To read this in English, please click the link below.
ಬೆಂಗಳೂರು ನಗರಕ್ಕೆ ಸಮೀಪ, ನೆಲಮಂಗಲದ ಬಳಿ ಇರುವ ಪ್ರಕೃತಿ ಪರಿಸರದಿಂದ ಕೂಡಿದ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. ಈ ಫಾರಂ ಲ್ಯಾಂಡ್‌ಗಳು ಶಾಂತಿಯ ನೆಲೆ. ಹಚ್ಚಹಸಿರಿನಿಂದ ಕೂಡಿದ ಈ ಜಾಗಗಳು ಸದಾ ತಂಗಾಳಿಯಿಂದ ಮನಸ್ಸಿಗೆ ತಂಪು ನೀಡುವ ಸ್ಥಳ. ಪ್ರತಿನಿತ್ಯ ಜೀವನದ ಗದ್ದಲ ಮತ್ತು ಜಂಜಾಟಗಳಿಂದ ವಿಶ್ರಾಂತಿ ಪಡೆಯಲು ಇದು ಸೂಕ್ತ ಸ್ಥಳ.
ಫಾರಂ ಹೌಸ್ ಎಂದರೆ ಕೃಷಿ ಪರಿಸರದಲ್ಲಿ ಇರುವ ವಾಸದ ಮನೆ. ಇದನ್ನು ತೋಟದ ಮನೆ ಎಂದರೂ ತಪ್ಪಿಲ್ಲ. ನಗರದ ವಾಸದ ಮನೆಗಳಿಗಿಂತ ವಿಭಿನ್ನವಾದ ಈ ಜಾಗದ ವಾತಾವರಣ ನಿಮ್ಮ ಮನಸ್ಸನ್ನು ಪ್ರಶಾಂತ ಮಾಡುವುದಷ್ಟೇ ಅಲ್ಲ, ಆಹ್ಲಾದಕರವಾಗಿಯೂ ಇರುತ್ತದೆ.
ನೆಲಮಂಗಲದಿಂದ ಕೇವಲ 25 ನಿಮಿಷ, ಯಶವಂತಪುರದಿಂದ 30 ನಿಮಿಷ, ಹಾಗೂ ಬೆಂಗಳೂರು–ಮಂಗಳೂರು–ಹಾಸನ ಹೈವೇಯಿಂದ ಕೇವಲ 1.5 ಕಿಮೀ ದೂರದಲ್ಲಿ ಇರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್‌ನಲ್ಲಿ ನಿಮ್ಮದೇ ಸ್ವಂತ ಫಾರಂ ಹೌಸ್ ನಿರ್ಮಿಸಲು ಇದು ಅತ್ಯುತ್ತಮ ಅವಕಾಶ. ಫಾರಂ ನಿವೇಶನಗಳು ಕೈಗೆಟಕುವ ಬೆಲೆಗೆ ಲಭ್ಯ.

ವೀಕೆಂಡ್ ವಿತ್ ಫಾರಂ ಹೌಸ್ :
ನಗರದ ಗದ್ದಲಗಳಿಂದ ದೂರ ಕೃಷಿ ಭೂಮಿಯ ಮಧ್ಯೆ ನಿಮ್ಮದೇ ಸ್ವಂತ ಫಾರಂ ಹೌಸ್ ಹೊಂದಿರುವ ಅನುಭವವೇ ವಿಶಿಷ್ಟ. ಇದು ಕೇವಲ ಮನೆಯಲ್ಲ, ಪ್ರಶಾಂತತೆಯ ಆಶ್ರಯ. ಪ್ರತಿ ವಾರಾಂತ್ಯವನ್ನು ನಿಮ್ಮ ಸ್ವಂತ ಹಸಿರು ಆವರಣದಲ್ಲಿ ಕಳೆಯಲು ಇದು ಉತ್ತಮ ಅವಕಾಶ.
ಬೆಂಗಳೂರು ನಗರದಲ್ಲಿ ಕೆಲಸ ಮಾಡುವ ಬಹುತೇಕ ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರು ಶನಿವಾರ–ಭಾನುವಾರ ರೆಸಾರ್ಟ್‌ಗಳಲ್ಲಿ ಹಣ ಖರ್ಚು ಮಾಡಿ ಒತ್ತಡವನ್ನು ನಿವಾರಿಸಿಕೊಳ್ಳುತ್ತಾರೆ. ಆದರೆ ನಿಮ್ಮದೇ ಫಾರಂ ಹೌಸ್ ಇದ್ದರೆ, ಪ್ರತೀ ವಿಕೆಂಡ್‌ನಲ್ಲಿ ಇಲ್ಲವೇ ನಿಮಗಿಷ್ಟವಾದ ಸಮಯದಲ್ಲಿ ಪ್ರಕೃತಿಯ ಮಧ್ಯೆ ಕಾಲ ಕಳೆಯಬಹುದು. ಮತ್ತು ಇದು ಕೇವಲ ವಿಶ್ರಾಂತಿಯಲ್ಲ, ನಿಮ್ಮದೇ ಕೃಷಿ ಭೂಮಿ ಆಗಿರುವುದರಿಂದ ಹಣ್ಣು, ತರಕಾರಿ, ಸೊಪ್ಪು ಹಾಗೂ ಹೂವುಗಳನ್ನು ನೈಸರ್ಗಿಕವಾಗಿ ಬೆಳೆಸಬಹುದು.
ನಮ್ಮ ಫಾರಂ ಲ್ಯಾಂಡ್ ಪ್ರದೇಶವು ಭೂಮಿ ತಾಯಿ ಮಡಿಲಲ್ಲಿ ವಾಸಿಸುವ ಸಂತೋಷವನ್ನು ನೀಡುತ್ತದೆ. ಇಲ್ಲಿ ಸುಗ್ಗಿಯ ಹೊಲಗಳು, ಕಣಿವೆಗಳು, ನೀರಿನ ಕೊಳಗಳು ನಿಮ್ಮನ್ನು ಪ್ರಕೃತಿ ಮಾತೆಯೊಂದಿಗೆ ಬೆಸೆಯುತ್ತವೆ. ಹಚ್ಚಹಸಿರಿನ ಭೂದೃಶ್ಯ, ಪಕ್ಷಿಗಳ ಚಿಲಿಪಿಲಿ ಧ್ವನಿ, ಶುದ್ಧ ಗಾಳಿ ಮತ್ತು ಆಧ್ಯಾತ್ಮಿಕ ವಾತಾವರಣ - ಇವೆಲ್ಲವು ನಿಮ್ಮ ಪ್ರತೀ ದಿನವನ್ನು ರಿಫ್ರೆಶ್ ಮಾಡಲು ನೆರವಾಗುತ್ತದೆ.
ಫಾರಂ ಲ್ಯಾಂಡ್ ಗೆ ಹೋಗುವ ಮಾರ್ಗ :
- ಬೆಂಗಳೂರು–ಹಾಸನ–ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಕೇವಲ 1.5 ಕಿಮೀ
- ನೆಲಮಂಗಲ ಕುಣಿಗಲ್ ಸರ್ಕಲ್‌ಗೆ 15 ಕಿಮೀ
- ದಾಬಸ್ ಪೇಟೆಗೆ 15 ಕಿಮೀ
- ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ರಸ್ತೆಗೆ ಕನೆಕ್ಟ್ ಆಗಲು ಕೇವಲ 10 ನಿಮಿಷ
- ಕೆಂಪೇಗೌಡ ಬಸ್ ನಿಲ್ದಾಣದಿಂದ 42 ಕಿಮೀ

ಸಮೀಪದ ಆಸ್ಪತ್ರೆಗಳು
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
- MRR ನೇಚರ್ ಕೇರ್ ಹಾಸ್ಪಿಟಲ್
ಹತ್ತಿರದ ಪ್ರವಾಸಿ ಸ್ಥಳಗಳು
- ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ
- ಮಂಚನಬೆಲೆ ಅಣೆಕಟ್ಟು
- ಆದಿಚುಂಚನಗಿರಿ ಮಠ
- ಸಿದ್ದಗಂಗಾ ಮಠ
- ಶಿವಗಂಗೆ ಬೆಟ್ಟ
- ಗೋರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ
- ಬೇಲೂರು ಚೆನ್ನಕೇಶವ ದೇವಸ್ಥಾನ
- ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನ
- ಶ್ರವಣಬೆಳಗೊಳ ಜೈನ ದೇವಾಲಯ (ಗೊಮ್ಮಟೇಶ್ವರ ಪ್ರತಿಮೆ)
- ಗೊರೂರು ಅಣೆಕಟ್ಟು, ಹಾಸನ
- ನಿಜಗಲ್ ಬೆಟ್ಟ, ದಾಬಸ್ ಪೇಟೆ–ನೆಲಮಂಗಲ
- ಸಾವನದುರ್ಗ ಕೋಟೆ
- ಜಯಮಂಗಲಿ ಬ್ಲಾಕ್ ಫಾರೆಸ್ಟ್

ಫಾರಂ ಲ್ಯಾಂಡ್‌ನಲ್ಲಿ ಲಭ್ಯವಿರುವ ಸೌಲಭ್ಯಗಳು
- ಡಾಂಬರ್ ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆ
- ಪ್ರತೀ ಸೈಟ್‌ಗೆ ನೀರು ಮತ್ತು ವಿದ್ಯುತ್ ಸಂಪರ್ಕ
- ಸುತ್ತಲೂ ಕಾಂಪೌಂಡ್ ಗೋಡೆ
- CCTV
- 24x7 ಸೆಕ್ಯೂರಿಟಿ
- ಬೀದಿ ದೀಪಗಳು
- ಹನಿ ನೀರಾವರಿ ವ್ಯವಸ್ಥೆ
ಕನೆಕ್ಟಿವಿಟಿ
- ಮಾಗಡಿ 8 ಕಿಮೀ.
- ತುಮಕೂರು ರಸ್ತೆ 15 ಕಿಮೀ.
- ನೆಲಮಂಗಲ 15 ಕಿಮೀ.
- ದಾಬಸ್ ಪೇಟೆ 15 ಕಿಮೀ.
- ನೈಸ್ ರಸ್ತೆ 22 ಕಿಮೀ.

ಫಾರಂ ಲ್ಯಾಂಡ್ ನಿವೇಶನಗಳು ತಕ್ಷಣ ನೋಂದಣಿಗೆ ಸಿದ್ಧವಾಗಿವೆ. ನಿಮ್ಮನ್ನು ಪ್ರಕೃತಿಯ ಶಾಂತ ವಾತಾವರಣಕ್ಕೆ ಆಹ್ವಾನಿಸುವ ಈ ಜಾಗದ ಬಗ್ಗೆ ತಿಳಿಯಲು ಅಥವಾ ಸ್ಥಳಕ್ಕೆ ಭೇಟಿ ನೀಡಲು ಇಂದೇ ಸಂಪರ್ಕಿಸಿ. 7349789479
