ಜ್ಞಾನ, ಭಕ್ತಿ, (ಭಾವನೆ) ಕ್ರಿಯೆಗಳೆಂಬ ಮುಪ್ಪುರಿ ಮಾನವನ ಪರಿಪೂರ್ಣತೆಗೆ ತಳಹದಿಯಾಗಿದೆ. ಮನುಷ್ಯನ ಬೇರೆ ಬೇರೆ ಅವಸ್ಥೆಗಳಲ್ಲಿ ಇವುಗಳ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಮಕ್ಕಳಲ್ಲಿ ಭಾವನೆಯ ಪ್ರಾಬಲ್ಯ ಹೆಚ್ಚಾಗಿರುತ್ತದೆ. ಆದ್ದರಿಂದ ಭಾವನೆಗಳನ್ನು ಕುದುರಿಸಿ ಈಗಿನ ಮಕ್ಕಳಲ್ಲಿ ವಿಚಾರ ಶಕ್ತಿಯನ್ನು ಬೆಳೆಸಬೇಕೆಂದು ತಜ್ಞರು ಹೇಳುತ್ತಾರೆ.
ಮಕ್ಕಳಲ್ಲಿ ವಿಚಾರ ಶಕ್ತಿಯನ್ನು ಬೆಳೆಸುವ ತಾಯಿ ತಂದೆಗಳೇನೂ ಡಿಗ್ರಿ, ಪ್ರೊಫೆಸರ್ ರಾಗಬೇಕಾಗಿಲ್ಲ. ಹುಟ್ಟಿನಿಂದಲೂ ತಂದೆತಾಯಿಗಳ ಸಂಗತಿಯಲ್ಲಿ ಇರುವುದರಿಂದ ಅವರು ಮಕ್ಕಳ ಭಾವನೆಯನ್ನು ಗುರುತಿಸಿ ಅರಿತು ಆರಂಭಿಸಬೇಕು.
ಉದಾಹರಣೆಗಳು :
ಮೊದಲು ತಂದೆತಾಯಿಗಳು ತಾವೇ ಸ್ವತಃ ಮಕ್ಕಳಂತೆ ಓದು ಬರೆಯುವುದನ್ನು ಮಾಡುತ್ತಾ ಮಕ್ಕಳಿಗೆ ದಿನಪತ್ರಿಕೆ, ಕಥೆಯ ಪುಸ್ತಕ ಓದುವ ಹಾಗೇ ಮಾಡುತ್ತಿರಬೇಕು, ಇವುಗಳ ಬಗೆಗೆ ಅವರೊಂದಿಗೆ ಚರ್ಚಿಸುತ್ತಾ ಭಾರತದಲ್ಲಿರುವ ನದಿಗಳ ಪಾತ್ರ, ಕ್ಷೇತ್ರ ಅಥವಾ ದೊಡ್ಡ ಐತಿಹಾಸಿಕ ಸ್ಥಳಗಳು ಬಗೆಗಿರುವ ಪುಸ್ತಕಗಳನ್ನು ಓದಲು ಹೇಳುವಾಗ ಅವುಗಳ ಚಿತ್ರವನ್ನು ತೋರಿಸುತ್ತಾ ಕಥೆಯನ್ನು ಹೇಳುತ್ತಾ ಹೋಗಬೇಕು. ಹಾಗೂ ಇದರ ಬಗ್ಗೆ ಚರ್ಚೆ ಮಾಡುವಾಗ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಮುಂತಾದ ಮಾಹಾನ್ ವ್ಯಕ್ತಿಗಳ ವಿಚಾರ ಧಾರೆಗಳು ಹಾಗೂ ಈಗಿನ ರಾಜಕಾರಣ, ದೇಶದ ಗಡಿ ಭಾಗಗಳು ಬಗ್ಗೆ ಚರ್ಚಿಸಬೇಕು. ಇದರಿಂದ ಇಂದಿನ ಜಗತ್ತಿನ ವಿಚಾರ ಹೊಳೆದು ತಾವು ಹೇಗೆ ಇಂದಿನ ಜಗತ್ತಿನೊಡನೆ ಹೊಂದಿಕೊಂಡು ಹೊಗಬೇಕೆಂಬುದನ್ನು ಅವರು ಕಲಿಯುವರು.
ವ್ಯವಹಾರದ ವಿಷಯವಾಗಿ ಮಕ್ಕಳನ್ನು ಪ್ರತಿದಿನ ಹಾಲು, ಸಣ್ಣ ಪುಟ್ಟ ದಿನಸಿ ತರಲು ಕಳಿಸಿ ಸ್ವಂತ ಅನುಭವ ಪಡೆಯಲು ಅವರನ್ನು ಪ್ರೇರಿಪಿಸಿದರೆ ಗಣೆತದ ಕಲವು ತೊಂದರೆಗಳಾದರೂ ಇದ್ದರೂ ಹಗುರಾಗಿ ಬಿಡಬಹುದು.
ಹುಡುಗನು ಒಳ್ಳೆ ಬುದ್ದಿವಂತನಿರುವನೆಂದು ಅವನಿಗೆ ಹೆಚ್ಚು ಹೆಚ್ಚಾಗಿ ಓದಲಿಕ್ಕೆ ಹೇಳಬೇಡಿರಿ. ಇದರಿಂದ ವಿಚಾರಕ್ಕೆ ಅನುವು ಸಿಗದೆ ಅವನ ಪ್ರಗತಿ ಇಳಿಯಬಹುದು.
ಮಾನವ ಜೀವನದ ಮಹತ್ವದ ವಿಚಾರ ತಿಳಿಸಲು ಪುರಾಣ, ಇತಿಹಾಸಗಳ ಸಾರವಿರುವ ಮಹಾಭಾರತ, ರಾಮಾಯಣ, ಭಗವದ್ಗೀತೆಯ ಬಗೆಗಿರುವ ಪುಸ್ತಕಗಳನ್ನು ಓದಲು ಹೇಳಿ ಅವುಗಳಲ್ಲಿರುವ ಜೀವನ ಪಾಠಗಳನ್ನು ಹೇಳುತ್ತಾ ಹೋಗಬೇಕು. ಇದರಿಂದ ಮಾನವ ಸಮಾಜದ ಏರಿಳಿತಗಳು ಅವರಿಗೆ ಹೊಳೆದು ತಮ್ಮ ಜೀವನದ ಆದರ್ಶಗಳನ್ನು ಅವರು ಈಗಲೇ ನಿರೂಪಿಸಿಕೊಳ್ಳಬಹುದು.
ಮಕ್ಕಳು ತಾಯಿ ತಂದೆಗಳ ಮಾತುಗಳನ್ನು ಯಾವಾಗಲೂ ಪ್ರೀತಿಯಿಂದ ಕೇಳುತ್ತಾರೆ ಅದರಂತೆ ಅವರು ಓದುವುದನ್ನು ಹಾಡುವುದನ್ನು ತಾಯಿ ತಂದೆಗಳು ಪ್ರೀತಿಯಿಂದ ಕೇಳಬೇಕು. ಅದರೆ ಅವರನ್ನು ದಣೆಸಬಾರದು. ತಾಯಿ ತಂದೆಗಳು ತಮ್ಮ ಮಕ್ಕಳೊಡನೆ ತಮ್ಮ ಬುದ್ದಿಯ ಮಟ್ಟವನ್ನು ಹೋಲಿಸಿ ನೋಡಬಾರದು. ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ಅವರಿಗೆ ಪ್ರೇರಕರಾದರೆ ಕೆಲಸ ತೀವ್ರವಾಗಬಹುದು.
ಮಕ್ಕಳು ಬೆಳೆಯಲಿರುವ ಹಿರಿಯರೆಂದು ತಿಳಿಯದೆ ಆ ಅವಸ್ಥೆಯಲ್ಲಿ ಅವರ ಭಾವನಾ ವಿಚಾರಗಳ ಮಟ್ಟವನ್ನು ತಿಳಿದುಕೊಂಡು ಅವರನ್ನು ವಿಚಾರ ಮಾಡಲು ಪ್ರೇರಣೆ ಗೊಳಿಸಬೇಕು.