ಉತ್ತಮ ಸೌಂದರ್ಯ ನಮ್ಮದಾಗಬೇಕಾದರೆ ಮೊಟ್ಟಮೊದಲು ನಮ್ಮ ತ್ವಚೆ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಏಕೆಂದರೆ ತ್ವಚೆಯು ಸೌಂದರ್ಯದ ಪ್ರಮುಖ ಪಾತ್ರ ವಹಿಸುತ್ತದೆ. ತ್ವಚೆಯ ಆರೋಗ್ಯದ ಮೇಲೆ ನಾವು ಸೇವಿಸುವ ಆಹಾರವು ನೇರ ಪರಿಣಾಮವನ್ನುಂಟುಮಾಡುತ್ತದೆ. ನಮ್ಮ ತ್ವಚೆಯು ಸುಂದರವಾಗಿ, ಆರೋಗ್ಯಕರವಾಗಿ, ಕಾಂತಿಯುಕ್ತವಾಗಿ ಇರುವಂತೆ ನೋಡಿಕೊಳ್ಳಬೇಕಾದರೆ ನಾವು ಕೆಲವು ಉಪಾಯಗಳನ್ನು ಅರಿತುಕೊಳ್ಳಬೇಕು ಹಾಗೂ ಅದನ್ನು ಅನುಸರಿಸಬೇಕು.
ಆರೋಗ್ಯಕರ ತ್ವಚೆಯನ್ನು ಪಡೆಯಲು :
- ಹೆಚ್ಚಾಗಿ ನೀರನ್ನು ಕುಡಿಯಬೇಕು. ಇದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಲ್ಮಶಗಳೆಲ್ಲಾ ದೇಹದಿಂದ ಹೊರಹಾಕಲ್ಪಟ್ಟು ಕಲೆಗಳಿಲ್ಲದ ನಿರ್ಮಲವಾದ ತ್ವಚೆ ನಿಮ್ಮದಾಗುತ್ತದೆ. ಹೆಚ್ಚಾಗಿ ನೀರನ್ನು ಕುಡಿಯುವುದರಿಂದ ಚರ್ಮದ ಸುಕ್ಕು ದೂರಾಗುತ್ತದೆ, ಚರ್ಮವು ಕಾಂತಿಯುತವಾಗುತ್ತದೆ.
- ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿ ನಿತ್ಯ ಬಾದಾಮಿಯನ್ನು ತಿನ್ನಬೇಕು. ಬಾದಾಮಿಯಲ್ಲಿ ವಿಟಮಿನ್ ‘ಇ’ ತುಂಬಿದೆ. ಇದು ಆ್ಯಂಟಿಆಕ್ಸಿಡೆಂಟ್ನಂತೆ ಕೆಲಸ ಮಾಡುತ್ತದೆ ಸೂರ್ಯನ ಕಿರಣದಿಂದ ಚರ್ಮಕ್ಕೆ ಆಗುವ ಹಾನಿಯನ್ನು ತಪ್ಪಿಸುತ್ತದೆ.
- ಕಿತ್ತಲೆ ಹಣ್ಣನ್ನು ಹೆಚ್ಚಾಗಿ ತಿನ್ನಬೇಕು. ಅದರಲ್ಲಿರುವ ವಿಟಮಿನ್ ‘ಸಿ’ ಹಾನಿಗೊಂಡ ಚರ್ಮವನ್ನು ಸರಿಪಡಿಸುತ್ತದೆ. ಹಾಗೂ ಇದರಲ್ಲಿರುವ ವಿಟಮಿನ್ ‘ಡಿ’ ರಕ್ತ ಸಂಚಾರವನ್ನು ಉತ್ತಮಗೊಳಿಸಿ ಚರ್ಮವು ಎಲ್ಲಾ ಪೂಷಕಾಂಶಗಳನ್ನು ಪಡೆದುಕೊಂಡು ಆರೋಗ್ಯವಾಗಿರುವಂತೆ ಮಾಡುತ್ತದೆ.
- ಟೊಮ್ಯಾಟೊ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಇದು ಸೂರ್ಯಕಿರಣದಿಂದ ಹಾನಿಗೊಳಗಾದ ಚರ್ಮವನ್ನು ಸರಿಪಡಿಸುತ್ತದೆ ಹಾಗೂ ಮುಖದ ಮೇಲಿನ ಕಪ್ಪುಕಲೆಗಳು ಹಾಗೂ ಮೊಡವೆಗಳನ್ನು ದೂರ ಮಾಡುತ್ತದೆ.
- ಆಗಾಗ ಪಾಲಕ್ ಸೊಪ್ಪನ್ನು ಸೇವಿಸುತ್ತಿರಬೇಕು. ಇದು ಒಣ ಚರ್ಮವಾಗದಂತೆ ರಕ್ಷಿಸುತ್ತದೆ. ಚರ್ಮ ಸುಕ್ಕುಗಟ್ಟುವದನ್ನು ಹಾಗೂ ಮುದಿತನವನ್ನು ಮುಂದೂಡುತ್ತದೆ.
- ಕುಂಬಳಕಾಯಿಯನ್ನು ಬೀಟಾಕೆರಟಿನ್ ಅತಿ ಹೆಚ್ಚಾಗಿದೆ. ಈ ಬೀಟಾಕೆರಟಿನ್ಅನ್ನು ನಮ್ಮ ದೇಹ ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ. ಇದು ಚರ್ಮದ ಕಣಗಳು ಬೆಳೆಯಲು ಸಹಾಯಕಾರಿ ಇದು ಚರ್ಮವನ್ನು ಮೃದುವಾಗಿ ಹಾಗೂ ಸುಕ್ಕುರಹಿತವಾಗಿ ಮಾಡುತ್ತದೆ.
- ಕ್ಯಾರೆಟ್ ನ್ನು ಸೇವಿಸುವುದರಿಂದ ಚರ್ಮವು ಕಾಂತಿಯುತವಾಗುವುದಲ್ಲದೆ ಚರ್ಮದ ಬಣ್ಣವು ಆಕರ್ಷರ್ಣಿಯವಾಗುತ್ತದೆ.
- ಪ್ರತಿ ದಿನ ಸ್ವಲ್ಪ ತುಳಸಿ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಮುಖದ ಕಾಂತಿಯು ಹೆಚ್ಚುತ್ತದೆ ಹಾಗೂ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ.