Date: 14 Nov 2024 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜ್ಯೋತಿಷ್ಯ » ಜ್ಯೋತಿಷ್ಯ-

ಯಾವ ಹೋಮ ಮಾಡಿಸಿದರೆ ಯಾವ ಶುಭಫಲ ಸಿಗುವುದು ?


20 Feb 2024

ಲೌಕಿಕ ತೊಂದರೆಗಳಿಂದ ಮುಕ್ತಿ ಪಡೆಯಲು ಮತ್ತು ನೆಮ್ಮದಿಯ ಜೀವನದ ಇಚ್ಛೆಯಿಂದ ಹಲವು ಹೋಮಹವನಗಳನ್ನು ನೆರವೇರಿಸಲಾಗುತ್ತದೆ. ಈ ರೀತಿಯ ವಿಭಿನ್ನ ಹೋಮಗಳನ್ನು ನಡೆಸುವುದರಿಂದ ಪಡೆಯಬಹುದಾದ ವಿವಿಧ ಲಾಭಗಳನ್ನು ಕುರಿತ ವಿವರಗಳನ್ನು ಇಲ್ಲಿ ನೀಡಲಾಗಿದೆ. 
ದೈವ ಸನ್ನಿಧಿ ನಮ್ಮದಾಗಲು ಯಜ್ಞಯಾಗಾದಿಗಳು ಸಹಾಯಕವಾಗಿರುತ್ತವೆ ಎಂಬ ದೃಢ ನಂಬಿಕೆಯಿದೆ. ಶ್ರದ್ಧಾಭಕ್ತಿಗಳಿಂದ ನಡೆಸಿದ  ಹೋಮಹವನ, ಯಜ್ಞಯಾಗಾದಿಗಳು ಮಾನವರ ಮಾನಸಿಕ ಒತ್ತಡ ನಿವಾರಣೆಗೆ ನೆರವಾಗುವುದಲ್ಲದೇ, ಮನಶ್ಯಾಂತಿಯನ್ನು ನೀಡುತ್ತವೆ. ದೈವದೊಂದಿಗೆ ಲೀನವಾಗಿ ಆಧ್ಯಾತ್ಮಿಕ ನೆಮ್ಮದಿ ಪಡೆಯಲು ಇದರಿಂದ ಸಾಧ್ಯವಾಗುತ್ತದೆ. ವೇದ, ಪುರಾಣಗಳು ಈ ಮಾತುಗಳನ್ನು ಬೆಂಬಲಿಸುತ್ತವೆ. ತಮಗೆ ಮಾತ್ರವಲ್ಲದೇ ಸುತ್ತಲಿನ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಮನೋಭಾವದೊಂದಿಗೆ ಮಾಡಿದ ಯಜ್ಞದಿಂದ ಕೇವಲ ಕಾರ್ಯಕೈಗೊಂಡ ಯಜಮಾನರಿಗೆ ಮಾತ್ರವಲ್ಲದೇ ಲೋಕ ಕಲ್ಯಾಣ, ನಿಸರ್ಗದಲ್ಲಿ ನೆಮ್ಮದಿಗಳ ಪ್ರತಿಫಲ ಲಭಿಸುತ್ತದೆ.
ಹೋಮವನಗಳನ್ನು ಬಳಸುವ ವಸ್ತುಗಳು :
ಹೋಮದ ಬೆಂಕಿಯಲ್ಲಿ ಬರುವ ಹೊಗೆ ಅಥವಾ ಧೂಮ ಎಲ್ಲೆಡೆ ಹರಡುತ್ತದೆ. ಕೇವಲ ನೈಸರ್ಗಿಕ ಮೂಲದ ವಸ್ತುಗಳನ್ನು ಬಳಸಿ ನಡೆಸುವ ಯಜ್ಞದಿಂದ ಬರುವ ಈ ಧೂಮ ಅನೇಕ ರೋಗಕಾರಕ ಸೂಕ್ಷಾಣುಗಳನ್ನು ನಾಶಪಡಿಸುವ ಔಷಧೀಯ ಶಕ್ತಿ ಹೊಂದಿರುತ್ತದೆ. ಇದು ವೈಜ್ಞಾನಿಕ ಪರೀಕ್ಷೆಗಳಲ್ಲಿ ನಿರೂಪಿತವಾಗಿದೆ.  

ಹೋಮಗಳನ್ನು ಕುರಿತ ಸಂಪೂರ್ಣ ವಿವರಗಳು :
ಗಣಪತಿ ಹೋಮ:
ಎಲ್ಲಾ ರೀತಿಯ ಕಷ್ಟ ನಷ್ಟ ತೊಂದರೆ ನಿವಾರಣೆಯಾಗುವುದಕ್ಕೆ, ಕೆಲಸಗಳಲ್ಲಿ ಆಗುವ ಅಡಚಣೆಗಳನ್ನು ನಿವಾರಿಸಿಕೊಳ್ಳಲು ಮಾಡುವ ಹೋಮ ಇದು.

ನವಗ್ರಹ ಹೋಮ:
ನೆಮ್ಮದಿ, ಶಾಂತಿ, ಗ್ರಹಣದಲ್ಲಿ ಆಗುವ ದೋಷಗಳಿಗೆ ಹಾಗೂ ನವಗ್ರಹಗಳಿಂದ ತೊಂದರೆ ತಾಪತ್ರಯವಿದ್ದಾಗ ಸಕಲ ಕಷ್ಟಗಳನ್ನು ಹೋಗಲಾಡಿಸಲು, ದಶಾ ಭುಕ್ತಿಯಿಂದ ಆಗಬಹು ದಾದ ಪರಿಣಾಮಗಳನ್ನು ನಿವಾರಿಸಲು ಮಾಡುವ ಹೋಮ.

ಪುರುಷ ಸೂಕ್ತ ಹೋಮ:
ಎಲ್ಲಾ ಆಸೆಗಳು ಈಡೇರುವುದಕ್ಕೆ, ಮನೆ, ವಿದ್ಯಾಭ್ಯಾಸದಲ್ಲಿ ತೊಂದರೆ ಆದ ಕಾರಣ, ಬುಧಗ್ರಹ ದೋಷವಿದ್ದು ನಿವಾರಣೆಗಾಗಿ, ವ್ಯಾಪಾರದಲ್ಲಿ ತೊಂದರೆ ಇದ್ದಾಗ, ನರಗಳ ಸಂಬಂಧಿಸಿದ ದೋಷಗಳು ಇದ್ದಾಗ, ಈ ಹೋಮವನ್ನು ಮಾಡಿದರೆ ಅಭಿವೃದ್ಧಿ, ಯಶಸ್ಸು, ಏಳಿಗೆ ದೊರೆಯುತ್ತದೆ.

ಅರುಣ ಹೋಮ:
ದೀರ್ಘಕಾಲ ಕಾಡುವ ಕಾಯಿಲೆ, ಸಂತಾನಭಾಗ್ಯವಿಲ್ಲದಿದ್ದಾಗ ಈ ಹೋಮವನ್ನು ಮಾಡಿದರೆ ಅಭಿವೃದ್ಧಿ, ಯಶಸ್ಸು ಏಳಿಗೆ ದೊರೆಯುತ್ತದೆ.

ತಿಲ ಹೋಮ:
ಪಿತೃ ಶಾಪ ನಿವಾರಣೆ ಹಾಗೂ ಪಿತೃಶಾಪದಿಂದ ಮಕ್ಕಳ ಫಲವಿಲ್ಲದಿದ್ದಾಗ ಈ ಹೋಮವನ್ನು ಮಾಡಿದರೆ ಫಲ ದೊರೆಯುತ್ತದೆ.

ಚಮಕ ಹೋಮ:
ಅಂದುಕೊಂಡ ಕಾರ್ಯದಲ್ಲಿ ಹಿನ್ನಡೆ, ಯಾವ ಕೆಲಸ ಮಾಡಲು ಹೋದರೂ ಈಡೇರುವುದಿಲ್ಲ, ಆ ಸಂದರ್ಭದಲ್ಲಿ ಈ ಹೋಮ ಮಾಡಿದರೆ ಎಲ್ಲಾ ಕಾರ್ಯದಲ್ಲಿ ಹಾಗೂ ಎಲ್ಲಾ ಬೇಡಿಕೆಗಳು ಈಡೇರುತ್ತದೆ.

ಭೂ ಸೂಕ್ತ ಹೋಮ:
ಎಷ್ಟೇ ಬೆಳೆ ಬೆಳೆದರೂ ಬೆಳೆ ಕೈಗೆ ಬರುವುದಿಲ್ಲ ನಷ್ಟವೇ ಜಾಸ್ತಿ, ಮನೆಯಲ್ಲಿ ನೆಮ್ಮದಿ ಶಾಂತಿ ಇರುವುದಿಲ್ಲ, ವಾಸ್ತು ದೋಷದಿಂದ ಬರುವ ತೊಂದರೆಗಳು, ಆರೋಗ್ಯ ಬಲವಿರುವುದಿಲ್ಲ ಅಂತಹ ಸಂದರ್ಭದಲ್ಲಿ ಈ ಹೋಮ ಮಾಡಿದರೆ ಶುಭ.

ಆಯುಷ್ಯ ಹೋಮ:
ಸದಾಭಯ, ಆರೋಗ್ಯದಲ್ಲಿ ಏರುಪೇರು, ದಶಾಭುಕ್ತಿ ಕಾಲದಲ್ಲಿ ಆಗುವ ತೊಂದರೆ ಗಂಡಾಂತರಗಳು ಇದ್ದಾಗ, ಆಯುಸ್ಸು ಆರೋಗ್ಯ, ನೆಮ್ಮದಿ ದೊರಕಲು ಈ ಹೋಮ ಮಾಡಿದರೆ ಶುಭ.

ಮಹಾ ರಕ್ಷೋಘ್ನ ಹೋಮ:
ಮಾಟ, ಮಂತ್ರ, ಅಭಿಚಾರ ದೋಷಗಳು, ಸದಾ ಕಾಯಿಲೆ, ಕೆಟ್ಟ ಕನಸು, ಮನೆಯಲ್ಲಿ ಜಗಳ, ಕದನ, ಕಲಹ, ಗಂಡ ಹೆಂಡತಿಯಲ್ಲಿ ವಿರಸ, ಶತ್ರು ಭಯ, ಅಕಾಲ ಮರಣ, ಚೋರಭಯ ಮುಂತಾದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ.

ಶ್ರೀ ಗಾಯತ್ರಿ ಹೋಮ :
ಬ್ರಹ್ಮಹತ್ಯೆ, ಭ್ರೂಣಹತ್ಯೆ, ಮಾಟ, ಮಂತ್ರ ದೋಷಗಳು ಮುಂತಾದ ತೊಂದರೆಗಳು ಇದಾಗ ಈ ಹೋಮ ಮಾಡಿದರೆ ಶುಭ- ಲಾಭ.

ಸರ್ಪಸೂಕ್ತ ಹೋಮ :
ಸರ್ಪದೋಷಗಳು ಹಾಗೂ ಸರ್ಪಶಾಪ ಹೊಂದಿರುವವರು, ಮಕ್ಕಳ ಫಲ ಇಲ್ಲದವರು, ಚರ್ಮದ ಕಾಯಿಲೆ ಇದ್ದರೆ ಈ ಹೋಮವನ್ನು ಮಾಡಿದರೆ ಶುಭ.

ಧನ್ವಂತ್ರಿ ಹೋಮ:
ಯಾವಾಗಲೂ ಕಾಯಿಲೆಯಿಂದ ನರಳುವಿಕೆ, ಎಷ್ಟೇ ಔಷಧೋಪಚಾರ ಮಾಡಿದರೂ ಕಾಯಿಲೆ ವಾಸಿಯಾಗದಿದ್ದರೆ, ಕಾಯಿಲೆ ನಿವಾರಣೆಗೆ ಆರೋಗ್ಯಭಾಗ್ಯಕ್ಕೆ ಈ ಹೋಮವನ್ನು ಮಾಡಿಸಿದರೆ ಸೂಕ್ತ.

ಭಾಗ್ಯ ಸೂಕ್ತ ಹೋಮ :
ಕಷ್ಟ-ನಷ್ಟ ದಾರಿದ್ರ‍್ಯ ನಿವಾರಣೆಗೆ ಹಾಗೂ ಎಲ್ಲಾ ರೀತಿಯ ಸುಖ, ಸಂತೋಷ, ಸೌಭಾಗ್ಯ ದೊರಕಲು ಈ ಹೋಮವನ್ನು ಮಾಡಿದರೆ ಶುಭ.

ತ್ರಿಸುಪರ್ಣ ಮಂತ್ರ ಹೋಮ :
ಗರ್ಭ ನಿಲ್ಲದಿದ್ದಾಗ, ಯಾವಾಗಲೂ ಗರ್ಭಪಾತವಾಗುತ್ತಿದ್ದರೆ, ಗರ್ಭರಕ್ಷಣೆಗೆ ಈ ಹೋಮ ಮಾಡಿಸಿದರೆ ಒಳ್ಳೆಯದಾಗುತ್ತದೆ.

ಮರಣ ಸೂಕ್ತ ಹೋಮ :
ಮೂತ್ರ ಪಿಂಡಕ್ಕೆ ಸಂಬಂಧಿಸಿದ ತೊಂದರೆಗಳು ಇದ್ದಾಗ, ಮೂತ್ರ ಪಿಂಡ ರಕ್ಷಣೆಗೆ ಈ ಹೋಮ ಮಾಡಿದರೆ ಅನುಕೂಲವಾಗುತ್ತದೆ.

ಅನ್ನ ಸೂಕ್ತ ಹೋಮ:
ಭೋಜನಕ್ಕೆ ಕುಳಿತಾಗ ಅನ್ನವನ್ನು ತಿನ್ನಬೇಕೆಂದು ಅನಿಸಿದರೂ ಅನ್ನ ತಿನ್ನುವುದಕ್ಕೆ ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಹೋಮ ಮಾಡಬೇಕು.

ರುದ್ರ ಸೂಕ್ತ ಹೋಮ :
ಜೀವನದಲ್ಲಿ ಬರಿ ಸಾಕಷ್ಟು ತೊಂದರೆಗಳು ಕಷ್ಟ ನಷ್ಟ ವಿಪರೀತ ಕೋಪ, ಉನ್ನತ ಪದವಿ ದೊರಕದಿದ್ದಾಗ, ಈ ಹೋಮ ಮಾಡಿದರೆ ಶುಭ.

ಅಗ್ನಿ ಸೂಕ್ತ ಹೋಮ:
ಆರೋಗ್ಯದಲ್ಲಿ ತೊಂದರೆ ಎದೆಉರಿ, ಹೊಟ್ಟೆಉರಿ, ಹೊಟ್ಟೆ ಉಬ್ಬರ, ಅಜೀರ್ಣದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ.

ಮನ್ಯು ಸೂಕ್ತ ಹೋಮ :
ಮನೆಯಲ್ಲಿ ಸದಾ ಭಯದ ವಾತಾವರಣ, ಗಾಬರಿ, ಭಯ, ಮಾಡುವ ಕೆಲಸದ ಜಾಗದಲ್ಲಿ ಕಿರುಕುಳ, ಆಪಾದನೆ, ಶತ್ರುಗಳಿಂದ ತೊಂದರೆ ಇದ್ದಾಗ ಈ ಹೋಮವನ್ನು ಮಾಡಿದರೆ ಶುಭ.

ಪವಮಾನ ಸೂಕ್ತ ಹೋಮ :
ಆತ್ಮಗಳಿಂದ ತೊಂದರೆ, ಪಾಪಕರ್ಮಗಳಿಂದ ಮುಕ್ತಿ, ಸದ್ಗತಿ  ಮೋಕ್ಷ ಪಡೆಯಲು ಈ ಹೋಮವನ್ನು ಮಾಡಿಸಿದರೆ ಶುಭ.

ಕುಬೇರ ಹೋಮ:
ವ್ಯಾಪಾರದಲ್ಲಿ ನಷ್ಟ, ಕೊಟ್ಟ ಹಣ ವಾಪಸ್ಸು ಬರದೇ ಇರುವುದು, ಹಣ ವಸೂಲಿಗೆ, ವ್ಯಾಪಾರದಲ್ಲಿ ಲಾಭ ದೊರಕುವುದಕ್ಕೆ ಈ ಹೋಮ ಮಾಡಿದರೆ ಶುಭ.

ಸ್ವಯಂವರ ಪಾರ್ವತಿ ಹೋಮ:
ಎಷ್ಟೇ ಪ್ರಯತ್ನ ಮಾಡಿದರೂ ವಿವಾಹ ಕಾರ್ಯದಲ್ಲಿ ವಿಳಂಬ ಹಾಗೂ ದಾಂಪತ್ಯವಿಚಾರದಲ್ಲಿ ಸದಾ ಜಗಳ ಕಲಹ, ಅನ್ನೋನ್ಯತೆ ಇಲ್ಲದಿದ್ದಾಗ ಈ ಹೋಮ ಮಾಡಿಸಿದರೆ ಶುಭ.

ದುರ್ಗಾ ಸೂಕ್ತ ಹೋಮ:
ಮಾಟಮಂತ್ರ ಪ್ರಯೋಗ, ದೇಹದಲ್ಲಿ ಬಲವಿಲ್ಲದೆ ಇರುವುದು, ಆತ್ಮಗಳಿಂದ ಆಗುವ ತೊಂದರೆ ಇದ್ದಾಗ ಈ ಹೋಮವನ್ನು ಮಾಡಿಸಿದರೆ ಶುಭ.

ಬಾಲಗ್ರಹ ಹೋಮ:
ಮಕ್ಕಳು ಬೆಚ್ಚಿ ಬೀಳುವುದು, ಸದಾ ಹಟ, ಅಳು, ಚಂಡಿ ಹಿಡಿಯುವುದು,ಊಟ ಮಾಡದೇ ಇರುವುದು, ವಾಂತಿ ಮಾಡಿಕೊಳ್ಳುವುದು, ಜ್ವರದ ತೊಂದರೆ ಇದ್ದಾಗ ಈ ಹೋಮ ಮಾಡಿಸಿದರೆ ಶುಭ.

ಸುಬ್ರಹ್ಮಣ್ಯ ಹೋಮ:
ಅಪರೇಷನ್ ಮಾಡುವ ಸಂದರ್ಭದಲ್ಲಿ ತೊಂದರೆಯಾಗದಿರಲಿ ಎಂದು, ಅಪಘಾತವಾಗಿದ್ದಾಗ ಬೇಗ ವಾಸಿಯಾಗಲು, ಬೆಂಕಿಯಿಂದ ತೊಂದರೆಯಾಗಿದ್ದಾಗ ಬೇಗ ಗುಣಮುಖರಾಗಲು.

ಹೀಗೆ ಶ್ರದ್ಧೆ ಭಕ್ತಿಯಿಂದ ಹೋಮ ಮಾಡಿಸಿದಲ್ಲಿ ಶುಭ ಫಲಗಳನ್ನು ಪಡೆಯಬಹುದು

Share on:

City Information

(Private)