿ. ಅಧ್ಯಯನಕ್ಕಾಗಿ ಒಂದು ಜಾಗವನ್ನು ನಿಗದಿಮಾಡಿಕೊಳ್ಳಿ. ಪದೇ ಪದೇ ಜಾಗ ಬದಲಾಯಿಸಿದರೂ ಏಕಾಗ್ರತೆಗೆ ಭಂಗ ಬರುತ್ತದೆ.

ಮಕ್ಕಳು ಓದುವಂತೆ ನೀವು ಒತ್ತಾಯಿಸುತ್ತೀರೇ ಹೊರತು, ಹೇಗೆ ಓದಬೇಕೆಂದು ಯಾವತ್ತೂ ಹೇಳಿಕೊಡುವುದಿಲ್ಲ. ಓದುವ ಸಂದರ್ಭದಲ್ಲಿ ಅನುಸರಿಸಬೇಕಾದ ವಿಧಾನಗಳು ಯಾವುವು? ಹೆತ್ತವರಿಗೂ ಗೊತ್ತಿರುವುದಿಲ್ಲ. ಕೆಲವು ಮಕ್ಕಳು ಓಡಾಡುತ್ತಾ ಓದಲು ಇಷ್ಟಪಡುತ್ತಾರೆ. ಇನ್ನೂ ಕೆಲವು ಮಕ್ಕಳು ಹೇಳಿದ್ದನ್ನು ಕೇಳಿಸಿಕೊಂಡು, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಪದೇ ಪದೇ ಓದುವ ಗೋಜಿಗೆ ಹೋಗುವುದೇ ಇಲ್ಲ. ಕೆಲವು ಮಕ್ಕಳು ಸೂಕ್ಷ್ಮಗ್ರಾಹಿಯಾಗಿರುತ್ತಾರೆ. ಏನನ್ನು ಓದುತ್ತಾರೋ ಅಥವಾ ನೋಡುತ್ತಾರೋ, ಅದು ಅವರ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಹೀಗೆ, ಕಲಿಕೆಯ ವಿಧಾನ ಹಾಗೂ ಸಾಮರ್ಥ್ಯ ಪ್ರತಿ ಮಗುವಿನಲ್ಲೂ ಭಿನ್ನವಾಗಿರುತ್ತದೆ.

ಸಣ್ಣ ಆದರೆ ಹೆಚ್ಚು ಶಕ್ತಿಶಾಲಿಯಾದ ಪರಿಹಾರಗಳು ಮಕ್ಕಳ ಗ್ರಹಣ ಸಾಮರ್ಥ್ಯವನ್ನು ವೃದ್ಧಿಸಲು ನೆರವಾಗುತ್ತವೆ. ಹಸಿ ಗೋಡೆಯಂತಿರುವ ಮಕ್ಕಳ ಮನಸ್ಸಿನ ಗ್ರಹಣ ಸಾಮರ್ಥ್ಯ ಸ್ವಾಭಾವಿಕವಾಗಿಯೇ ಉಚ್ಚಮಟ್ಟದಲ್ಲಿರುತ್ತದೆ. ಸುತ್ತಲೂ ಹಸುರು ಪರಿಸರವಿದ್ದರೆ ಅವರು ಲಕ್ಷ್ಯಕೊಟ್ಟು ಓದಲು ಪೂರಕ ವಾತಾವರಣ ಉಂಟುಮಾಡುತ್ತದೆ. ಹೀಗಾಗಿ, ಮನೆಯ ಸುತ್ತ ಕೆಲವು ಗಿಡ-ಮರಗಳನ್ನು ನೆಟ್ಟು ಬೆಳೆಸಿ. ಈ ಗಿಡಗಳಿಂದ ಮಕ್ಕಳು ಶಕ್ತಿಯನ್ನು ಗಳಿಸುತ್ತಾರೆ. ಅದರ ಜೊತೆಗೆ, ಮಕ್ಕಳ ಸಾಮರ್ಥ್ಯವನ್ನು ವೃದ್ಧಿಸುವ ಹಾಗೂ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಹಲವು ಕೌಶಲಗಳನ್ನು ನಾವು Light For You ಸಂಸ್ಥೆಯಲ್ಲಿ ಕಲಿಸುತ್ತೇವೆ.

ಕೆಲವು ಮಕ್ಕಳು ಪರೀಕ್ಷೆಗಳಿಗಾಗಿ ಚೆನ್ನಾಗಿಯೇ ಸಿದ್ಧರಾಗಿರುತ್ತಾರೆ. ಆದರೆ, ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವಷ್ಟರಲ್ಲಿ ಎಲ್ಲವನ್ನೂ ಮರೆತುಬಿಡುತ್ತಾರೆ. ಈ ಮರೆವಿಗೆ ಭಯವೇ ಮುಖ್ಯ ಕಾರಣ. ಈ ಭಯವನ್ನು ಮೆಟ್ಟಿ ನಿಲ್ಲಲು ಸ್ವಾಭಿಮಾನ ಹೆಚ್ಚಿಸಿಕೊಳ್ಳಿ. ಮಂತ್ರಗಳಿಂದ ಶಕ್ತಿಯನ್ನು ಸಂಪಾದಿಸಿ. ನಾವು ನಿಮಗಾಗಿಯೇ ಕೆಲವು ಮಂತ್ರಗಳನ್ನು ಸಂಯೋಜಿಸಿದ್ದೇವೆ. ನಿಮ್ಮ ದೇಹ ಮತ್ತು ಮನಸ್ಸಿನ ಎಲ್ಲ ಕೊರತೆಗಳನ್ನೂ ನೀಗಿಸುವ ಔಷಧವಾಗಿ ಅವು ಕೆಲಸ ಮಾಡುತ್ತವೆ. ಹತ್ತು ಮತ್ತು ಹನ್ನೆರಡನೇ ತರಗತಿಗಳಲ್ಲಿ ಕಲಿಯುತ್ತಿರುವ ಮಕ್ಕಳ ಸಾಮರ್ಥ್ಯವನ್ನು ನಾವು ಪರಿಶೀಲಿಸಿ, ಅವರ ನೈಸರ್ಗಿಕ ಬುದ್ಧಿಶಕ್ತಿ ಮತ್ತು ಕಲಿಕಾ ಸಾಮರ್ಥ್ಯವನ್ನು ಗಮನಿಸಿ, ಭವಿಷ್ಯದ ದೃಷ್ಟಿಯಿಂದ ಯಾವ ಕೋರ್ಸ್ ಆಯ್ದುಕೊಂಡರೆ ಸೂಕ್ತ ಎನ್ನುವುದನ್ನು ಸೂಚಿಸುತ್ತೇವೆ, ಉತ್ಸಾಹ ವೃದ್ಧಿಸಿಕೊಂಡರೆ ವೃತ್ತಿ ಜೀವನದಲ್ಲೂ ಯಶಸ್ವಿಯಾಗಿ, ಬದುಕು ಸರಾಗವಾಗಿ ನಡೆಯಲು ಸಾಧ್ಯವಾಗುತ್ತದೆ.

 

ಮೆದುಳಿನ ವರ್ಧನೆ (Brain Enhancement)

ಮೆದುಳು ಅಥವಾ ಅರಿವಿನ ವರ್ಧನೆಯು ಉತ್ತಮ ಯೋಚನಾ ಲಹರಿಯನ್ನು ರೂಪಿಸುವ ತರಬೇತಿಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಅರಿವು ಅಭಿವೃದ್ಧಿ ಕಾರ್ಯಕ್ರಮವು ಎಲ್ಲ ವಯೋಮಾನ ಹಾಗೂ ವೃತ್ತಿಯವರಿಗೂ ಅತ್ಯಂತ ಸೂಕ್ತವಾಗಿದೆ.

ಕಲಿಕೆ, ತರ್ಕಬದ್ಧತೆ, ಅರ್ಥೈಸುವಿಕೆ, ಸ್ಮರಣಶಕ್ತಿ, ಗಮನಹರಿಸುವ ಸಾಮರ್ಥ್ಯ, ಗ್ರಹಿಕೆ, ಸೃಜನಶೀಲತೆ ಮತ್ತು ಪ್ರಾಯೋಗಿಕ ಬುದ್ಧಿಮತ್ತೆಯನ್ನು ಸುಧಾರಿಸಲು ಸಾಧ್ಯವಿದೆ. ಪ್ರಾಯೋಗಿಕ ಬುದ್ಧಿಮತ್ತೆ ನೀವು ಪರಿಸರ ಅಥವಾ ಸನ್ನಿವೇಶಗಳಿಗೆ ಹೇಗೆ ಸ್ಪಂದಿಸುತ್ತೀರಿ, ಹೇಗೆ ನಿಮ್ಮ ಸಾಮರ್ಥ್ಯಗಳನ್ನು ಹೊಂದಿಸಿಕೊಳ್ಳುತ್ತೀರಿ ಹಾಗೂ ಅಗತ್ಯಗಳಿಗೆ ಅನುಸಾರ ಹೇಗೆ ಪರಿವರ್ತಿಸಿಕೊಳ್ಳುತ್ತೀರಿ ಎನ್ನುವುದಕ್ಕೆ ಸಂಬಂಧಿಸಿದ್ದಾಗಿದೆ. ನೈಜ ಜಗತ್ತಿನಲ್ಲಿ ನೀವು ಯಶಸ್ವಿಯಾಗಿ ಹೊರಹೊಮ್ಮಲು ನಿಮ್ಮ ನೆರವಿಗೆ ಬರುವುದು ಇದೇ ಸಾಮರ್ಥ್ಯ.

ಸಮಗ್ರ ಅಭಿವೃದ್ಧಿ (Holistic Development)

ಸಮಗ್ರ ಅಭಿವೃದ್ಧಿ ತರಬೇತಿಯು ಹೊಂದಾಣಿಕೆಯ ಮತ್ತು ಸಕಾರಾತ್ಮಕ ನಡವಳಿಕೆಯನ್ನು ಬೆಳೆಸಿಕೊಳ್ಳಲು ಹಾಗೂ ಆ ಮೂಲಕ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡುತ್ತದೆ. ಮನುಷ್ಯನ ಎಲ್ಲ ಗುಣಲಕ್ಷಣಗಳನ್ನು ಕೇಂದ್ರೀಕರಿಸಿ ಈ ತರಬೇತಿಯನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಬ್ಬ ಮನುಷ್ಯನೂ ಮತ್ತೊಬ್ಬನಿಗಿಂತ ಭಿನ್ನ. ಆತನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳೂ ವಿಶಿಷ್ಟವಾಗಿಯೇ ಇರುತ್ತವೆ. Light For You ದಲ್ಲಿ ನಾವು ಈ ಎಲ್ಲ ಅಂಶಗಳನ್ನು ಅರ್ಥ ಮಾಡಿಕೊಂಡು, ಉತ್ತಮ ಫಲಿತಾಂಶಕ್ಕಾಗಿ ವ್ಯಕ್ತಿಗತ ತರಬೇತಿ ವಿನ್ಯಾಸವನ್ನು ರೂಪಿಸುತ್ತೇವೆ.

ಸಮಗ್ರ ಅಭಿವೃದ್ಧಿಯ ಲಾಭಗಳು

  • ಸ್ಮರಣಶಕ್ತಿ ಮತ್ತು ಏಕಾಗ್ರತೆ ವೃದ್ಧಿ
  • ಮಾನಸಿಕ ಸಾಮರ್ಥ್ಯದ ಮೇಲೆ ಗಮನ
  • ಸೃಜನಶೀಲತೆ
  • IQ, EQ, AQ ಮತ್ತು CQ
  • ಶೈಕ್ಷಣಿಕ ಸಾಧನೆ
  • ಮೆದುಳಿನ ಸಾಮರ್ಥ್ಯ
  • ಆತ್ಮವಿಶ್ವಾಸ
  • ಭಾವನಾತ್ಮಕ ಸ್ಥಿರತೆ
  • ಆರೋಗ್ಯ ಮತ್ತು ಸಂಪತ್ತು
  • ಉತ್ತಮ ಹವ್ಯಾಸಗಳು
  • ತಾರತಮ್ಯ ಕೌಶಲ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ವೃದ್ಧಿ

ವಿವರವಾದ ಮಾಹಿತಿಗಾಗಿ ಮತ್ತು ಭೇಟಿಯ ಸಮಯ ನಿಗದಿಗಾಗಿ ಸಂಪರ್ಕಿಸಿ : 
Phone: +91 99588 66466

ಕಚೇರಿ ವಿಳಾಸ:
Light For You
i#592, 1st Floor, JSR Arcade, HMT Layout 4th Block, 13th Cross Road,
Opposite to Durga Temple Arch, Vidyaranyapura,
Bengaluru, Karnataka - 560097

ಇ-ಮೇಲ್:  lightforyoublr@gmail.com

ವೆಬ್ ಸೈಟ್:  www.shubhasankalpa.com


Customer review

Public Music Channel Proramme

LIFHT FOR YOU BHAVYA GOWDA with Public Music

light for you on public music Fingerprint Analysis more information Call: 99588 66466

 

 

 

 

Share on:

City Information

(Private)