Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜ್ಯೋತಿಷ್ಯ » ಜ್ಯೋತಿಷ್ಯ-

ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ ಹೇಗಿರುತ್ತದೆ ?


16 Jul 2020

ನಾರಾಯಣಬಲಿ

  • ಉದ್ದೇಶ :
    ದುರ್ಮರಣ ಹೊಂದಿದ ಅಥವಾ ಆತ್ಮಹತ್ಯೆ ಮಾಡಿದ ಜೀವದ ಕ್ರಿಯಾಕರ್ಮಗಳು ಆಗದೇ ಇರುವುದರಿಂದ ಪ್ರೇತತ್ವವು ಮುಗಿದು ಪಿತೃತ್ವವು ಸಿಗದೇ ಇದ್ದುದರಿಂದ ಅದರ ಲಿಂಗದೇಹವು ಹಾಗೆಯೇ ಅಲೆದಾಡುತ್ತಿರುತ್ತದೆ. ಇಂತಹ ಲಿಂಗದೇಹವು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ. ಅದೇ ರೀತಿ ಯಾವುದಾದರೊಂದು ರೀತಿಯಲ್ಲಿ ವಂಶಜರಿಗೆ ತೊಂದರೆ ಕೊಡುತ್ತದೆ. ಇಂತಹ ಲಿಂಗದೇಹಕ್ಕೆ ಗತಿಯನ್ನು ನೀಡಲು ನಾರಾಯಣಬಲಿ ವಿಧಿಯನ್ನು ಮಾಡಬೇಕಾಗುತ್ತದೆ.
  • ವಿಧಿ : 
    ಅ. ವಿಧಿಯನ್ನು ಮಾಡಲು ಯೋಗ್ಯ ಸಮಯ: ನಾರಾಯಣಬಲಿಯ ವಿಧಿಯನ್ನು ಮಾಡಲು ಯಾವುದೇ ತಿಂಗಳ ಶುಕ್ಲ ಏಕಾದಶಿ ಅಥವಾ ದ್ವಾದಶಿಯು ಯೋಗ್ಯವಾಗಿರುತ್ತದೆ. ಏಕಾದಶಿಯಂದು ಅಧಿವಾಸ (ದೇವರ ಸ್ಥಾಪನೆ) ಮಾಡಿ ದ್ವಾದಶಿಯಂದು ಶ್ರಾದ್ಧವನ್ನು ಮಾಡಬೇಕು (ಇತ್ತೀಚೆಗೆ ಹೆಚ್ಚಿನ ಜನರು ಒಂದೇ ದಿನ ವಿಧಿಯನ್ನು ಮಾಡುತ್ತಾರೆ). ಸಂತತಿ ಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದರೆ ದಂಪತಿಗಳು ಸ್ವತಃ ಈ ವಿಧಿಯನ್ನು ಮಾಡಬೇಕು. ಪುತ್ರಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದಲ್ಲ್ಲಿ ಶ್ರವಣ ನಕ್ಷತ್ರ, ಪಂಚಮಿ ಅಥವಾ ಪುತ್ರದಾ ಏಕಾದಶಿ ಇವುಗಳಲ್ಲಿನ ಯಾವುದಾದರೊಂದು ತಿಥಿಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ.
  • ಆ. ವಿಧಿ ಮಾಡಲು ಯೋಗ್ಯ ಸ್ಥಳ: ನದಿತೀರದಂತಹ ಪವಿತ್ರ ಸ್ಥಳದಲ್ಲಿ ಈ ವಿಧಿಯನ್ನು ಮಾಡಬೇಕು.
  • ಇ. ಪದ್ಧತಿ
  • ಮೊದಲನೆಯ ದಿನ :
    ಮೊದಲು ತೀರ್ಥದಲ್ಲಿ ಸ್ನಾನ ಮಾಡಿ ನಾರಾಯಣಬಲಿಯ ಸಂಕಲ್ಪವನ್ನು ಮಾಡಬೇಕು. ಎರಡು ಕಲಶಗಳ ಮೇಲೆ ಶ್ರೀವಿಷ್ಣು ಮತ್ತು ವೈವಸ್ತವ ಯಮ ಇವರ ಸುವರ್ಣಮೂರ್ತಿಗಳನ್ನು ಸ್ಥಾಪಿಸಿ ಅವುಗಳಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಅನಂತರ ಆ ಕಲಶಗಳ ಪೂರ್ವಕ್ಕೆ ದರ್ಭೆಯಿಂದ ಒಂದು ರೇಖೆಯನ್ನು ಎಳೆದು ದಕ್ಷಿಣದ ಕಡೆಗೆ ದರ್ಭೆಗಳನ್ನು (ಕುಶ) ಹರಡಬೇಕು. ಅದರ ಮೇಲೆ ‘ಶುಂಧಂತಾಂ ವಿಷ್ಣುರೂಪೀ ಪ್ರೇತಃ’ ಈ ಮಂತ್ರದಿಂದ ಹತ್ತು ಬಾರಿ ನೀರನ್ನು ಬಿಡಬೇಕು. ಅನಂತರ ದಕ್ಷಿಣಕ್ಕೆ ಮುಖಮಾಡಿ ಅಪಸವ್ಯದಿಂದ ವಿಷ್ಣುರೂಪೀ ಪ್ರೇತದ ಧ್ಯಾನವನ್ನು ಮಾಡಬೇಕು. ಆ ಹರಡಿರುವ ದರ್ಭೆಗಳ ಮೇಲೆ ಜೇನುತುಪ್ಪ, ತುಪ್ಪ ಮತ್ತು ಎಳ್ಳುಗಳಿಂದ ತಯಾರಿಸಿದ ಹತ್ತು ಪಿಂಡಗಳನ್ನು ‘ಕಶ್ಯಪಗೋತ್ರ… ಇವರ ಪ್ರೇತ ವಿಷ್ಣುದೈವತ ಅಯಂ ತೆ ಪಿಂಡಃ’ ಎಂದು ಹೇಳಿಕೊಡಬೇಕು. ಪಿಂಡಗಳನ್ನು ಗಂಧಾದಿ ಉಪಚಾರಗಳಿಂದ ಪೂಜಿಸಿ ಅನಂತರ ಅವುಗಳನ್ನು ನದಿಯಲ್ಲಿ ಅಥವಾ ಜಲಾಶಯದಲ್ಲಿ ವಿಸರ್ಜಿಸಬೇಕು. ಇದು ಹಿಂದಿನ ದಿನದ ವಿಧಿಯಾಯಿತು.
  • ಎರಡನೆಯ ದಿನ:
    ಮಧ್ಯಾಹ್ನದ ಸಮಯದಲ್ಲಿ ಶ್ರೀವಿಷ್ಣುವಿನ ಪೂಜೆಯನ್ನು ಮಾಡಬೇಕು. ಅನಂತರ 1, 2 ಅಥವಾ 5 ಹೀಗೆ ಬೆಸ ಸಂಖ್ಯೆಯಲ್ಲಿ ಬ್ರಾಹ್ಮಣರನ್ನು ಆಮಂತ್ರಿಸಿ ಏಕೋದ್ದಿಷ್ಟ ವಿಧಿಯಿಂದ ಆ ವಿಷ್ಣುರೂಪೀ ಪ್ರೇತದ ಶ್ರಾದ್ಧವನ್ನು ಮಾಡಬೇಕು. ಈ ಶ್ರಾದ್ಧವನ್ನು ಬ್ರಾಹ್ಮಣರ ಪಾದಪ್ರಕ್ಷಾಲನದಿಂದ ತೃಪ್ತಿಪ್ರಶ್ನೆಯ ತನಕ ಮಂತ್ರರಹಿತವಾಗಿ ಮಾಡಬೇಕು. ಶ್ರೀವಿಷ್ಣು, ಬ್ರಹ್ಮಾ, ಶಿವ ಮತ್ತು ಸಪರಿವಾರ ಯಮ ಇವರಿಗೆ ನಾಮಮಂತ್ರಗಳಿಂದ ನಾಲ್ಕು ಪಿಂಡಗಳನ್ನು ಕೊಡಬೇಕು. ವಿಷ್ಣುರೂಪೀ ಪ್ರೇತಕ್ಕಾಗಿ ಐದನೆಯ ಪಿಂಡವನ್ನು ಕೊಡಬೇಕು. ಪಿಂಡಪೂಜೆಯನ್ನು ಮಾಡಿ ಅವುಗಳ ವಿಸರ್ಜನೆಯಾದ ನಂತರ ಬ್ರಾಹ್ಮಣರಿಗೆ ದಕ್ಷಿಣೆಯನ್ನು ಕೊಡಬೇಕು. ಓರ್ವ ಬ್ರಾಹ್ಮಣರಿಗೆ ವಸ್ತ್ರಾಲಂಕಾರ, ಹಸು ಮತ್ತು ಚಿನ್ನ ಈ ವಸ್ತುಗಳನ್ನು ಕೊಡಬೇಕು. ಅನಂತರ ಪ್ರೇತಕ್ಕೆ ತಿಲಾಂಜಲಿ ನೀಡುವ ಬಗ್ಗೆ ಬ್ರಾಹ್ಮಣರಿಗೆ ಪ್ರಾರ್ಥನೆಯನ್ನು ಮಾಡಬೇಕು. ಬ್ರಾಹ್ಮಣರು ದರ್ಭೆ, ಎಳ್ಳು ಮತ್ತು ತುಳಸೀದಳಗಳಿಂದ ಭರಿತವಾದ ನೀರನ್ನು ಬೊಗಸೆಯಲ್ಲಿ ತೆಗೆದುಕೊಂಡು ಅದನ್ನು ಪ್ರೇತಕ್ಕೆ ನೀಡಬೇಕು. ಅನಂತರ ಶ್ರಾದ್ಧಕರ್ತನು ಸ್ನಾನ ಮಾಡಿ ಭೋಜನ ಮಾಡಬೇಕು. ಈ ವಿಧಿಯಿಂದ ಪ್ರೇತಾತ್ಮಕ್ಕೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
  • ಸ್ಮೃತಿಗ್ರಂಥದಲ್ಲಿ ನಾರಾಯಣಬಲಿ ಮತ್ತು ನಾಗಬಲಿ ಇವುಗಳನ್ನು ಒಂದೇ ಉದ್ದೇಶಕ್ಕಾಗಿ ಹೇಳಿರುವುದರಿಂದ ಎರಡೂ ವಿಧಿಗಳನ್ನು ಜೊತೆಯಲ್ಲಿ ಮಾಡುವ ಪರಂಪರೆಯಿದೆ. ನಾರಾಯಣ-ನಾಗಬಲಿ ಈ ಜೋಡಿ ಹೆಸರು ಇದೇ ಕಾರಣದಿಂದಾಗಿ ರೂಢಿಗೆ ಬಂದಿದೆ.

ನಾಗಬಲಿ

  • 1. ಉದ್ದೇಶ :
    ನಮ್ಮ ಮನೆತನದಲ್ಲಿ ಹಿಂದೆ ಯಾರಾದರೊಬ್ಬ ಪೂರ್ವಜರಿಂದ ನಾಗನ (ನಾಗರಹಾವಿನ) ಹತ್ಯೆಯಾಗಿದ್ದಲ್ಲಿ ಆ ನಾಗನಿಗೆ ಗತಿ ಸಿಗದೇ ಇದ್ದುದರಿಂದ ಅದು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ, ಹಾಗೆಯೇ ಯಾವುದಾದರೊಂದು ರೀತಿಯಲ್ಲಿ ವಂಶಜರಿಗೆ ತೊಂದರೆಗಳನ್ನು ಕೊಡುತ್ತದೆ. ಈ ದೋಷದ ನಿವಾರಣೆಗಾಗಿ ಈ ವಿಧಿಯನ್ನು ಮಾಡುತ್ತಾರೆ.
  • 2. ವಿಧಿ :
    ಸಂತತಿಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದರೆ ಆ ದಂಪತಿಗಳು ಸ್ವತಃ ಈ ವಿಧಿಯನ್ನು ಮಾಡಬೇಕು. ಪುತ್ರಪ್ರಾಪ್ತಿಗಾಗಿ ಮಾಡಬೇಕಾಗಿದ್ದಲ್ಲಿ ಶ್ರವಣ ನಕ್ಷತ್ರ, ಪಂಚಮಿ ಅಥವಾ ಪುತ್ರದಾ ಏಕಾದಶಿ ಇವುಗಳಲ್ಲಿನ ಯಾವುದಾದರೊಂದು ತಿಥಿಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ.
  • ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 
    ಆಧ್ಯಾತಿಕ ಚಿಂತಕರು ಹಾಗೂ ಪುರೋಹಿತರು 
    ವೇದಬ್ರಹ್ಮ ಶ್ರೀ ಗಣೇಶ್ ಭಟ್ : ಮೊಬೈಲ್ : 9980010722, 9036239373
Share on:

City Information

(Private)