ಉಗುರು ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುವ ಮೂಲಕ ದೇಹದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ತಿಳಿಸಬಲ್ಲದು. ಅದನ್ನು ಅರ್ಥ ಮಾಡಿಕೊಂಡು ತಿಳಿದುಕೊಳ್ಳುವ ಸಂಯಮ ನಮಗೆ ಬರಬೇಕಿಷ್ಟೇ.
ನೀಲಿ:
ಶ್ವಾಸಕೋಶದಲ್ಲಿ ಸಮಸ್ಯೆ ಉಂಟಾಗುತ್ತಿದೆ. ಕೆಂಪು ರಕ್ತಕಣಗಳಲ್ಲಿ ಆಮ್ಲಜನಕ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಅಸಹಜ ಎನಿಸುವಷ್ಟರ ಮಟ್ಟಿಗೆ ಹಿಮೊಗ್ಲೊಬಿನ್ ಪ್ರಮಾಣ ಹೆಚ್ಚಾಗಿದೆ. ದೇಹದ ಎಲ್ಲ ಅಂಗಗಳಿಗೆ ರಕ್ತ ಸಂಚಾರ ಸರಿಯಾಗಿ ಆಗುತ್ತಿಲ್ಲ.
ಕಪ್ಪು:
ಅನಿಮಿಯಾ, ವಿಟಮಿನ್ ಬಿ 12 ಕೊರತೆ, ಬ್ಯಾಕ್ಟೀರಿಯಾ ಸೋಂಕು, ದೀರ್ಘಕಾಲಿಕ ಕಿಡ್ನಿ ಸಮಸ್ಯೆ, ಅಡ್ರಿನಲ್ ಗ್ರಂಥಿ ಸಮಸ್ಯೆ, ಯಕೃತ್ತು ಸಮಸ್ಯೆ, ಕ್ಯಾನ್ಸರ್ ಅಥವಾ ಮೆಲನೊಮಾ (ಚರ್ಮಗಳಲ್ಲಿ ಉಂಟಾಗುವ ಹಾನಿಕಾರಕ ಗ್ರಂಥಿ).
ಬಿಳಿ:
ಉಗುರು ಬಿಳಿಬಣ್ಣಕ್ಕೆ ತಿರುಗಿದರೆ ಕಿಡ್ನಿ, ಯಕೃತ್ತುಗಳಲ್ಲಿ ಸಮಸ್ಯೆ ಮತ್ತು ರಕ್ತಹೀನತೆ ಕಾಣಿಸಿಕೊಂಡಿದೆ ಎಂದರ್ಥ. ಉಗುರಿನಲ್ಲಿ ಕಾಣಿಸಿಕೊಳ್ಳುವ ಬಿಳಿ ಬಣ್ಣದ ಗೆರೆಗಳು ದೇಹ ಪ್ರೊಟೀನ್ ಕೊರತೆ ಎದುರಿಸುತ್ತಿರುವುದರ ಸಂಕೇತ. ಬಿಳಿ ಚುಕ್ಕೆಗಳಿದ್ದಲ್ಲಿ ಸತು (ಜಿಂಕ್) ಪ್ರಮಾಣ ಕಡಿಮೆ ಆಗಿದೆ ಎಂದರ್ಥ. ವಾತಕ್ಕೆ ಸಂಬಂಧಿಸಿದ ಸಮಸ್ಯೆಯಾದಾಗಲೂ ಉಗುರು ಬಿಳುಚಿಕೊಳ್ಳುತ್ತದೆ.
ಹಸಿರು:
ಸೋಂಕು (ಇನ್‌ಫೆಕ್ಷನ್) ಉಂಟಾದರೆ ಉಗುರು ಹಸಿರು ಬಣ್ಣಕ್ಕೆ ತಿರುಗಿದಾಗ ನೋಡಬಹುದು.
ಬೂದುಬಣ್ಣ:
ಸಂಧಿವಾತ, ಅಪೌಷ್ಟಿಕತೆ, ಗ್ಲುಕೊಮಾ, ಶ್ವಾಸಕೋಶದ ತೊಂದರೆ, ಹೃದಯ ಸಂಬಂಧಿ ಸಮಸ್ಯೆ ಆಗಿದೆ.
ಕಂದುಬಣ್ಣ:
ಸೋರಿಯಾಸಿಸ್ (ಚರ್ಮ ಸಂಬಂಧಿ ಕಾಯಿಲೆ) ಕುರುಹು. ಕೆಂಪು ಬಣ್ಣ ಮಿಶ್ರಿತ ಕಂದು ಚುಕ್ಕೆಗಳಿದ್ದಲ್ಲಿ ಫೋಲಿಕ್ ಆಸಿಡ್, ಪ್ರೊಟೀನ್ ಹಾಗೂ ವಿಟಮಿನ್ ಸಿ ಕೊರತೆ ಉಂಟಾಗಿದೆ.
ಹಳದಿ:
ಲಿಂಫ್ಯಾಟಿಕ್ (ದುಗ್ಧರಸ) ಸಮಸ್ಯೆ ಅಥವಾ ಯಕೃತ್ತಿನಲ್ಲಿ ಸಮಸ್ಯೆ ಆದಾಗಲೂ ಉಗುರು ಹಳದಿಗಟ್ಟುತ್ತದೆ. ಸಕ್ಕರೆ ಕಾಯಿಲೆ, ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಯನ್ನು ತಿಳಿಸುತ್ತದೆ.
ಕೆಂಪು:
ಬ್ರೇನ್ ಹ್ಯಾಮರೇಜ್ ಆಗುವ ಸಾಧ್ಯತೆಯನ್ನು ತಿಳಿಸಿ ಕೊಡುತ್ತದೆ. ಹೃದಯ ಕಾಯಿಲೆ, ಅತಿಯಾದ ರಕ್ತದ ಒತ್ತಡ, ಶ್ವಾಸಕೋಶದ ತೊಂದರೆ, ಪಾರ್ಶ್ವವಾಯು ಸಮಸ್ಯೆ.
ನೇರಳೆ:
ಆಮ್ಲಜನಕ ಅಭಾವ, ರಕ್ತಸಂಚಾರದಲ್ಲಿ ಸಮಸ್ಯೆ ಉಂಟಾಗಿರುವುದನ್ನು ತೋರಿಸುತ್ತದೆ.
ಕಪ್ಪು:
ಉಗುರಿನ ಅಂಚಿನ ಭಾಗ ಕಪ್ಪುಬಣ್ಣಕ್ಕೆ ತಿರುಗಿದರೆ ಕಿಡ್ನಿಯಲ್ಲಿ ಸಮಸ್ಯೆ ಇರುವುದರ ಸಂಕೇತ.
ಎಚ್ಚರಿಕೆ : ಆರೋಗ್ಯದ ಸಮಸ್ಯೆ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.