ಸಂಜೆ ಹೊತ್ತು ದೇವರ ಮುಂದೆ ದೀಪ ಹಚ್ಚುವ ಪದ್ಧತಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದರಲ್ಲೂ ಕಾರ್ತೀಕ ಮಾಸದಲ್ಲಿ ದೀಪ ಹಚ್ಚಿ ಬೆಳಗುವುದಕ್ಕೆ ಹೆಚ್ಚು ಪ್ರಾಶಸ್ಯ ನೀಡಲಾಗಿದೆ. ಕಾರ್ತೀಕ ಮಾಸದಲ್ಲಿ ಕೃತ್ತಿಕಾ ನಕ್ಷತ್ರದಲ್ಲಿ ಸಾಯಂಕಾಲ ಚಿಕ್ಕ ಮತ್ತು ದೊಡ್ಡ...
ಹಿಂದೂ ಧರ್ಮದಲ್ಲಿ ಈ ಮೂರೂ ಸಿದ್ಧಾಂತಗಳಿಗೆ ಅದರದ್ದೇ ಮಹತ್ವವಿದೆ. ಈ ಮತಗಳು ಉಪನಿಷತ್ , ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳಿಂದ ಮೂಡಿ ಬಂದಿರುವಂತಹದ್ದಾಗಿವೆ. ಶ್ರೀ ಮಧ್ವಾಚಾರ್ಯರರು, ಶ್ರೀಶಂಕರ ಭಗವತ್ಪಾದಾಚಾರ್ಯರರು ಹಾಗೂ ಶ್ರೀ ರಾಮಾನುಜಾಚಾರ್ಯರರು ಈ ಮೂರೂ ಸಿದ್ಧಾಂತಗಳ ಪ್ರತಿಪಾದಕರು. ಪ್ರಸ್ಥಾನತ್ರಯವನ್ನು ಈ ಮೂವರೂ...
ಗಂಗಾಷ್ಟಮಿ ದಿನಕ್ಕೆ ವಿಶೇಷ ಮಹತ್ವವಿದೆ. ಗೋಕರ್ಣದ ಗಂಗಾಮಾತೆ ಮಂದಿರದ ಬಳಿ ಇರುವ ಗಂಗಾವಳಿ ನದಿಯಲ್ಲಿ ಅಂದು ತೀರ್ಥೋದ್ಭವವಾಗುತ್ತದೆ. ಈ ಸಂದರ್ಭದಲ್ಲಿ ಶಿವ ಮತ್ತು ಗಂಗಾದೇವಿಯ ನಿಶ್ಚಿತಾರ್ಥ ಸಮಾರಂಭವನ್ನು ಅಲ್ಲಿ ಸಾಂಕೇತಿಕವಾಗಿ ಆಚರಿಸುತ್ತಾರೆ. ಗಂಗಾಷ್ಟಮಿಯ ಹಿಂದೊಂದು ಕಥೆಯಿದೆ. ಒಮ್ಮೆ ರೋಮಪಾದ, ಕಾಂಡು ಮತ್ತು ಪ್ರುತಗ್ರೀವ...
ಈಕೆಯಲ್ಲಿ ನರಹಿಂಹ ಸ್ವಾಮಿಯ ಗುಣ ಲಕ್ಷಣಗಳಿವೆ. ಸಿಂಹದ ತಲೆ, ನಾಲ್ಕು ಕೈಗಳು ಹಾಗೂ ಮೊನಚಾಚ ಉಗುರುಗಳನ್ನು ಹೊಂದಿದ್ದಾಳೆ. ತನ್ನ ಕೈಗಳಲ್ಲಿ ಕಪಾಲ, ತ್ರಿಶೂಲ, ಢಮರು ಮತ್ತು ನಾಗಪಾಶವನ್ನು ಹಿಡಿದುಕೊಂಡಿದ್ದಾಳೆ. ನಾರಸಿಂಹಿಯನ್ನು ಹೃದಯ ಸ್ವರೂಪಿಣಿ ಎಂತಲೂ ಕರೆಯುವುದುಂಟು. ವೈಷ್ಣವ ಸಂಪ್ರದಾಯಸ್ಥರು ಈಕೆಯನ್ನು ಮಹಾಲಕ್ಷ್ಮಿಯ...
ಲಲಿತಾ ಸಹಸ್ರನಾಮವು ಲಲಿತಾ ತ್ರಿಪುರ ಸುಂದರಿಯನ್ನು ‘ಶ್ರೀಮಾತಾ ಶ್ರೀಮಹಾರಾಜ್ಞಿ ಶ್ರೀಮತ್ ಸಿಂಹಾಸನೇಶ್ವರಿ’ ಎಂದು ವರ್ಣಿಸುತ್ತದೆ. ಲಲಿತಾ ಎಂದರೆ ನಿರಂತರವಾಗಿ ಹರಿವ ಸುಪ್ತ ಚೈತನ್ಯ ಎಂತಲೂ ಅರ್ಥೈಸಬಹುದು. ಶ್ರೀಚಕ್ರದ ಕೇಂದ್ರಬಿಂದುವೇ ತ್ರಿಪುರ ಸುಂದರಿ. ಮಹಾತ್ರಿಪುರ ಸುಂದರಿ, ಷೋಡಶಿ, ಲಲಿತಾ, ರಾಜರಾಜೇಶ್ವರಿ ಎಂತಲೂ ಕರೆಯುತ್ತಾರೆ....