ಕರಿಬೇವಿನ ಸೊಪ್ಪಿನ ಪುಡಿಯನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಬೊಜ್ಜು ಕರಗುತ್ತದೆ. ಬೆಣ್ಣೆ ತೆಗೆದ ಮಜ್ಜಿಗೆಯನ್ನು ಸುಮಾರು ಒಂದೆರಡು ತಿಂಗಳುಗಳ ಕಾಲ ಸೇವಿಸಿದರೆ ಬೊಜ್ಜು ಕರಗುವುದು. ಹೆಚ್ಚು ಪ್ರಮಾಣದಲ್ಲಿ ನೀರನ್ನು ಸೇವಿಸುವುದರಿಂದಲೂ ಬೊಜ್ಜು ಮಾಯವಾಗುತ್ತದೆ. ಪ್ರತಿದಿನ ಒಂದು ಚಮಚ ಕರಿಎಳ್ಳನ್ನು ಖಾಲಿ ಹೊಟ್ಟೆಗೆ ತಿಂದು ನೀರು ಕುಡಿಯುವುದರಿಂದ ಬೊಜ್ಜು ನಿವಾರಣೆಯಾಗುತ್ತದೆ.
ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಸೇರಿಸಿ ಖಾಲಿ ಹೊಟ್ಟೆಗೆ ಕುಡಿಯಬೇಕು. ನಿಂಬೆರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ದೇಹದಲ್ಲಿ ಸೇರಿಕೊಂಡಿರುವ ಅನಗತ್ಯವಾದ ಕೊಬ್ಬು ನಿವಾರಣೆಯಾಗುವುದು. ಬಾಳೆ ದಿಂಡಿನ ರಸವನ್ನು ಸೇವಿಸುವುದರಿಂದ ಕೊಬ್ಬು ಕರಗುವುದು. ಬಾಳೆ ದಿಂಡಿನ ರಸವು ರಕ್ತದಲ್ಲಿರುವ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. ರಾತ್ರಿಯ ಊಟಕ್ಕೆ ಅನ್ನವನ್ನು ಸೇವಿಸದೆ ಚಪಾತಿಯನ್ನು ಸೆವೆಸಿದರೆ ಒಳಿತು. ಕರಿಬೇವಿನ ಸೊಪ್ಪನ್ನು ಊಟದಲ್ಲಿ ಬಳಸಿದರೆ ದೇಹದ ಕೊಬ್ಬು ಇಳಿಯುತ್ತದೆ.