ಪಪ್ಪಾಯ ಹಣ್ಣನ್ನು ಸೇವಿಸಬಹುದು. ಚರ್ಮದ ಭಾಗಗಳಿಗೆ ಪೇಸ್ಟ್ ಮಾಡಿ ಬಳಕೆಯೂ ಮಾಡಬಹುದು. ಕೂದಲ ಆರೋಗ್ಯಕ್ಕಾಗಿ ಪ್ಯಾಕ್ ರೀತಿ ಮಾಡಿ ಉಪಯೋಗಿಸಬಹುದು. ಇದರ ಔಷಧೀಯ ಗುಣಗಳಿಂದ ಹಲವಾರು ಉಪಯೋಗಗಳು ಆಗಿವೆ.
ಸೂರ್ಯನ ಕಿರಣಗಳಿಂದ ಚರ್ಮದ ಭಾಗಗಳು ಕಪ್ಪಾಗಿದ್ದಲ್ಲಿ ಪಪ್ಪಾಯದ ಪ್ಯಾಕ್ ಮಾಡಿ ಬಳಸುವುದು ಸಹಕಾರಿ. ಅಲ್ಲದೆ ನಿಯಮಿತವಾಗಿ ಪ್ರತಿನಿತ್ಯ ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ಉತ್ತಮ ಮಟ್ಟದಲ್ಲಿ ಕಾಪಾಡಿಕೊಳ್ಳಲು ಸಹಾಯಕಾರಿಯಾಗುತ್ತದೆ. ಸ್ಕಿನ್ ಟ್ಯಾನ್ ಸಹ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಪಪ್ಪಾಯ ಸೇವನೆಯು ಹೃದಯಸಂಬಂಧಿತ ಸಮಸ್ಯೆಗಳ ನಿರ್ವಹಣೆಗೆ, ಮಧುಮೇಹ ಬರುವಂತಹ ಸಾಧ್ಯತೆಯನ್ನು ಕಡಿಮೆ ಮಾಡಲು, ಕ್ಯಾನ್ಸರ್ ನಿಂದ ನಮ್ಮನ್ನು ದೂರ ಇರಿಸಲು, ಜೀರ್ಣಕ್ರಿಯೆಯನ್ನು ವೃದ್ದಿಸಲು, ದೇಹದ ಭಾಗಗಳಿಗೆ ಗಾಯವೇನಾದರೂ ಆಗಿದ್ದಲ್ಲಿ ಅದು ವೇಗವಾಗಿ ಗುಣವಾಗುವಂತೆ ಮಾಡುವಲ್ಲಿ ಇದರಲ್ಲಿರುವ ಪೂಟ್ಯಾಷಿಯಂ ಕಾರಣವಾಗುತ್ತದೆ, ಆದ್ದರಿಂದ ರಕ್ತನಾಳಗಳ ಆರೋಗ್ಯಕ್ಕೆ ಉತ್ತಮ. ತನ್ನೂಲಕ ಅಧಿಕ ರಕ್ತದೊತ್ತಡ ನಿರ್ವಹಣೆಗೆ ಹಾಗೂ ಹೃದಯದ ಆರೋಗ್ಯಕ್ಕೆ ನೆರೆವಾಗುತ್ತದೆ.
ಪಪ್ಪಾಯವು ಉತ್ತಮ ಪ್ರಮಾಣದಲ್ಲಿ ವಿಟಮಿನ್ ಸಿ ಯನ್ನು ಹೊಂದಿದೆ. ಇದು ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ಬೇಕಾದ ಸವಲತ್ತನ್ನು (ಕೊಲ್ಲಾಜನ್ ರಚನೆಗೆ ಸಹಕಾರಿಸುತ್ತದೆ.) ಮಾಡಿಕೊಡುವುದಷ್ಟೇ ಅಲ್ಲದೆ ಚರ್ಮದ ಕೋಶಗಳಿಗೆ ಹಾನಿಯಾಗದಂತೆ ನೋಡಿಕೊಂಡು ಕೂದಲು ಮತ್ತು ತ್ವಚೆ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.
ಪಪ್ಪಾಯಿಯ ಪೇಸ್ಟ್ ಮಾಡಿ ಪ್ಯಾಕ್ ಮಾಡಿಕೂಳ್ಳುವುದು ಉತ್ತಮ. ವಿಟಮಿನ್ ಕೆ ಯನ್ನು ಪಪ್ಪಾಯ ಹೊಂದಿದೆ. ವಿಟಮಿನ್ ಎ ಸಹ ಇದರಲ್ಲಿದ್ದು ಕಣ್ಣೆನ ಆರೋಗ್ಯಕ್ಕೆ ಇದು ಉತ್ತಮ. ದೇಹದ ತೂಕವನ್ನು ಕಡಿಮೆ ಮಾಡಿಕೂಳ್ಳಲು ದಿನನಿತ್ಯದ ಆಹಾರದಲ್ಲಿ ಇದರ ಅಳವಡಿಕೆ ಒಳ್ಳೆಯದು ತಜ್ಞರು ಹೇಳುತ್ತಾರೆ.