ಮನೆಯಲ್ಲಿ ಪೂಜಾ ಕೋಣೆಗೆ ವಿಶೇಷ ಪ್ರಾಧಾನ್ಯವಿದೆ. ಇದು ಮಾನಸಿಕ ನೆಮ್ಮದಿಯನ್ನು ನೀಡುವ ಸ್ಥಳವೂ ಹೌದು.
ಪೂಜಾ ಕೋಣೆಯಲ್ಲಿ ಯಾವ ವಸ್ತು ಎಲ್ಲಿ, ಹೇಗಿರಬೇಕು ಇದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಉತ್ತಮ ಸಲಹೆ.
- ಮನೆಯ ಮುಖ್ಯ ಬಾಗಿಲಿನ ಎದುರು ಪೂಜಾ ಕೋಣೆ ಇರಬಾರದು, ಇದ್ದರೆ ಅದು ಪೂಜಾ ಕೋಣೆಯಲ್ಲಿ ಸೃಷ್ಟಿಯಾದ ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ.
- ಪೂಜಾ ಕೋಣೆಯಲ್ಲಿ ಕತ್ತಲು ಇರಬಾರದು. ಕತ್ತಲಿರುವುದರಿಂದ ಮನೆ ಮಂದಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸದಾ ದೀಪ ಬೆಳಗುವಂತೆ ನೋಡಿಕೊಳ್ಳಬೇಕು.
- ಮಲಗುವ ಕೋಣೆಯಲ್ಲಿ ಪೂಜಾ ಕೋಣೆ ಇರಬಾರದು.
- ಶೌಚಗೃಹದ ಋಣಾತ್ಮಕ ಶಕ್ತಿ ಪೂಜಾ ಕೋಣೆಯ ಶುಭ ವಾತಾವರಣವನ್ನು ಹಾಳು ಮಾಡುತ್ತದೆ. ಪೂಜಾ ಕೋಣೆಯ ಮೇಲೆ, ಕೆಳಗೆ ಸ್ನಾನದ ಕೋಣೆ ನಿರ್ಮಿಸುವುದನ್ನು ತಪ್ಪಿಸಿ.
- ಮನೆಯ ಉತ್ತರ, ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ದೇವರ ಕೋಣೆಯಿರಲಿ.
- ಪೂಜಾ ಕೋಣೆಯಲ್ಲಿ ಇಡುವ ಮೂರ್ತಿ ಮನೆಯ ಯಜಮಾನನ ಹೆಬ್ಬೆರಿಳಿಗಿಂತ ಹೆಚ್ಚು ಎತ್ತರ ಇರಬಾರದು. ನೀರು ಸಂಗ್ರಹ ಮಾಡಲು ತಾಮ್ರದ ಪಾತ್ರೆ ಬಳಸಿದರೆ ಒಳ್ಳೆಯದು.
- ಈ ಕೋಣೆಯ ಗೋಡೆ ಬಣ್ಣ ಬಿಳಿ, ನಿಂಬಲೆ ಅಥವಾ ತಿಳಿ ನೀಲಿ ಬಣ್ಣದಲ್ಲಿರಬೇಕು ಮತ್ತು ಅಮೃತಶಿಲೆಯೂ ಬಿಳಿಯಾಗಿರಬೇಕು ಎನ್ನುತ್ತಾರೆ ವಾಸ್ತು ತಜ್ಞರು.
- ದೇವರಕೋಣೆಯನ್ನು ಶುಚಿಯಾಗಿ ಇರಿಸಿಕೊಳ್ಳುವುದು ಅಗತ್ಯ. ಕೈ, ಕಾಲುಗಳನ್ನು ತೊಳೆಯದೇ ಒಳಗೆ ಹೋಗಬಾರದು ಎಂಬ ನಂಬಿಕೆ ಇದೆ.
- ದೇವರ ಸಾಮಾಗ್ರಿಗಳನ್ನು ಇರಿಸಲು ಮಾಡಿರುವ ಸ್ಥಳದಲ್ಲಿ ಅನಗತ್ಯ ವಸ್ತುಗಳನ್ನು ಇರಿಸಕೂಡದು.