ದಿನನಿತ್ಯದ ಆಹಾರ ಕ್ರಮಗಳಲ್ಲಿ ಬೆಂಡೆ ಕಾಯಿಯನ್ನು ಬಳಸುವುದರಿಂದ ಅನೇಕ ಅನುಕೂಲಗಳಾಗುತ್ತವೆ.
ಬೆಂಡೆಕಾಯಿ ಕುರ್ಕುರೆ ಮಾಡುವ ವಿಧಾನ:
ಬೇಕಾಗುವ ಪದಾರ್ಥಗಳು:
ಬೆಂಡೆಕಾಯಿ ಅರ್ಧ ಕೆಜಿ
ಅಚ್ಛ ಖಾರದ ಪುಡಿ- ಅರ್ಧ ಚಮಚ
ಅರಿಶಿಣ ಪುಡಿ- ಅರ್ಧ ಚಮಚ
ದನಿಯಾ ಪುಡಿ - ಅರ್ಧ
ಚಮಚ ಉಪ್ಪು- ರುಚಿಗೆ ತಕ್ಕಷ್ಟು
ಜೀರಿಗೆ ಪುಡಿ- ಕಾಲು ಚಮಚ
ಚಾಟ್ ಮಸಾಲಾ- ಅರ್ಧ ಚಮಚ
ನಿಂಬೆ ರಸ- ಸ್ವಲ್ಪ
ಕಡಲೆಹಿಟ್ಟು- 1/4 ಬಟ್ಟಲು
ಅಕ್ಕಿ ಹಿಟ್ಟು- 1/4 ಬಟ್ಟಲು
ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ:
ಮೊದಲು ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಮಧ್ಯೆ ಕತ್ತರಿಸಿ ಬೀಜ ತೆಗೆದು ಒಂದು ಬೆಂಡೆಕಾಯಿಯನ್ನು ನಾಲ್ಕು ಭಾಗ ಮಾಡಿಟ್ಟುಕೊಳ್ಳಬೇಕು. ನಂತರ ಕತ್ತರಿಸಿಕೊಂಡ ಬೆಂಡೆಕಾಯಿಗೆ ಅಚ್ಛ ಖಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಚಮಚ ಎಣ್ಣೆ, ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷ ನೆನೆಯಲು ಬಿಡಬೇಕು. ನಂತರ ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಹಾಗೂ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಎಣ್ಣೆಯಲ್ಲಿ ಕೆಂಪಗೆ ಕರಿದರೆ ರುಚಿಕರವಾದ ಬೆಂಡೆಕಾಯಿ ಕುರ್ಕುರೆ ಸವಿಯಲು ಸಿದ್ಧ.
ಹಲವು ಸಮಸ್ಯೆಗಳಿಗೆ ಬೆಂಡೆಕಾಯಿ ರಾಮಬಾಣ ನಿಮ್ಮ ಆಹಾರದಲ್ಲಿ ಬಳಸುವುದರಿಂದ ಗ್ಯಾಸ್ ಸಮಸ್ಯೆ, ಹೊಟ್ಟೆ ನೋವು, ಅತಿಸಾರ, ಮಲಬದ್ದತೆ ಮತ್ತು ಆ್ಯಸಿಡಿಟಿಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದರಲ್ಲಿ ಅಡಗಿರುವ ಪೋಷಕಾಂಶಗಳು ಹಲವು ರೋಗಗಳಿಗೆ ಮನೆಮದ್ದು.