Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ | ಬೆಂಗಳೂರಿನಲ್ಲಿ ಉತ್ತಮ ನಿವೇಶನಗಳನ್ನು ಹೊಂದಲು ಚಿನ್ನದಂತಹ ಅವಕಾಶ | ಬೆಂಗಳೂರು ಟು ಮೈಸೂರು ಎಕ್ಸಪ್ರೈಸ್ ಹೈವೆಗೆ ಹೊಂದಿಕೊಂಡಿರುವ ಅಪ್ರೇಮಯ BMICAPA/REARA ಆನುಮೋದನೆ ಆದ ಪ್ರೀಮಿಯಂ ವಸತಿ ನಿವೇಶನಗಳು | ಅಸೆಟ್ ಡೆವೆಲಪರ್ಸ್ ರ ಪ್ರಸ್ತುತ ಪಡಿಸುತ್ತಿರುವ ಐಶ್ವರ್ಯ ಎನ್ ಕ್ಲೇವ್ ವಿಲ್ಲಾ ಸೈಟುಗಳು ನೆಲಮಂಗಲ ಹತ್ತಿರ ಮಾರಾಟಕ್ಕೆ ಸಿದ್ಧವಾಗಿದೆ. | ಮೈಸೂರು ರಸ್ತೆಯಲ್ಲಿ ಆಶಿರ್ವಾದ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಪ್ರಾಜೆಕ್ಟ್ RERA & BMRDA ಅನುಮೋದನೆ ಆದ A-ಖಾತಾ ಸೈಟುಗಳು | ತುಮಕೂರು ರಸ್ತೆ, ನೆಲಮಂಗಲದಲ್ಲಿರುವ ಲೋಟಸ್ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಆದ ಸೈಟುಗಳು | ಬೆಂಗಳೂರಿನ ಸಿಟಿಗೆ ಸಮೀಪವಿರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ಖರೀದಿಸುವ ಸುವರ್ಣಾವಕಾಶ | ತುಮಕೂರು ರಸ್ತೆ ನೆಲಮಂಗಲದಲ್ಲಿ DC CONVERSION, BMRDA/NPA ಅನುಮೋದನೆ ಆದ ಸೈಟುಗಳು ಮಾರಾಟಕ್ಕೆ ಲಭ್ಯ | ಮೈಸೂರು ರಸ್ತೆ ದೊಡ್ಡ ಆಲದ ಮರದ ಹತ್ತಿರ RERA ಮತ್ತು BMRDA ಅನುಮೋದನೆ ಪಡೆದ A-ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಿದೆ. | ಬೆಂಗಳೂರಿನಲ್ಲಿ ಉತ್ತಮ ನಿವೇಶನಗಳನ್ನು ಹೊಂದಲು ಚಿನ್ನದಂತಹ ಅವಕಾಶ ಕರ್ನಾಟಕ ಗೃಹ ಮಂಡಳಿ (KHB) ನಿರ್ಮಾಣ ಮಾಡಿರುವ ನಿಮ್ಮ ಕನಸಿನ ನಿವೇಶನಗಳು | ರಾಜೇಶ್ವರಿ ಆಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ - ನಿಮ್ಮ ಕನಸಿನ ಮನೆಗೆ ಒಂದು ದಾರಿ ದೀಪವಾಗಿದೆ | ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ KHB ಅಭಿವೃದ್ಧಿಪಡಿಸಿರುವ ನಿವೇಶನವನ್ನು ನಿಮ್ಮದಾಗಿಸಿಕೊಳ್ಳಲು ಬಂಗಾರದಂತಹ ಸುವರ್ಣಾವಕಾಶ | ಬೆಂಗಳೂರು ಸಿಟಿಗೆ ಸಮೀಪವಿರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ನಲ್ಲಿ ನಿಮ್ಮದೇ ಸ್ವಂತ ಫಾರಂ ಹೌಸ್ ಅಥವಾ ತೋಟದ ಮನೆ ಹೊಂದುವ ಸುವರ್ಣಾವಕಾಶ. | KHB ಸೂರ್ಯ ಸಿಟಿ - ನಿಮ್ಮ ಕನಸಿನ ಮನೆಗೆ ದಾರಿ ದೀಪ ! | ಬೆಂಗಳೂರಿನಲ್ಲಿ KHB 2400 ಎಕರೆ ಮೆಗಾ ಟೌನ್‌ಶಿಪ್ - ನೀವು ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ? | ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿಯಲ್ಲಿ ಸೈಟ್ ಖರೀದಿ ಮಾಡಿದರೆ ಕೋಟ್ಯಾಧಿಪತಿ ಆಗಬಹುದೇ? | ತುಮಕೂರು ರಸ್ತೆ ಮಾದಾವರ ಮೆಟ್ರೋ ಸ್ಟೇಷನ್‌ ಹತ್ತಿರ E-Khata ಸೈಟುಗಳು ಮಾರಾಟಕ್ಕಿವೆ | ಕನಸಿನ ಮನೆಯನ್ನು ನನಸಾಗಿಸುವ ಗೋಲ್ಡನ್ ಪ್ರಾಪರ್ಟಿ ಪ್ಲಾನ್! | BMRDA ಅನುಮೋದಿತ E-ಖಾತಾ ಸೈಟುಗಳು ಮಾರಾಟಕ್ಕೆ ಲಭ್ಯ, ದಾಬಸ್ ಪೇಟೆ ಸಮೀಪ, ಬೆಂಗಳೂರು–ತುಮಕೂರು (NH-48) ಹೆದ್ದಾರಿಯ ಬಳಿ. | ಬೆಂಗಳೂರು ಉತ್ತರ ವೇಗವಾಗಿ ಬೆಳೆಯುತ್ತಿರುವ ದೇವನಹಳ್ಳಿ ಏರ್ ರ್ಪೋಟ್ ನಂತರ ನಿಮ್ಮ ಕನಸಿನ ನಿವೇಶನ ಈಗ ನಿಮ್ಮ ಕೈಗೆಟಕುವ ಬೆಲೆಗೆ! | ಬೆಂಗಳೂರಿನ ಮುಂದಿನ ಮೆಗಾ ಟೌನ್‌ಶಿಪ್‌ನಲ್ಲಿ ನಿಮ್ಮದೇ ಒಂದು ನಿವೇಶನ ಹೊಂದಿರಿ | ತುಮಕೂರು ರಸ್ತೆ ಮಾದಾವರ ಮೆಟ್ರೋ ಸ್ಟೇಷನ್‌ ಹತ್ತಿರ E-Khata ಸೈಟುಗಳು ಮಾರಾಟಕ್ಕಿವೆ. |
Home » ಪ್ರಾಪರ್ಟಿ » ಮನೆ ಟಿಪ್ಸ್

ಅಕ್ವೇರಿಯಂ : ಮನೆಗೆ ಅಂದದ ಸೌಂದರ್ಯ, ಮನಸ್ಸಿಗೆ ಮುದ ನೀಡುವ ಆಕರ್ಷಣೆ


17 Sep 2020

ಒಂದು ಗಾಜಿನ ಪೆಟ್ಟಿಗೆ. ತಳದಲ್ಲಿ ಬಣ್ಣ ಬಣ್ಣದ ಕಲ್ಲುಗಳು ಹಾಗೂ ಚಿಪ್ಪುಗಳು. ಪೆಟ್ಟಿಗೆ ತುಂಬ ಸ್ವಚ್ಛವಾದ ನೀರು, ತೂಗು ಹಾಕಿರುವ ವಿದ್ಯುದ್ದೀಪ. ಆಮ್ಲಜನಕ ಪೂರೈಸುವ ಕೊಳವೆ. ಇದರ ನಡುವೆ ಲಾಲಿತ್ಯದಿಂದ ಆಡುವ ಬಗೆಬಗೆಯ ಆಲಂಕಾರಿಕ ಮೀನುಗಳು. ಅವುಗಳಿಗೆ ಆಹಾರ ಕೊಡುತ್ತಾ, ಆಟವಾಡುವುದನ್ನು ನೋಡುತ್ತಿದ್ದರೆ ಎಂತಹ ನೋವು ಅಥವಾ ಒತ್ತಡವೂ ಮಾಯ!

ಇದು ಅಂತಿಂಥ ಮಾಯಾಪೆಟ್ಟಿಗೆ ಅಲ್ಲ, ಅಕ್ವೇರಿಯಂ!
ಇಂಥ ಮೀನು ಸಾಕಣೆ ಕೆಲವರಿಗೆ ಉದ್ಯೋಗ, ಹಲವರಿಗೆ ಹವ್ಯಾಸ. ಆಕರ್ಷಕ ಅಕ್ವೇರಿಯಂ ಮನೆ ಅಥವಾ ಹೋಟೆಲ್ ಗಳ ಸೌಂದರ್ಯ ಹೆಚ್ಚಿಸುವವು. ವಾಸ್ತುವಿನ ಹೆಸರಿನಲ್ಲೂ ಅಕ್ವೇರಿಯಂ ಇಡುವುದುಂಟು. ಮಕ್ಕಳು ಇಷ್ಟಪಡುತ್ತಾರೆ ಎಂದು ಕೆಲವು ಹಿರಿಯರೂ ಮನೆಯಲ್ಲಿ ಅಕ್ವೇರಿಯಂ ಇಟ್ಟುಕೊಳ್ಳುತ್ತಾರೆ. ನಾನಾ ಜಾತಿ, ಬಣ್ಣ ಹಾಗೂ ಗಾತ್ರದ ಮೀನುಗಳು ತಮ್ಮ ದೇಹವನ್ನು ಬಳುಕಿಸುತ್ತಾ ಅಕ್ವೇರಿಯಂ ತುಂಬ ಚಲಿಸುತ್ತಿದ್ದರೆ, ನೀವು ಹಾಕಿದ ಆಹಾರ ತಿನ್ನಲು ಓಡೋಡಿ ಬಂದರೆ ಅದನ್ನು ನೋಡುತ್ತಾ ಕಾಲ ಕಳೆಯಬೇಕೆನಿಸುತ್ತದೆ.

ತಜ್ಞರ ಪ್ರಕಾರ, ಅಕ್ವೇರಿಯಂನಲ್ಲಿ ಮೀನುಗಳನ್ನು ವೀಕ್ಷಿಸುವುದರಿಂದ ರಕ್ತದೊತ್ತಡ, ದುಗುಡಗಳು ಕಡಿಮೆಯಾಗುತ್ತವೆ. ಮನಸ್ಸಿನಲ್ಲಿ ಪ್ರಶಾಂತ ಭಾವನೆಯನ್ನು ಮೂಡುತ್ತದೆ. ಮಕ್ಕಳಲ್ಲಿ ಈ ಹವ್ಯಾಸ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ, ಅವರ ಬುದ್ಧಿಯನ್ನು ಚುರುಕಾಗಿಸುತ್ತದೆ. ಹೀಗಾಗಿ, ದೊಡ್ಡ ಮನೆಗಳಲ್ಲಿ ಗಾಜಿನ ಟ್ಯಾಂಕ್, ರೂಮ್ ಡಿವೈಡರ್, ವಾಲ್ ಮತ್ತು ಕೇಬಲ್ ಅಕ್ವೇರಿಯಂಗಳನ್ನು ಬಳಸಿದರೆ, ಸಣ್ಣ ಮನೆಗಳಲ್ಲಿ ದೊಡ್ಡ ಗಾಜಿನ ಬಾಟಲಿ ಮತ್ತು ಬೌಲ್ ಗಳಲ್ಲಿ ಮೀನುಗಳನ್ನು ಸಾಕುತ್ತಾರೆ. ಜಾಗದ ಕೊರತೆ ಉಳ್ಳವರಿಗೆ ಈಗ ಪೀಠೋಪಕರಣಗಳ ಜತೆಗೇ ಜೋಡಿಸಿರುವ ಅಕ್ವೇರಿಯಂಗಳೂ ಮಾರುಕಟ್ಟೆಗೆ ಬಂದಿವೆ.ಇವುಗಳನ್ನು ಟೀಪಾಯ್ ಕೆಳಗೆ, ಟೀವಿ ಸ್ಟ್ಯಾಂಡ್ ಮಧ್ಯೆ ಇರಿಸಬಹುದು. ವಾತಾವರಣಕ್ಕೆ ಅನುಗುಣವಾಗಿ ಈ ಮೀನುಗಳ ಆರೈಕೆಯ ಅಗತ್ಯವಿರುತ್ತದೆ.

ಬೇಸಗೆಯಲ್ಲಿ ರಕ್ಷಣೆ
ಮನುಷ್ಯರಂತೆ ಮೀನುಗಳಿಗೂ ಬಿಸಿಲಿನಿಂದ ರಕ್ಷಣೆಯ ಅಗತ್ಯವಿದೆ. ಸದಾ ತಂಪಾದ ನೀರಿನಲ್ಲಿ ಸ್ವಚ್ಛಂದವಾಗಿ ಜೀವಿಸಲು ಯತ್ನಿಸುವ ಮೀನುಗಳಿಗೆ ಬೇಸಗೆಯಲ್ಲೂ ಅದೇ ತಂಪು ವಾತಾವರಣವನ್ನು ಸೃಷ್ಟಿಸಬೇಕಿದೆ. ಹೀಗಾಗಿ, ಅಕ್ವೇರಿಯಂ ಅನ್ನು ಸೂರ್ಯನ ಕಿರಣಗಳು ನೇರವಾಗಿ ಬೀಳದ, ಹೀಟರ್, ಓವನ್ ಮುಂತಾದ ಸಾಧನಗಳಿಲ್ಲದ ಸ್ಥಳದಲ್ಲಿರಿಸಬೇಕು.

ಎಚ್ಚರಿಕೆ ಕ್ರಮಗಳೇನು?
ಮನೆಯ ಛಾವಣಿಗೆ ಶೀಟ್ ಹೊದಿಸಿದ್ದರೆ ಅಥವಾ ತಾರಸಿಯ ಎತ್ತರ ಕಡಿಮೆಯಿದ್ದರೆ ಬಿಸಿಲಿನ ತಾಪ ಮನೆಯೊಳಗೂ ಬರುತ್ತದೆ. ಆಗ ಫ್ಯಾನ್ ಹಾಕಿದ್ದರೂ ಬಿಸಿ ಗಾಳಿಯೇ ಬರುತ್ತಿರುತ್ತದೆ. ಇಂಥ ಮನೆಗಳಲ್ಲಿ ಅಕ್ವೇರಿಯಂಗಳ ಬಗ್ಗೆ ಕೊಂಚ ಹೆಚ್ಚು ಎಚ್ಚರಿಕೆ ವಹಿಸಬೇಕು. ಮೀನುಗಳಿಗೆ ಹಿತಕರ ವಾತಾವರಣ ಒದಗಿಸುವ ಸಲುವಾಗಿ ಆಗಾಗ ನೀರು ಬದಲಿಸುತ್ತಿರಬೇಕು. ಸಂಜೆ ಹೊತ್ತಿಗೆ ನೀರು ಬದಲಿಸಿದರೆ ಮೀನುಗಳಿಗೆ ಹೆಚ್ಚು ಅನುಕೂಲ. ಕಿಟಕಿಯ ಪಕ್ಕದಲ್ಲಿ ಅಕ್ವೇರಿಯಂ ಇರಿಸಿದ್ದರೆ ಕಿಟಕಿ ಮುಚ್ಚಿ, ಪರದೆ ಎಳೆದು ಬಿಸಿಲಿನ ಶಾಖ ತಾಗದಂತೆ ನೋಡಿಕೊಳ್ಳಬೇಕು. ಅಕ್ವೇರಿಯಂನಲ್ಲಿ ಬಣ್ಣ ಬಣ್ಣದ ಮೀನುಗಳು ಆಕರ್ಷಕವಾಗಿ ಕಾಣಲೆಂದು ಅದರಲ್ಲಿ ದೀಪವನ್ನು ಅಳವಡಿಸಿರುತ್ತಾರೆ. ಹಳೆಯ ಮಾದರಿ ದೀಪವಾಗಿದ್ದರೆ ಅದರಿಂದಲೂ ಶಾಖ ಉತ್ಪತ್ತಿಯಾಗುತ್ತದೆ. ದೀಪ ಯಾವುದೇ ಇದ್ದರೂ ಮಲಗುವ ಹೊತ್ತಲ್ಲಿ ಅದನ್ನು ಆರಿಸಿಬಿಟ್ಟರೆ ಮೀನುಗಳಿಗೆ ತಂಪಾದ ವಾತಾವರಣ ಸೃಷ್ಟಿಯಾಗುತ್ತದೆ.

ಎಷ್ಟು ಆಹಾರ ಕೊಡಬೇಕು?
ಮೀನುಗಳನ್ನು ಸಾಕುವ ಮುನ್ನ ಆರೈಕೆ ಕುರಿತಾದ ಮಾಹಿತಿ ಕೈಪಿಡಿಯನ್ನು ಓದಿಕೊಂಡಿದ್ದರೆ ಒಳಿತು. ಈ ಮೀನುಗಳಿಗೆ ಸಮಪ್ರಮಾಣದಲ್ಲಿ ಆಹಾರ ನೀಡಬೇಕು. ಕೆಲವು ಜಾತಿಯ ಮೀನುಗಳಿಗೆ ದಿನಕ್ಕೆರಡು ಬಾರಿ ಆಹಾರ ಹಾಕಿದರೆ ಸಾಕು. ಮರಿ ಮೀನುಗಳಿದ್ದರೆ ಸ್ವಲ್ಪ ಜಾಸ್ತಿ ಆಹಾರ ಬೇಕಾಗುತ್ತದೆ. ಕೆಲವು ಮೀನುಗಳು ತಳದಲ್ಲಿ ನಿಲ್ಲುವ, ಇನ್ನೂ ಕೆಲವು ನೀರಿನ ಮೇಲೆ ತೇಲುವ ಆಹಾರವನ್ನು ತಿನ್ನಲು ಇಷ್ಟಪಡುತ್ತವೆ. ನಿಗದಿತ ಸಮಯಕ್ಕೆ ಅವುಗಳಿಗೆ ಆಹಾರವುಣಿಸಬೇಕು.

ತಾಳ್ಮೆಯಿಂದ ನಿರ್ವಹಣೆ
ಟ್ಯಾಂಕ್ ಗಳು ಅಗಲವಾಗಿದ್ದರೆ ಮೀನುಗಳಿಗೆ ಓಡಾಡಲು ಹೆಚ್ಚು ಜಾಗ ಸಿಗುತ್ತದೆ. ಅದನ್ನು ಸ್ವಚ್ಛಗೊಳಿಸುವುದೂ ಸುಲಭ. ವಾರಕ್ಕೊಮ್ಮೆಯಾದರೂ ಅಕ್ವೇರಿಯಂ ಸ್ವಚ್ಛಗೊಳಿಸಬೇಕು. ಮಾಂಸಾಹಾರಿ ಜಾತಿಯ ಕ್ಯಾಟ್ ಫಿಶ್ ಗಳಿದ್ದರೆ ಟ್ಯಾಂಕ್ ಸ್ವಚ್ಛಗೊಳಿಸುತ್ತವೆ. ನೀರಿನ ಕೊಳವೆಗೆ ಫಿಲ್ಟರ್ ಅಳವಡಿಸಿದ್ದರೆ ನೀರನ್ನು ವಾರಕ್ಕೊಮ್ಮೆ ಬದಲಿಸಿದರೆ ಸಾಕು. ಒಂದೇ ಸಲಕ್ಕೆ ಪೂರ್ತಿಯಾಗಿ ತೆಗೆಯಬಾರದು. ಶೇ. 20-30 ಭಾಗ ನೀರನ್ನು ಮಾತ್ರ ಬದಲಿಸಬೇಕು. ಇಲ್ಲದಿದ್ದರೆ ಮೀನುಗಳಿಗೆ ಪ್ರಾಣಾಪಾಯವಾಗುವ ಸಂಭವ ಇರುತ್ತದೆ. ಟ್ಯಾಂಕ್ ತೊಳೆಯುವ ಮುನ್ನ ಮೀನುಗಳನ್ನು ಹೊರತೆಗೆದು, ನೀರಿರುವ ಬಕೆಟ್ ನಲ್ಲಿ ಬಿಡಬೇಕು. ಪಾಚಿ ತೆಗೆಯುವ ಪ್ಯಾಡ್ ನಿಂದ ಫಿಶ್ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಕೆಳಭಾಗದ ಕಲ್ಲುಗಳು ಹಾಗೂ ಇತರ ವಸ್ತುಗಳಲ್ಲೇ ಮೀನುಗಳ ಮಲ ಇತ್ಯಾದಿ ತ್ಯಾಜ್ಯಗಳು ಸೇರಿಕೊಂಡಿರುವುದರಿಂದ ತುಸು ರಭಸದಿಂದ ಹರಿಯುವ ನೀರಿನ ಅಡಿಯಲ್ಲಿಟ್ಟು ತೊಳೆಯಬೇಕು. ಗ್ಲಾಸ್ ಶೈನರ್ ಬಳಸುವುದಿದ್ದರೆ ಹೊರಭಾಗದಲ್ಲಿ ಮಾತ್ರ ಬಳಸಿ. ಒಳಭಾಗದಲ್ಲಿ ಯಾವುದೇ ರಾಸಾಯನಿಕಗಳನ್ನು ಉಪಯೋಗಿಸಬೇಡಿ. ಇದೆಲ್ಲ ತಾಳ್ಮೆಯಿಂದ ಮಾಡಬೇಕಾದ ಕೆಲಸಗಳು. ಅಕ್ವೇರಿಯಂ ಒಳಗೆ ಕೃತಕ ಬೆಳಕನ್ನು ಹರಿಸುವಾಗ ಎಚ್ಚರವಿರಬೇಕು. ವಿದ್ಯುತ್ ಸೋರಿಕೆ ಇದ್ದರೆ ಮೀನುಗಳ ಜೀವಕ್ಕೆ ಅಪಾಯವಿದೆ.

ಯಾವ ಮೀನು ಸಾಕಬೇಕು?
ಅಕ್ವೇರಿಯಂನೊಳಗೆ ಟೆಟ್ರಾ, ರೇನ್‌ ಬೋ ಹಾಗೂ ಕ್ಯಾಟ್‌ ಫಿಶ್‌ ಗಳನ್ನು ಇಟ್ಟರೆ ಚೆನ್ನಾಗಿ ಕಾಣುತ್ತವೆ. ಬೇರೆ ಎಷ್ಟೇ ಜಾತಿಯ ಮೀನುಗಳಿದ್ದರೂ ಗೋಲ್ಡ್ ಫಿಶ್ ಒಂದನ್ನು ಆಯ್ಕೆ ಮಾಡಿಕೊಳ್ಳಲು ಮರೆಯಬೇಡಿ. ಈ ಮೀನು ಎಲ್ಲರನ್ನೂ ಆಕರ್ಷಿಸುತ್ತದೆ. ಮೀನುಗಳ ಜೊತೆಗೆ ಅಲಂಕಾರಿಕ ಸಸ್ಯ, ಬೆಣಚು ಕಲ್ಲುಗಳು, ಕಾರಲ್‌ ದಿಣ್ಣೆಗಳನ್ನು ಇಟ್ಟರೂ ಆಕರ್ಷಕವಾಗಿರುತ್ತದೆ.

Share on:

City Information

(Private)