ಈಗಿರುವ ಟ್ರೆಂಡ್ ನಲ್ಲಿ ಫಿಟ್ನೆಸ್, ಆರೋಗ್ಯಕರ ಆಹಾರ ಸೇವನೆ ಕುರಿತಾದ ಮಾರ್ಕೆಟಿಂಗ್ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಹೀಗಾಗಿ ಜ್ಯೂಸ್ ಅಂಗಡಿಯನ್ನು ತೆರೆಯುವುದರಿಂದ ಅದನ್ನು ಲಾಭಕರ ಉದ್ದಿಮೆಯನ್ನಾಗಿ ಮಾರ್ಪಡಿಸಬಹುದು.
ಹಣ್ಣಿನಿಂದ ಪ್ರೆಷ್ ಜ್ಯೂಸನ್ನು ತಯಾರಿಸುವಾಗ ಕೆಲವೊಂದಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ಗ್ರಾಹಕರು ಸಂಖ್ಯೆಯಲ್ಲೂ ಹೆಚ್ಚಳ ಮಾಡಿ ಕೊಳ್ಳಬಹುದು. ಆ ಬದಲಾವಣೆಗಳು ಯಾವುದೆಂದರೆ ಹೊಸ ಸ್ವಾದಗಳ ಪ್ರಯೊಗ ಮನೆಯಲ್ಲಿ ಒಮ್ಮೆ ಪ್ರಯೋಗ ಮಾಡಿ ಅಂಗಡಿಗೆ ಬಂದ ನಂತರ ಸ್ವಾದಗಳನ್ನು ಮಿಕ್ಸ್ ಮಾಡುವುದರಿಂದ ಹೊಸ ಬಗೆಯ ರುಚಿ ದೊರೆಯುತ್ತದೆ. ಅಲ್ಲದೇ ಸಕ್ಕರೆ ಕಮ್ಮಿ ಅಥವಾ ಶುಗರ್ ಫ್ರೀ ಸಿಹಿ ಮುಂತಾದ ಬದಲಾವಣೆಗಳಿಂದಲೂ ಹಣ್ಣಿನ ರಸವನ್ನು ಇನ್ನುಷ್ಟು ಆರೋಗ್ಯಕರ ಪೇಯವನ್ನಾಗಿಸಬಹುದು.
ಪಾರ್ಕ, ಜಿಮ್, ಆಟದ ಮೈದಾನದಂತ ಸ್ಥಳಗಳ ಬಳಿ ಅಂಗಡಿ ತೆರೆದರೆ ಹೆಚ್ಚಿನ ಬಂಡವಾಳವೂ ಬೇಕಿಲ್ಲ ಗ್ರಾಹಕರ ಸಂಖ್ಯೆಗೆ ತಕ್ಕಂತೆ ಮಿಕ್ಸರ್‌ಗಳು ಮತ್ತು ಗ್ಲಾಸುಗಳನ್ನು ಖರೀದಿಸಿದರೆ ಸಾಕಾಗುತ್ತದೆ.
ತಾಜಾ ಹಣ್ಣಗಳನ್ನು ಖರೀದಿಸಬೇಕಾದದ್ದು ತುಂಬಾ ಮುಖ್ಯ. ಜೊತೆಗೆ ಯಾವ ಯಾವ ಹಣ್ಣಿನಲ್ಲಿ ಯಾವ ಯಾವ ಪೋಷಕಾಂಶಗಳಿವೆ ಎಂಬಿತ್ಯಾದಿ ಮಾಹಿತಿ ನೀಡುವ ಪೋಸ್ಟರ್ ತೂಗು ಹಾಕಿದರೆ ಗ್ರಾಹಕರಲ್ಲಿ ಜಾಗೃತಿಯನ್ನು ಮೂಡುತ್ತದೆ ಹಾಗೂ ವ್ಯಾಪಾರವೂ ಹೆಚ್ಚುತ್ತದೆ.