To read this in English, please click the link below.
ಪ್ರೀತಿಯ ವೀಕ್ಷಕರೇ, ಇದೋ ಇಲ್ಲಿದೆ ನಿಮಗೊಂದು ಗುಡ್ ನ್ಯೂಸ್. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಂತ ನಿವೇಶನವನ್ನು ಹೊಂದುವ ಸುವರ್ಣಾವಕಾಶ ನಿಮಗೆ ದೊರೆಯುತ್ತಿದೆ. ನಗರಕ್ಕೆ ಅಂಟಿಕೊಂಡಂತೆ ಇರುವ ಹೊರವಲಯದಲ್ಲಿ ನಿಮಗೆ ಇಷ್ಡವಾಗುವಂತಹ residential layout ಸಿದ್ಧವಾಗಿದೆ. ಯಾವುದು ಅದು ಅಂತೀರಾ? ನಾವು ತೋರಿಸುತ್ತೇವೆ ನೋಡಿ ಅದರ ಕಂಪ್ಲೀಟ್ ಡೀಟೈಲ್ಸ್.
ಇದು ನಗರದ ಹೊರವಲಯದ ಸೂರ್ಯ ಸಿಟಿ ಬಡಾವಣೆ. ಈಗಾಗಲೇ ಕರ್ನಾಟಕ ಗೃಹ ಮಂಡಳಿಯ ಮಾರ್ಗದರ್ಶನದಲ್ಲಿ ಬಡಾವಣೆಗಳು, ಫ್ಲಾಟ್‌ಗಳು ನಿರ್ಮಾಣವಾಗಿದ್ದು, ವಾಸಿಸಲು ಯೋಗ್ಯವಾದ ಸ್ಥಳ ಎಂದು ಸಾಬೀತಾಗಿದೆ. ಇದೇ ಸ್ಥಳದಲ್ಲೀಗ ಮತ್ತೊಂದು ಅವಕಾಶವನ್ನು ಕರ್ನಾಟಕ ಗೃಹ ಮಂಡಳಿ ಮಾಡಿಕೊಡುತ್ತಿದ್ದು, ಬೆಂಗಳೂರಿನ ಆನೇಕಲ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಹತ್ತಿರ ಏಷ್ಯಾದ ಅತಿ ದೊಡ್ಡ ರೆಸಿಡೆನ್ಶಿಯಲ್ ಲೇಔಟ್ ಆಗಿರುವ ಸೂರ್ಯ ಸಿಟಿ ಬಡಾವಣೆಯಲ್ಲಿ ಕೆಹೆಚ್‌ಬಿ ನಿರ್ಮಾಣ ಮಾಡಿರುವ ನಿಮ್ಮ ಕನಸಿನ ನಿವೇಶನಗಳು ಅಂದರೆ ಈ ಬಡಾವಣೆಯಲ್ಲಿ ಭೂ ಮಾಲೀಕರ ಪಾಲಿನಲ್ಲಿರುವ (Land Owner) ಸೈಟುಗಳು ಲಭ್ಯವಿದೆ.
ಜನಸಾಮಾನ್ಯರು ಏಷ್ಯಾದ ನಂಬರ್ ಒನ್ ಅತಿ ದೊಡ್ಡ ರೆಸಿಡೆನ್ಶಿಯಲ್ ಲೇಔಟ್ ನಲ್ಲಿ ಸೈಟುಗಳನ್ನು ಪಡೆಯಲು ಗೋಲ್ಡನ್ ಸುವರ್ಣಾವಕಾಶವಿದೆ. ಸಿಲಿಕಾನ್ ವ್ಯಾಲಿ ಬೆಂಗಳೂರಿನ ಐಟಿ ಕಂಪನಿಗಳಿಂದ ಸುತ್ತುವರಿದಿರುವ ಮತ್ತು ದೃಢವಾದ ಆರ್ಥಿಕತೆಗೆ ಹೆಸರುವಾಸಿಯಾಗಿರುವ ಎಲೆಕ್ಟ್ರಾನಿಕ್ ಸಿಟಿ ಹತ್ತಿರ ಸುಸಜ್ಜಿತವಾದ, ವಿಸ್ತಾರವಾದ, ಸೂರ್ಯ ಸಿಟಿ 4ನೇ ಹಂತದ ಬಡಾವಣೆಯಲ್ಲಿ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳೊಂದಿಗೆ ಉತ್ತಮವಾದ ವಸತಿ ನಿವೇಶನಗಳನ್ನು ಕರ್ನಾಟಕ ಗೃಹ ಮಂಡಳಿ ನಿರ್ಮಾಣ ಮಾಡಿದೆ.
ಇಲ್ಲಿನ ವಿಶೇಷ ಏನು ಅಂದರೆ, ಈ ಬಡಾವಣೆಯ ಪ್ರದೇಶವು ಹಚ್ಚಹಸಿರಿನಿಂದ ನೆಮ್ಮದಿಯ ಪ್ರಶಾಂತ ವಾತಾವರಣದಿಂದ ಕೂಡಿದೆ. ಮನುಷ್ಯ ತಾನು ವಾಸಿಸುವ ಪ್ರದೇಶವು ಯಾವಾಗ ಹಚ್ಚ ಹಸಿರಿನಿಂದ ಕಂಗೊಳಿಸಬೇಕು. ಸುಂದರವಾದ ವಾತಾವರಣ ಇರಬೇಕು. ಒಳ್ಳೆಯ ಗಾಳಿ, ನೀರು ಸಿಗುವಂತಹ ಪರಿಸರ ಇರಬೇಕೆಂದು ಹಾತೊರೆಯುತ್ತಿರುತ್ತಾನೆ. ಅಂತಹುದ್ದೇ ವಾತಾವರಣ ಇಲ್ಲಿ ನಿರ್ಮಾಣವಾಗಿರುವುದು ಸಂತಸದ ವಿಷಯ.
ಈ ಬಡಾವಣೆಯಲ್ಲಿ ದೇವಸ್ಥಾನ, ಪಾರ್ಕ್, ವಿಶಾಲ ಮತ್ತು ಅಗಲವಾದ ರಸ್ತೆಗಳು, ಸುಂದರ ಉದ್ಯಾನವನಗಳು, ಫಿಟೈಸ್ ಸೆಂಟರ್ ಗಳು ಮತ್ತು ಮನರಂಜನಾ ಕೇಂದ್ರಗಳು, ಕ್ರೀಡಾ ಚಟುವಟಿಕೆ ಸೆಂಟರ್, ರಸ್ತೆ ಬದಿ ಗಿಡಗಳು, ಬಡಾವಣೆಗೆ ಸಾರಿಗೆ ವ್ಯವಸ್ಥೆ, ಪಾರ್ಕಿಂಗ್ ಸ್ಥಳಗಳು, ಬಸ್ ನಿಲ್ದಾಣ, ಮಳೆ ನೀರು ನಿಲ್ಲದ ಹಾಗೆ ದೊಡ್ಡ ಒಳಚರಂಡಿ ವ್ಯವಸ್ಥೆ, ಲೈಬ್ರರಿ ಇನ್ನೂ ಮುಂತಾದ ಪ್ರೀಮಿಯಂ ಮೂಲಸೌಕರ್ಯಗಳ ಪ್ರಯೋಜನವನ್ನು ನೀವು ಪಡೆಯಬಹುದಾಗಿದೆ.
ಕರ್ನಾಟಕ ಗೃಹ ಮಂಡಳಿ ನಿರ್ಮಾಣ ಮಾಡಿರುವ ಈ ಬಡಾವಣೆಯಲ್ಲಿ ಸೈಟು ಖರೀದಿಸಿದರೆ ತಕ್ಷಣ ಮನೆ ಕಟ್ಟಿ ವಾಸಮಾಡಬಹುದು. ಮನೆ ಕಟ್ಟಲು ಸದ್ಯಕ್ಕೆ ಆಗದೇ ಇರುವ ಗ್ರಾಹಕರು ಲಾಂಗ್ ಟರ್ಮ್ ಲಾಭಕ್ಕಾಗಿ ಸೈಟಿನ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು. ಸೂರ್ಯ ಸಿಟಿಯ ಕೆ.ಹೆಚ್.ಬಿ ಬಡಾವಣೆಯಲ್ಲಿ ನೀವು ಹೂಡಿಕೆ ಮಾಡುವ ಹಣ ಮತ್ತು ಸೈಟು ಎರಡು ಸುರಕ್ಷಿತವಾಗಿರುತ್ತದೆ.
ಇಷ್ಟು ಮಾತ್ರವಲ್ಲದೇ, ಈ ಪ್ರದೇಶದಲ್ಲಿ ಸೈಟು ಖರೀದಿ ಮಾಡಿದರೆ ಜನಸಾಮಾನ್ಯರಿಗೆ ಹೆಚ್ಚು ಅನುಕೂಲಕರವಾಗಿದೆ ಕಾರಣ ಈ ಪ್ರದೇಶದಲ್ಲಿರುವ ಪ್ರಮುಖ ಐಟಿ ಕಂಪನಿಗಳು, ಕೈಗಾರಿಕಾ ಕೇಂದ್ರಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಹಾಸ್ಪಿಟಲ್ ಗಳಿಗೆ ಅತ್ಯುತ್ತಮ ಸಂಪರ್ಕವನ್ನು ಹೊಂದಿರುವ ಏಷ್ಯಾದ ಅತಿ ದೊಡ್ಡ ಬಡಾವಣಿ ಎಂದೆನಿಸಿದೆ. ಕರ್ನಾಟಕ ಗೃಹ ಮಂಡಳಿ ಪರಿಸರದೊಡನೆ ಸಾಮರಸ್ಯ ಹೊಂದಿರುವ ಅತ್ಯಾಧುನಿಕ ಮೂಲ ಸೌಲಭ್ಯಗಳ ಸಹಿತ ನಿವೇಶನಗಳನ್ನು ಅಭಿವೃದ್ಧಿಗೊಳಿಸುತ್ತದೆ.
ಇನ್ನು ಈ ಬಡಾವಣೆಯ ವಿಶೇಷತೆಗಳ ಬಗ್ಗೆ ನೋಡುವುದಾದರೆ, ಎ ಖಾತಾ ಮತ್ತು ಈ ಖಾತಾ ಹೊಂದಿರುವ ಸೈಟುಗಳು, ರೇರಾದಿಂದ ಅನುಮೋದನೆ ಆಗಿರುವ ಬಡಾವಣೆ, ಈ ಬಡಾವಣೆಯ ನಿವೇಶನಗಳ ಮೇಲೆ ಹೂಡಿಕೆ ಮಾಡಿದರೆ ಅತ್ಯುತ್ತಮ ಆದಾಯ ಗಳಿಸಬಹುದು, ಬಡಾವಣೆ ಸಿಟಿ ಲಿಮಿಟ್ ವ್ಯಾಪ್ತಿಯಲ್ಲಿದೆ, ರಾಷ್ಟ್ರೀಯ ಹೆದ್ದಾರಿಗೆ ಬಹಳ ಹತ್ತಿರದಲ್ಲಿದೆ, ಅತ್ಯುತ್ತಮವಾಗಿ ಅಭಿವೃದ್ಧಿಯಾದ ಪ್ರೀಮಿಯಂ ಬಡಾವಣೆ, ಸೂರ್ಯಸಿಟಿಯ ಬಡಾವಣೆ ಪ್ರಶಾಂತವಾದ ಮತ್ತು ಅಚ್ಚುಕಟ್ಟಾದ ಸ್ಥಳ, ನೊಂದಣಿಗೆ ಮತ್ತು ಮನೆ ನಿರ್ಮಿಸಲು ಎಲ್ಲಾ ಅನುಕೂಲ ಹೊಂದಿರುವ ನಿವೇಶನಗಳು, ಕೈಕೆಟಕುವ ಬೆಲೆಯಲ್ಲಿ ವಸತಿ ನಿವೇಶನಗಳನ್ನು ಪಡೆಯಬಹುದು, ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ, ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್, ಆಸ್ಪತ್ರೆಗಳು, ಪೆಟ್ರೋಲ್ ಬಂಕ್, ಬ್ಯಾಂಕ್, ಎಟಿಎಂಗಳು, ಶಾಲೆ ಮತ್ತು ಕಾಲೇಜುಗಳು ಬಡಾವಣೆಗೆ ಸಮೀಪವಿದೆ.
ಕನೆಕ್ಟಿವಿಟಿ :
ಈ ಪ್ರದೇಶದಲ್ಲಿ ಪ್ರಸಿದ್ದವಾದ ವಿವೇಕಾನಂದ ಯೋಗ ವಿಶ್ವವಿದ್ಯಾಲಯದೊಂದಿಗೆ ಸೂರ್ಯಸಿಟಿ ಬಡಾವಣೆ ಹೊಂದಿಕೊಂಡಿದೆ, ಆನೇಕಲ್ ಮುಖ್ಯರಸ್ತೆಗೆ ಕನೆಕ್ಟ್ ಆಗಿದೆ, ಎಸ್. ಟಿ.ಆರ್. ಆರ್. ರಸ್ತೆ ಪಕ್ಕದಲ್ಲಿದೆ, ಜಿಗಣಿ ಕೈಗಾರಿಕಾ ಪ್ರದೇಶ ಮತ್ತು ಟೊಯೋಟಾ ಕಿರ್ಲೋಸ್ಕರ್ ನಿಂದ ಎರಡು ಕಿಲೋಮೀಟರ್ ದೂರವಿದೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಜಯದೇವ ಆಸ್ಪತ್ರೆ, ಮತ್ತು ಹೊಸೂರು ರಸ್ತೆಗೆ ಎಂಟು ಕಿಲೋಮೀಟರ್ ಇದೆ, ಬನ್ನೇರುಘಟ್ಟ ಒಂಬತ್ತು ಕಿಲೋಮೀಟರ್, ನೈಸ್ ರಸ್ತೆ ಹನ್ನೊಂದು ಕಿಲೋಮೀಟರ್, ಚಂದಾಪುರ ಏಳು ಕಿಲೋಮೀಟರ್, ಅತ್ತಿಬೆಲೆ ಹನ್ನೆರಡು ಕಿಲೋಮೀಟರ್, ಬೊಮ್ಮಸಂದ್ರ ಮೆಟ್ರೋ ಹನ್ನೆರಡು ಕಿಲೋಮೀಟರ್ ಅಂತರದಲ್ಲಿದೆ.
ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಬಡಾವಣೆಗೆ ದೊಡ್ಡದಾದ ಎಂಟ್ರನ್ಸ್ ಆರ್ಚ್, ಮಕ್ಕಳ ಆಟದ ಪ್ರದೇಶ, ಓವರ್ ಹೆಡ್ ಟ್ಯಾಂಕಿನಿಂದ ನೀರಿನ ಸೌಲಭ್ಯ, ಬಡಾವಣೆ ಪೂರ್ತಿ ವಿದ್ಯುತ್ ಮತ್ತು ಬೀದಿ ದೀಪಗಳು, ಸುಸಜ್ಜಿತ ಮತ್ತು ವಿಶಾಲವಾದ ಉದ್ಯಾನವನಗಳು, ಬೆಂಗಳೂರು ಜಲಮಂಡಳಿಯಿಂದ ಕಾವೇರಿ ನೀರು ಸರಬರಾಜು, ವಾಣಿಜ್ಯ ಸಂಕೀರ್ಣ, ಮಳೆ ನೀರು ಕೊಯ್ಲು ಅಳವಡಿಕೆ, ಅಂಡರ್ ಗ್ರೌಂಡ್ ಒಳಚರಂಡಿ ಲೈನ್ , ಅರವತ್ತು ಎಕರೆ ಸ್ಪೋರ್ಟ್ಸ್ ಸಿಟಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು, ಮೂವತ್ತು, ನಲವತ್ತು, ಅರವತ್ತು, ಎಂಬತ್ತು ಅಡಿ ಅಗಲದ ಡಾಂಬರ್ ರಸ್ತೆಗಳು, ಅಂಡರ್ ಗ್ರೌಂಡ್ ಎಲೆಕ್ಟ್ರಿಕ್ ಮತ್ತು ವಾಟರ್ ಲೈನ್‌ಗಳ ಸೌಲಭ್ಯ ಕಲ್ಪಿಸಲಾಗಿದೆ.
ಇನ್ನು ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಅನೇಕ ಶಿಕ್ಷಣ ಸಂಸ್ಥೆಗಳು ಬಡಾವಣೆಗೆ ಕೂಗಳತೆ ದೂರದಲ್ಲಿದೆ. ಸಮೀಪದ ಶಿಕ್ಷಣ ಸಂಸ್ಥೆಗಳನ್ನು ನೋಡುವುದಾದರೆ, ಸರಳಾ ಬಿರ್ಲಾ ಶಿಕ್ಷಣ ಕೇಂದ್ರ, ಕ್ರೈಸ್ಟ್ ಅಕಾಡೆಮಿ, ಪ್ರೆಸಿಡೆನ್ಸಿ ಸ್ಕೂಲ್, ಡೆಲ್ಲಿ ಪಬ್ಲಿಕ್ ಸ್ಕೂಲ್ , ಕ್ಯಾಂಡರ್ ಇಂಟರ್ ನ್ಯಾಷನಲ್ ಸ್ಕೂಲ್, ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮ್ಯಾಗ್ನೋಲಿಯಾ ಮಾರುತಿ ಪಬ್ಲಿಕ್ ಸ್ಕೂಲ್. ಕ್ರೈಸ್ಟ್ ಅಕಾಡೆಮಿ, ಪಿಇಎಸ್ ವಿಶ್ವವಿದ್ಯಾಲಯ, ಸುರಾನಾ ವಿದ್ಯಾಲಯ ಇಲ್ಲಿವೆ, ಒಳಾಂಗಣ ಕ್ರೀಡೆಗಳನ್ನು ನಿರ್ಮಾಣ ಮಾಡಲಾಗಿದ್ದು, ಬ್ಯಾಡ್ಮಿಂಟನ್ / ಬ್ಯಾಸ್ಕೆಟ್ಬಾಲ್ ಕೋರ್ಟ್ ಲಭ್ಯವಿರಲಿದೆ.
ಇನ್ನು ಮೆಡಿಕಲ್ ಎಮರ್ಜೆನ್ಸಿಗೆ ಎನ್ನುವುದಾದರೆ, ಆಸ್ಪತ್ರೆಗಳು ಕೂಡ ಹತ್ತಿರದಲ್ಲಿ ಇದೆ. ಅಪೋಲೋ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆ, ನಾರಾಯಣ ಹೃದಯಾಲಯ ಆಸ್ಪತ್ರೆ, ವಿಕ್ರಮ್ ಆಸ್ಪತ್ರೆ, ವಿಜಯಶ್ರೀ ಆಸ್ಪತ್ರೆ, ವೈ ಕೆ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆಗಳು ಬಡಾವಣೆಯ ಸಮೀಪದಲ್ಲಿದೆ.
ಇತ್ತ ಮಲ್ಟಿಲೆವಲ್ ಕಂಪನಿಗಳು ಹಾಗೂ ಕೈಗಾರಿಕೆಗಳು ಕೂಡ ಹತ್ತಿರದಲ್ಲಿದ್ದು, ಮರ್ಸಿಡಿಸ್ ಬೆಂಜ್, ವೋಲ್ವೋ, ಹೆಚ್ ಸಿ ಎಲ್, ಎಸ್ ಕೆ ಎಫ್ ಬೇರಿಂಗ್ಸ್, ನೆಸ್ಟ್, ಮೈಲಾನ್, ಓಟಿಸ್ ಎಲಿವೇಟರ್, ಮ್ಯಾಕ್ಟೆಕ್, ಟೊಯೋಟಾ ಕಿರ್ಲೋಸ್ಕರ್ , ಟೇಗುಟೆಕ್ , ಬಯೋಕಾನ್ ಪಾರ್ಕ್ , ಮೈಕ್ರೋ ಲ್ಯಾಬ್ಸ್ , ಸಂಸೆರಾ ಗ್ರಾನೈಟ್ ಹಬ್ ಇಲ್ಲಿದೆ.
ಇನ್ನು ಈ ಬಡಾವಣೆಯಲ್ಲಿ ತಾವು ಲ್ಯಾಂಡ್ ಓನರ್ ಶೇರ್ ನ ನಿವೇಶನ ಖರೀದಿಸಲು ಇಚ್ಛೇಯುಳ್ಳವರು ಈ ಕೂಡಲೇ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7411554412.
ಒಟ್ನಲ್ಲಿ ಈ ಬಡಾವಣೆ ಸುಸಜ್ಜಿತವಾದ ಮನೆ ನಿರ್ಮಿಸಲು ಯೋಗ್ಯವಾಗಿದ್ದು, ಈ ಅವಕಾಶವನ್ನು ನೀವು ಕೈ ಚೆಲ್ಲದೇ ಇರಿ. ಬನ್ನಿ ಒಮ್ಮೆ ಭೇಟಿ ಕೊಟ್ಟು, ಈ ಕೂಡಲೇ ನಿಮ್ಮ ಮನೆ ಕಟ್ಟುವ ಆಸೆಯನ್ನು ಈಡೇರಿಸಿಕೊಳ್ಳಿ. ನಮಸ್ಕಾರ.
