ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ
ಆರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮ ನಿವೇದನಂ
(ಭಾಗವತ-7.5.23)
ದೇವರನ್ನು ವಿವಿಧ ರೀತಿಯ ಭಕ್ತಿಯಿಂದ ಪ್ರಾರ್ಥಿಸಬಹುದು:
1. ಶ್ರವಣಂ :
ದೇವರ ಮಹಿಮೆಗಳನ್ನು ಧ್ಯಾನ ಮತ್ತು ಭಕ್ತಿಯಿಂದ ಕೇಳಿ ಮನನ ಮಾಡಿಕೊಳ್ಳುವುದು.
2. ಕೀರ್ತನಂ :
ದೇವರ ಕೀರ್ತನೆ, ಭಜನೆ, ಗುಣಗಾನ, ಮಹಿಮೆಗಳನ್ನು ಕೊಂಡಾಡುವುದು.
3. ಸ್ಮರಣಂ :
ಕಲಿಯುಗದ ಮುಖ್ಯಧರ್ಮವಾದ ಶ್ರೀಹರಿಯ ನಾಮಸ್ಮರಣೆಯನ್ನು ನಿರಂತರ ಮಾಡುವುದು.
4. ಪಾದ ಸೇವನಂ :
ಶ್ರೀ ಹರಿಯ ಚರಣ ಸೇವೆ ಮಾಡುವುದು ಅಥವಾ ಮಾಡುವ ಎಲ್ಲ ಒಳ್ಳೆಯ ಕಾರ್ಯಗಳು ಶ್ರೀಹರಿಯ ಚರಣ ಸೇವೆ ಎಂದು ತಿಳಿಯುವುದು.
5. ಅರ್ಚನಂ :
ಶಾಸ್ತ್ರ ವಿಹಿತ ಫಲ-ಪುಷ್ಪಗಳಿಂದ ದೇವರ ಅರ್ಚನೆ, ಪೂಜೆಯನ್ನು ಮಾಡುವುದು.
6. ವಂದನಂ :
ದೇವರಿಗೆ ಪ್ರಣಾಮ, ದಂಡ ಪ್ರಣಾಮಗಳ ಸಮರ್ಪಣೆ ಮಾಡುವುದು.
7. ದಾಸ್ಯಂ :
ಮಾಡುವ ಎಲ್ಲ ಕಾರ್ಯಗಳು ತಾನು ದೇವರ ದಾಸನೆಂದು ತಿಳಿದು ಮಾಡುವುದು.
8. ಸಖ್ಯಂ :
ದೇವರ ಮೇಲೆ ವಿಶೇಷವಾದ ಪ್ರೀತಿ ಹಾಗೂ ಸಖನೆನ್ನುವ ಭಾವನೆ ಇರಿಸಿಕೊಳ್ಳುವುದು.
9. ಆತ್ಮ ನಿವೇದನಂ :
ಮಾಡುವ ಎಲ್ಲ ಕಾರ್ಯಗಳನ್ನು ದೇವರಿಗೆ ಸಮರ್ಪಣೆ ಮಾಡುವುದು.