ಮೂತ್ರಪಿಂಡಗಳು ನಮ್ಮ ದೇಹದ ತುಂಬಾ ಸೂಕ್ಷ್ಮ ಹಾಗೂ ಅತಿ ಹೆಚ್ಚು ಕೆಲಸ ಮಾಡುವ ಅಂಗ. ಇದು ದೆಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ದೇಹದಲ್ಲಿನ ವಿಷಕಾರಿ ಅ೦ಶಗಳನ್ನು ಮೂತ್ರದ ಮೂಲಕ ಹೊರ ಬರುತ್ತದೆ.
ಮೂತ್ರಪಿ೦ಡದಲ್ಲಿನ ಕಲ್ಲು ಅಥವಾ ಕಿಡ್ನಿ ಸ್ಟೋನ್ ಈಗ ಸಾಮಾನ್ಯ ಸಮಸ್ಯೆಯಾಗಿ ಹಲವು ಜನರನ್ನು ಕಾಡುತ್ತಿದೆ. ಹಾಗಾಗಿ ಮೂತ್ರ ಪಿಂಡದ ಆರೋಗ್ಯ ಕಾಪಾಡಲು ಹೆಚ್ಚು ಗಮನ ನೀಡಲೇ ಬೇಕು.
ಕಡಿಮೆ ನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಉಂಟಾಗುತ್ತದೆ. ನೀರು ಕಡಿಮೆ ಕುಡಿದಾಗ ಆಗುವ ಅಪಾಯಗಳ ಬಗ್ಗೆ ತಿಳಿಯಿರಿ. ಉಪ್ಪು ಮತ್ತು ಖನಿಜಾ೦ಶಗಳು ಮೂತ್ರದ ಮೂಲಕ ಹೊರ ಹೋಗದೆ ಕಿಡ್ನಿಯಲ್ಲೇ ಉಳಿದು ಕಿಡ್ನಿ ಸ್ಟೋನ್ ಉಂಟಾಗುವುದು.
ಕಿಡ್ನಿ ಕಲ್ಲಿನ ಸಮಸ್ಯೆಗೆ ಹೋಮಿಯೋಪತಿ, ಅಲೋಪತಿ, ಆಯುರ್ವೆದದಲ್ಲಿ ಚಿಕಿತ್ಸಾ ಕ್ರಮಗಳು ಸಿಗುತ್ತವೆ. ಇದಲ್ಲದೆ ಮನೆ ಮದ್ದಿನಿಂದಲೂ ಕಿಡ್ನಿ ಸ್ಪೋನಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಪ್ರತಿನಿತ್ಯ 12 ಲೋಟಕ್ಕೂ ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಪಾರಾಗಬಹುದು.
ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿ ಕಲ್ಲಿನ ಸಮಸ್ಯೆ ಬರದಂತೆ ನೋಡಿಕೊಳ್ಳಬಹುದಾಗಿದೆ. ಕಿಡ್ನಿಯಲ್ಲಿ ಸಂಗ್ರಹವಾಗಿರುವ ಕ್ಯಾಲ್ಸಿಯಂ ಕರಗಿಸುವಲ್ಲಿ ನಿಂಬೆರಸ ಪರಿಣಾಮಕಾರಿ. ಊಟಕ್ಕೆ ಮೊದಲು ನಿಂಬೆಪಾನೀಯ ಕುಡಿಯುವುದರಿಂದಲೂ ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಮುಕ್ತರಾಗಬಹುದು. ಇದರ ಜತೆಗೆ ತುಳಸಿಯೂ ಸಹ ಕಿಡ್ನಿ ಕಲ್ಲನ್ನು ಕರಗಿಸುತ್ತದೆ. ದಿನನಿತ್ಯ ಕೆಲ ತುಳಸಿ ಎಲೆಗಳ ಸೇವನೆಯಿಂದಲೂ ಕಿಡ್ನಿ ಸ್ಟೋನ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕಿಡ್ನಿ ಸ್ಟೋನ್ ಹೋಗಲಾಡಿಸಲು ಬಾಳೆದಿಂಡಿನಿಂದ ಮಾಡಿದ ಪಲ್ಯ ಹೆಚ್ಚು ಪರಿಣಾಮಕಾರಿ. ನಿಯಮಿತವಾಗಿ ಬಾಳೆದಿಂಡಿನಿಂದ ಪಲ್ಯ ಮಾಡಿ ತಿನ್ನುವುದರಿಂದ ಕಿಡ್ನಿ ಸಮಸ್ಯೆ ಇನ್ನಿಲ್ಲವಾಗುವುದು.
ಗೋದಿ ಹುಲ್ಲಿನ ಜ್ಯೂಸ್ ಸಹ ಕಿಡ್ನಿ ಕಲ್ಲನ್ನು ಸುಲಭವಾಗಿ ಕರಗಿಸುತ್ತದೆ. ಗೋದಿ ಹುಲ್ಲಿನಿಂದ ಮಾಡಿದ ಜ್ಯೂಸ್ ಕುಡಿದರೆ ಹಾಗಾಗ ಮೂತ್ರ ವಿಸರ್ಜನೆ ಹೋಗುವುದರಿಂದ ಅದರ ಜೊತೆಗೆ ಕಿಡ್ನಿ ಕಲ್ಲು ನಿಧಾನವಾಗಿ ಕರಗುತ್ತದೆ. ಕಿಡ್ನಿ ಕಲ್ಲಿನ ಸಮಸ್ಯೆ ಇರುವವರು ಈ ಮನೆ ಮದ್ದುಗಳನ್ನು ಬಳಸುವುದರಿಂದ ಕಿಡ್ನಿಸಮಸ್ಯೆಯಿಂದ ಮುಕ್ತರಾಗಬಹುದು.