ಸಿರಿಧಾನ್ಯಗಳನ್ನು ಸೇವಿಸುವುದರಿಂದ ಅನೇಕ ರೀತಿಯಾಗಿ ಉತ್ತಮ ಆರೋಗ್ಯದ ಫಲಗಳನ್ನು ಪಡೆಯಬಹುದು.
- ದೇಹದಲ್ಲಿನ ವಿಷ ಪದಾರ್ಥಗಳನ್ನು ತೆಗೆಯುತ್ತದೆ.
- ರಕ್ತದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ.
- ಸ್ತನಗಳ ಕ್ಯಾನ್ಸರನ್ನು ತಡೆಗಟ್ಟುತ್ತದೆ.
- ಸಕ್ಕರೆ ಕಾಯಿಲೆಯನ್ನು ತಡೆಗಟ್ಟುತ್ತದೆ.
- ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
- ಹೃದಯದ ಕಾಯಿಲೆಗಳನ್ನು ತಡೆಗಟ್ಟುತ್ತದೆ.
- ಆಸ್ತಮಾದಂತಹ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಸಹಕಾರಿಯಾಗಿದೆ.
- ಕಿಡ್ನಿ, ಪಿತ್ತಕೋಶಗಳನ್ನು ಆರೋಗ್ಯವಾಗಿರಿಸುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಮಲಬದ್ಧತೆ, ಹೊಟ್ಟೆಯುಬ್ಬರ ವಾಯಿ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಆರೋಗ್ಯ ಚೆನ್ನಾಗಿದ್ದರೆ ಅಪಾರ ಹಣ ಮತ್ತು ಆಸ್ತಿ ನಮ್ಮ ಬಳಿ ಇಲ್ಲದಿದ್ದರೂ ಸಹ ಸುಖವಾಗಿ ಜೀವಿಸಬಹುದು. ಆರೋಗ್ಯ ಸಮೃದ್ಧಿಯಾಗಿರಬೇಕೆಂದರೆ ಸಾವಿರ ವರ್ಷಗಳ ಹಿಂದೆ ನಮ್ಮ ಪೂರ್ವಜರ ಆರೋಗ್ಯದ ಗುಟ್ಟಾಗಿರುವ ಈ ಸಿರಿಧಾನ್ಯಗಳನ್ನು ಸೇವಿಸುವುದನ್ನು ಪ್ರಾರಂಭಿಸಬೇಕು. ಆದರೆ ಅನೇಕ ಜನರಿಗೆ ಈ ಸಿರಿಧಾನ್ಯಗಳನ್ನು ಬಳಸುವ ವಿಧಾನ ತಿಳಿದಿಲ್ಲ.
ಸಿರಿಧಾನ್ಯಗಳನ್ನು ಪಡೆದುಕೊಂಡರೂ ಅವುಗಳ ಬಳಗೆ ಹೇಗೆ ? ರುಚಿಕರ ತಿಂಡಿ ತಿನುಸುಗಳನ್ನುತಯಾರಿಸುವ ವಿಧಾನವನ್ನು ಸ್ಪಷ್ಟವಾಗಿ ಮುಂದಿನ ಸಂಚಿಕೆಯಲ್ಲಿ ತಿಳಿಸಲಾಗುವುದು.