ಸಾಮಾನ್ಯವಾಗಿ ದಕ್ಷಿಣ ದಿಕ್ಕನ್ನು ಅಶುಭವೆಂದು ತಿಳಿಯಲಾಗುತ್ತದೆ. ಇದಕ್ಕೆ ಕಾರಣ ದಕ್ಷಿಣ ದಿಕ್ಕು ಯಮನ ನಿವಾಸ. ಯಮ - ಮೃತ್ಯುದೇವತೆ. ಆದ್ದರಿಂದ ಹೆಚ್ಚಿನ ಜನರು ಈ ದಿಕ್ಕನ್ನು ಮೃತ್ಯುವಿನ ದಿಕ್ಕು ಎಂದು ಭಾವಿಸುತ್ತಾರೆ. ಹಾಗೆ ನೋಡಿದರೆ ಕೆಲವು ವಿದ್ವಾಂಸರು ಇದನ್ನು ಸಮೃದ್ದಶಾಲಿ ದಿಕ್ಕು ಎಂದು ಅಭಿಪ್ರಾಯ ಪಡುತ್ತಾರೆ. ಇದು ಧೈರ್ಯ ಹಾಗೂ ಸ್ಥಿರತೆಯ ಪ್ರತೀಕವಾಗಿದ್ದು ಅಲ್ಲದೆ ಈ ದಿಕ್ಕು ಕೆಟ್ಟದನ್ನೆಲ್ಲ ನಷ್ಟಗೊಳಿಸುತ್ತದೆಂದೂ ಅವರ ಭಾವನೆ.
ದಕ್ಷಿಣ ಭಾರತದಲ್ಲಿರುವ ಶ್ರೀ ವೆಂಕಟೇಶ್ವರನ ಮಂದಿರ ಈ ಅಭಿಪ್ರಾಯಕ್ಕೆ ಪ್ರತೀಕ. ಇದು ಪ್ರಸಿದ್ದಿ ಹಾಗೂ ಸಮೃದ್ದಿ ಹೊಂದಲು ಬೇರೆ ಇನ್ನಿತರ ಕಾರಣಗಳಿದ್ದರೂ ಭಾರತದ ದಕ್ಷಿಣ ಭಾಗದಲ್ಲಿ ಇದ್ದರೂ ಅತ್ಯಂತ ಜಗತ್ಪ್ರಸಿದ್ದವಾಗಿದೆ. ಆದ್ದರಿಂದ ಜನಸಾಮಾನ್ಯರ ಅಭಿಪ್ರಾಯದಂತೆ ದಕ್ಷಿಣ ಅಂತಹ ಕೆಟ್ಟದ್ದೇನಲ್ಲ. ಈ ಕೆಳಗೆ ದಕ್ಷಿಣ ದಿಕ್ಕಿನ ಕುರಿತು ಕೆಲವು ವಿಶೇಷ ಸತ್ಯಗಳನ್ನು ನೀಡಲಾಗಿದೆ.
- ಮನೆಯನ್ನು ಕಟ್ಟುವ ಸಂದರ್ಭದಲ್ಲಿ ಈ ದಿಕ್ಕನ್ನು ಸಂಪೂರ್ಣ ಮುಚ್ಚಿ ಬಿಡಬೇಕು. ಹಾಗೂ ನಿರ್ಮಾಣದ ಸಮಯ ಸರ್ವ ಪ್ರಥಮವಾಗಿ ದಕ್ಷಿಣ ಭಾಗವನ್ನು ಕವರ್ ಮಾಡಬೇಕು. ಇಲ್ಲಿ ಹೆಚ್ಚು ತೂಕದ ವಸ್ತು ಅಥವಾ ಗೋಡೆಯನ್ನು ನಿರ್ಮಿಸಬೇಕು. ಒಂದು ದಕ್ಷಿಣ ದಿಕ್ಕು ದೂಷಿತವಾಗಿದ್ದರೆ ಅಥವಾ ಬಯಲಾಗಿ ಬಿಟ್ಟಿದ್ದರೆ, ಶತ್ರು ಭಯ ಹಾಗೂ ರೋಗ ರುಜಿನಗಳಿಗೆ ಕಾರಣವಾಗುತ್ತದೆ.
- ಒಂದು ವೇಳೆ ಮನೆಯ ದಕ್ಷಿಣ ಭಾಗದ ದ್ವಾರ ಆಗ್ನೇಯ ಕೋನದಲ್ಲಿದ್ದರೆ : ಕಳ್ಳತನ, ಕೋರ್ಟು ವ್ಯಾಜ್ಯ ಅಥವಾ ಅಗ್ನಿಯ ಭಯ ಸದಾಕಾಲ ಕಾಡಿಸಿಕೊಂಡಿರುತ್ತದೆ. ಒಂದು ವೇಳೆ ದ್ವಾರದ ಎದುರಿಗೆ ಯಾವುದಾದರೂ ಗೋಡೆ. ಮನೆ ಇತ್ಯಾದಿ ನಿರ್ಮಾಣಗೊಂಡಿದ್ದರೆ ಇಂತಹ ಸ್ಥಿತಿ ಶುಭಫಲವನ್ನು ನೀಡುವುದಾಗಿರುತ್ತದೆ ಒಂದು ವೇಳೆ ದ್ವಾರದ ಎದುರಿಗೆ ಯಾವುದಾದರೂ ತಗ್ಗು ಬಯಲು ಪ್ರದೇಶ ಅಥವಾ ಕತ್ತಲೆಯಿದ್ದರೆ : ಇಂತಹ ಮನೆಯ ಯಜಮಾನನ ಸಕಲ ಸಹೋದರರು ತುಂಬ ಕಷ್ಟ ಅನುಭವಿಸಿಕೊಂಡಿರುತ್ತಾರೆ.
- ಮನೆಯ ದಕ್ಷಿಣ ದಿಕ್ಕಿನಲ್ಲಿ ಹೆಚ್ಚು ಖಾಲಿ ಸ್ಥಳವಿದ್ದರೆ : ಧನಹಾನಿ, ಆ ಕಾರಣ ಜಗಳ ಹಾಗೂ ಸ್ತ್ರಿಯರ ಮನಸ್ಸಿನಲ್ಲಿ ಅಶಾಂತಿ ತುಂಬಿರುತ್ತದೆ.
- ಒಂದು ವೇಳೆ ದಕ್ಷಿಣ ದಿಕ್ಕಿನಲ್ಲಿ ಪೂಜೆಯ ಕೋಣೆಯಿದ್ದರೆ ಅಥವಾ ಬೆಡ್ ರೂಮ್ ಇದ್ದರೆ : ಮನೆಯ ಯಜಮಾನ ಕೇವಲ ತೋರಿಕೆಗಾಗಿ ಪೂಜೆ-ಪಠನ ಮಾಡುತ್ತಾನೆ. ಶ್ರದ್ದೆಯೊಡನೆ ಆತನಿಗೆ ಯಾವುದೇ ಸಂಬಂಧ ಇರುವುದಿಲ್ಲ.
- ಒಂದು ವೇಳೆ, ಮನೆಯ ದಕ್ಷಿಣ ಭಾಗದಲ್ಲಿ ಪುಸ್ತಕಗಳನ್ನಿರಿಸಿದರೆ - ಮಕ್ಕಳ ವಿದ್ಯಾಭ್ಯಾಸದಲ್ಲಿ ಅಡಚಣೆ ಉಂಟಾಗುತ್ತದೆ.
- ದಕ್ಷಿಣ ಭಾಗದಲ್ಲಿರುವ ಬಾವಿ ದುರ್ಘಟನೆಯ ಸೂಚನೆ ನೀಡುತ್ತದೆ.
- ದಕ್ಷಿಣ ದಿಕ್ಕು ಅಥವಾ ನೈಋತ್ಯ ಕೋನದ ಮಧ್ಯದ ಸ್ನಾನದ ಕೋಣೆಗೆ ತುಂಬ ಉಪಯುಕ್ತ.
- ಒಂದು ವೇಳೆ, ಮನೆಯ ಮುಖ್ಯ ಬಾಗಿಲು ದಕ್ಷಿಣ ಅಭಿಮುಖವಾಗಿದ್ದರೆ: ಮನೆಯ ಬಾಲ್ಕನಿಯನ್ನು ದಕ್ಷಿಣ-ಪೂರ್ವ ದಿಕ್ಕಿನಲ್ಲಿ ನಿರ್ಮಿಸಬೇಕು.
- ಒಂದು ವೇಳೆ, ಜಮೀನಿನ ಮುಖ ದಕ್ಷಿಣ ದಿಕ್ಕಿಗಿದ್ದರೆ : ಮುಖ್ಯದ್ವಾರವನ್ನು ದಕ್ಷಿಣ ದಿಕ್ಕಿನ ನಡುವೆ ಅಥವಾ ಆಗ್ನೇಯ ದಿಕ್ಕಿನಲ್ಲಿ ಕೂಡಿಸಬೇಕು.
- ಒಂದು ವೇಳೆ ನೀವು ಪರಿಸರ ಪ್ರೇಮಿಗಳಾಗಿದ್ದರೆ, ಮನೆಯ ಸುತ್ತ-ಮುತ್ತ ಗಿಡ-ಮರಗಳನ್ನು ಬೆಳೆಸುವ ಇಷ್ಟವಿದ್ದರೆ ದಕ್ಷಿಣ ಅಥವಾ ಪಶ್ವಿಮ ದಿಕ್ಕಿನಲ್ಲಿ ಗಿಡ ಮರಗಳನ್ನು ಬೆಳೆಸಬಹುದು.
- ವಿದ್ಯಾರ್ಥಿಗಳು ಸದಾ ಕಾಲ ಪಶ್ವಿಮ ಅಥವಾ ದಕ್ಷಿಣ ದಿಕ್ಕಿನತ್ತ ತಲೆಮಾಡಿ ಮಲಗಬೇಕು.
- ಮನೆಯ ಯಜಮಾನನ ಮಲಗುವ ಕೋಣಿ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ಇರಬೇಕು. ಅಂದಾಗ ಮಾತ್ರ ಆತನಿಗೆ ಸುಖ ನಿದ್ರೆ ಬರಲು ಸಾಧ್ಯ.
ದಕ್ಷಿಣ ದಿಕ್ಕಿನ ವಾಸ್ತು ದೋಷದ ನಿವಾರಣೆ ಹೇಗೆ ?
- ಮನೆಯ ಯಜಮಾನ ಮಂಗಳನ ವ್ರತ ಮಾಡಬೇಕು. ಅಥವಾ ಭೈರವನಾಥನ ಪೂಜಾ ಪಠಣೆ ಮಾಡಬೇಕು. ಹನುಮಾನ್ ಚಾಲೀಸಾ ಪಠನೆ ಮಾಡಬೇಕು.
- ಗಣಪತಿಯ ಮೂರ್ತಿಯನ್ನು ಮನೆಯೊಳಗೆ ಇರಿಸಬೇಕು.
- ದಕ್ಷಿಣದ ದ್ವಾರಕ್ಕೆ ಮಂಗಳನ ಯಂತ್ರವನ್ನು ಕಟ್ಟಬೇಕು.
- ಮುಖ್ಯದ್ವಾರಕ್ಕೆ ಗಣಪತಿಯ ಫೋಟೋ ಅಂಟಿಸಬೇಕು.
- ದಿಕ್ಕು ದೋಷಯಂತ್ರವನ್ನು ನಿಮ್ಮ ಪೂಜಾ ಕೋಣೆಯಲ್ಲಿ ಸ್ಥಾಪಿಸಬೇಕು.
- ಮನೆಯಲ್ಲಿ ಮಂಗಳ ಪಿರಾಮಿಡ್ ನ ಪ್ರಯೋಗ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಆಧ್ಯಾತಿಕ ಚಿಂತಕರು ಹಾಗೂ ಪುರೋಹಿತರು
ವೇದಬ್ರಹ್ಮ ಶ್ರೀ ಗಣೇಶ್ ಭಟ್ : ಮೊಬೈಲ್ : 9980010722, 9036239373