ಆಸ್ಥಾ ಪ್ರಾಪರ್ಟೀಸ್ ಪ್ರಸ್ತುತಪಡಿಸುತ್ತಿರುವ
ಆಸ್ಥಾ ಕ್ಲೌಡ್ ನೆಸ್ಟ್ ಒಂದು ಅತ್ಯುತ್ತಮ ಲೇಔಟ್ ನಲ್ಲಿ ಆಕರ್ಷಕ ಬೆಲೆಯಲ್ಲಿ ನಿವೇಶನಗಳು ಲಭ್ಯ,
ಪ್ರತಿಯೊಬ್ಬ ಜನ ಸಾಮಾನ್ಯರು ಕೈಗೆಟಕುವ ಬೆಲೆಗೆ ನಿವೇಶನ ಹೊಂದಿ, ಅವರ ಕನಸಿನ ಮನೆ ಕಟ್ಟಿಕೊಳ್ಳ ಬೇಕೆಂದು ನಮ್ಮ ಸಂಸ್ಥೆಯ ಪ್ರಮುಖ ಉದ್ದೇಶ. ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ಸೈಟು ತೆಗೆದುಕೊಳ್ಳುವುದು ಕನಸಿನ ಮಾತಾಗಿರುತ್ತದೆ, ಅವರಿಗೆಲ್ಲಾ ಕಡಿಮೆ ಬೆಲೆಯಲ್ಲಿ ಸೈಟು ಖರೀದಿ ಮಾಡಲು ಒಂದು ಸುವರ್ಣಾವಕಾಶ ಒದಗಿ ಬಂದಿದೆ.
ಸೈಟುಗಳ ಮೇಲೆ ಹಣ ಹೂಡಿದರೆ ಹೆಚ್ಚಿನ ಲಾಭದ ನಿರೀಕ್ಷೆ ಮಾಡಬಹುದು, ಪ್ರಾಪರ್ಟಿ ಇನ್ವೆಸ್ಟ್ ಮಾಡಲು ಭವಿಷ್ಯದಲ್ಲಿ ಸಾಕಷ್ಟು ಲಾಭ ತಂದುಕೊಡುವ ದಾರಿಯಲ್ಲಿ ಮುನ್ನಡೆಯುತ್ತಿರುವ ಪ್ರದೇಶಗಳಲ್ಲಿ ಮಂಚೂಣೆಯಲ್ಲಿದೆ ನೆಲಮಂಗಲ ಪ್ರದೇಶ.
ತುಮಕೂರು ರಸ್ತೆ, ನೆಲಮಂಗಲ ಹತ್ತಿರ ಆಸ್ಥಾ ಕ್ಲೌಡ್ ನೆಸ್ಟ್ ಲೇಔಟ್ ಗೆ ಗೊರಗುಂಟೆಪಾಳ್ಯ ಎಲಿವೇಟೆಡ್ ರಸ್ತೆ ಮೂಲಕ ಪ್ರಯಾಣ ಮಾಡಿದ್ರೆ ಕೇವಲ 25 ನಿಮಿಷಗಳಲ್ಲಿ ಸುಲಭವಾಗಿ ರೀಚ್ ಆಗಬಹುದು. ಹಾಗಾಗಿ ಆಸ್ಥಾ ಕ್ಲೌಡ್ ನೆಸ್ಟ್ ಲೇಔಟ್ ನಲ್ಲಿ ಸೈಟ್ ಖರೀದಿ ಮಾಡೋರು ತಮ್ಮ ಊರುಗಳಿಗೆ ಹೋಗಲು ಹೈವೇ ರಸ್ತೆ ತಲುಪೋದಿಕ್ಕೆ ಹೆಚ್ಚು ಟೈಮ್ ಬೇಕಾಗೋದಿಲ್ಲ. ನಾವು ನಿರ್ಮಿಸಿರುವ ಆಕರ್ಷಣೆಯ ಲೇಔಟ್ ನಲ್ಲಿ ಮೂಲಭೂತ ಸೌಲಭ್ಯಗಳಿರುವ ಮತ್ತು ಜನ ಸಾಮಾನ್ಯರಿಗೆ ಕೈಗೆಟಗುವ ಬೆಲೆಯಲ್ಲಿ ಸೈಟುಗಳನ್ನು ಮಾರಾಟ ಮಾಡುತ್ತಿದ್ದೇವೆ.
ಈ ಪ್ರದೇಶ ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಅತ್ಯಂತ ಹಾಟ್ ಪೇವರೆಟ್ ಪ್ರದೇಶವಾಗಿ ಹೊರಹೊಮ್ಮಿದೆ. ತುಮಕೂರು ರಸ್ತೆಯಲ್ಲಿ ಮುಂಬರುವ ಮೆಟ್ರೊ, ಚುತುಷ್ಪಥ ರಸ್ತೆ, ರೈಲು ಸಂಪರ್ಕ ವ್ಯವಸ್ಥೆ ಇದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನೆಲಮಂಗಲ ಸುತ್ತಮುತ್ತಲಿನ ಪ್ರದೇಶ ಜನಪ್ರಿಯ ತಾಣವಾಗಿ ರೂಪುಗೊಳ್ಳುತ್ತಿದೆ. ಹಾಗೂ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶ ಹತ್ತಿರದಲ್ಲಿದೆ, ನೆಲಮಂಗಲಕ್ಕೆ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಯಶವಂತಪುರದಿಂದ ಸಾಕಷ್ಟು ಬಸ್ ವ್ಯವಸ್ಥೆ, ಜತೆಗೆ ರೈಲು ಸೇವೆ ಇದೆ, ಮೆಟ್ರೊ ಸಂಪರ್ಕ ಕೂಡ ಬರಲಿದೆ. ಈ ಪ್ರದೇಶದಲ್ಲಿ ಸೈಟಿನ ಮೇಲೆ ಇನ್ವೆಸ್ಟ್ ಮಾಡುವವರಿಗೆ ಒಳ್ಳೆ ಗುಡ್ ಟೈಮ್ ಬಂದಿದೆ. ಈ ಪ್ರದೇಶ ಪರಿಸರ ವಾಸಯೋಗ್ಯವಾಗಿರುವುದರಿಂದ ಬೆಂಗಳೂರು ಟ್ರಾಫಿಕ್ ಜಂಜಾಟದಿಂದ ನೆಮ್ಮದಿ, ಸಮಾಧಾನ ಹಾಗೂ ನಿರಾಳವಾಗಿ, ಆರಾಮವಾಗಿ ಇರಬಹುದು.
ನೆಲಮಂಗಲದಲ್ಲಿ ಎಬಿಬಿ ಕಂಪನಿ, ಫ್ಲಿಪ್ ಕಾರ್ಟ್, ಅಮೆಜಾನ್ ವೆರ್ ಹೌಸ್ ಗೋಡೌನ್ ಗಳು ಇದೆ, ಸ್ಕೂಲ್, ಕಾಲೇಜು, ಆಸ್ಪತ್ರೆಗಳು, ರೆಸಾರ್ಟ್, ನೆಲಮಂಗಲ ಹತ್ತಿರ ಇರುವ ಡಾಬಸ್ ಪೇಟೆ ಕೈಗಾರಿಕಾ ಘಟಕ 3000 ಎಕರೆಗಿಂತಲೂ ಹೆಚ್ಚು ಪ್ರದೇಶವನ್ನು ಹೊಂದಿದೆ, ಇಲ್ಲಿಗೆ ಹೆಚ್ಚಿನ ಸಂಪರ್ಕ ಜಾಲ ಇರುವುದರಿಂದ ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದರಿಂದ ನೆಲಮಂಗಲ ಸುತ್ತಾಮುತ್ತಾ ಪ್ರದೇಶದಲ್ಲಿರುವವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ. ಹೆಸರು ಘಟ್ಟ ಕೂಡಾ ತುಂಬಾ ಹತ್ತಿರಲ್ಲಿದೆ. ಜೊತೆಗೆ ಗೊಲ್ಲಹಳ್ಳಿ ರೈಲ್ವೆ ನಿಲ್ದಾಣ, ಎಪಿಎಂಸಿ ಮಾರ್ಕೆಟ್ ಇಲ್ಲೇ ಇರುವುದರಿಂದ ವ್ಯಾಪಾರ ಚಟುವಟಿಕೆ ಹೆಚ್ಛಾಗುವ ಅನುಕೂಲತೆ ಜಾಸ್ತಿ ಇದೆ.
ನೆಲಮಂಗಲದಲ್ಲಿರುವ 24 ಗಂಟೆ ತೆರೆದಿರುವ ಎಂಎಸ್ ರಾಮಯ್ಯ ಹರ್ಷ ಆಸ್ಪತ್ರೆ ಹಾಗೂ ಮಾತೃಶ್ರೀ ಹಾಸ್ಪಿಟಲ್, ವಿ.ಪಿ. ಮ್ಯಾಗ್ನೇಸ್ ಹಾಸ್ಪಿಟಲ್, ಜೆಪಿ ಆಸ್ಪತ್ರೆ, ಮತ್ತು ನೆಲಮಂಗಲ ಪಟ್ಟಣದಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಗಳು ಕೂಡ ಇದೆ.
ಶಿಕ್ಷಣಕ್ಕಾಗಿ ಹರ್ಷ ಗ್ರೂಪ್ ಆಫ್ ಎಜುಕೇಷನ್, ರಾಯಲ್ ಇಂಟರ್ ನ್ಯಾಷನಲ್ ಸ್ಕೂಲ್, ಎಮರಾಲ್ಡ್ ಇಂಟರ್ ನ್ಯಾಷನಲ್ ಸ್ಕೂಲ್, ಹಾರ್ಡ್ ವರ್ಡ್ ಇಂಟರ್ ನ್ಯಾಷನಲ್ ಸ್ಕೂಲ್, ಪಿಎನ್.ಯಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಇನ್ನೀತರ ಶಾಲಾ ಕಾಲೇಜುಗಳು ಸಮೀಪದಲ್ಲಿವೆ.
ನಿಮಗೆ ದಿನಸಿ ಪದಾರ್ಥ ಖರೀದಿಸಲು ಹೊಸ ಎಪಿಎಂಸಿ ಮಾರುಕಟ್ಟೆ ಹತ್ತಿರದಲ್ಲಿದೆ ಹಾಗೂ ತರಕಾರಿ ಹಣ್ಣು ಖರೀದಿಗೆ ನೂತನ ಮಾರುಕಟ್ಟೆ ಕೂಡ ಇದೆ, ಜೊತೆಗೆ ನೆಲಮಂಗಲ ಸ್ಥಳೀಯ ಮಾರುಕಟ್ಟೆ ಕೂಡ ಇದೆ.
ಧಾರ್ಮಿಕ ಕೇಂದ್ರಗಳಾದ ಶ್ರೀ ವಿಶ್ವರೂಪ ವಿಜಯವಿಠ್ಠಲ ದೇವಸ್ಥಾನ, ಉದ್ಭವ ಗಣೇಶ ದೇವಸ್ಥಾನ, ಗೊಲ್ಲಹಳ್ಳಿ ಬೈಲಾಂಜನೇಯ ಸ್ವಾಮಿ ದೇವಸ್ಥಾನ,, ಮಧುರೈ ಶನಿಮಹಾತ್ಮಾ ದೇವಸ್ಥಾನ ಇದೆ, ಈ ಪ್ರದೇಶದಿಂದ ಕೆಲವೇ ದೂರದಲ್ಲಿ ಶಿವಗಂಗೆಬೆಟ್ಟ. ಪುರಾಣ ಪ್ರಸಿದ್ದ ಯಡಿಯೂರು ಸಿದ್ದಲಿಂಗೇಶ್ವರ ಪುಣ್ಯಕ್ಷೇತ್ರ. ಸಿದ್ದಗಂಗಾ ಬೆಟ್ಟ, ಗೊರವನಹಳ್ಳಿ ಲಕ್ಷ್ಮಿದೇವಾಲಯ ಸೇರಿದಂತೆ ನಾನಾ ದೇವಾಲಯಗಳು ಸಿಗುತ್ತದೆ.
ವಿಶಾಲವಾದ ರಸ್ತೆಗಳು ಇದೆ, ಒಳಚರಂಡಿ ವ್ಯವಸ್ಥೆಯನ್ನು ಹೊಂದಿದೆ, ವಿದ್ಯುತ್ ಸೌಲಭ್ಯದ ವ್ಯವಸ್ಥೆ, ಪ್ರತಿ ನಿವೇಶನಕ್ಕೂ ಪ್ರತ್ಯೇಕ ನೀರಿನ ವ್ಯವಸ್ಥೆ ಇದೆ. ಇಲ್ಲಿ ವಾಸ ಮಾಡೋದಿಕ್ಕೆ ಎಲ್ಲಾ ಸೌಕರ್ಯಗಳು ಇರೋದ್ರಿಂದ ನೀವು ಸೈಟ್ ಖರೀದಿ ಮಾಡಿ ಕೂಡಲೆ ಮನೆ ಕಟ್ಟಬಹುದು.
ಆಸ್ಥಾ ಕ್ಲೌಡ್ ನೆಸ್ಟ್ ಲೇಔಟ್ ಒಳ್ಳೆಯ ಪ್ರದೇಶ, ಎಲ್ಲಾ ಕಡೆ ಉತ್ತಮ ರಸ್ತೆ ಸಂಪರ್ಕ ಜಾಲವಿದೆ, ಅತಿ ಬೇಗನೆ ಬೆಳೆಯುತ್ತಿರುವ ಪ್ರದೇಶ, ಮಾಲಿನ್ಯ ಮುಕ್ತ ವಾತಾವರಣದಿಂದ ಕೂಡಿದೆ, ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಳ ಗೊಂಡಿದೆ. ನಮ್ಮ ಲೇಔಟಿನಲ್ಲಿ ಕೇವಲ ರೂ.4 ಲಕ್ಷಕ್ಕೆ 20x30 ಸೈಟು, ರೂ.8 ಲಕ್ಷಕ್ಕೆ 30x40 ನಿವೇಶನ ಮಾರಾಟಕ್ಕೆ ಲಭ್ಯವಿದೆ ಹಾಗೂ ತಕ್ಷಣ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬಹುದು ಇಷ್ಟೆಲ್ಲ ಒಳ್ಳೆಯ ಕನೆಕ್ಟಿವಿಟಿ ಇರೋ ನಮ್ಮ ಲೇಔಟಿನಲ್ಲಿ ಇನ್ವೆಸ್ಟ್ ಮಾಡೋದ್ರಿಂದ ಭವಿಷ್ಯದಲ್ಲಿ ಎಂಥಾ ಲಾಭ ಪಡೆಯ ಬಹುದು ಅಂತ ನೀವೇ ಒಂದ್ಸಲ ಯೋಚ್ನೆ ಮಾಡಿ ನೋಡಿ.
ಲೇಔಟ್ ನಲ್ಲಿ ಸಿಗುವ ಸೈಟಿನ ಅಳತೆಗಳು : 20x30, 30x40 Odd Sizes, ನೋಂದಣಿಗೆ ರೆಡಿ ಇರುವ ನಿವೇಶನಗಳು, ಮನೆ ಕಟ್ಟಲು ಸಿದ್ಧವಿರುವ ಸೈಟುಗಳು, ಕೆಲವೇ ಸೈಟ್‌ಗಳು ಮಾತ್ರ ಲಭ್ಯವಿದೆ ಇಂದೇ ಬುಕ್ ಮಾಡಿ, ಪ್ರಾಪರ್ಟಿ ಇನ್ವೆಸ್ಟ್ ಮಾಡಲು ಇದು ಸೂಕ್ತ ಸಮಯ. ಸೈಟು ನೋಡಲಿಕ್ಕೆ ಉಚಿತ ವಾಹನದ ವ್ಯವಸ್ಥೆ ಖಂಡಿತಾ ಇರುತ್ತದೆ.
ಸೈಟು ಭೇಟಿಗಾಗಿ ಸಂಪರ್ಕಿಸಿ : 93411 18999
ಆಸ್ಥಾ ಪ್ರಾಪರ್ಟೀಸ್ ನ ಇನ್ನೂ ಅನೇಕ ಪ್ರಾಜೆಕ್ಟ್ ಗಳ ಸಂಪೂರ್ಣ ವಿವರಗಳಿಗೆ ವೆಬ್ ಸೈಟಿಗೆ ಭೇಟಿ ನೀಡಿ :
www.aasthaproperties.in