ಹಣ ಸಂಪಾದನೆಯಲ್ಲಿ ನಮಗೆ ಬೇಕಾಗಿರುವ ಕೆಲವು ಮಾರ್ಗಗಳು ಅತ್ಯುಪಕಾರಿ.
ಮಾನಸಿಕ ದೈಹಿಕ ಸ್ವಾಸ್ಥ್ಯ:
ನೀವು ಕ್ರೀಡೆಯಲ್ಲಾಗಲಿ, ಓದಿನಲ್ಲಾಗಲಿ, ಯಾವುದೇ ರಂಗದಲ್ಲಿ ಯಶಸ್ವಿಯಾದವರಲ್ಲಿ ಮಾನಸಿಕ ದೈಹಿಕ ಸ್ವಾಸ್ಥ್ಯ ಇದ್ದವರೇ ಬಹಳ ಜನರನ್ನು ಕಾಣಬಹುದು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯದಿಂದ ಇದ್ದಾಗಲೇ ನೀವು ಯಾವುದೇ ರಂಗದಲ್ಲಾದರೂ ಸಾಧನೆ ಮಾಡಬಹುದು. ಮಾನಸಿಕ, ದೈಹಿಕ ಸ್ವಾಸ್ಥ್ಯವಿಲ್ಲದೇ ಇದ್ದರೆ ಹಣ ಇದ್ದರೂ ನಿಮಗೆ ನೆಮ್ಮದಿ ತರಲಾರದು.
ಮನಶ್ಯಾಂತಿ:
ಮನಶ್ಯಾಂತಿಯಿಂದ ಇದ್ದರೇ ಮಾತ್ರ ನೀವು ಯಾವುದೇ ರಂಗದಲ್ಲಾದರೂ ಯಶಸ್ವಿಯಾಗಬಹುದು. ಉದಾಹರಣೆಗೆ ನೀವು ಯಾವುದೇ ರಂಗದಲ್ಲಿ ಹೋದರು ಅಲ್ಲಿ ಅನಿರೀಕ್ಷಿತ ವಿಪತ್ತುಗಳು ಬರಬಹುದು. ಆಗ ಮನಶ್ಯಾಂತಿಯನ್ನು ಸಾಧಿಸುವವರು ಮಾತ್ರ ಸಮಸ್ಯೆಗಳಿಂದ ವಿಪತ್ತುಗಳಿಂದ ಪಾರಾಗಿ ನೈಜ ಯಶಸ್ಸು ಹೊಂದುವರು.
ಆಲೋಚನೆಗಳು :
ಆಲೋಚನೆಯೇ ಹಣ ಗಳಿಸುವ ಮೂಲ. ಇದರಲ್ಲಿ 4 ವಿಧಗಳನ್ನು ಕಾಣಬಹುದು.
• ಒಳ್ಳೆಯ ಆಲೋಚನೆ
• ದೂರಾಲೋಚನೆ (ಮುಂದಾಲೋಚನೆ)
• ದುರಾಲೋಚನೆ.
• ಅನಿರೀಕ್ಷಿತ ಆಲೋಚನೆ.
ಒಳ್ಳೆಯ ಆಲೋಚನೆಗಳನ್ನು ಮಾಡಿ, ಕೆಟ್ಟ ಆಲೋಚನೆಯಿಂದ ದೂರ ಇರಿ. ಮುಂದಾಲೋಚನೆ ಇರಲಿ. ಅನಿರೀಕ್ಷಿತ ಆಲೋಚನೆ ಮುಂದೆ ಉಪಯೋಗಕಾರಿ ಇದ್ದರೆ ಮಾತ್ರ ಸ್ವೀಕರಿ ಸಿ.
ಕುಟುಂಬದಲ್ಲಿ ನೆಮ್ಮದಿ :
ನೀವು ಹಣ ಗಳಿಸುವುದು ಯಾರಿಗಾಗಿ? ನಿಮಗಾಗಿ ಕುಟುಂಬದವರಿಗಾಗಿ. ಕುಟುಂಬದಲ್ಲಿ ನೆಮ್ಮದಿ ಇರದಿದ್ದರೆ ನೀವು ಎಷ್ಟೇ ಹಣ ಗಳಿಸಿದರೂ ನೆಮ್ಮದಿಯಿಂದ ಇರಲಾರಿರಿ. ಆದ್ದರಿಂದ ಹಣ ಗಳಿಸುವುದರ ಜೊತೆಗೆ ಕುಟುಂಬದ ಕಡೆಗೂ ಲಕ್ಷ್ಯ ಕೊಡಿ. ಕುಟುಂಬದಲ್ಲಿ ನೆಮ್ಮದಿ ಇದ್ದರೆ ಯಾವುದೇ ರಂಗದಲ್ಲಿ ನೀವು ಸುಲಭವಾಗಿ ನಂಬರ್ ಒನ್ ಆಗಿ ಯಶಸ್ವಿಯಾಗಬಹುದು.
ಬುದ್ದಿವಂತಿಕೆ:
ಬುದ್ದಿವಂತಿಕೆ ಇರದಿದ್ದರೆ ಗಳಿಸಿದ ಹಣವನ್ನು ಇಟ್ಟುಕೊಂಡು ಹೋಗದೇ ಪರರ ಪಾಲು ಮಾಡುವ ಸಂಭವ ಪ್ರತಿಶತ ನೂರಕ್ಕೆ ನೂರು ಇದೆ. ನಕಲಿ ಚಿಟ್ ಫಂಡ್ ಕಂಪನಿಗಳು, ನಕಲಿ ಕಂಪನಿಗಳು, ನಕಲಿ ಸ್ಕೀಮುಗಳು 100 ಕ್ಕೆ 40 ರಷ್ಟು ಬಡ್ಡಿ ಕೊಡುವ ನಕಲಿ ಬ್ಯಾಂಕುಗಳು. ಇವೆಲ್ಲವುಗಳು ತಲೆ ಎತ್ತುತ್ತಿರುವುದಕ್ಕೆ ಬುದ್ದಿವಂತರಲ್ಲದ ಜನರೇ ಕಾರಣ. ಬುದ್ದಿಯಿಲ್ಲದ ಜನರ ದುಡ್ಡೇ ಇಂಥವಕ್ಕೆ ಕಾರಣ. ಬುದ್ದಿವಂತಿಕೆ ಇದ್ದರೆ ಹಣವನ್ನು ಬಹಳ ಸುಲಭವಾಗಿ ಗಳಿಸಿಬಹುದು. ದುಡ್ಡನ್ನು ಗಳಿಸಲೇ ಬೇಕೆಂದು ಭಾವನೆ ನಿಮ್ಮಲ್ಲಿ ಬಂದರೆ ನಿಮಗೆ ಮಾರ್ಗಗಳು ತಾನಾಗಿಯೇ ಕಾಣುವುದು.