ಮನೆ ಅಥವಾ ಸೈಟು ಖರೀದಿಸುವಾಗ ವಾಸ್ತು ಶಾಸ್ತ್ರಜ್ಞರು ಸಿಗಲಿಲ್ಲವೆಂದು ಸೈಟು ಹೇಗೆ ಇದ್ದರೂ ಪರವಾಗಿಲ್ಲ ಯಾವಾದಾದರೆ ಏನಂತೆ ಕಡಿಮೆ ಕೊಡುತ್ತಿದ್ದಾರೆ ಅಥವಾ ಆಫರ್ ಇದೆ ಎಂದು ಖರೀದಿಸಿದರೆ ನಂತರ ಆಗುವ ಪರಿಣಾಮಗಳು ಸುಮಾರು ವರ್ಷ ಕಳೆದರೂ ನಿಮಗೆ ಏಳಿಗೆ, ಅಭಿವೃದ್ಧಿ, ಫಲ ಯಾವುದು ದೊರೆಯುವುದಿಲ್ಲ ಮತ್ತು ತುಂಬಾ ಆರ್ಥಿಕ ನಷ್ಟಕ್ಕೆ ನೀವೇ ಕಾರಣಕರ್ತರಾಗುತ್ತೀರಿ. ನಿಮಗೆ ವಾಸ್ತು ಶಾಸ್ತ್ರದ ಕುರಿತು ಏನೇನೂ ಗೊತ್ತಿಲ್ಲದಿದ್ದರೂ ಪರವಾಗಿಲ್ಲ ಈ ಕೆಳಗೆ ಕೊಟ್ಟಿರುವ ದೋಷ ವುಳ್ಳ ಸೈಟುಗಳನ್ನು ಖರೀದಿಸಬೇಡಿ ಎಂದು ವಾಸ್ತುಶಾಸ್ತ್ರ ತಜ್ಞರು ಹೇಳುತ್ತಾರೆ.
1. ಕೊಳ್ಳುವ ನಿವೇಶನದ ಈಶಾನ್ಯ ತುಂಡಾಗಿರಬಾರದು.
2. ದಕ್ಷಿಣ, ನೈಋತ್ಯ, ಪಶ್ಚಿಮ ದಿಕ್ಕುಗಳಲ್ಲಿ ಕಾಲುವೆ ಸರೋವರ, ಗುಂಡಿಗಳು ಇರುವ ನಿವೇಶನ(ಸ್ಥಳ) ಕೊಳ್ಳಬಾರದು.
3. ಪೂರ್ವ ಮತ್ತು ಉತರ ತುಂಡಾಗಿರುವ ಸ್ಥಳಗಳು ಒಳ್ಳೆಯದಲ್ಲ.
4. ಪೂರ್ವ ಆಗ್ನೇಯಗಳು ಬೆಳೆದಿರುವ ಸ್ಥಳ ಅಶುಭಕರ.
5. ದಕ್ಷಿಣ, ಪಶ್ಚಿಮ, ನೈಋತ್ಯಗಳು ಬೆಳೆದ ಸ್ಥಳ ದಾರಿದ್ರ.
6. ಪೂರ್ವ, ಉತರ, ಈಶಾನ್ಯಗಳು ಎತ್ತರವಾಗಿದ್ದು ; ದಕ್ಷಿಣ, ಪಶ್ಚಿಮ, ನೈಋತ್ಯಗಳಿಗೆ ಇಂಚಿನಷ್ಟಾಗಲಿ ಹಳ್ಳವಾಗಿದ್ದರೆ ಅಂತಹ ನಿವೇಶನಗಳು - ಚಂಡಾಲ ಸ್ಥಳಗಳು.
7. ಉತರ ವಾಯುವ್ಯಗಳು ಬೆಳೆದ ಸ್ಥಳಗಳು ದೋಷಪೂರ್ಣ.
8. ಪೂರ್ವ ಆಗ್ನೇಯ, ದಕ್ಷಿಣ ನೈಋತ್ಯ, ಪಶ್ಚಿಮ ನೈಋತ್ಯ, ಉತ್ತರ ವಾಯುವ್ಯ ಬೀದಿ ಕುತ್ತುಗಳಿರುವ ಸ್ಥಳಗಳನ್ನು ಕೊಳ್ಳಬಾರದು.
9. ಸಾಧ್ಯವಾದಷ್ಟು ಆಗ್ನೇಯ ಸ್ಥಳಗಳನ್ನು ಕೊಳ್ಳದಿರುವುದು ಬಹಳ ಒಳ್ಳೆಯದು.
10. ಪೂರ್ವ, ಈಶಾನ್ಯ, ಉತ್ತರಗಳಲ್ಲಿ ಬಹುಮಹಡಿ ಕಟ್ಟಡಗಳಿದ್ದು ದಕ್ಷಿಣ, ಪಶ್ಚಿಮ, ನೈಋತ್ಯಗಳಲ್ಲಿ ಮೈದಾನ, ಕ್ರೀಡಾಂಗಣಗಳಿರುವ ಸ್ಥಳವನ್ನು ಕೊಳ್ಳಬಾರದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಆಧ್ಯಾತಿಕ ಚಿಂತಕರು ಹಾಗೂ ಪುರೋಹಿತರು
ವೇದಬ್ರಹ್ಮ ಶ್ರೀ ಗಣೇಶ್ ಭಟ್ : ಮೊಬೈಲ್ : 9980010722, 9036239373