ಶಾಸ್ತಜ್ಞರ ಅಭಿಪ್ರಾಯದಂತೆ ಚೈತ್ರಮಾಸದಿಂದ ಫಾಲ್ಗುಣ ಮಾಸದವರೆಗೆ ವಾಸ್ತು ಪುರುಷನ ದೃಷ್ಟಿ ಹೀಗಿರುತ್ತದೆ.
ಪಾಲ್ಗುಣ, ಚೈತ್ರ ವೈಶಾಖ - ಉತ್ತರ
ಭಾದ್ರಪದ, ಅಶ್ವಯುಜ, ಕಾರ್ತೀಕ - ದಕ್ಷಿಣ
ಜ್ಯೇಷ್ಟ, ಆಷಾಡ, ಶ್ರಾವಣ - ಪೂರ್ವ
ಮಾರ್ಗಶಿರ, ಪುಷ್ಯ, ಮಾಘ - ಪಶ್ಚಿಮ
ವಾಸ್ತು ಪುರುಷನ ಅಂಗಾಂಗಗಳು :
ಶಿರ - ಈಶಾನ್ಯ
ಪಾದಗಳು - ನೈರುತ್ಯ
ಬಲಗೈ - ವಾಯುವ್ಯ
ಎಡಗೈ - ಆಗ್ನೇಯ
ವಾಸ್ತು ನೋಟ
ಮುಂಜಾನೆ : ಪೂರ್ವ
ಮಧ್ಯಾಹ್ನ - ದಕ್ಷಿಣ
ಅಪರಾಹ್ನ, ಸಂಜೆ - ಉತ್ತರ
ಇದು ವಾಸ್ತು ಪುರುಷನು ತನ್ನ ನೋಟವನ್ನು ದಿನದ ವಿವಿಧ ವೇಳೆ ಹರಿಸುವ ರೀತಿಯಾಗಿದೆ. ಗೃಹ ನಿರ್ಮಾಣಕ್ಕೆ ವಾಸ್ತು ಪುರುಷನ ಪೂರ್ವದ ನೋಟ ತುಂಬ ಅಭಿವೃದ್ದಿಕಾರಕವಾಗಿದೆ. ಆದ್ದರಿಂದಲೇ ಪಾಯದ ಪೂಜೆ ಬೆಳಗಿನ ಜಾವ ನಡೆಸುವುದು ಅತ್ಯುತ್ತಮವಾಗಿದೆ.