- ಕಿವಿಗೆ ಈರುಳ್ಳಿ ರಸ ಹಿಂಡುವುದರಿಂದ ಕಿವಿನೋವು ನಿವಾರಣೆ ಆಗುವುದು.
- ಕಿವಿಗೆ ತುಳಸಿ ರಸವನ್ನು ತೊಟ್ಟಿಕ್ಕಿಸುವುದರಿಂದ ಕಿವಿನೋವು ಕಡಿಮೆ ಆಗುವುದು.
- ಸ್ವಲ್ಪ ಓo ಕಾಳನ್ನು ಒಂದು ಚಮಚೆಯಲ್ಲಿ ಕೊಬ್ಬರಿ ಎಣ್ಣೆಯೊಂದಿಗೆ ಕುದಿಸಿ ಬೆಚ್ಚನೆಯ ಎಣ್ಣೆಯನ್ನು ಕಿವಿಗೆ ಒಂದೊಂದು ಹನಿ ಬಿಡುವುದರಿಂದ ಕಿವಿನೋವು ವಾಸಿ ಆಗುವುದು.
- ಅಡುಗೆ ಉಪ್ಪನ್ನು ನೀರಿನಲ್ಲಿ ಕರಗಿಸಿ ಉಗುರು ಬೆಚ್ಚಗೆ ಮಾಡಿ ಕಿವಿಗೆ ಬಿಡುವುದರಿಂದ ಯಾವುದೇ ಕೀಟ ಒಳಗೆ ಹೋಗಿದ್ದರೆ ಹೊರ ಬರುವುದು, ಇಲ್ಲವೇ ಇದ್ದಲ್ಲಿಯೇ ಸಾಯುವುದು.
- ಬೆಳ್ಳಳ್ಳಿಯ ತೊಳೆಯನ್ನು ಹರಳೆಣ್ಣೆಯಲ್ಲಿ ಹುರಿದು, ಅರಿದ ನಂತರ ಕಿವಿಗೆ ಒಂದೊಂದೇ ತೊಟ್ಟು ಬಿಡುತ್ತಿದ್ದರೆ ಕಿವಿನೋವು ಕಡಿಮೆ ಆಗುವುದು.
- ಬಾಣಂತಿಯರು ಬೆಳ್ಳುಳ್ಳಿಯ ಚೂರುಗಳನ್ನು ಹತ್ತಿಯಲ್ಲಿ ಹೊರಬರದಂತೆ ಸುತ್ತಿ ಕಿವಿಯಲ್ಲಿ ಇಟ್ಟುಕೊಂಡರೆ ಶೀತದಿಂದ ಕಿವಿ ಕಿವುಡಾಗುವ ಕಷ್ಟದಿಂದ ಪಾರಾಗುವುದು.
- ಹಸಿಮೂಲಂಗಿಯ ಸೇವನೆಯಿಂದ ಕಿವಿನೋವು ನಿವಾರಣೆ ಆಗುವುದು.
- ಕಿವಿಗೆ ಉಣ್ಣಾದಾಗ, ಸೋರುತ್ತಿರುವಾಗ ತುಳಸಿ ಎಲೆಯ ರಸವನ್ನು ತೆಗೆದು, ಕಿವಿಯೊಳಗೆ ಹಿಂಡುತ್ತಿದ್ದರೆ ಕಿವಿನೋವು ಕಡಿಮೆ ಆಗುವುದು.
- ಬೇವಿನ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ಜಾರುವ ಹಬೆಯನ್ನು ಕಿವಿಗೆ ಹಾಯಿಸುತ್ತಿದ್ದರೆ ಕಿವಿನೋವು ಕಡಿಮೆ ಆಗುವುದು.
- ಯಾವುದಾದರೂ ಕ್ರಿಮಿ ಕೀಟ ಅರಿವಿಲ್ಲದೆ ಕಿವಿಯೊಳಗೆ ಹೋಗಿ ಹೊರಕ್ಕೆ ಬರಬಾರದೆ ಬಾಧೆಪಡುವಾಗ ಬೇವಿನಸೊಪ್ಪಿನ ಒಂದು ಚಮಚ ರಸಕ್ಕೆ ಒಂದು ಚಿಟಿಕೆಯಷ್ಷು ಉಪ್ಪಿನ ಪುಡಿ ಸೇರಿಸಿ, ಕಿವಿಗೆ ಬಿಡುವುದರಿಂದ ಕ್ರಿಮಿಗಳು ನಾಶ ಆಗುವುದರ ಮೂಲಕ ಕಿವಿನೋವು ಕಡಿಮೆ ಆಗುವುದು.