ಈಗಿನ ಯುವಕ, ಯುವತಿಯರಿಗೆ ಮೊಡವೆ ಸಮಸ್ಯೆ ಅತಿಯಾಗಿ ಕಾಡುತ್ತಿದೆ, ಪ್ರತಿಯೊಬ್ಬರಲ್ಲಿರುವ ಆಹಾರ ಮತ್ತು ಜೀವನಶೈಲಿ ಹಾಗೂ ಹಾರ್ಮೋನ್ ವ್ಯತ್ಯಾಸವೂ ಕೂಡಾ ಮೊಡವೆಗೆ ಕಾರಣವಾಗಬಹುದು.
ಕೀವು, ನೋವು ತುಂಬಿಕೊಂಡು ಮನಸ್ಸಿಗೆ ಕಿರಿಕಿರಿಯುಂಟು ಮಾಡುವ ಮೊಡವೆಯನ್ನು ನಿವಾರಿಸಲು ಮನೆಯಲ್ಲಿ ಮದ್ದನ್ನು ಮಾಡಿ ನಿವಾರಣೆ ಮಾಡಿಕೊಳ್ಳ ಮಾಡಬಹುದು
- ಜಾಯಿಕಾಯಿ, ಕಾಳುಮೆಣಸು, ಶ್ರೀಗಂಧವನ್ನು ಅರೆದು ಮೊಡವೆಗೆ ಹಚ್ಚಬಹುದು.
- ಮಂಜಿಷ್ಟ, ರಕ್ತಚಂದನ, ಶ್ರೀಗಂಧ, ಅರಳೀಮರದ ಕುಡಿಯನ್ನು ಹಾಲಿನೊಂದಿಗೆ ಅರೆದು ಮೊಡವೆಗೆ ಹಚ್ಚಬಹುದು.
- ದಾಳಿಂಬೆ ಹಣ್ಣಿನ ಬೀಜವನ್ನು ರುಬ್ಬಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗುಳ್ಳೆ ವಾಸಿಯಾಗುತ್ತದೆ
- ಧನಿಯಾ, ಹೆಸರುಕಾಳನ್ನು ಪುಡಿ ಮಾಡಿ ದಿನಕ್ಕೆ ಮೂರ್ನಾಲ್ಕು ಬಾರಿ ಮುಖ ತೊಳೆಯುವುದರಿಂದ ಮುಖದಲ್ಲಿ ಎಣ್ಣೆ ಅಂಶ ಕಡಿಮೆಯಾಗಿ ಮೊಡವೆ ಕಡಿಮೆಯಾಗುತ್ತದೆ.
ಮುಖದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ ಹಾಗೂ ಮೊಡವೆಯನ್ನು ಆಗಾಗ ಮುಟ್ಟಿಕೊಳ್ಳುವುದು, ಚಿವುಟುವುದು ಮಾಡಿದರೆ ಮುಖದಲ್ಲಿ ಕಲೆಗಳು ಹೆಚ್ಚಾಗುವುದು.