ಪಿತ್ರಾರ್ಜಿತ ಆಸ್ತಿ :
ಕಾನೂನಿನ ಪ್ರಕಾರ ಹೇಳುವುದಾದರೆ, ಪೂರ್ವಜರ ಆಸ್ತಿಯು ಪುರುಷ ವಂಶಾವಳಿಯ ನಾಲ್ಕು ತಲೆಮಾರುಗಳವರೆಗೆ.
ಆನುವಂಶಿಯವಾಗಿ ಪಡೆಯಲಾಗಿದೆ. ಪೂರ್ವಜರ ಆಸ್ತಿಯಲ್ಲಿ ಪಾಲು ಮಾಡುವಿಕೆಯು ಹುಟ್ಟಿನಿಂದಲೇ ಉಂಟಾಗುತ್ತದೆ. ಮೂರು
ತಲೆಮಾರಿನಿಂದ ಬಂದ ಅಸ್ತಿಯನ್ನು ಪಿತ್ರಾರ್ಜಿತ ಆಸ್ತಿಯಾಗಿದ್ದು, ಪಿತ್ರಾರ್ಜಿತ ಆಸ್ತಿಯಲ್ಲಿಯೂ ಮಕ್ಕಳಿಗೆ (ಗಂಡು, ಹೆಣ್ಣು ಇಬ್ಬರಿಗೂ) ಸಮಪಾಲು ಇರುತ್ತದೆ.
ಸ್ವಯಾರ್ಜಿತ ಆಸ್ತಿ :
ತಂದೆ ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿಯಾಗಿದೆ. ಆ ವ್ಯಕ್ತಿ ಯಾರಿಗಾದರೂ ಕೊಡಬಹುದು. ಆದರೆ, ತಂದೆ ಆಸ್ತಿ ವಿಲೇವಾರಿ ಮಾಡದೇ, ಪರಭಾರೆ ಮಾಡದೇ ಅಥವಾ ಮಾರಾಟ ಮಾಡದೆ ಹಾಗೇ ತಂದೆ ಮರಣ ಹೊಂದಿದ್ದರೆ ಆತನ ಉತ್ತರಾಧಿಕಾರಿಗಳಾದ ಮಗ, ಮಗಳು, ಹೆಂಡತಿ, ತಾಯಿಗೆ ಸಮಾನವಾದ ಪಾಲು ಇರುತ್ತದೆ.