ಸಾಲಿಗ್ರಾಮದ ವಿಶೇಷವನ್ನು ತಿಳಿದು ಕೊಂಡಿರುವವರೇ ಪುಣ್ಯವಂತರು .
" ಶ್ವೇತ ಪೀತ ತಥಾ ರಕ್ತಾ ಕೃಷ್ಣಾ ಶಾಡ್ವಲ ಸನ್ನಿಭಾ
ಕಪಿಲಾ ಚ ತಥಾ ಧೂಮ್ರಾ ಕಲಂಕಾ ಬಹುವರ್ಣಿನೀ
ಅತಿವರ್ಣಾ ವಿವರ್ಣಾಚ ತಥಾ ಸಂದಿಗ್ಧ ವರ್ಣಿನೀ
ಏ ವಂ ವಿಧೈಸ್ತಥಾ ವರ್ಣೈ ರೂಪೈ ನಾನಾ ವಿಧಾಶಿಲಾ"
ಬಿಳಿ, ಹಳದಿ, ಕೆಂಪು, ಕಪ್ಪು ಹಸಿರು, ಕಪಿಲ, ಧೂಮ್ರ, ಮಿಶ್ರ ಬಣ್ಣ, ಚುಕ್ಕೆಗಳು ಇರುವವು, ಅತಿದಟ್ಟ ವರ್ಣ, ಬಣ್ಣವಿಲ್ಲದ, ಸಂದಿಗ್ಧ ಬಣ್ಣ ಹೀಗೆ ನಾನಾ ರೀತಿಯ ನಾನಾ ಆಕಾರದ ಸಾಲಿಗ್ರಾಮಗಳು ಸಿಗುತ್ತವೆ.
ಸಾಲಿಗ್ರಾಮದ ಪೂಜೆಯಿಂದ ದೊರಕುವ ಫಲಗಳು :
- ಧೂಮ್ರವರ್ಣದ ಸಾಲಿಗ್ರಾಮ ಶ್ರೇಷ್ಠವಾದದ್ದು, ಇದು ಯತಿಗಳ ಪೂಜೆಗೆ ಯೋಗ್ಯವಾದವುಗಳು.
- ಬಹಳ ಬಣ್ಣಗಳುಳ್ಳ ಹಾಗೂ ಮೈಮೇಲೆ ಚುಕ್ಕಿಗಳುಳ್ಳ ಸಾಲಿಗ್ರಾಮಗಳು ಕ್ಷಯಕಾರಿಯಾದವುಗಳು.
- ಅತಿ ದಟ್ಟ ಬಣ್ಣದ ಸಾಲಿಗ್ರಾಮದಿಂದ ದುಃಖ ಉಂಟಾಗುತ್ತದೆ.
- ಮಸ ಮಸ ಕಾದ ಬಣ್ಣವುಳ್ಳ ಸಾಲಿಗ್ರಾಮದಿಂದ ಕುಲನಾಶವಾಗುತ್ತದೆ.
- ಸಂದಿಗ್ಧ ಬಣ್ಣದ ಸಾಲಿಗ್ರಾಮದಿಂದ ಭೂಮಿ ಹಾನಿ ಉಂಟಾಗುತ್ತದೆ.
- ಕಪಿಲ ಬಣ್ಣದ ಸಾಲಿಗ್ರಾಮ ಪೂಜೆಯಿಂದ ಪತ್ನಿಗೆ ಮರಣ ಉಂಟಾಗುತ್ತದೆ.
- ನೀಲಿಬಣ್ಣದ ಸಾಲಿಗ್ರಾಮದಿಂದ ಸಂಪತ್ತು ಅಭಿವೃದ್ಧಿಯಾಗುತ್ತದೆ.
- ಶ್ಯಾಮ ಬಣ್ಣದ ಸಾಲಿಗ್ರಾಮ ಆರೋಗ್ಯ ಪ್ರಾಪ್ತವಾಗುತ್ತದೆ.
- ಕೆಂಪು ಬಣ್ಣದ ಸಾಲಿಗ್ರಾಮದಿಂದ ರಾಜ್ಯ ಲಾಭ, ಭೂಲಾಭ ಉಂಟಾಗುತ್ತದೆ.
- ಅತಿ ಕೆಂಪು ಬಣ್ಣದ ಸಾಲಿಗ್ರಾಮ ಪೂಜೆಯಿಂದ ಮೃತ್ಯು ಪ್ರಾಪ್ತವಾಗುತ್ತದೆ.
- ಬಿಳೆ ಬಣ್ಣದ ಸಾಲಿಗ್ರಾಮ ದಿಂದ ಧನಲಾಭ ಜೊತೆಗೆ ಮೋಕ್ಷ ದಾಯಕವಾಗಿದೆ.
- ಬಹಳ ಬಣ್ಣಗಳುಳ್ಳ ಸಾಲಿಗ್ರಾಮ ಸಂಪತ್ತನ್ನು ನೀಡುತ್ತದೆ.
- ಯಾವ ಬಣ್ಣವಿಲ್ಲದ ಸಾಲಿಗ್ರಾಮ ಯಾವ ಫಲವನ್ನು ಕೊಡುವುದಿಲ್ಲ.
- ಸಂದಿಗ್ಧ ಬಣ್ಣದ ಸಾಲಿಗ್ರಾಮ ಸರ್ವನಾಶವನ್ನು ಉಂಟುಮಾಡುತ್ತದೆ.
ವರ್ಜ್ಯ ಸಾಲಿಗ್ರಾಮಗಳು:
- ಕಪ್ಪೆಯ ಆಕಾರದ, ಸುಡಲ್ಪಟ್ಟ, ಉಷ್ಣ ಆಗಿರುವ ಸಾಲಿಗ್ರಾಮಗಳನ್ನು ತ್ಯಜಿಸಬೇಕು.
- ಇವುಗಳನ್ನು ಪೂಜಿಸುವುದರಿಂದ ದುಃಖ, ದಾರಿದ್ರ್ಯ ಉಂಟಾಗುತ್ತದೆ.
- ಕಟ್ಟು ಹಾಕಲ್ಪಟ್ಟ, ಮತ್ತು ಮೂರು ಮೂಲೆಯ ಸಾಲಿಗ್ರಾಮದಿಂದ ಬಂಧು ನಾಶ.
- ಒಳಭಾಗದಲ್ಲಿ ಒಡೆದ ಚಕ್ರದ ಸಾಲಿಗ್ರಾಮ ದಿಂದ ಬಂಧು ಪುತ್ರರ ನಾಶ.
- ಭಯಂಕರವಾಗಿ ಗೋಚರಿಸುವ ಸಾಲಿಗ್ರಾಮ ದುಃಖವನ್ನು ಕುಲನಾಶವನ್ನು ಉಂಟುಮಾಡುತ್ತದೆ.