To read this in English, please click the link below.
KHB 2400-Acre Mega Township in Bengaluru – Will Your Investment Double?
ಬೆಂಗಳೂರಿನಲ್ಲಿ ಒಂದು ಸೈಟ್ ಇರಬೇಕು ಅನ್ನೋದು ನಮ್ಮ ನಿಮ್ಮೆಲ್ಲರ ಕನಸು, ಅಲ್ವಾ?
ಆದ್ರೆ ಆ ಕನಸಿನ ಜೊತೆಗೆ, ನೀವು ಹಾಕಿದ ದುಡ್ಡು ಕೆಲವೇ ವರ್ಷಗಳಲ್ಲಿ ದುಪ್ಪಟ್ಟು ಆದ್ರೆ ಹೇಗಿರುತ್ತೆ? ಇದೆಲ್ಲಾ ಸಾಧ್ಯನಾ ಅಂತ ಯೋಚಿಸ್ತಿದ್ದೀರಾ? ಖಂಡಿತಾ ಸಾಧ್ಯ! ಆದರೆ ಅದಕ್ಕೆ ಸರಿಯಾದ ಜಾಗದಲ್ಲಿ, ಸರಿಯಾದ ಸಮಯದಲ್ಲಿ ಇನ್ವೆಸ್ಟ್ ಮಾಡಬೇಕು - ಅಷ್ಟೇ.
ಬೆಂಗಳೂರಿನ ಅತಿದೊಡ್ಡ ಮೆಗಾ ಟೌನ್‌ಶಿಪ್ ನಿಮ್ಮ ದುಡ್ಡನ್ನು ದುಪ್ಪಟ್ಟು ಮಾಡುವ ಶಕ್ತಿ ಹೊಂದಿದೆ. ಆ ಸೀಕ್ರೆಟ್ ಏನು ಅಂತ ನೋಡೋಣ.
ಬೆಂಗಳೂರಿನಲ್ಲಿ ಸೈಟ್ ಖರೀದಿ - ಒಂದು ಸಾಧನೆ ಮಾಡಿದ ಅನುಭವ !
ಸ್ನೇಹಿತರೇ, ನಮ್ಮ ಸಿಲಿಕಾನ್ ಸಿಟಿಯಲ್ಲಿ ಒಂದು ಸಣ್ಣ ಜಾಗ ತಗೋಬೇಕೆಂದರೂ ಇವತ್ತು ಹರಸಾಹಸ ಪಡಬೇಕಾಗಿದೆ. ಸಿಟಿ ಒಳಗೆ ಒಂದು ಸೈಟ್ ಅಂದ್ರೆ ಕೋಟಿಗಳಲ್ಲಿ ಮಾತು. ಮಧ್ಯಮ ವರ್ಗದವರಿಗೆ ಇದು ಕನಸಾಗೇ ಉಳಿದುಬಿಡುತ್ತೆ.
ಕಡಿಮೆ ಬೆಲೆಗೆ ಸೈಟ್ ಸಿಕ್ಕಿತು ಅಂತ ಖುಷಿ ಪಟ್ಟರೆ, ಅಲ್ಲಿಗೆ ಹೋಗೋಕೆ ಸರಿಯಾದ ರಸ್ತೆ ಇರಲ್ಲ. ನೀರು, ಕರೆಂಟ್, ಡ್ರೈನೇಜ್ ಯಾವಾಗ ಬರುತ್ತೋ ದೇವರಿಗೇ ಗೊತ್ತು. ಪಕ್ಕದಲ್ಲಿ ಸ್ಕೂಲ್, ಹಾಸ್ಪಿಟಲ್, ಮಾರ್ಕೆಟ್ ಯಾವುದೂ ಇಲ್ಲ ಅಂದ್ರೆ ಅಲ್ಲಿರೋದು ಹೇಗೆ? ಈ ಎಲ್ಲಾ ಕಾರಣಗಳಿಂದ, ಬೆಂಗಳೂರಲ್ಲಿ ಒಳ್ಳೆಯ ಸೈಟ್ ಹುಡುಕೋದು ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಂತಾಗಿದೆ. ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ - “ಸೂರ್ಯ ಸಿಟಿ”
ನಿಮ್ಮ ಹೂಡಿಕೆ ಸೇಫ್ ಆಗಿರಬೇಕು, ಮುಂದೆ ಒಳ್ಳೆಯ ರಿಟರ್ನ್ಸ್ ಕೊಡಬೇಕು, ಜೊತೆಗೆ ನೆಮ್ಮದಿಯಾಗಿ ಬದುಕೋಕೆ ಬೇಕಾದ ಎಲ್ಲಾ ಸೌಲಭ್ಯಗಳೂ ಇರಬೇಕು. ಇಂಥಾ ಜಾಗ ಬೆಂಗಳೂರಿನಲ್ಲಿ ಇದೆಯಾ? ಖಂಡಿತಾ ಇದೆ!
ಈ ಎಲ್ಲಾ ಸಮಸ್ಯೆಗಳಿಗೆ ಉತ್ತರವಾಗಿ, ಕರ್ನಾಟಕ ಗೃಹ ಮಂಡಳಿ (KHB) ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆ - ಸುಮಾರು 2400 ಎಕರೆಗಳ ಬೃಹತ್ ಟೌನ್‌ಶಿಪ್ “ಸೂರ್ಯ ಸಿಟಿ”. ಇದು ಬರೀ ಲೇಔಟ್ ಅಲ್ಲ, ಇದು ಒಂದು ಮಿನಿ ಸಿಟಿಯೇ ಸರಿ. ಜಿಗಣಿ ಮತ್ತು ಬನ್ನೇರುಘಟ್ಟ ರಸ್ತೆಯ ಸಮೀಪ ನಿರ್ಮಾಣವಾಗುತ್ತಿರುವ ಈ ಅದ್ಭುತ ಟೌನ್‌ಶಿಪ್, ಎಲೆಕ್ಟ್ರಾನಿಕ್ ಸಿಟಿಯಿಂದ ಕೇವಲ 20 ನಿಮಿಷಗಳ ಅಂತರದಲ್ಲಿದೆ. ಸಾವಿರಾರು ನಿವೇಶನಗಳನ್ನು ಹೊಂದಿರುವ ಈ ಯೋಜನೆ, ಬೆಂಗಳೂರಿನ ರಿಯಲ್ ಎಸ್ಟೇಟ್ ನಕ್ಷೆಯನ್ನು ಬದಲಿಸಲು ಸಜ್ಜಾಗಿದೆ.
ಇದು ಕರ್ನಾಟಕ ಗೃಹ ಮಂಡಳಿಯದ್ದೇ ಯೋಜನೆ ಆಗಿರುವುದರಿಂದ, ನಿಮ್ಮ ಹೂಡಿಕೆ ಇಲ್ಲಿ 100% ಸುರಕ್ಷಿತ. ಸರ್ಕಾರದ ಭದ್ರತೆ ಇದೆ. ಜೊತೆಗೆ, ಇದು BMRDA ಹಾಗೂ RERA ಅನುಮೋದನೆ ಪಡೆದ ಯೋಜನೆ ಆಗಿರುವುದರಿಂದ, ಪ್ರತಿಯೊಂದು ನಿವೇಶನಕ್ಕೂ ಪಕ್ಕಾ ದಾಖಲೆಗಳ ಗ್ಯಾರಂಟಿ ಇರುತ್ತದೆ.
ಸೂರ್ಯ ಸಿಟಿಯಲ್ಲಿ ಸೈಟ್ ತಗೊಳ್ಳೋದು ಅಂದ್ರೆ ಕೇವಲ ಜಾಗ ಖರೀದಿಸಿದಂತೆ ಅಲ್ಲ - ಇದು ಬೆಂಗಳೂರಿನ ಭವಿಷ್ಯದ ಬೆಳವಣಿಗೆಯಲ್ಲಿ ಭಾಗಿಯಾದಂತಾಗಿದೆ. ನಿಮ್ಮ ಹೂಡಿಕೆ ಕೆಲವೇ ವರ್ಷಗಳಲ್ಲಿ ದುಪ್ಪಟ್ಟಾಗುವ ಸಾಧ್ಯತೆಗೆ ಈ ಮೂರು ಕಾರಣಗಳಿವೆ:
1) ಗೇಮ್ ಚೇಂಜರ್ - ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ !
ಮೊದಲ ಮತ್ತು ಅತಿ ಮುಖ್ಯ ಕಾರಣ, ಸೂರ್ಯ ಸಿಟಿಯಲ್ಲಿ ನಿರ್ಮಾಣವಾಗಲಿರುವ ಬೃಹತ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ. ಹೌದು, ನೀವು ಕೇಳಿದ್ದು ನಿಜ! ಕರ್ನಾಟಕ ಸರ್ಕಾರವು ಸೂರ್ಯ ನಗರ ನಾಲ್ಕನೇ ಹಂತದಲ್ಲಿ ಸುಮಾರು 80,000 ಆಸನ ಸಾಮರ್ಥ್ಯದ ಅತ್ಯಾಧುನಿಕ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಂತರ, ಇದು ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗುವ ಸಾಧ್ಯತೆ ಇದೆ. ಒಮ್ಮೆ ಯೋಚಿಸಿ ನೋಡಿ - ಇಂಥಾ ಸ್ಟೇಡಿಯಂ ಬಂದ್ರೆ ಆ ಏರಿಯಾದ ಚಿತ್ರಣವೇ ಬದಲಾಗುತ್ತದೆ!
ಮ್ಯಾಚ್‌ಗಳ ಸಮಯದಲ್ಲಿ ದೇಶ-ವಿದೇಶಗಳಿಂದ ಜನ ಸೇರುತ್ತಾರೆ, ಹೋಟೆಲ್‌ಗಳು, ಮಾಲ್‌ಗಳು, ವ್ಯಾಪಾರ-ವಹಿವಾಟುಗಳು ಗರಿಗೆದರುತ್ತವೆ. ಆಗ ನಿಮ್ಮ ಸೈಟ್ ಮೌಲ್ಯ ರಾತ್ರೋರಾತ್ರಿ ಗಗನಕ್ಕೇರುವುದು ಖಚಿತ.
2) ಸೂಪರ್ ಕನೆಕ್ಟಿವಿಟಿ - STRR (Satellite Town Ring Road)
ನಿಮ್ಮ ಹೂಡಿಕೆಯ ಮೌಲ್ಯವನ್ನು ಹೆಚ್ಚಿಸೋ ಎರಡನೇ ಶಕ್ತಿ ಅಂದ್ರೆ STRR,ಅಂದರೆ ಸ್ಯಾಟಲೈಟ್ ಟೌನ್ ರಿಂಗ್ ರೋಡ್. ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡಲು ದೇವನಹಳ್ಳಿ, ಹೊಸಕೋಟೆ, ಆನೇಕಲ್, ರಾಮನಗರದಂತಹ ಪಟ್ಟಣಗಳನ್ನು ಸಂಪರ್ಕಿಸುವ 280 ಕಿಲೋಮೀಟರ್ ಉದ್ದದ ಈ ಎಕ್ಸ್‌ಪ್ರೆಸ್‌ವೇ ಸೂರ್ಯ ಸಿಟಿಯ ಪಕ್ಕದಲ್ಲೇ ಹಾದುಹೋಗಲಿದೆ. ಇದರರ್ಥ, ನಾಳೆ ನೀವು ಸೂರ್ಯ ಸಿಟಿಯಿಂದ ಏರ್‌ಪೋರ್ಟ್‌ಗಾಗಲಿ, ಬೆಂಗಳೂರಿನ ಬೇರೆ ಮೂಲೆಗಾಗಲಿ ಟ್ರಾಫಿಕ್ ಕಿರಿಕಿರಿ ಇಲ್ಲದೆ ನಿಮಿಷಗಳಲ್ಲಿ ತಲುಪಬಹುದು. ಇಂಥಾ ಕನೆಕ್ಟಿವಿಟಿ ಸಿಕ್ಕಾಗ ಆಸ್ತಿಯ ಮೌಲ್ಯ ತಾನಾಗಿಯೇ ಮೇಲೇರಿ ಹೋಗುತ್ತದೆ. STRR ಪೂರ್ಣಗೊಂಡಾಗ ನಿಮ್ಮ ಹೂಡಿಕೆಯ ಮೌಲ್ಯ ಇನ್ನಷ್ಟು ಹೆಚ್ಚಾಗುವುದು ಖಚಿತ.
3) ಭವಿಷ್ಯದ ಬೃಹತ್ ಯೋಜನೆಗಳು
ಸೂರ್ಯ ಸಿಟಿ ಕೇವಲ ಸೈಟ್‌ಗಳ ಲೇಔಟ್ ಅಲ್ಲ - ಇಲ್ಲೊಂದು ಸ್ವಾವಲಂಬಿ ನಗರ ನಿರ್ಮಾಣವಾಗುತ್ತಿದೆ. ಮಾಸ್ಟರ್ ಪ್ಲಾನ್ ಪ್ರಕಾರ, ಬೃಹತ್ ಥೀಮ್ ಪಾರ್ಕ್, ಒಳಾಂಗಣ ಮತ್ತು ಅಥ್ಲೆಟಿಕ್ ಸ್ಟೇಡಿಯಂಗಳು ಸೇರಿದಂತೆ ಅನೇಕ ಯೋಜನೆಗಳು ಪ್ರಸ್ತಾಪದಲ್ಲಿವೆ. ಈಗಾಗಲೇ ಅಗಲವಾದ ರಸ್ತೆಗಳು, 24/7 ಕಾವೇರಿ ನೀರಿನ ಸಂಪರ್ಕ, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಮತ್ತು ಬೃಹತ್ ನೀರಿನ ಟ್ಯಾಂಕ್‌ಗಳ ಸೌಲಭ್ಯ ಸಿದ್ಧವಾಗಿದೆ. ಶಾಲೆ, ಆಸ್ಪತ್ರೆ, ಶಾಪಿಂಗ್ ಕಾಂಪ್ಲೆಕ್ಸ್‌ಗಳಿಗೆ ಜಾಗ ಮೀಸಲಾಗಿದೆ. ಒಂದು ಕುಟುಂಬಕ್ಕೆ ಬೇಕಾದ ಎಲ್ಲವೂ ಒಂದೇ ಕಡೆ ಸಿಗುವಂತೆ ಈ ನಗರ ವಿನ್ಯಾಸಗೊಳಿಸಲಾಗಿದೆ. ಇದೆಲ್ಲವೂ ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಹೂಡಿಕೆಯ ಮೌಲ್ಯವನ್ನೂ ನಿರಂತರವಾಗಿ ಹೆಚ್ಚಿಸುತ್ತಲೇ ಇರುತ್ತದೆ.
ಮತ್ತೊಮ್ಮೆ ಹೇಳ್ತೀನಿ - ಸೂರ್ಯ ಸಿಟಿ ಕರ್ನಾಟಕ ಗೃಹ ಮಂಡಳಿಯ (KHB) ಯೋಜನೆ. ನಿಮ್ಮ ಹೂಡಿಕೆಗೆ ಸಂಪೂರ್ಣ ಭದ್ರತೆ ಮತ್ತು ವಿಶ್ವಾಸವಿದೆ. ಈಗಾಗಲೇ ಸಾವಿರಾರು ಜನ ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ, ಬಯೋಕಾನ್, ಇನ್ಫೋಸಿಸ್‌ನಂತಹ ಕಂಪನಿಗಳಿಗೆ ಹತ್ತಿರವಾಗಿರುವುದರಿಂದ ಸಾಕಷ್ಟು ಟೆಕ್ಕಿಗಳು ಮತ್ತು ಉದ್ಯಮಿಗಳು ಇಲ್ಲಿ ಹೂಡಿಕೆ ಮಾಡಲು ಮುಗಿಬೀಳುತ್ತಿದ್ದಾರೆ.
ಸ್ನೇಹಿತರೇ, ನೋಡಿದ ಹಾಗೆ - ಸೂರ್ಯ ಸಿಟಿ ಬೆಂಗಳೂರಿನ ಮುಂದಿನ ದೊಡ್ಡ ಡೆವಲಪ್ಮೆಂಟ್ ಹಬ್ ಆಗಲಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, STRR ಕನೆಕ್ಟಿವಿಟಿ ಮತ್ತು ಇತರ ಬೃಹತ್ ಯೋಜನೆಗಳಿಂದ ನಿಮ್ಮ ಹೂಡಿಕೆಗೆ ಅತ್ಯುತ್ತಮ ಲಾಭ ನೀಡುವ ಎಲ್ಲಾ ಲಕ್ಷಣಗಳೂ ಇಲ್ಲಿವೆ.
ಬೆಂಗಳೂರಿನ ದುಬಾರಿ ಬೆಲೆ, ಕಾನೂನು ತೊಡಕುಗಳಿಲ್ಲದೆ, ಸುರಕ್ಷಿತ ಜಾಗದಲ್ಲಿ ಹೂಡಿಕೆ ಮಾಡಲು ಇದಕ್ಕಿಂತ ಒಳ್ಳೆಯ ಅವಕಾಶ ಸಿಗೋದಿಲ್ಲ. ನೆನಪಿಡಿ - ರಿಯಲ್ ಎಸ್ಟೇಟ್‌ನಲ್ಲಿ ಕಾಯುವವರು ಅಲ್ಲ, ಸರಿಯಾದ ಸಮಯದಲ್ಲಿ ಖರೀದಿಸುವವರೇ ಹೆಚ್ಚು ಲಾಭ ಗಳಿಸುತ್ತಾರೆ!
ಈ ಅದ್ಭುತ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಸೂರ್ಯ ಸಿಟಿಯಲ್ಲಿ ಲಭ್ಯವಿರುವ ಲ್ಯಾಂಡ್ ಓನರ್ ಶೇರ್ ನಿವೇಶನಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
ಸೈಟ್ ವಿಸಿಟ್ ಮಾಡಲು ಅಥವಾ ನಿಮ್ಮ ಹೂಡಿಕೆಯನ್ನು ಖಚಿತಪಡಿಸಿಕೊಳ್ಳಲು
ಈಗಲೇ ಕರೆ ಮಾಡಿ: 7411 554 412
ನಿಮ್ಮ ಕನಸಿನ ಮನೆ ಮತ್ತು ಲಾಭದಾಯಕ ಹೂಡಿಕೆ ಎರಡೂ ಇಲ್ಲಿ ನಿಮ್ಮದಾಗಲಿ!
