ಅಶ್ವಿನಿ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವನು ಉತ್ತಮ ಲಕ್ಷಣವುಳ್ಳವನು, ಸುಂದರನು ಜನಾನುರಾಗಿಯೂ, ಬಹಳ ಜನರಲ್ಲಿ ಪ್ರೀತಿ ವಿಶ್ವಾಸಗಳಿಸುವವನು, ಅಲಂಕಾರ ಪ್ರಿಯನು, ಜಾಣನು, ವಿನಶೀಲನು, ಧರ್ಮವಂತನು, ಸತ್ಯವಾದಿಯು ಸಂಸಾರದಲ್ಲಿ ಸುಖಿಯು ಆಗಿರುತ್ತಾನೆ.
ಭರಣಿ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವನು ಇದ್ದ ವಿಷಯವನ್ನು ಇದ್ದ ಹಾಗೆ ಹೇಳುವ ನಿಷ್ಟುರ ಸತ್ಯವಾದಿಯೂ ನಿರೋಗಿಯೂ ಹಿಡಿದ ಕೆಲಸ ಸಾಧಿಸುವವನು ಸುಖಿಯು ಬುದ್ದಿವಂತನು ಆಗುತ್ತಾನೆ.
ಕೃತಿಕಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವನು, ತೇಜಸ್ವಿಯು ಗಂಭೀರ ಸ್ವಭಾವದವನು ಅತಿಯಾಗಿ ತಿನ್ನುವನು ಅಸತ್ಯವಾದಿಯೂ ಆಗಬಹುದೆಂದು ಹೇಳಲಾಗುತ್ತದೆ.
ರೋಹಿಣೆ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಪ್ರಾಮಾಣಿಕರು, ಸತ್ಯನಿಷ್ಟರು, ಸ್ಥಿರಸ್ವಭಾವದವರು, ಸುಂದರರು ಮಾತಿನಿಂದ ತಮ್ಮ ಅಭಿಪ್ರಾಯವನ್ನೇ ಯಥಾವತ್ತಾಗಿ ಪ್ರಕಟಿಸುವವರು ಆಗುತ್ತಾರೆಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಮೃಗಶಿರಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಹಣವಂತರು, ಚಂಚಲರು, ವಿನಯಶಾಲಿಯರು, ಭಯವುಳ್ಳವರು ಉತ್ಸಾಹವಂತರು ಆಗಿರುತ್ತಾರೆ.
ಆರ್ದ್ರಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಅಹಂಕಾರಿಯು ಕೋಪಇಷ್ಟನಾದರೂ ಸಂಬಂಧಿಗಳು, ನೆಂಟರು ಬಹುಜನಪ್ರಿಯನು, ಕೃತಘ್ನನು, ಪಾಪಿಯು ಆಗುತ್ತಾರೆ ಎನ್ನುತ್ತಾರೆ.
ಪುನರ್ವಸು ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಸುಖಿಯು, ಅನೇಕ ಮಿತ್ರರಿಂದ ಕೂಡಿ ಬಾಳುವವನು ಅಲಂಕಾರ ಪ್ರಿಯನು ಆಗುತ್ತಾರೆ.
ಪುಷ್ಯ ನಕ್ಷತ್ರ:
ನಕ್ಷತ್ರದಲ್ಲಿ ಜನಿಸಿದವರು ವಿದ್ವಾನರು, ಸಿರಿವಂತರು, ಸುಂದರನು, ವಿನಯಿಯು, ಚಂಚಲನು ಆಗಿರುತ್ತಾರೆ.
ಆಶ್ಲೇಷಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಕೃತಘ್ನನು, ಪಾಪಕಾರ್ಯ ಮಾಡುವವನು, ನಿಷ್ಟುರನು, ಕಾಮಿಯು ಆಗಿರುತ್ತಾನೆ.
ಮಘಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಸಿರಿವಂತನು, ಧನವಂತನು, ದೈವಭಕ್ತನು, ಉತ್ಸಾಹಿಯು, ಕೋಪಿಷ್ಠನು ಆಗಿರುತ್ತಾರೆ. ಹುಬ್ಬಾ ನಕ್ಷತ್ರ: ಈ ನಕ್ಷತ್ರದಲ್ಲಿ ಜನಿಸಿದವರು ದಾನಿಯು, ದಯಾಗುಣವುಳ್ಳವರು ವಿನಯಿಯು ಆಗಿರುತ್ತಾರೆ.
ಉತ್ತರಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ದಾನಿಯು, ಶ್ರೀಮಂತನು, ಪಂಡಿತನು, ಶೂರನು ಆಗಿರುತ್ತಾನೆ.
ಹಸ್ತಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ನಿರ್ದಯರು, ಉತ್ಸಾಹಿಯು, ಜನಪ್ರಿಯನು ಸಾಹಸಿಯು ಪರೋಪಕಾರ ಮಾಡುವ ಗುಣವುಳ್ಳವರಾಗಿರುತ್ತಾರೆ.
ಚಿತ್ತಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಕಾಮಶಾಸ್ತ್ರದಲ್ಲಿ ನಿಪುಣರು, ಸಿರಿವಂತರು, ವಿನಯಿಯು ಆಗುತ್ತಾರೆ.
ಸ್ವಾತಿ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಜಿತೇಂದ್ರಿಯರು, ಕೃಪೆಯುಳ್ಳವನು, ಪ್ರಿಯನುಡಿಯುವ ಗುಣವುಳ್ಳವರು, ಧರ್ಮಾತ್ಮನ್ನು ಪಂಡಿತೋತ್ತವನು ಆಗುತ್ತಾನೆ.
ವಿಶಾಖಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಜಿಪುಣರು, ಜಗಳ ಗಂಟರು, ಸೂಕ್ಷ್ಮಬುದ್ದಿವಂತರು ಆಗಿರುತ್ತಾರೆ.
ಅನುರಾಧಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಶೂರರು, ಸ್ತ್ರಿ ಅನುರಾಗಿಯು, ಶಾಂತ ಸ್ವಭಾವದವರು ಸದಾ ಆನಂದದವರಾಗಿರುತ್ತಾರೆ.
ಜ್ಯೇಷ್ಠಾ ನಕ್ಷತ್ರ: ಈ ನಕ್ಷತ್ರದಲ್ಲಿ ಜನಿಸಿದವರು ತೇಜಸ್ವಿಯು ಧನವಂತನು, ಬುದ್ಧಿವಂತನು, ಬುದ್ಧಿವಂತರು ಆಗಿರುತ್ತಾರೆ.
ಮೂಲಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಸುಖಿಯೂ, ಪರೋಪಕಾರಿಯು, ಸ್ತ್ರೀಲೋಲುಪರು ಆಗಿರುತ್ತಾರೆ. ಮೂಲಾ ನಕ್ಷತ್ರದ ಬಗ್ಗೆ ಕೆಲವು ಪಂಡಿರು ಹೀಗೆ ಅಭಿಪ್ರಾಯಪಡುತ್ತಾರೆ. ಅವನು ವಂಶಾಭಿವೃದ್ದಿಗೆ ಕಾರಣನಾಗುತ್ತಾನೆ ಇಲ್ಲವೇ ವಂಶದ ನಾಶಕ್ಕೆ ಕಾರಣನಾಗುತ್ತಾನೆ, ಇವೆರಡೂ ಆಗದಿದ್ದರೆ ಅವನು ದೀರ್ಘಾಯುಷಿಯಾಗುತ್ತಾನೆಂದು ಹೇಳುತ್ತಾರೆ.
ಇನ್ನು ಕೆಲವು ಶಾಸ್ತ್ರತಜ್ಞರ ಪ್ರಕಾರ
1. ಮೂಲಾನಕ್ಷತ್ರದ ಮೊದಲ ಪಾದದಲ್ಲಿ ಹುಟ್ಟಿದರೆ ತಂದೆಗೆ ಅರಿಷ್ಟ.
2. ಮೂಲಾನಕ್ಷತ್ರದ ಎರಡನೇ ಪಾದದಲ್ಲಿ ಹುಟ್ಟಿದರೆ ತಾಯಿಗೆ ಅರಿಷ್ಟ.
3. ಮೂಲಾನಕ್ಷತ್ರದ ಮೂರನೇ ಪಾದದಲ್ಲಿ ಹುಟ್ಟಿದರೆ ಧನಕ್ಕೆ ಅರಿಷ್ಟ.
ಪೂರ್ವಾಷಾಡ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಶಾಶ್ವತವಾದ ಸ್ನೇಹವುಳ್ಳವರು, ಸುಂದರ ಮುಖವುಳ್ಳವರು ಸುಶೀಲರು ಆಗಿರುತ್ತಾರೆ.
ಉತ್ತಾರಾಷಾಢ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು, ದಯಾಳು, ಒಳ್ಳೆಯ ಕೆಲಸ ಮಾಡುವವರು, ಸುಖಿಯು ಕೃತಜ್ಞರು, ಧರ್ಮಾತ್ಮರು ಆಗಿರುತ್ತಾರೆ.
ಶ್ರವಣಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವನು ದಾನಿಯು, ಧನವಂತನು, ವೀರನು, ಶೂರನು, ಸಂಗೀತದಲ್ಲಿ ಆಸಕ್ತಿ ಹೊಂದುವವರು ಆಗಿರುತ್ತಾರೆ.
ಶತಭಿಷಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು,ವ್ಯಸನಿಯು, ಶತ್ರುಘಾತಕನು ಸುಖಿಯು ಆಗುತ್ತಾರೆ.
ಪೂರ್ವಾಭಾದ್ರಾ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು, ಸಿರಿವಂತರು ಸ್ತ್ರೀಯರಿಂದ ಗೆಲ್ಲಲ್ಪಡುವವರು. ಶೂರರು ಆಗಿರುತ್ತಾರೆ.
ಉತ್ತರಾಭಾದ್ರ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು ಸುಖಿಯು ಧಾರ್ಮಿಕರು ನಿಶ್ಚಯವಾದ ಮನೋಧರ್ಮವುಳ್ಳವರು ಆಗಿರುತ್ತಾರೆ.
ರೇವತಿ ನಕ್ಷತ್ರ:
ಈ ನಕ್ಷತ್ರದಲ್ಲಿ ಜನಿಸಿದವರು, ಸಿರಿವಂತರು, ಸಂತೋಷಿಗಳೂ, ರೂಪವಂತರು ಆಗಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಆಧ್ಯಾತಿಕ ಚಿಂತಕರು ಹಾಗೂ ಪುರೋಹಿತರು
ವೇದಬ್ರಹ್ಮ ಶ್ರೀ ಗಣೇಶ್ ಭಟ್ : ಮೊಬೈಲ್ : 9980010722, 9036239373