ಮಶ್ರೂಮ್ ಮಸಾಲೆ ಮಾಡಲು ಬೇಕಾಗುವ ಪದಾರ್ಥಗಳು :
ದನಿಯಾ - 2 ಚಮಚ
ಕಾಳು ಮೆಣಸು - 1 ಚಮಚ
ಎಲಕ್ಕಿ - 1
ಲವಂಗ - 3
ಚಕ್ಕೆ - 1-2
ಜೀರಿಗೆ - 1 ಚಮಚ
ಮಶ್ರೂಮ್ - 250 ಗ್ರಾಂ
ಎಣ್ಣೆ - 3 ಚಮಚ
ಈರುಳ್ಳಿ - ಸಣ್ಣಗೆ ಹೆಚ್ಚಿದ 1 ಬಟ್ಟಲು
ಶುಂಠಿ, ಬೆಳ್ಳುಳ್ಳಿ - ಸಣ್ಣಗೆ ಹೆಚ್ಚಿದ್ದು 2 ಚಮಚ
ಹಸಿಮೆಣಸಿನ ಕಾಯಿ - 2-3
ಖಾರದ ಪುಡಿ - 1 ಚಮಚ
ಟೊಮೆಟೋ ರಸ - 1 ಬಟ್ಟಲು
ಅರಿಶಿನಪುಡಿ - ಅರ್ಧ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - ಸ್ವಲ್ಪ
ಗೋಡಂಬಿ ಪೇಸ್ಟ್ - 2 ಚಮಚ
ಕಸೂರಿ ಮೇಥಿ - 1 ಚಮಚ
ಫ್ರೆಶ್ ಕ್ರೀಮ್ - 1 ಚಮಚ
ಕೊತ್ತಂಬರಿ ಸೊಪ್ಪು - ಸಣ್ಣಗೆ ಹೆಚ್ಚಿರುವದು ಸ್ವಲ್ಪ
ಮಶ್ರೂಮ್ ಮಸಾಲೆ ಮಾಡುವ ವಿಧಾನ :
- ಒಲೆಯ ಮೇಲೆ ಬಾಣಲೆ ಇಟ್ಟು ಕಾದ ನಂತರ ಅದಕ್ಕೆ ಧನಿಯಾ, ಕಾಳು ಮೆಣಸು, ಲವಂಗ, ಎಲಕ್ಕಿ, ಚಕ್ಕೆ, ಜೀರಿಗೆ ಹಾಕಿ ಕೆಂಪಗೆ ಹುರಿದುಕೊಂಡು ನಂತರ ಮಿಕ್ಸಿ ಜಾರ್'ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.
- ನಂತರ ಇದೇ ಬಾಣಲೆಗೆ ಎಣ್ಣೆ ಹಾಕಿ ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಂಡ ಮಶ್ರೂಮ್ ಗಳನ್ನು ಹಾಕಿ ಕೆಂಪಗೆ ಹುರಿದು ತೆಗೆದಿಟ್ಟುಕೊಳ್ಳಬೇಕು. ಇದೇ ಎಣ್ಣೆಯಲ್ಲಿಯೇ ಈರುಳ್ಳಿ, ಹಸಿಮೆಣಸಿನ ಕಾಯಿ, ಬೆಳ್ಳುಳ್ಳಿ, ಶುಂಠಿ ಹಾಕಿ ಕೆಂಪಗೆ ಹುರಿದು ಮಿಕ್ಸಿ ಜಾರ್'ಗೆ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು.
- ನಂತರ ಬಾಣಲೆಗೆ ಎಣ್ಣೆ ಹಾಕಿ ರುಬ್ಬಿಕೊಂಡ ಈರುಳ್ಳಿ ಮಿಶ್ರಣ, ಟೊಮೆಟೋ ರಸವನ್ನು ಹಾಕಿ 5 ನಿಮಿಷ ಕುದಿಯಲು ಬಿಡಬೇಕು. ನಂತರ ಖಾರದ ಪುಡಿ, ಅರಿಶಿನ, ಬೆಲ್ಲ, ಉಪ್ಪು, ಮೊದಲೇ ಮಾಡಿಕೊಂಡ ಮಸಾಲೆ ಪುಡಿ, ಫ್ರೆಶ್ ಕ್ರೀಮ್, ಬಾದಾಮಿ ಪೇಸ್ಟ್, ಮಶ್ರೂಮ್ ಗಳನ್ನು ಹಾಕಿ 5 ನಿಮಿಷ ಕುದಿಸಿ ಒಂದು ಬೌಲ್ ನಲ್ಲಿ ಇಟ್ಟು ಅದರ ಮೇಲೆ ಕೊತ್ತಂಬರಿ ಸೊಪ್ಪಿನ್ನು ಹರಡಿ, ನಂತರ ರುಚಿಕರವಾದ ಮಶ್ರೂಮ್ ಮಸಾಲೆ ಸವಿಯಲು ಸಿದ್ಧವಾಗಿರುತ್ತದೆ.