ಪ್ರತಿಯೊಂದು ನಕ್ಷತ್ರಕ್ಕೂ 4 ಪಾದಗಳಿದ್ದು, ಮೊದಲಕ್ಷರ ಈ ಕ್ರಮವಾಗಿ ಇರುತ್ತವೆ. ಒಂದೊಂದು ನಕ್ಷತ್ರ ಚರಣಕ್ಕೂ ಒಂದು ಹೆಸರಿನ ಮೊದಲ ಅಕ್ಷರ ತಿಳಿಯುವುದು.
ಅಶ್ವಿನಿ ನಕ್ಷತ್ರ: ಅಶ್ವಿನಿ ನಕ್ಷತ್ರಕ್ಕೆ ಚು, ಚೆ, ಚೊ, ಲ ಅಕ್ಷರಗಳು ಬರುತ್ತದೆ. ಕಾರಣ ಅಶ್ವಿನಿ ನಕ್ಷತ್ರದ 1ನೇ, 2ನೇ, 3ನೇ, 4ನೇಪಾದದಲ್ಲಿ ಜನಿಸಿದ ಶಿಶುವಿಗೆ, ಉದಾ: ಚುಕ್ಕಿ, ಚೆಲುವೆ, ಚೋಳಪ್ಪ, ಲಲಿತಾ. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಇಡಬಹುದು.
ಭರಣಿ ನಕ್ಷತ್ರ: ಈ ನಕ್ರತ್ರಕ್ಕೆ ಲಿ, ಲೂ, ಲೇ, ಲೋ ಅಕ್ಷರಗಳು ಬರುತ್ತವೆ. ಕಾರಣ ಭರಣಿ ನಕ್ಷತ್ರದ 1, 2, 3, 4,ನೇ ಪಾದದಲ್ಲಿ ಹುಟ್ಟಿದ ಮಗುವಿಗೆ ಕ್ರಮವಾಗಿ ಲೀಲಾ, ಲೂಪಿಕ, ಲೇಪನ, ಲೋಪಮುದ್ರ ಎಂದು ಹೆಸರಿಡಬಹುದು.
ಕೃತಿಕಾ ನಕ್ಷತ್ರ: ಈ ನಕ್ಷತ್ರಕ್ಕೆ ಅ, ಇ, ಊ, ಎ ಅಕ್ಷರಗಳು ಬರುತ್ತವೆ. ಕಾರಣ ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದ ಮಗುವಿಗೆ ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನಿಡಬಹುದು.
ರೋಹಿಣೆ ನಕ್ಷತ್ರ: ರೋಹಿಣೆ ನಕ್ಷತ್ರಕ್ಕೆ ಒ, ವ, ವಿ,ವು, ಅಕ್ಷರಗಳು ಬರುತ್ತವೆ.
ಮೃಗಶಿರಾ ನಕ್ಷತ್ರ: ಈ ನಕ್ಷತ್ರಕ್ಕೆ ವೇ, ವೂ, ಕ, ಕಿ, ಅಕ್ಷರಗಳು ಬರುತ್ತವೆ.
ಅರಿದ್ರಾ ನಕ್ಷತ್ರ: ಈ ನಕ್ಷತ್ರಕ್ಕೆ ಕೂ, ಘ, ಛ, ಅಕ್ಷರಗಳು ಬರುತ್ತವೆ.
ಪುನರ್ವಸು ನಕ್ಷತ್ರ: ಪುನರ್ವಸು ನಕ್ಷತ್ರದಲ್ಲಿ ಹುಟ್ಟಿದವರು ಕೆ,ಕೋ, ಹ, ಹೇ ಅಕ್ಷರಗಳನ್ನು ಹೆಸರಿನ ಮೊದಲು ಅಕ್ಷರವಾಗಿ ಇಟ್ಟುಕೊಳ್ಳಬಹುದು.
ಪುಷ್ಯ ನಕ್ಷತ್ರ: ಈ ನಕ್ಷತ್ರಕ್ಕೆ ಹೂ, ಹೇ, ಹೋ. ಡಾ. ಅಕ್ಷರಗಳು ಹೆಸರಿನ ಪ್ರಥಮ ಅಕ್ಷರವಾಗುತ್ತವೆ.
ಆಶ್ಲೇಷಾ ನಕ್ಷತ್ರ: ಈ ನಕ್ಷತ್ರಕ್ಕೆ ಡೀ, ಡೂ, ಡೇ, ಡೋ ಅಕ್ಷರಗಳು ಬರುತ್ತವೆ.
ಮಘಾ ನಕ್ಷತ್ರ: ಈ ನಕ್ಷತ್ರಕ್ಕೆ ಮಾ, ಮೀ, ಮೂ, ಮೂ, ಮೇ, ಅಕ್ಷರಗಳು ಬರುತ್ತವೆ.
ಹುಬ್ಬಾ ನಕ್ಷತ್ರ: ಈ ನಕ್ಷತ್ರಕ್ಕೆ ಮೋ, ಟಾ, ಟೀ, ಟೂ, ಅಕ್ಷರಗಳು ಬರುತ್ತವೆ
ಉತ್ತರಾ ನಕ್ಷತ್ರ: ಈ ನಕ್ಷತ್ರಕ್ಕೆ ಟೇ, ಟೋ, ವಾ, ಪೀ, ಅಕ್ಷರಗಳು ಬರುತ್ತವೆ.
ಹಸ್ತಾ ನಕ್ಷತ್ರ: ಹಸ್ತಾ ನಕ್ಷತ್ರಕ್ಕೆ ಪೂ, ಷ, ಣಾ, ಢಾ, ಅಕ್ಷರಗಳು ಬರುತ್ತವೆ.
ಚಿತ್ತಾ ನಕ್ಷತ್ರ: ಚಿತ್ತಾ ನಕ್ಷತ್ರಕ್ಕೆ ಪೇ, ಪೋ, ರಾ, ರೀ ಅಕ್ಷರಗಳು ಹೆಸರಿನ ಮೊದಲಕ್ಷರವಾಗಿ ಬರುತ್ತವೆ.
ಸ್ವಾತಿ ನಕ್ಷತ್ರ: ಸ್ವಾತಿ ನಕ್ಷತ್ರಕ್ಕೆ ರೂ. ರೇ, ರೋ, ತಾ, ಅಕ್ಷರಗಳು ಹೆಸರಿನ ಮೊದಲಕ್ಷರವಾಗಿ ಬರುತ್ತವೆ.
ವಿಶಾಖಾ ನಕ್ಷತ್ರ: ಈ ನಕ್ಷತ್ರಕ್ಕೆ ತೀ. ತೂ, ತೇ, ತೋ, ಅಕ್ಷರಗಳು ಹೆಸರಿನ ಮೊದಲಕ್ಷರವಾಗಿ ಬರುತ್ತವೆ.
ಅನುರಾಧಾ ನಕ್ಷತ್ರ: ಈ ನಕ್ಷತ್ರಕ್ಕೆ ನಾ, ನೀ, ನೂ, ನೇ ಅಕ್ಷರಗಳು ಹೆಸರಿನ ಮೊದಲಕ್ಷರವಾಗುತ್ತವೆ.
ಜ್ಯೇಷ್ಠಾ ನಕ್ಷತ್ರ: ಈ ನಕ್ಷತ್ರಕ್ಕೆ ನೋ, ಯಾ, ಯೀ, ಯೂ ಇವುಗಳಿಂದ ಪ್ರಾರಂಭವಾಗುವ ಹೆಸರಿಡಬಹುದು.
ಮೂಲಾ ನಕ್ಷತ್ರ: ಈ ನಕ್ಷತ್ರಕ್ಕೆ ಯೇ, ಯೋ, ಬಾ, ಬಿ, ಅಕ್ಷರವಾಗಿ ಬರುತ್ತವೆ.
ಪೂರ್ವಾಷಾಡ ನಕ್ಷತ್ರ: ಪೂರ್ವಾಷಾಡ ನಕ್ಷತ್ರದಲ್ಲಿ ಹುಟ್ಟಿದವರ ಹೆಸರಿನ ಮೊದಲಕ್ಷರ ಬು, ಧ, ಭ, ಡ ಇರುತ್ತವೆ.
ಉತ್ತರಾಷಾಢ ನಕ್ಷತ್ರ: ಉತ್ತರಾಷಾಢ ನಕ್ಷತ್ರದವರಿಗೆ ಬೆ, ಬೋ, ಜಾ, ಜೀ ನಿಂದ ಹೆಸರು ಪ್ರಾರಂಭವಾಗುತ್ತದೆ
ಶ್ರವಣ ನಕ್ಷತ್ರ: ಶ್ರವಣ ನಕ್ಷತ್ರದಲ್ಲಿ ಹುಟ್ಟಿದವರ ಪಾದದ ಕ್ರಮವಾಗಿ ಶಿ, ಶೂ, ಶೆ, ಶೋ, ಇವುಗಳಿಂದ ಪ್ರಾರಂಭವಾಗುತ್ತದೆ.
ಧನಿಪ್ಠಾ ನಕ್ಷತ್ರ: ಧನಿಷ್ಠಾ ನಕ್ಷದಲ್ಲಿ ಹುಟ್ಟಿದವರ ಹೆಸರಿನ ಪಾದದ ಕ್ರಮವಾಗಿ ಗ, ಗೀ, ಗೂ, ಗೇ, ಇವುಗಳಿಂದ ಪ್ರಾರಂಭವಾಗುತ್ತವೆ.
ಶತಭಿಷ ನಕ್ಷತ್ರ: ಶತಭಿಷ ನಕ್ಷತ್ರದವರಿಗೆ ಗೋ, ಸಾ, ಸೀ, ಸೂ ಇವುಗಳಿಂದ ಹೆಸರು ಪ್ರಾರಂಭವಾಗುತ್ತದೆ.
ಪೂರ್ವಾಭದ್ರಾ ನಕ್ಷತ್ರ: ಪೂರ್ವಾಭದ್ರಾ ನಕ್ಷತ್ರದವರ ಹೆಸರು ಸೇ, ಸೋ, ದಾ, ದಿ, ಇವುಗಳಿಂದ ಪ್ರಾರಂಭವಾಗುತ್ತವೆ.
ಉತ್ತರಾಭದ್ರ ನಕ್ಷತ್ರ: ಈ ನಕ್ಷತ್ರದಲ್ಲಿ ಜನಿಸಿದವರು,ದು, ಖ, ಝ, ಥ, ಈ ಅಕ್ಷರಗಳನ್ನು ಇಡಬಹುದು.
ರೇವತಿ ನಕ್ಷತ್ರ: ರೇವತಿ ನಕ್ಷತ್ರದವರ ಹೆಸರು ದೇ, ದೋ, ಚ,ಚಿ,ಇವುಗಳಿಂದ ಪ್ರಾರಂಭವಾಗುತ್ತವೆ.
ಹೆಸರನ್ನು ಬದಲಾಯಿಸಲು, ನಕ್ಷತ್ರ ಪಾದಕ್ಕೆ ಹೊಂದಾಣಿಕೆ ಆಗದ ಅಕ್ಷರಕ್ಕೆ ಬದಲಾಗಿ, ಉತ್ತಮವಾದ, ಅಕ್ಷರ ಹೆಸರಿಗಾಗಿ ಸಂಪರ್ಕಿಸಿ: ಆಧ್ಯಾತಿಕ ಚಿಂತಕರು ಹಾಗೂ ಪುರೋಹಿತರಾದ ವೇದಬ್ರಹ್ಮ ಶ್ರೀ ಗಣೇಶ್ ಭಟ್ : ಮೊಬೈಲ್ : 9980010722, 9036239373