ಸಿರಿಧಾನ್ಯಗಳನ್ನು ಸೇವಿಸುವುದನ್ನು ಅಭಿವೃದ್ದಿ ಮಾಡಿಕೊಂಡರೆ :
- ಜನರು ಅನೇಕಾನೇಕ ರೋಗಗಳಿಂದ ದೂರ ಉಳಿಯಬಹುದು. ಪ್ರಮುಖವಾಗಿ ರೋಗಗಳನ್ನು ಬಾಗಿಲಿನಂತೆ ಸ್ವಾಗತಿಸುವ ಬಿ.ಪಿ., ಸಕ್ಕರೆ ಕಾಯಿಲೆ, ಬೊಜ್ಜು ಇವುಗಳು ಬರುವುದಿಲ್ಲ. ಈ ಮೂರು ರೋಗಗಳು ಬರದಿದ್ದರೆ ಸಾಮಾನ್ಯವಾಗಿ ಬೇರೆ ಯಾವ ರೋಗಗಳು ಮನುಜನನ್ನು ಕಾಡಲು ಸಾಧ್ಯವಾಗುವುದಿಲ್ಲ. ಬೇರೆ ರೋಗಗಳು ಮನುಜನನ್ನು ಆವರಿಸಿದರೂ ಸಹ ಹೆಚ್ಚು ಕಾಲ ಅವುಗಳು ಉಳಿಯುವುದಿಲ್ಲ.
- ಇವುಗಳ ಸೇವನೆಯಿಂದ ಆಯಸ್ಸು ವೃದ್ಧಿಯಾಗುತ್ತದೆ. ಸಹಜವಾಗಿ ರೋಗಗಳು ಕಡಿಮೆ ಇದ್ದರೆ ಆಯಸ್ಸು ಹೆಚ್ಚಾಗುತ್ತದೆ.
- ಈ ಸಿರಿಧಾನ್ಯಗಳಲ್ಲಿ ಪೌಷ್ಟಿಕಾಂಶಗಳು ಹೆಚ್ಚಾಗಿರುವುದರಿಂದ ಇವುಗಳ ಸೇವನೆಯ ಪ್ರತಿಫಲವಾಗಿ ಅಪಾರ ಶಕ್ತಿ ಮನುಜನಲ್ಲಿ ವೃದ್ದಿಯಾಗುತ್ತದೆ.
- ಈ ಸಿರಿಧಾನ್ಯಗಳನ್ನು ಸೇವಿಸುವುದರಿಂದ ಮನುಜನಲ್ಲಿ ರೋಗನಿರೋಧಕ ಶಕ್ತಿ ಅಪಾರವಾಗಿ ಅಭಿವೃದ್ದಿ ಆಗುತ್ತದೆ.
- ಈ ಸಿರಿಧಾನ್ಯಗಳನ್ನು ಸೇವಿಸುವುದರಿಂದ ಹಲವು ದೌರ್ಭಾಗ್ಯಗಳಿಂದ ದೂರಾಗಬಹುದು.