ನಾವೆಲ್ಲ ಹೆಚ್ಚಾಗಿ ಒಣ ಖರ್ಜೂರವನ್ನು ಸೇವಿಸುತ್ತೇವೆ. ಬೇರೆ ಹಣ್ಣುಗಳಿಗೆ ಹೋಲಿಸಿದಲ್ಲಿ ಒಣಹಣ್ಣಾದ ಖರ್ಜೂರದಲ್ಲಿ ನೀರಿನಂಶ ಕಡಿಮೆ. ಹೆಚ್ಚಿನ ಪೂಷಕಾಂಶಗಳನ್ನು ಹೊಂದಿರುವಂತಹ ಹಣ್ಣುಗಳಲ್ಲಿ ಖರ್ಜೂರವೋ ಒಂದು.
ಖರ್ಜೂರವನ್ನು ಸೇವಿಸಿದಾಗ ಕೆಲವರಿಗೆ ಹೊಟ್ಟೆನೋವು ಕಂಡು ಬಂದರೆ, ಜಗಿದು ಜಗಿದು ಹಲ್ಲುನೋವು ಸಹ ಬರಬಹುದು. ಆದರೆ ಖರ್ಜೂರವನ್ನು ತೊಳೆದು ಶುದ್ದ ಕುಡಿಯುವ ನೀರಿನಲ್ಲಿ ನೆನೆಸಿ ಸೇವಿಸುವುದರಿಂದ ಅನೇಕ ಲಾಭಗಳು ಕಂಡುಬರುತ್ತವೆ. ಹತ್ತರಿಂದ ಇಪ್ಪತ್ತು ನಿಮಿಷ ನೆನೆಸಿದರೆ ಸಾಕು. ಬೇಕಿದ್ದರೆ ಬೆಚ್ಚಗಿನ ನೀರಿನಲ್ಲಿ ಕೂಡ ನೆನೆಸಿಕೊಳ್ಳಬಹುದು. ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಯನ್ನು ಖರ್ಜೂರವು ಹೊಂದಿರುತ್ತದೆ. ಶಕ್ತಿಯ ಹೆಚ್ಚಳಕ್ಕೆ ಇದರ ಸೇವನೆ ಅನುಕೂಲಕಾರಿ.
ಪದೇಪದೆ ಸುಸ್ತಾಗುತ್ತಿದೆ ಎಂದಲ್ಲಿ ಪ್ರತಿನಿತ್ಯ ರಾತ್ರಿ ಖರ್ಜೂರವು ನೆನೆಸಿ ಮಾರನೇ ದಿನ ನೀರಿನ ಸಹಿತವಾಗಿ ಖರ್ಜೂರವನ್ನು ಸೇವಿಸುವುದರಿಂದ ಬಹಳ ಉಪಯೋಗಕಾರಿ. ಮಲಬದ್ದತೆಯ ನಿವಾರಣೆಗೆ ಈ ಉಪಾಯ ಸಹಕಾರಿಯಾಗುತ್ತದೆ. ಇದರಲ್ಲಿ ನಾರಿನಾಂಶ ಇರುವುದರಿಂದ ಇದು ಸಾಧ್ಯ.
ದೇಹದಲ್ಲಿ ರಕ್ತಸಂಚಾರ, ರಕ್ತ ಹೆಚ್ಚಳಕ್ಕೆ (ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ). ವಿಟಮಿನ್ ಗಳು, ಮಿನರಲ್ ಗಳು, ನಾರಿನಾಂಶ ಅಧಿಕ ಪ್ರಮಾಣದಲ್ಲಿದೆ. ಅದರಲ್ಲಿ ಕ್ಯಾಲ್ಯಿಯಂ, ಸಲ್ಪರ್, ತಾಮ್ರ, ಕಬ್ಬಿಣ, ಪೊಟ್ಯಾಷಿಯಂ, ಫಾಸ್ಫರಸ್, ಮ್ಯಾಂಗನೀಸ್ ಗಳಿದ್ದು ದೇಹಕ್ಕೆ ಹೆಚ್ಚಿನ ಅನುಕೂಲತೆಗಳನ್ನು ಮಾಡಿಕೊಡುತ್ತದೆ. ಖರ್ಜೂರವನ್ನು ನೆನೆಸುವುದರಿಂದ ದೇಹಕ್ಕೆ ಈ ಎಲ್ಲ ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭವಾಗುತ್ತದೆ.