ಇಂದಿನ ಆಧುನಿಕ ಬದುಕಿನಲ್ಲಿ ವಾಹನಗಳು ಜೀವನದ ಅವಿಭಾಜ್ಯ ಅಂಗವೆನಿಸಿವೆ. ವಾಹನಗಳಿಲ್ಲದ ಮನೆಯೇ ಇಲ್ಲವೆಂದರೆ ಅತಿಶಯೋಕ್ತಿಯಾಗುವುದಿಲ್ಲ. ಹಿಂದಿನ ಕಾಲದಲ್ಲಿ ವಾಹನಗಳನ್ನಿಟ್ಟುಕೊಳ್ಳುವುದು ಪ್ರತಿಷ್ಠೆಯ ಸಂಕೇತವೆನಿಸಿದರೆ ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ಅವಶ್ಯಕತೆಯ ವಸ್ತುವಾಗಿರುತ್ತದೆ. ಇದಲ್ಲದೆ ವಾಹನಗಳು ಕೆಲವರು ಜೀವನದಲ್ಲಿ ಆನ್ನ ನೀಡುವ ದೇವರು. ಲಾರಿ ಟ್ರಕ್, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಟೆಂಪೋಗಳು, ಟೆಂಪೂ ಟ್ರಾವಲರ್ ನಂತಹ ವಾಹನಗಳನ್ನಿಂಟುಕೊಂಡ ಅನೇಕರು ಅದರಿಂದಲೇ ತಮ್ಮ ಕುಟುಂಬ ನಿರ್ವಹಣೆ ಮಾಡಿ ಉದ್ಯೋಗಗಳನ್ನು ನೀಡಿ ಅನ್ನದಾತರಾಗಿದ್ದಾರೆ.
ಸಾಲ, ಸೋಲ ಮಾಡಿಕೊಂಡು, ಕೊಂಡ ವಾಹನಗಳು ಅಪಘಾತಗಳಿಲ್ಲದೆ, ರಿಪೇರಿಗೆ ಬರದೆ, ಕಂಪನಿಯವರು ನೀಡಿರುವ ಕನಿಷ್ಟ ಕಿಲೋ ಮೀಟರ್ ಗಳಷ್ಟು ದೂರವಾದರೂ ಓಡಿದರೆ ಸ್ವಲ್ಪ ಹಣದ ಉಳಿತಾಯವಾಗಬಲ್ಲದು. ಅದಿಲ್ಲದೆ ದಿನ ಬೆಳಗಾದರೆ ರಿಪೇರಿಗಳು, ಇಲ್ಲವೇ ಸರಿಯಾದ ಸಮಯಕ್ಕೆ ಡೈವರ್ ಗಳು ಬರದಿರುವುದು ಅಥವಾ ಗಿರಾಕಿಗಳೇ ಸಿಕ್ಕದೆ ಹೋದರೆ ಬ್ಯಾಂಕುಗಳು ನೀಡಿರುವ ಸಾಲದ ಕಂತುಗಳನ್ನು ಕಟ್ಟಿ ಜೀವನ ಮಾಡುವುದಾದರೂ ಹೇಗೆ? ಹೊಸ ವಾಹನಗಳಿಂದಲೇ ಅದೃಷ್ಟ ಬರುತ್ತದೆಯೆಂಬುದು ಖಾತರಿಯೇನು ಇರುವುದಿಲ್ಲ. ಎಷ್ಟೋ ಹಳೆಯ ವಾಹನಗಳೇ ಉತ್ತಮವಾಗಿ ನಡೆದು ಲಾಭ ಮಾಡುತ್ತವೆ.
ಇದಕ್ಕೇನು ಕಾರಣ...?
ವಾಹನಗಳು ಆಗಿ ಬರಬೇಕು ಅಪ್ಟೇ. ವಾಹನಗಳ ಸಂಖ್ಯೆಗಳು ನಮ್ಮ ಹೆಸರಿನ ಬಲಕ್ಕೆ ಚೆನ್ನಾಗಿ ಆಗಿ ಬಂದರೆ ಸಾಕು. ಎಲ್ಲವೂ ಚೆನ್ನಾಗಿಯೇ ನಡೆಯುತ್ತವೆ. ಸಂಖ್ಯೆ 4,7, ಮತ್ತು 8 ರ ಸಂಖ್ಯೆಗಳು ದುರದೃಷ್ಟಕರ ಸಂಖ್ಯೆಗಳೆಂದು ಯಾರೂ ತಿಳಿಯಬಾರದು. ಅವುಗಳು ನಮಗೆ ಸರಿಹೊಂದುವಂತಿದ್ದರೆ ಸರಿ, ಏನೂ ತೊಂದರೆಯಾಗುವುದಿಲ್ಲ.
ವಾಹನಗಳ ಸಂಖ್ಯೆಗಳು ನಮಗೆ ಹೊಂದಿಕೊಂಡಿರುವುದು ಬಹಳ ಮುಖ್ಯ ಅವರವರ ಜನ್ಮ ಸಂಖ್ಯೆಗಳೇ ವಾಹನ ಸಂಖ್ಯೆಗಳಾಗಿದ್ದರೆ ಅತ್ಯುತ್ತಮ. ಯಾವ ದೃಪ್ಟಿಯಿಂದ ನೋಡಿದರೂ ಅದನ್ನು ಆಯ್ಕೆ ಮಾಡಿಕೊಳ್ಳುವುದು ಶ್ರೇಷ್ಠಮಾರ್ಗ. ಜನ್ಮ ಸಂಖ್ಯೆ 1 ಆಗಿದ್ದರೆ ಅವರ ವಾಹನದ ಎಲ್ಲಾ ಅಕ್ಷರಗಳು ಮತ್ತು ಸಂಖ್ಯೆಗಳನ್ನು ಕೂಡಿಸಿದಾಗ ಬರುವ ಸಂಖ್ಯೆ ಒಂದೇ ಆಗಿರಬೇಕು.
ಉದಾಹರಣೆ:
ಜನನ: 10.01.1950
ಜನ್ಮ ಸಂಖ್ಯೆ: 10=1+0=1
ವಾಹನ ಸಂಖ್ಯೆ: KA-05-1721
ಇಲ್ಲಿ ಕೆ.ಎ ಅಕ್ಷರಗಳು, ಅವುಗಳಿಗೆ ಸೂಚಿಸಿರುವ ಸಂಖ್ಯೆಗಳನ್ನೂ ಲೆಕ್ಕಕ್ಕೆ ತಗೆದುಕೊಂಡು ಒಟ್ಟು ಮೊತ್ತವನ್ನು ನೋಡಬೇಕು.
KA-05-1721 K=2. A=1
=(2+1) + (0+5) +(1+7+2+1)
=3+5+2 =10= 1+0=1
ಜನ್ಮ ಸಂಖ್ಯೆ-1 ವಾಹನ ಸಂಖ್ಯೆ-1 ಇವುಗಳ ಜೊತೆಯಲ್ಲಿ ಹೆಸರಿನ ಸಂಖ್ಯೆಯೂ ಒಂದೇ ಆಗಿದ್ದರೆ ಅತ್ಯುತ್ತಮವಾಗಿರುತ್ತದೆ.
ಅಕ್ಷರಗಳಿಗೆ ನಿಗದಿಪಡಿಸಿರುವ ಸಂಖ್ಯೆಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಕೆಲವರು ಅಕ್ಷರಗಳನ್ನು ಬಿಟ್ಟು ಬರೀ ಸಂಖ್ಯೆಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಇದು ತಪ್ಪು, ಅಕ್ಷರಗಳನ್ನು ಯಾವ ಕಾರಣಕ್ಕೂ ಬಿಡಬಾರದು. ಅವೆಲ್ಲವುಗಳನ್ನು ಒಟ್ಟಾಗಿಯೇ ತೆಗೆದುಕೊಂಡು ತೀರ್ಮಾನಿಸಬೇಕು.
ಒಂದು ವೇಳೆ ಜನ್ಮಸಂಖ್ಯೆಯ ನಂಬರಿನ ವಾಹನಗಳು ಸಿಗದಿರಬಹುದು, ಅಂತಹ ಪರಿಸ್ಥಿತಿಯಲ್ಲಿ ಕನಿಷ್ಟ ಮಿಶ್ರ ಸಂಖ್ಯೆಯ ವಾಹನಗಳಾಗಿದ್ದರೆ ಪರವಾಗಿಲ್ಲ. ಆದರೆ ವಿರೋಧಿ ಸಂಖ್ಯೆಗಳಿರಬಾರದು. ಅದರಿಂದ ತೊಂದರೆಗಳು ತಪ್ಪಿದಲ್ಲ.
ಉದಾಹರಣೆ :
ಜನ್ಮ ಸಂಖ್ಯೆ 1 ನ್ನು ಹೊಂದಿರುವವರು ವಾಹನ ಸಂಖ್ಯೆ 4, 7 ಮತ್ತು 8 ಆಗಿರಬಾರದು. ಆಗಿದ್ದರೆ ಏನಾದರೂ ಅಡ್ಡಿ ಆತಂಕಗಳು ಸೃಪ್ಟಿಯಾಗುತ್ತಲೇ ಇರುತ್ತವೆ.
ಸಂಖ್ಯೆ | ಗ್ರಹ | ತೊಂದರೆ ನೀಡುವ ಸಂಖ್ಯೆಗಳು | ಗ್ರಹಗಳು |
01 | ಸೂರ್ಯ | 4, 7,8 | ರಾಹು, ಕೇತು, ಶನಿ |
02 | ಚಂದ್ರ | 4, 7 | ರಾಹು, ಕೇತು |
03 | ಗುರು | 6 | ಶುಕ್ರ |
04 | ರಾಹು | 1, 2 | ಸೂರ್ಯ, ಚಂದ್ರ |
05 | ಬುಧ | 9 | ಕುಜ |
06 | ಶುಕ್ರ | 3 | ಗುರು |
07 | ಕೇತು | 1,2 | ಸೂರ್ಯ, ಚಂದ್ರ |
08 | ಶನಿ | 1 | ರವಿ |
09 | ಕುಜ | 5 | ಬುಧ |
ತೊಂದರೆ ನೀಡುವ ಅಥವಾ ಜನ್ಮಸಂಖ್ಯೆಗೆ ವಿರುದ್ದವಾಗಿರುವ ಸಂಖ್ಯೆಗಳಿರುವ ವಾಹನಗಳನ್ನು ಉಪಯೋಗಿಸಬಾರದು.
ಹೆಚ್ಚಿನ ವಿವರಗಳು ಬೇಕಿದ್ದರೆ ಸಂಪರ್ಕಿಸಿ: ಆಧ್ಯಾತಿಕ ಚಿಂತಕರು ಹಾಗೂ ಪುರೋಹಿತರಾದ ವೇದಬ್ರಹ್ಮ ಶ್ರೀ ಗಣೇಶ್ ಭಟ್ : ಮೊಬೈಲ್ : 9980010722, 9036239373