ಅಸ್ತಮಾ, ಗಂಟಲೂತ, ಕೆಮ್ಮು ಮತ್ತು ಸೈನಸ್` ಸಮಸ್ಯೆಯಿಂದ ಬಳಲುತ್ತಿರುವವರು ಬಿಸಿ ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ಪರಿಣಾಮ ಕಾಣಬಹುದಾಗಿದೆ. ಅರಿಶಿನ ದೇಹದ ಉಷ್ಣತೆಯನ್ನು ಜಾಸ್ತಿ ಮಾಡಿ ಸೈನಸ್ ಸಮಸ್ಯೆಯನ್ನು ಗುಣಪಡಿಸುತ್ತದೆ. ಬ್ಯಾಕ್ಟೀರಿಯಾ ಹಾಗೂ ವೈರಸ್ ಸೋಂಕುಗಳನ್ನು ಹೊಡೆದೋಡಿಸಲು ಇದು ಸಹಕಾರಿಯಾಗಿದೆ.
ಬೊಜ್ಜು ಕರಗಿಸಲು ಅರಿಶಿನದ ಹಾಲು ಬಹಳ ಒಳ್ಳೆಯದು. ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳು ತೂಕ ಕಡಿಮೆ ಮಾಡಲು ನೆರವಾಗುತ್ತವೆ.
ಅರಿಶಿನದ ಹಾಲು ಮೂಳೆಗಳನ್ನು ಬಲಪಡಿಸುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅರಿಶಿನದ ಹಾಲು ಸೇವನೆಯಿಂದ ಮೂಳೆಯಲ್ಲಿ ಕಾಣುವ ಕಂಡು ಬರುವ ಸಮಸ್ಯೆಗಳು ಕಡಿಮೆಯಾಗುತ್ತವೆ.
ಆಯುರ್ವೇದದ ಪ್ರಕಾರ ಅರಿಶಿನದ ಹಾಲು ರಕ್ತ ಶುದ್ಧೀಕರಣ ಮಾಡುತ್ತದೆ. ರಕ್ತನಾಳಗಳನ್ನು ಇದು ಸ್ವಚ್ಛಗೊಳಿಸುತ್ತದೆ. ದೇಹದಲ್ಲಿ ರಕ್ತ ಪರಿಚಲನೆಯನ್ನು ಪ್ರಬಲಗೊಳಿಸುತ್ತದೆ.
ಜೀರ್ಣಕ್ರಿಯೆಗೆ ಅರಿಶಿನದ ಹಾಲು ಪ್ರಯೋಜನಕಾರಿ. ಹೊಟ್ಟೆಯ ಹುಣ್ಣನ್ನು ಇದು ಕಡಿಮೆ ಮಾಡುತ್ತದೆ. ಇದರ ಸೇವನೆಯಿಂದ ಉತ್ತಮ ಜೀರ್ಣಕ್ರಿಯೆಯಾಗುತ್ತದೆ.
ಅತಿಸಾರ ಮತ್ತು ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ. ನಿದ್ರಾಹೀನತೆಯನ್ನು ಸಹ ಕಡಿಮೆ ಮಾಡುತ್ತದೆ. ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.