Date: 18 Jan 2025 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜ್ಯೋತಿಷ್ಯ » ಆಧ್ಯಾತ್ಮಿಕ

ಗುರು ಪೂರ್ಣಿಮಾ – ಗುರುವಿನ ಮಹತ್ವ (ವೈಶಿಷ್ಟ್ಯ)


05 Jul 2020

ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮೆ ಆಚರಣೆ ಇದೆ.

ವ್ಯಾಸರನ್ನು ನಾವು ಆದಿ ಗುರು ಎಂದೂ ಪೂಜಿಸುತ್ತೇವೆ. ಗುರು ಪೂರ್ಣಿಮೆ ಎನ್ನುವುದು ಗುರುಗಳ ಸ್ಮರಣೆಗೆ ಹಾಗೂ ಅವರ ಆಶೀರ್ವಾದ ಪಡೆಯಲು ಇರುವ ಒಂದು ಸುಸಂದರ್ಭ ಎನ್ನಬಹುದು.

ಗುರುವಿನ ಆಶೀರ್ವಾದ ಅಥವಾ ಹಾರೈಕೆಯು ಇದ್ದರೆ ವ್ಯಕ್ತಿ ಜೀವನದಲ್ಲಿ ಅತ್ಯಂತ ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತಾನೆ ಎನ್ನಲಾಗುವುದು. ಗುರು ಎನ್ನುವ ಎರಡು ಪದಗಳೇ ಅತ್ಯುತ್ತಮ ಅರ್ಥವನ್ನು ನೀಡುತ್ತವೆ.

ನಿಜವಾದ ಗುರು ಯಾರು?
ಗುರು ಎಂದರೆ ಯಾರು :–
ವಿದ್ಯಾದಾನ ಮಾಡುವವನು ಉಪಾಧ್ಯಾಯ , ಶಿಕ್ಷಕ ಉಪದೇಶಿಸುವವನು ಎಂದರ್ಥ ಗುರು ಎಂಬ ಪದದಲ್ಲಿನ ‘ಗು’ ಎಂಬ ಅಕ್ಷರಕ್ಕೆ ಅಂಧಕಾರವೆಂದು ‘ರು’, ಎಂಬುದಕ್ಕೆ ಅದನ್ನು ನಿರೋಧಿಸುವವನೆಂದು ಅರ್ಥೈಸುತ್ತಾರೆ.

ಗುರು ಪೂಜೆ ಮಾಡದೇ ಯಾವ ಕಾರ್ಯವನ್ನು ಆರಂಭಿಸಬಾರದು. ತಂದೆಯನ್ನು ಉಪನಯನ ಮಾಡಿದವನನ್ನು ವಿದ್ಯಾದಾನ ಮಾಡಿದವನನ್ನು ಅನ್ನದಾತನನ್ನು ಭಯದಲ್ಲಿ ರಕ್ಷಿಸಿದವನನ್ನು ಈ ಐವರನ್ನು ಗುರುಗಳೆಂದು ಪರಿಗಣಿಸುತ್ತಾರೆ.

ಪ್ರಾಚೀನ ಭಾರತದ ಶಿಕ್ಷಣ ಪದ್ದತಿಯಲ್ಲಿ ಶಿಷ್ಯರನ್ನು ಗುರು ತನ್ನಾಶ್ರಮಕ್ಕೆ ಬರಮಾಡಿಕೊಂಡು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳೆರಡನ್ನು ನೀಡುತ್ತಿದ್ದರು.

ಶಿಷ್ಯರು ತಮ್ಮ ಗುರುವಿನ ಬಗ್ಗೆ ಅನನ್ಯ ಭಕ್ತಿಯಿಂದ ಇದ್ದು ವಿದ್ಯಾರ್ಜನೆ ಮಾಡುತ್ತಿದ್ದರು. ಆ ಗುರುಗಳ ಆಶ್ರಮದಲ್ಲಿದ್ದು ಅವರ ಸೇವೆ ಮಾಡಿ ಅವರ ಮನೆಯ ಎಲ್ಲ ಕೆಲಸಗಳನ್ನು ಭಕ್ತಿಯಿಂದ ಶ್ರದ್ದೆಯಿಂದ ಶುದ್ಧ ಮನಸ್ಸಿನಿಂದ ಸ್ವಾರ್ಥರಹಿತನಾಗಿ ಮಾಡಿ ಗುರುಕೃಪೆಗೆ ಪಾತ್ರನಾಗುತ್ತಿದ್ದನು. ಅಂಥ ಶಿಷ್ಯನಿಗೆ ಗುರು ಅನುಗ್ರಹ ಮಾಡುತ್ತಿದ್ದನು.

ಗುರು ಪೀಠ ಪರಂಪರೆಯ ಮಹತ್ವ ಇಂದಿಗೂ ಇದೆ.

ಗುರುವಿನ ಅವಶ್ಯಕತೆ :–
ಎಲ್ಲ ಧಾರ್ಮಿಕ ಪಂಥಗಳಿಗೂ ಒಬ್ಬ ಗುರು ಇದ್ದಾನೆ. ಆ ಪಂಥ ಮುಂದುವರೆಯ ಬೇಕಾದರೆ ಅವನ ಅವಶ್ಯವಿದೆ. ಆದಿ ಗುರುವಿನಿಂದ ಪರಂಪರಾನುಗತವಾಗಿ ಮುಂದಿನ ಗುರುಗಳಿಗೆ ಹಸ್ತಗತವಾಗುತ್ತ ಬಂದಿರುವ ಆ ಸತ್ಯದರ್ಶನ ಕೇವಲ ಮಂತ್ರ ಪಠಣದಿಂದ ಲಭ್ಯವಾಗುತ್ತಿಲ್ಲ.

ಅದು ಗುರು ಮುಖೇನ ಲಭಿಸಬೇಕು. ಗುರು ಅನುಗ್ರಹಿಸುವ ದೀಕ್ಷೆಯಿಂದ ಮಾತ್ರ ಸಾಧ್ಯ ಧ್ಯಾನಮಾರ್ಗವು ಕಠಿಣವು ಮತ್ತು ದುರ್ಗಮವೂ ಆಗಿದೆ. ಅದಕ್ಕೆ ಪೂರ್ವಭಾಗಿಯಾಗಿ ಸಾಧಿಸಬೇಕಾದ ಶಾಂತಿ ಸಂಯಮಗಳು ಬೇಕು. ಅವುಗಳನ್ನು ಅನುಷ್ಠಾನಕ್ಕೆ ತರಲು ಸಮರ್ಥ ಗುರುವಿನ ನಿರ್ದೇಶನ ಬೇಕು. ಆದ್ದರಿಂದ ಯಾವದೇ ಧರ್ಮದ ಅನುಷ್ಠಾನಕ್ಕೆ ಯೋಗ್ಯ ಆದರ್ಶ ಸತ್ಪರಂಪರೆ ರಕ್ಷಿಸಿ ಪೋಷಿಸಿಕೊಂಡು ಹೋಗಲು ಒಬ್ಬ ಗುರುಬೇಕು.

ಈ ದಿನದ ಮಹತ್ವ ( ವೈಶಿಷ್ಟ್ಯ)
ನಮ್ಮ ಜೀವನವನ್ನು ಸಾರ್ಥಕಗೊಳಿಸಿದ ಗುರುವನ್ನು ಸ್ಮರಿಸುವ ದಿನ.

ನಮ್ಮ ವೇದಗಳು ಆಚಾರ್ಯ ದೇವೋಭವ ಎಂದು ಗುರುಗಳನ್ನು ಮನಸಾ ಗೌರವಿಸಿದ್ದಲ್ಲದೆ ಅವರಿಗೆ ತಂದೆ – ತಾಯಿಗಳಿಗಿಂತ ಮಿಗಿಲಾದ ಸ್ಥಾನವನ್ನೂ ನೀಡಿದೆ.

ಗುರು ಹೇಗಿರುವನು ಎಂಬ ತತ್ವ ಸಾರುವ ಒಂದು ಸುಭಾಷಿತ ಹೀಗಿದೆ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ದೇವ ತಸ್ಮೈ ಶ್ರೀ ಗುರುವೇ ನಮಃ

ಇದರ ಅರ್ಥ – ಶಿಷ್ಯನ ಅಜ್ಞಾನವೆಂಬ ಕಣ್ಣು ಬೇನೆಯನ್ನು ಜ್ಞಾನವೆಂಬ ಕಣ್ಣು ಬೇನೆಯನ್ನು ಜ್ಞಾನವೆಂಬ ಅಂಜನದಿಂದ (ಕಡ್ಡಿಯಿಂದ) ಗುಣ ಪಡಿಸಿ, ಅವನ ಕೀರ್ತಿ ಎಲ್ಲಡೆ ಪಸರಿಸುವಂತೆ ಮಾಡಿದ ಶ್ರೀ ಗುರುವಿಗೆ ಕೃತಜ್ಞತೆ ಅಥವಾ ನಮಸ್ಕಾರಗಳು ಇಂಥ ಗುರುವಿಗೆ ವಂದಿಸಿ ನಾವು ಕಾರ್ಯೋನ್ಮುಖರಾದಾಗ ಬಾಳಿನಲ್ಲಿ ಸುಖ ಸಂಪತ್ತು ಖಚಿತ. ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಾತ್ರ ಕಾರ್ಯಗಳಲ್ಲಿ ಯಶಸ್ಸು ನಿಶ್ಚಿತ ದೇವರಿಗಿಂತ ಗುರು, ಗುರುವಿಗಿಂತ ಗುರುಕೃಪೆ ದೊಡ್ಡದು. ರಾಮ, ಕೃಷ್ಣರೂ ಸಹ ವಿಶಿಷ್ಠ ವಿಶ್ವಾಮಿತ್ರ ಸಾಂದೀಪನಿಗಳಂಥ ಗುರುಗಳ ಸೇವೆ ಮಾಡಿ ಫಲ ಪಡೆದವರು.

‘ನಹಿಃ ಜ್ಞಾನೇನ ಮುಕ್ತಿಃ’ ಜ್ಞಾನವಿಲ್ಲದೆ ಮುಕ್ತಿಯಿಲ್ಲವೆಂದು ಮೂರು ಶಬ್ಧಗಳ ಮೂಲಕ ಮಾನವ ಜಾತಿಗೆ ದಾರಿ ತೋರಿದ್ದಾರೆ ಮಹಾತ್ಮರು. ಮಾನವನು ಜನ್ಮಜನ್ಮಾಂತರದಿಂದ ಕರ್ಮ ಸಂಸ್ಕಾರಗಳ ಜಂಜಾಟದೊಳಗೆ ಮುಳುಗಿದ್ದಾನೆ. ಎಲ್ಲಿಯವರೆಗೆ ಕರ್ಮಬಂಧನದಿಂದ ಮುಕ್ತಿ ಇಲ್ಲವೋ ಅಲ್ಲಿಯವರೆಗೆ ಬ್ರಹ್ಮನೊಡನೆ ಒಂದಾಗಲು ಸಾಧ್ಯವಿಲ್ಲ. ಸದ್ಗುರುವು ಜ್ಞಾನವೆಂಬ ಕತ್ತರಿಯಿಂದ ಕರ್ಮಬಂಧನವನ್ನು ತೆಗೆದು ಹಾಕುತ್ತಾನೆ. ಆದ್ದರಿಂದ ಜ್ಞಾನವನ್ನು ಕೊಡುವವನೇ ಸದ್ಗುರು. ಜ್ಞಾನವೆಂದರೆ ನಮ್ಮ ಬುದ್ಧಿ ಮತ್ತು ಶಾಸ್ತ್ರಗಳಲ್ಲಿರುವ ಅರಿವೂ ಆಗಿದೆ. ಇವುಗಳೆಲ್ಲವೂ ನಮ್ಮ ಪಂಚೇಂದ್ರಿಗಳ ಮೂಲಕ ಪ್ರಾಪ್ತವಾಗುತ್ತದೆ.

ಕೆಲವು ಮಹಾಜ್ಞಾನಿಗಳು ನಾನು ಯಾರೆಂದು ತಿಳಿಯುವುದೇ ಜ್ಞಾನವೆಂದಿದ್ದಾರೆ. ಭಗವಾನ ರಮಣ ಮಹರ್ಷಿಗಳೂ ಇದನ್ನೇ ಹೇಳುತ್ತಾರೆ. ಇದನ್ನು ತಿಳಿಯಲು ಸರಿಯಾದ ಸದ್ಗುರು ಬೇಕಾಗುವುದು. ಪುರಂದರ ದಾಸರೂ ಸಹ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದಿದ್ದಾರೆ.

ಆಧ್ಯಾತಿಕ ಚಿಂತಕರು ಹಾಗೂ ಪುರೋಹಿತರು
ವೇದಬ್ರಹ್ಮ ಶ್ರೀ ಗಣೇಶ್ ಭಟ್ :
ಮೊಬೈಲ್ : 9980010722, 9036239373

Share on:

City Information

(Private)