ಮಲಗುವಾಗ ಉತ್ತರಕ್ಕೆ ತಲೆ ಇಟ್ಟು ಏಕೆ ಮಲಗಬಾರದು ಎಂದು ಹಿರಿಯರು ಹೇಳುವುದು ಗಾದೆ ಮಾತಲ್ಲ !
- ಭೂಮಿಗೆ ಶಕ್ತಿಶಾಲಿಯಾದ ಕಾಂತಿಯ ಕ್ಷೇತ್ರ (ಮ್ಯಾಗ್ನೆಟಿಕ್ ಫೀಲ್ಡ್ )ಇರುತ್ತದೆ. ನಮ್ಮ ದೇಹಕ್ಕೂ ಸಹ ತನ್ನದೇ ಆದ ಒಂದು ಮ್ಯಾಗ್ನೆಟಿಕ್ ಫೀಲ್ಡ್ ಇರುತ್ತದೆ. ನಾವು ದಕ್ಷಿಣಕ್ಕೆ ತಲೆಹಾಕಿ ಮಲಗಿದಾಗ ಭೂಮಿಯ ಹಾಗೂ ನಮ್ಮ ದೇಹದ ವಿರುದ್ಧ ಧ್ರುವಗಳು ಆಕರ್ಷಣೆಗೆ ಒಳಪಡುತ್ತವೆ. ಮತ್ತು ನಾವು ಬೆಳಗ್ಗೆ ಎದ್ದಾಗ ನಮಗೆ ಹಿತಕರವಾದ ಸಂವೇದನೆ ಯಾಗುತ್ತದೆ ಮತ್ತು ನಾವು ತುಂಬಾ ಆರೋಗ್ಯವಾಗಿ ಇದ್ದಂತೆ ನಿರಾಳವಾಗಿ ಇದ್ದಂತೆ ಭಾಸವಾಗುತ್ತದೆ. ಮನಸ್ಸು ದೇಹವು ಹಗುರಾಗುತ್ತದೆ.
- ಪೂರ್ವಕ್ಕೆ ತಲೆಹಾಕಿ ಮಲಗಿದಾಗ ಸೂರ್ಯೋದಯದ ಸಮಯದಲ್ಲಿ ಸೂರ್ಯನ ಬೆಳಕು ನಮ್ಮ ತಲೆಯ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿ ನಮ್ಮ ಪಾದಗಳ ಮೂಲಕ ಹೊರಗಡೆ ಹೋಗುತ್ತದೆ. ಹೀಗಾಗಿ ನಾವು ಏಳುವಾಗ ತಲೆಯ ಭಾಗವು ತಣ್ಣಗೆ ಹಾಗೂ ಕಾಲಿನ ಭಾಗವು ಬೆಚ್ಚಗೆ ಇದ್ದಂತೆ ಆಗುತ್ತದೆ.
- ಪಶ್ಚಿಮಕ್ಕೆ ತಲೆಹಾಕಿ ಮಲಗಿದಾಗ ಸೂರ್ಯನ ಕಿರಣಗಳು ನಮ್ಮ ಪಾದದ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿ ತಲೆಯ ಮೂಲಕ ಹೊರಗಡೆ ಹೋಗುತ್ತದೆ ಇದರಿಂದ ತಲೆಯ ಭಾಗವು ಬಿಸಿಯಾಗಿ ಪಾದಗಳು ತಣ್ಣಗಿರುತ್ತವೆ. ಇದರಿಂದ ದುಷ್ಪರಿಣಾಮಗಳು ಬೀರುತ್ತವೆ. ಇದರಿಂದ ತಲೆನೋವಿನಂತಹ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ.
- ಉತ್ತರಕ್ಕೆ ತಲೆ ಹಾಕಿ ಮಲಗುವುದರಿಂದ ಭೂಮಿಯ ಹಾಗೂ ನಮ್ಮ ದೇಹದ ಕಾಂತಿಯ ಧ್ರುವಗಳು ಘರ್ಷಣೆಗೆ ಒಳಗಾಗಿ ನಮ್ಮ ದೇಹದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಇದು ನಮ್ಮ ದೇಹದಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ತಲೆನೋವು, ಪಾರ್ಕಿಂಗ್ ಸನ್ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆಗಳು ಇರುತ್ತವೆ.
ಆದ್ದರಿಂದ ನಮ್ಮ ಹಿರಿಯರ ಮಾತಿನಂತೆ ಪೂರ್ವಕ್ಕೆ ಇಲ್ಲವೇ ದಕ್ಷಿಣಕ್ಕೆ ತಲೆಹಾಕಿ ಮಲಗುವುದು ಅತ್ಯುತ್ತಮ.