ಸುವಾಸನೆ ಭರಿತ ಪುದೀನಾ ಬಹುವಾರ್ಷಿಕ ಸಸ್ಯ. ಇದು ಔಷದೀಯ ಗುಣಗಳಿಂದ ಸಮೃದ್ದ. ರೋಗನಿರೋಧಕ ಶಕ್ತಿವೃದ್ದಿಗೆ ಸಹಾಯಕ.
ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್ ಗಳು, ನಾರು ಪದಾರ್ಥ ಹಾಗೂ ಖನಿಜಾಂಶಗಳಿವೆ. ಪುದೀನಾ ಸೊಪ್ಪಿನ ತವರೂರು ಯೂರೋಪ್. ಇದರ ವೈಜ್ಞಾನಿಕ ಸಸ್ಯ ಹೆಸರು ಅವೆರ್ನಿಸ್ ಎಂದು ಇದನ್ನು ಇಂಗ್ಲೀಷ್ ನಲ್ಲಿ ಗಾರ್ಡನ್ ಮಿಂಟ್ ಎಂದು ಸಂಸ್ಕೃತದಲ್ಲಿ ಸುಗಂಧ ಪತ್ರ ವ್ಯಂಜನ ಎಂದು ಕರೆಯುತ್ತಾರೆ.
ಪುದೀನಾ ಸೊಪ್ಪನ್ನು ಜಗತ್ತಿನ ಶೀತ ಹಾಗೂ ಸಮಶೀತೋಷ್ಣ ವಲಯದ ಎಲ್ಲ ಪ್ರದೇಶಗಳಲ್ಲಿಯೂ ಬೆಳೆಯಲಾಗುತ್ತದೆ.
ನೂರು ಗ್ರಾಮ್ ಪುದೀನಾ ಸೊಪ್ಪಿನಲ್ಲಿರುವ ಪೋಷಕಾಂಶಗಳು :
ತೇವಾಂಶ : | 84.9 ಗ್ರಾಂ |
ಸಸಾರಜನಕ : | 4.9 ಗ್ರಾಂ |
ಮೇದಸ್ಸು : | 0.6 ಗ್ರಾಂ |
ಖನಿಜಾಂಶ : | 1.9 ಗ್ರಾಂ |
ಕಾರ್ಬೋಹೈಡ್ರೇಟ್: | 8.8 ಗ್ರಾಂ |
ಕ್ಯಾಲ್ಷಿಯಂ : | 200 ಮಿಲಿ ಗ್ರಾಂ |
ಫಾಸ್ಪರಸ್ : | 62 ಮಿಲಿ ಗ್ರಾಂ |
ಕಬ್ಬಿಣ : | 15.6 ಮಿಲಿ ಗ್ರಾಂ |
ಥಿಯಾಮಿನ್ : | 0.05 ಮಿಲಿ ಗ್ರಾಂ |
ರೈಬೋಪ್ಲಾವಿನ್: | 0.76 ಮಿಲಿ ಗ್ರಾಂ |
ನಿಯಾಸಿನ್ : | 1.0 ಮಿಲಿ ಗ್ರಾಂ |
‘ಸಿ’ ಜೀವಸತ್ವ : | 77 ಮಿಲಿ ಗ್ರಾಂ |
‘ಎ’ ಜೀವಸತ್ವ : | 6100 ಐ.ಯು. |
ಆಕ್ಯಾಲಿಕ್ ಆಮ್ಲ: | 308 ಮಿಲಿ ಗ್ರಾಂ |
ಔಷಧೀಯ ಗುಣಗಳು :
ಪುದೀನಾ ಸೊಪ್ಪಿನಲ್ಲಿ ಹತ್ತು - ಹಲವು ಔಷಧೀಯ ಗುಣಗಳಿವೆ. ಇದು ಅಜೀರ್ಣ, ವಾಕರಿಕೆ, ಅತಿಸಾರ ನಿವಾರಿಸುತ್ತದೆ. ಮಲಬದ್ದತೆ, ತಲೆನೋವು ನಿವಾರಿಸಿ. ಹಸಿವನ್ನು ಹೆಚ್ಚಿಸುತ್ತದೆ. ಪಿತ್ತಕೋಶವನ್ನು ಬಲಪಡಿಸುತ್ತದೆ. ದೇಹದ ಆರೋಗ್ಯ ಸಮತೋಲನದಲ್ಲಿರಿಸುತ್ತದೆ. ಇದರಿಂದ ದೇಹಕ್ಕೆ ಶಕ್ತಿ, ನವಚೈತನ್ಯ ಸಿಗುತ್ತದೆ. ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ. ಚರ್ಮದ ಸೌಂದರ್ಯ ವೃದ್ದಿಸುತ್ತದೆ. ಇದು ಒಂದು ಮಸಾಲೆಯುಕ್ತ ತರಕಾರಿ ಸೊಪ್ಪು. ಇದು ಸುವಾಸನೆಯುಕ್ತವಾಗಿ, ಕಪ್ಪು ಹಸಿರು ಬಣ್ಣಯುಕ್ತ ಕಡ್ಡಿಯಾಕಾರದಲ್ಲಿ ಕಾಂಡಯುಕ್ತ ಗಿಡವೂ ಅಲ್ಲ ಬಳ್ಳಿಯೂ ಅಲ್ಲ. ಇದು ಔಷಧಿಯುಕ್ತ ಸಾಮಾನ್ಯವಾಗಿ ಮಾಸಾಲೆ ಅಡುಗೆಗಳಾದ ಮಾಂಸ, ಕೋಳಿ, ಬಿರ್ಯಾನಿ, ಕೈಮಾ ಹೀಗೆ ಅನೇಕ ಮಾಂಸಾಹಾರ ತಿಂಡಿಗಳಿಗೆ, ಚಟ್ನಿ, ಪುಲಾವ್, ಬಜ್ಜಿ, ಚಿತ್ರಾನ್ನ ಬಾತ್ ಗಳಲ್ಲಿ ಸಸ್ಯಾಹಾರಿಗಳು ಉಪಯೋಗಿಸುತ್ತಾರೆ.