ಬ್ರಹ್ಮನಿಂದ ಸಾಕಷ್ಟು ವರಗಳನ್ನು ಪಡೆದಿದ್ದ ಅಂಧಕಾಸುರ ಮದೋನ್ಮತ್ತನಾಗಿದ್ದ. ದೇವತೆಗಳಿಗೆ ಕಾಟ ಕೊಡುತ್ತಿದ್ದ. ಅಸುರನ ಕಾಟ ತಡೆಯಲಾರದ ಸುರರು ಕೈಲಾಸದತ್ತ ಧಾವಿಸಿದರು. ಶಿವನಲ್ಲಿ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರು. ದೇವತೆಗಳ ಸಮಸ್ಯೆಯನ್ನು ಪರಮೇಶ್ವರನು ಆಲಿಸುತ್ತಿರುವಾಗ, ಅಂಧಕಾಸುರ ಕೈಲಾಸದಲ್ಲಿ ಪ್ರತ್ಯಕ್ಷನಾಗುತ್ತಾನೆ. ಪಾರ್ವತಿಯನ್ನು ತನ್ನೊಂದಿಗೆ ಕೊಂಡೊಯ್ಯಲು ಉದ್ಯುಕ್ತನಾಗುತ್ತಾನೆ....
ನವದುರ್ಗೆ ಪಾಹಿಮಾಂಪ್ರಥಮಂ ಶೈಲಪುತ್ರೀ ಚ ದ್ವಿತೀಯಮ್ ಬ್ರಹ್ಮಚಾರಿಣೀ |ತೃತೀಯಂ ಚಂದ್ರಘಂಟೀತಿ ಕೂಷ್ಮಾಂಡೇತಿ ಚತುರ್ಥಕಮ್ |ಪಂಚಮಂ ಸ್ಕಂದ ಮಾತೇತಿ ಷಷ್ಠಂ ಕಾತ್ಯಾಯನೀತಿ ಚ |ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್ |ನವಮಂ ಸಿದ್ಧಿಧಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ || ನವರಾತ್ರಿಯಂದು ದೇವಿಯನ್ನು ನವದುರ್ಗೆಯಾಗಿ ಒಂಬತ್ತು ನಾಮ...
1) ಜಪಿಸುವವರಿಗೆ ವಿಪ್ರತ್ವವನ್ನು, ದ್ವಿಜತ್ವವನ್ನು, ಬ್ರಾಹ್ಮಣತ್ವವನ್ನು, ಶ್ರೋತ್ರೀಯತ್ವವನ್ನೂ ಕರುಣಿಸುವ ಮಹಾಮಂತ್ರವೇ ಗಾಯತ್ರೀ ಮಂತ್ರ. ಇದೇ ಸಾವಿತ್ರೀ ಮಂತ್ರ. ಬುದ್ಧಿಶಕ್ತಿ, ಜ್ಙಾನಸಂಪತ್ತು, ಐಶ್ವರ್ಯ, ಸುಲಕ್ಷಣಗಳು, ಶಾಂತಿ-ಸಮೃದ್ಧಿಗಳು, ಸಜ್ಜನಿಕೆ, ಧಾರ್ಮಿಕತೆ, ಸುಖ, ತೃಪ್ತಿ, ಅಪೇಕ್ಷಿತ ಫಲ, ಇಷ್ಟಾರ್ಥ ಸಿದ್ಧಿ ಎಲ್ಲವೂ ಗಾಯತ್ರೀ ಮಂತ್ರದಲ್ಲಿದೆ. ಗಾಯತ್ರೀ...
ಬ್ರಹ್ಮಾಂಡ ಪುರಾಣದಲ್ಲಿ ಹಯಗ್ರೀವ ಮುನಿಯು ಅಗಸ್ತ್ಯರಿಗೆ ಶ್ರೀಲಲಿತೋಪಾಖ್ಯಾನವನ್ನು ಹೇಳಿ, ಲಲಿತಾ ಸಹಸ್ರನಾಮದಿಂದ ಜಗನ್ಮಾತೆಯನ್ನು ಪ್ರಾರ್ಥಿಸುತ್ತಾರೆ. ಲಲಿತಾಂಬೆಯ ಕಥೆ ಈ ರೀತಿ ಇದೆ : ಶಿವನು ಮನ್ಮಥನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದನು, ಚಿತ್ರಕರ್ಮನು ಮನ್ಮಥನ ಬೂದಿಯನ್ನು ಒಟ್ಟುಗೂಡಿಸಿ ಪುರುಷಾಕೃತಿಯನ್ನು ನಿರ್ಮಾಣ ಮಾಡಿದನು....
ಹಯಗ್ರೀವ ದೇವರು ವೇದ ವಿದ್ಯಾಭಿಮಾನಿ ದೇವತೆ, ಭಗವ೦ತನ ಜ್ಞಾನಾವತಾರ. ತಮೋ-ರಜೋಗುಣಗಳನ್ನು ನಿಗ್ರಹಿಸಿ, ಸಾತ್ವಿಕ ಗುಣಗಳನ್ನು, ನಿಷ್ಕಾಮ ಕರ್ಮಪರ ಪ್ರವೃತ್ತಿ ಧರ್ಮವನ್ನು ಅನುಗ್ರಹಿಸುವುದೇ ಶ್ರೀ ಹಯಗ್ರೀವ ದೇವರ ಮಹತ್ವ. ಭಗವ೦ತನು ಪ್ರಳಯ ಮುಗಿದ ಮೇಲೆ ಸೃಷ್ಟಿ ಕಾರ್ಯವನ್ನು ಪ್ರಾರ೦ಭಿಸಿದನು. ಆಗ ಮಹತ್ತತ್ತ್ವದಿ೦ದ ಅಹ೦ಕಾರತತ್ವ ಉದಿಸಿದವು....