ಟೊಮೇಟೋ ಹಣ್ಣಿನ ರಸ ಸೇವಿಸಲು ಶರೀರದಲ್ಲಿನ ರಕ್ತ ಶುದ್ಧಿಯಾಗುವುದು. ಹೈಬ್ರಿಡ್ ತಳಿಗಿಂತ ಜವಾರಿ ಟೊಮೇಟೋ ಅತ್ಯಂತ ಫಲಪ್ರದ. ದೇಹದ ವಿಪರೀತ ಬೆಳವಣಿಗೆ, ಬೊಜ್ಜನ್ನು ಕರಗಿಸಿ ಮೂತ್ರ ವಿಸರ್ಜನೆಯನ್ನು ಸರಳಗೊಳಿಸುವುದು.
100 ಗ್ರಾಂ ಟೊಮೇಟೋ ಹಣ್ಣಿನಲ್ಲಿರುವ ಪೋಷಕಾಂಶಗಳು
ತೇವಾಂಶ - 94.0 ಗ್ರಾಂ
ಸಸಾರಜನಕ - 1 ಗ್ರಾಂ
ಮೇದಸ್ಸು - 0.1 ಗ್ರಾಂ
ಖನಿಜಾಂಶ - 0.5 ಗ್ರಾಂ
ಕಾರ್ಬೋಹೈಡ್ರೇಟ್ಸ್ - 4 ಗ್ರಾಂ
ಕ್ಯಾಲ್ಸಿಯಂ - 13 ಮಿ.ಗ್ರಾಂ
ಫಾಸ್ಪರಸ್ - 25 ಮಿ.ಗ್ರಾಂ
ಕಬ್ಬಿಣ - 0.1 ಮಿ.ಗ್ರಾಂ
ಥಿಯಾಮಿನ್ - 0.12 ಮಿ.ಗ್ರಾಂ
ರಿಬೋಫ್ಲಾವಿನ್ - 0.06 ಮಿ.ಗ್ರಾಂ
ನಿಯಾಸಿನ್ - 1 ಮಿ.ಗ್ರಾಂ
ಕ್ಲೋರಿನ್ - 61 ಮಿ.ಗ್ರಾಂ
ತಾಮ್ರ - 0.1 ಮಿ.ಗ್ರಾಂ
ಫೋಲಿಕ್ ಆಮ್ಲ - 1 ಮಿ.ಗ್ರಾಂ
ಆಕ್ಸಾಲಿಕ್ ಆಮ್ಲ - 5.3 ಮಿ.ಗ್ರಾಂ
ಪೂಟ್ಯಾಷಿಯಂ - 360 ಮಿ.ಗ್ರಾಂ
ಸೋಡಿಯಂ - 3 ಮಿ.ಗ್ರಾಂ
ಗಂಧಕ - 0.05 ಮಿ.ಗ್ರಾಂ
ಮೆಗ್ನೀಷಿಯಂ - 11 ಮಿ.ಗ್ರಾಂ
ಎ ಜೀವಸತ್ವ - 14160 ಮಿ. ಯು
ಬಿ1 ಜೀವಸತ್ವ - 120 ಎ.ಸಿ.ಜಿ.
ಬಿ2 ಜೀವಸತ್ವ - 60 ಎ.ಸಿ.ಜಿ.
ಕೆ ಜೀವಸತ್ವ - 0.1 ಮಿ.ಗ್ರಾಂ
ಸಿ ಜೀವಸತ್ವ - 32 ಮಿ.ಗ್ರಾಂ
ಟೊಮೇಟೋ ಹಣ್ಣಿನಿಂದ ಹಲವಾರು ರುಚಿಕರ ತಿಂಡಿ ತಿನಿಸುಗಳನ್ನು ತಯಾರಿಸಬಹುದಾಗಿದೆ.
• ಟೊಮೇಟೋ ಸೂಪ್ • ಟೊಮೇಟೋ ಜಾಮ್ • ಟೊಮೇಟೋ ಕೆಚಪ್ • ಟೊಮೇಟೋ ಜ್ಯೂಸ್
• ಟೊಮೇಟೋ ಗೊಜ್ಜು • ಟೊಮೇಟೋ ಸಾರು
ಟೊಮೇಟೋ ಹಣ್ಣಿನಲ್ಲಿರುವ ಔಷಧೀಯ ಗುಣಗಳು ಮತ್ತು ಇದರ ಉಪಯೋಗ
- ಚಿಕ್ಕ ಮಕ್ಕಳಿಗೆ (ಒಂದು ವರ್ಷದಿಂದ) ಬೆಳಗಿನ ಜಾವ ಟೊಮೇಟೋ ಹಣ್ಣಿನ ರಸದೊಡನೆ ಸ್ವಲ್ಪ ಸಕ್ಕರೆ ಬೆರೆಸಿ ಕುಡಿಸುವುದರಿಂದ ಕರುಳಿನ ದೋಷ ನಿವಾರಣಿಯಾಗಿ ಬೇಧಿ ಸರಳವಾಗುತ್ತದೆ. ಜೀರ್ಣಶಕ್ತಿ ವೃದ್ದಿಗೊಳ್ಳುತ್ತದೆ.
- ದಿನಂಪ್ರತಿ ಬೆಳಗಿನ ಸಮಯದಲ್ಲಿ ತಾಜಾ ಟೊಮೇಟೋ ಹಣ್ಣನ್ನು ತಿನ್ನುತ್ತ ಸಾಗಲು ಮೂತ್ರ ವಿಸರ್ಜನೆಯ ದೋಷ ದೂರಾಗುವುದು. 90 ದಿನಗಳ ಕಾಲ ಸೇವಿಸಿದರೆ ರಕ್ತ ಶುದ್ದಿಯಾಗುವುದು. ಟೊಮೇಟೋ ಹಣ್ಣಿನ ರಸಕ್ಕೆ ಸಕ್ಕರೆ ಬೆರೆಸಿ ಕುಡಿಯುವುದರಿಂದ ಮಾನಸಿಕ ಶಾರೀರಿಕ ಶ್ರಮಗಳು ದೂರಾಗಿ ಚೇತರಿಕೆ ಉಂಟಾಗುವುದು.
- ಒಂದು ಗ್ಲಾಸ್ ಟೊಮೇಟೋ ಹಣ್ಣಿನಿ ತಾಜಾರಸಕ್ಕೆ ಚಿಟಿಕೆ ಉಪ್ಪು ಹಾಗೂ ಚಿಟಿಕೆ ಮೆಣಸಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ವಾಂತಿ ನಿವಾರಣೆಯಾಗುವುದು. ಮಲಬದ್ದತೆ ದೂರಾಗುವುದು. ಅಸಭ್ಯ, ಅಜೀರ್ಣ, ಹೊಟ್ಟೆ ತೊಳಿಸುವಿಕೆ, ಕಾಮಾಲೆ ಕರುಳಿಗೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುವುವು.
- ಟೊಮೇಟೋ ಹಣ್ಣನ್ನು ತಿನ್ನುವುದರಿಂದ ಹಲ್ಲು ಹಾಗೂ ಒಸಡು ಗಟ್ಟಿಯಾಗುತ್ತದೆ. ಮುಖದಲ್ಲಿ ಬರುವಂತಹ ಮೊಡವೆಗಳಿಗೂ ಸಹ ಟೊಮೇಟೋ ಹಣ್ಣಿನ ತಿರುಳು, ರಾಮಾಭಾಣವಾಗಿ ಪರಿಣಮಿಸುತ್ತದೆ. ಟೊಮೇಟೋ ಹಣ್ಣಿನ ತಿರುಳನ್ನು ಮುಖಕ್ಕೆ ಚೆನ್ನಾಗಿ ಉಜ್ಜಿಕೊಂಡು ಒಂದು ಗಟ್ಟೆ ನಂತರ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಮೊಡವೆ ಹಾಗೂ ಕಲೆಗಳು ಮಾಯವಾಗುವವು.