Date: 14 Nov 2024 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜ್ಯೋತಿಷ್ಯ » ಆಧ್ಯಾತ್ಮಿಕ

ಋಣದಿಂದ ಮುಕ್ತನಾಗಲು ಮನುಷ್ಯನು ಯಾವ ಕೆಲಸಗಳನ್ನು ಮಾಡಿದರೆ ತನ್ನ ಜನ್ಮ ಸಾರ್ಥಕ ಪಡಿಸಿಕೊಳ್ಳಬಹುದು ?


11 Jul 2020

ಹಿಂದೂ ಧರ್ಮದಲ್ಲಿ ಇರುವ ಎಷ್ಟೋ ಆಚಾರ-ವಿಚಾರ, ಪದ್ಧತಿಗಳು ಬಹಳಷ್ಟು ಜನರಿಗೆ ತಿಳಿದಿಲ್ಲ. ನಾವು ಪಾಲಿಸುವ ಪ್ರತಿ ಆಚರಣೆಯ ಹಿಂದೆಯೂ ಒಂದು ನಿಗೂಢ ಸತ್ಯ ಅಡಗಿರುತ್ತದೆ. ಆ ಆಚರಣೆ ಬಗ್ಗೆ ಸಂಪೂರ್ಣವಾಗಿ ತಿಳಿದು ಆಚರಿಸಿದಾಗ ಮಾತ್ರ, ಅದರ ಸಂಪೂರ್ಣ ಫಲ ಸಿಗುತ್ತದೆ.. ಎಂದು ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಋಣಗಳು:
ಮನುಷ್ಯನಾಗಿ ಹುಟ್ಟಿದ ಮೇಲೆ ಅದಕ್ಕೆ ಪ್ರತಿಫಲವಾಗಿ ಕೆಲವು ಋಣಗಳನ್ನು ಸಂದಾಯ ಮಾಡಬೇಕು. ಮಹಾಭಾರತದಲ್ಲಿ ಮನುಷ್ಯ ಕಡ್ಡಾಯವಾಗಿ ತೀರಿಸಬೇಕಾದ ಋಣಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಅದರಂತೆ ಐದು ಅತಿ ಮುಖ್ಯ ಋಣಗಳನ್ನು ಮನುಷ್ಯ ತೀರಿಸಲೇಬೇಕು.

""ಮನುಷ್ಯರು ತೀರಿಸಲೇಬೇಕಾದ ಋಣಗಳು'"
1. ದೇವತಾ ಋಣ :
ಮಾನವ ಜನ್ಮ ಪಡೆದು ಸನಾತನ ಧರ್ಮದ ವ್ಯಾಪ್ತಿಗೆ ಬಂದ ನಂತರ ನಮ್ಮ ಕುಲದೇವರು, ಮನೆದೇವರು, ಇಷ್ಟದೇವರ ಸೇವೆ ಸಲ್ಲಿಸಿ ಋಣಮುಕ್ತರಾಗಬೇಕು. ಅಂದರೆ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆಗಳನ್ನು ಕೈಗೊಳ್ಳುವುದು. ಹೇಗೆ ನಾವು ದಿನದಲ್ಲಿ ಮೂರು ಬಾರಿ ಊಟ ಉಪಹಾರಗಳನ್ನು ತಪ್ಪದೇ ಮಾಡುತ್ತೇವೋ, ಅದೇ ರೀತಿ ಪ್ರತಿವರ್ಷ ತಪ್ಪದೇ ನಮ್ಮ ಕುಲದೇವರು, ಮನೆದೇವರು ಹಾಗೂ ಇಷ್ಟದೇವರ ಆರಾಧನೆ ಮಾಡಬೇಕು. ಇದನ್ನು ಒಂದು ಸಾಧನೆಯ ರೀತಿಯಲ್ಲಿ ಮಾಡಿಕೊಂಡು ನಡೆಸುತ್ತಾ ಬರಬೇಕು. ಕುಲದೇವರ ಆರಾಧನೆ ನಮ್ಮಲ್ಲಿನ ತರ್ಕ ಬುದ್ಧಿಯಿಂದ ಬಿಡುಗಡೆ ಹೊಂದಲು ಸಹಕರಿಸುತ್ತದೆ. ಇನ್ನು ನಮ್ಮ ಗ್ರಹಣಶಕ್ತಿಯನ್ನು ಲೌಕಿಕ, ಭೌತಿಕಗಳಿಂದ ಆಧ್ಯಾತ್ಮದ ಕಡೆ ಹರಿಸಬೇಕಾದರೆ ನಾವು ಕುಲದೇವರನ್ನು ಆರಾಧಿಸಲೇಬೇಕು ಎನ್ನಲಾಗುತ್ತದೆ.

2. ಪಿತೃ ಋಣ:
ಆತ್ಮವು ಬರುವುದು ಪರಮಾತ್ಮನಿಂದ. ಹಾಗೆಯೇ ಆ ಆತ್ಮವನ್ನು ಹೊಂದುವ ದೇಹ ಕೊಟ್ಟ ತಂದೆ - ತಾಯಿಯರಿಗೆ ನಾವು ಋಣಿಗಳಾಗಿರಬೇಕು. ಆದ್ದರಿಂದ ಜನ್ಮದಾತರಿಗೆ ನಾವು ಗೌರವ ಸಲ್ಲಿಸಬೇಕು. ವೃದ್ಧಾಪ್ಯದಲ್ಲಿ ಅವರ ಬೇಕು, ಬೇಡಗಳನ್ನು ಗಮನಿಸಿ ಅವರ ಸೇವೆ ಸಲ್ಲಿಸಬೇಕು. ವೃದ್ಧಾಪ್ಯದಲ್ಲಿ ಕೈ ಕೊಡುವ ಅವರ ಆರೋಗ್ಯದ ಬಗ್ಗೆ ಗಮನವಿತ್ತು, ಚಿಕಿತ್ಸೆ ಕೊಡಿಸಬೇಕು. ನಮ್ಮ ಕುಟುಂಬದಲ್ಲಿ ಮರಣ ಹೊಂದಿದ್ದ ಪಿತೃದೇವತೆಗಳಿಗೆ ಪ್ರತಿವರ್ಷ ತರ್ಪಣ ಕೊಟ್ಟು ಋಣ ತೀರಿಸಬೇಕು, ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ.

3.ಋಷಿ ಋಣ :
ಮನುಷ್ಯ ಬುದ್ಧಿಜೀವಿ. ತನ್ನ ಜ್ಞಾನವನ್ನು ಬಚ್ಚಿಡದೇ ಪ್ರತಿಯೊಬ್ಬರಿಗೂ ಹಂಚುವ ಗುಣವಿರಬೇಕು. ನಮ್ಮ ಋಷಿಮುನಿಗಳು ಅಗಾಧ ಜ್ಞಾನಸಂಪತ್ತನ್ನು ನಮಗೆ ನೀಡಿ ಹೋಗಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಹೀಗಾಗಿ ಹಿಂದೆ ಗುರುಕುಲ ಪದ್ಧತಿಯ ಮೂಲಕ ಗುರುಗಳು ವಿದ್ಯಾರ್ಥಿಗಳಿಗೆ ಈ ಜ್ಞಾನವನ್ನು ಬೋಧಿಸುತ್ತಿದ್ದರು. ಸತ್ಸಂಗ, ಹರಿಕಥೆಗಳು, ಪ್ರವಚನಗಳನ್ನು ಏರ್ಪಡಿಸುವ, ಬೋಧಿಸುವ ಮೂಲಕ ಜ್ಞಾನಾಕಾಂಕ್ಷಿಗಳಿಗೆ, ಜ್ಞಾನ ಪಿಪಾಸುಗಳಿಗೆ ಜ್ಞಾನ ಹಂಚುವ ಕಾರ್ಯ ನಡೆಸುವ ಮೂಲಕ, ನಾವು ಋಷಿ ಋಣ ತೀರಿಸಬಹುದು. ಶ್ರೋತೃವಾಗಿ ಕೇಳಿ, ಅದರಂತೆ ಸತ್ಯ, ಧರ್ಮಗಳಿಂದ, ನ್ಯಾಯ, ನೀತಿಗಳಿಂದ ನಡೆಯುವ ಮೂಲಕವೂ ನಾವು ಋಷಿ ಋಣ ತೀರಿಸಬಹುದು.

4. ಭೂತ ಋಣ:
ಹಸು-ಎಮ್ಮೆ, ಕುರಿ-ಮೇಕೆ, ಎತ್ತು-ಒಂಟೆ-ಕುದುರೆ ಇತ್ಯಾದಿ ಎಷ್ಟು ಬಗೆಯ ಪ್ರಾಣಿಗಳಿವೆಯೋ, ಅವುಗಳಿಂದ ನಾವು ಉಪಯೋಗ ಪಡೆದು ನಮ್ಮ ಜೀವನ ನಿರ್ವಹಣೆ ಮಾಡುತ್ತೇವೆ. ಗಿಡ, ಮರ, ಬಳ್ಳಿ ಮುಂತಾದವುಗಳಿಂದ ಧಾನ್ಯ, ತರಕಾರಿ, ಹಣ್ಣು, ಹೂವು, ಎಲೆ, ಸೌದೆ ಇತ್ಯಾದಿಗಳನ್ನು ಪಡೆಯುತ್ತೇವೆ. ಇದು ನಮ್ಮ ಮೇಲಿರುವ ಭೂತ ಋಣ ವಾಗಿದೆ. ಪಶು-ಪಕ್ಷಿಗಳಿಗೆ ಕಾಲ ಕಾಲಕ್ಕೆ ಹುಲ್ಲು, ಆಹಾರಾದಿಗಳನ್ನು ಕೊಡುವುದರಿಂದ, ನೀರು ಕುಡಿಸುವುದರಿಂದ, ಅವುಗಳ ಆರೋಗ್ಯ ಪಾಲನೆ ಮಾಡುವುದರಿಂದ (ಪಶು ವೈದ್ಯ), ಸಸಿಗಳನ್ನು ನೆಟ್ಟು ಪರಿಸರ ಸಮತೋಲನ ಕಾಯ್ದುಕೊಳ್ಳುವ ಮೂಲಕ, ಗಿಡ-ಮರ-ಬಳ್ಳಿ ಇತ್ಯಾದಿಗಳಿಗೆ ಗೊಬ್ಬರ ಕೊಟ್ಟು, ನೀರು ಉಣಿಸಿ ಬೆಳೆಸುವುದರಿಂದ ನಾವು ಈ ಭೂತ ಋಣದಿಂದ ಮುಕ್ತ ರಾಗುತ್ತೇವೆ.

5.ಮನುಷ್ಯ ಋಣ:
ಮನುಷ್ಯ ಸಂಘಜೀವಿ. ಅನ್ಯರ ಸಹಾಯ ಪಡೆಯದೇ ನಮ್ಮ ಜೀವನ ನಿರ್ವಹಣೆಯಾಗಲಾರದು. ನಾವು ಇತರೆ ಮನುಷ್ಯರು ನಿರ್ಮಿಸಿರುವ ರಸ್ತೆಗಳಲ್ಲಿ ಓಡಾಡುತ್ತೇವೆ, ಅವರು ತೋಡಿರುವ ಬಾವಿಯ ನೀರನ್ನು ಉಪಯೋಗಿಸಿರುತ್ತೇವೆ. ಬೇರೆಯವರು ನೆಟ್ಟ ಗಿಡಮರಗಳಿಂದ ಉಪಯೋಗ ಪಡೆದಿರುತ್ತೇವೆ, ಬೇರೆಯವರಿಂದ ಉತ್ಪತ್ತಿ ಮಾಡಲಾದ ಆಹಾರವೇ ಮೊದಲಾದ ಖಾದ್ಯ ಪದಾರ್ಥಗಳನ್ನೂ, ಬಳಸಿ ಕೊಳ್ಳುತ್ತೇವೆ. ಇದು ನಮ್ಮ ಮೇಲಿರುವ "ಮನುಷ್ಯ ಋಣ" ಪರರ ಸುಖ ಸೌಕರ್ಯಕ್ಕಾಗಿ ಬಾವಿ ತೋಡಿಸುವದರಿಂದ, ಧರ್ಮಶಾಲೆ ನಿರ್ಮಿಸುವುದರಿಂದ, ಅನ್ನಛತ್ರ ನಡೆಸುವುದರಿಂದ, ಸಮಾಜದಲ್ಲಿನ ಅನಾಥರಿಗೆ, ಬಡವರಿಗೆ ಅನ್ನ, ಅರಿವೆ, ಆಶ್ರಯ ರೂಪದಲ್ಲಿ, ಧನ, ಧಾನ್ಯಗಳ ರೂಪದಲ್ಲಿ ದಾನ ಧರ್ಮಾದಿಗಳನ್ನು ಮಾಡುವುದರಿಂದ ನಾವು ." ಮನುಷ್ಯ ಋಣ" ದಿಂದ ಮುಕ್ತರಾಗುತ್ತೇವೆ.

ಹೀಗೆ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ತನ್ನ ಜನ್ಮ ಸಾರ್ಥಕವಾಗಲು ಮೇಲೆ ತಿಳಿಸಿದ ಅಷ್ಟೂ ಋಣಗಳನ್ನು ಸಲ್ಲಿಸಿದರೆ ಒಳಿತಾಗುತ್ತದೆ.

ನಮ್ಮ ಕೈಲಾದ ಮಟ್ಟಿಗೆ ಧರ್ಮ, ಕರ್ಮಾನುಸಾರವಾಗಿ ಈ ಋಣಗಳನ್ನು ತೀರಿಸಬೇಕು. ಧರ್ಮಶಾಸ್ತ್ರದಲ್ಲಿ ಈ ಋಣಗಳನ್ನು ಸಲ್ಲಿಸಿದಾಗ ಮಾತ್ರ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ ಎನ್ನುತ್ತಾರೆ ಆಧ್ಯಾತಿಕ ಚಿಂತಕರು ಹಾಗೂ ಪುರೋಹಿತರು
ವೇದಬ್ರಹ್ಮ ಶ್ರೀ ಗಣೇಶ್ ಭಟ್ ರವರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಮೊಬೈಲ್ : 9980010722, 9036239373

Share on:

City Information

(Private)