Date: 14 Nov 2024 booked.net English
Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ |
Home » ಜ್ಯೋತಿಷ್ಯ » ಜ್ಯೋತಿಷ್ಯ-

ನಿಮ್ಮ ರಾಶಿಗೆ ಯಾವ ನವರತ್ನ ಆಭರಣ ಧರಿಸಿದರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಅರೋಗ್ಯ, ಐಶ್ವರ್ಯ, ಸಂಪತ್ತು ಸಿಗುವುದು ?


06 Feb 2024

ನವರತ್ನಗಳು ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಸ್ಥಾನ ಹೊಂದಿವೆ. ಪುರಾಣಕಾಲದಿಂದಲೂ ರತ್ನಗಳ ಕುರಿತ ನಂಬಿಕೆಗಳು ಬಹಳ ಗಟ್ಟಿಯಾಗಿ ನೆಲೆಯೂರಿವೆ. ಅಮೂಲ್ಯ ಹರಳುಗಳು ಸಂಪತ್ತು, ಅದೃಷ್ಟ, ಅಂತಸ್ತು ಹೆಚ್ಚಿಸುತ್ತವೆ ಎಂಬ ನಂಬಿಕೆಯ ಕಾರಣ ಸ್ಥಿತಿವಂತರು ಈ ನವರತ್ನಗಳ ಆಭರಣಗಳನ್ನು ಧರಿಸುತ್ತ ಬಂದಿದ್ದಾರೆ. ನವರತ್ನ ಆಭರಣಗಳನ್ನು ಧರಿಸಿದರೆ ಅದರಿಂದ  ನವಗ್ರಹಗಳ ಶಕ್ತಿ ಸಮತೋಲನಗೊಳ್ಳುತ್ತದೆ ಅಲ್ಲದೇ ಮತ್ತು ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಮೂಡುವುದರ ಜೊತೆಗೆ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ ಎಂದು ನಂಬಲಾಗಿದೆ. ನವರತ್ನ ಆಭರಣಗಳು ಭಾರತೀಯ ಸಂಸ್ಕೃತಿಯಲ್ಲಿ ಸ್ಥಾನಮಾನ ಮತ್ತು ಸಂಪತ್ತಿನ ಸಂಕೇತವಾಗಿವೆ. ಶ್ರೀಮಂತ ವರ್ಗದವರು ತಮ್ಮ ಸಾಮಾಜಿಕ ಸ್ಥಾನಮಾನ ಮತ್ತು ಸಂಪತ್ತಿನ ಸಂಕೇತವಾಗಿ ನವರತ್ನಗಳನ್ನು ಧರಿಸುತ್ತಾರೆ.
ಜಗತ್ತಿನಲ್ಲಿ ಸುಲಭವಾಗಿ ಅರ್ಥವಾಗದ ಅನೇಕ ವಿಷಯಗಳು, ವಿಸ್ಮಯಗಳು, ಕೌತುಕಗಳು, ರಹಸ್ಯಗಳಿವೆ. ಇವೆಲ್ಲವೂ ಜನರ ಚಿಂತನೆ ಮೀರಿದ ಆಯಾಮ ಹೊಂದಿವೆ. ನವರತ್ನಗಳ ವಿಷಯವೂ ಇಂದಿಗೂ ತಮ್ಮದೇ ಆದ ಅಚ್ಚರಿಯ ಪ್ರಪಂಚವನ್ನು ತೆರೆಯುತ್ತಾ ಸಾಗುತ್ತದೆ. ನಮ್ಮ ಜೀವನಗಳಿಗೂ ರತ್ನಗಳ ಸಂಗ್ರಹಕ್ಕೂ ಬಹಳ ಪ್ರಾಚೀನ ಸಂಬಂಧವಿದೆ. ತಾರಾ ಶಾಸ್ತ್ರ, ರಾಶಿಫಲ, ಸಂಖ್ಯಾ ಶಾಸ್ತ್ರ,  ಜ್ಯೋತಿಷ್ಯಶಾಸ್ತ್ರ, ಎಲ್ಲವುಗಳ ಕ್ರಮಬದ್ಧ ಮತ್ತು ಕೂಲಂಕುಶ ಲೆಕ್ಕಾಚಾರ ನಡೆಸಿ, ಗ್ರೆಗೋರಿಯನ್ ಕ್ಯಾಲೆಂಡರ್ ಸಿದ್ಧಾಂತಕ್ಕೆ ತಕ್ಕಂತೆ ಅದೃಷ್ಟ ರತ್ನಗಳನ್ನು ನಿರ್ಧರಿಸಲಾಗಿದೆ. ಶ್ರದ್ಧೆಯೊಂದಿಗೆ ಸೂಕ್ತ ರತ್ನಗಳನ್ನು ಧರಿಸಿದಲ್ಲಿ ಮನೋಕಾಮನೆಗಳು ಈಡೇರುವುದು ಖಂಡಿತ.
1 ಮಾಣಿಕ್ಯ (ಕೆಂಪು, ಪದ್ಮರಾಗ):
ಸೂರ್ಯನಿಗೆ ಪ್ರಿಯವಾದ ರತ್ನ, ಕೆಂಪು, ತಿಳಿ ಕೆಂಪು, ತಿಳಿ ನೇರಳೆಹಣ್ಣಿನ ರಸ ಮತ್ತು ಪಾರಿವಾಳದ ತಿಳಿರಕ್ತದಂತೆ ಬಣ್ಣಗಳಿರುವ ಮಾಣಿಕ್ಯವನ್ನು ವೃದ್ಧಿ ಚಂದ್ರ ರವಿವಾರ ಖರೀದಿಸಿ ರವಿವಾರ ಸೂರ್ಯೋದಯ ಸಮಯದಲ್ಲಿ ಧರಿಸಬೇಕು. ತಮ್ಮ ಶರೀರವೇ ಅಷ್ಟಾಂಗ ಯೋಗಮಂದಿರದಂತೆ ಬದಲಾಗುತ್ತದೆ. ಗೃಹನಿರ್ಮಾಣ, ವಾಹನ ಖರೀದಿ, ನಿವೇಶನ ಖರೀದಿ, ವಿದೇಶ ವಾಸ್ತವ್ಯ, ಅಧಿಕ ಜ್ಞಾಪಕ ಶಕ್ತಿ, ಉತ್ತಮ ಆರೋಗ್ಯ ಪ್ರಶಸ್ತಿಗಳು ಪಡೆಯುವಿಕೆ ಪ್ರಮುಖವಾಗಿ ಸಾಲದ ಬಾಧೆಗಳಿಂದ ದೂರ. ಗ್ರಹ ದೋಷಗಳನ್ನು ದಮನ ಮಾಡಿ ಆಕಸ್ಮಿಕ ಆದೃಷ್ಟಗಳು ಸಂಭವ. ಕಂಕಣಭಾಗ್ಯ, ಅಧಿಕ ಜ್ಞಾಪಕ ಶಕ್ತಿ ಮತ್ತು ಅಧಿಕ ಆಯಸ್ಸು ವೃದ್ಧಿಸುತ್ತವೆ. ಮೇಷ, ಮಿಥುನ, ಕಟಕ, ಸಿಂಹ, ವೃಶ್ಚಿಕ, ಧನಸ್ಸು ರಾಶಿಯವರು ಧರಿಸಿದರೆ ಶುಭಫಲ.
2 ಮುತ್ತು:
ಚಂದ್ರನಿಗೆ ಪ್ರಿಯವಾದ ರತ್ನ, ಸೋಮವಾರ ಖರೀದಿಸಿ ಸೋಮವಾರವೇ ಧರಿಸಬೇಕು. ಸೂರ್ಯೋದಯ ಸಮಯದಲ್ಲಿ ಧರಿಸಬೇಕು. ಸ್ತ್ರೀಯರ ಎಲ್ಲಾ ಅಲಂಕಾರ ಸಾಧನಗಳಲ್ಲಿ ಬಳಸಬಹುದು. ಸ್ತ್ರೀಯರಲ್ಲಿ ಕಲ್ಪನೆಗೆ ಮೀರಿದ ಸೌಂದರ್ಯ ವೃದ್ಧಿಸುತ್ತದೆ. ಅಗಲಿದ ಪ್ರೇಮಿಗಳು ಮತ್ತು ದಂಪತಿಗಳು ಮತ್ತು ವೈರಿಗಳು ಒಂದಾಗುವರು. ಪ್ರಮುಖವಾಗಿ ಶನಿ ಮತ್ತು ಕುಜ ದೋಷಗಳಿಂದ ದೂರ. ಹೆಂಗಸರಲ್ಲಿ ಸರ್ವಕಾರ್ಯ ಚತುರತೆ ಪ್ರಿಯತಮರಲ್ಲಿ ನವೋಲ್ಲಾಸ ಅಪೇಕ್ಷಿತ ಫಲವನ್ನು ಉಂಟು ಮಾಡುವ ಶಕ್ತಿ ಇದಕ್ಕಿದೆ. ಶೌರ್ಯ ಮತ್ತು ಪರಾಕ್ರಮ ಹೆಚ್ಚಿಸುತ್ತದೆ. ಜಲ ಭೀತಿ ದೂರ ಸರಿಯುತ್ತದೆ. ಕಟಕ, ಕನ್ಯಾ, ತುಲಾ ಮತ್ತು ವೃಶ್ಚಿಕ ಧರಿಸಿದರೆ ಶುಭಪಲ.
3 ಹವಳ:
ಮಂಗಳಗ್ರಹಕ್ಕೆ ಪ್ರಿಯವಾದ ರತ್ನ ಈ ರತ್ನವನ್ನು ಯಾವುದೇ ದಿವಸ ಖರೀದಿಸಿ ಮಂಗಳವಾರ ಸೂರ್ಯೋತ್ಸಮ ಆಕಾಶ ಕೆಂಪಾಗುವ ಸಮಯದಲ್ಲಿ ಧರಿಸಬೇಕು. ಸಿಂಧೂರ ಮತ್ತು ತಿಳಿ ಸಿಂಧೂರ ಬಣ್ಣಗಳ ಹವಳ ವಿಶಿಷ್ಟಗುಣಗಳನ್ನು ಹೊಂದಿರುತ್ತದೆ. ಹೆಂಗಸರು ತನ್ನ ಮಾಂಗಲ್ಯ ಸರದಲ್ಲಿ ಹವಳ ರತ್ನಗಳನ್ನು ಪೋಣಿಸಿಕೊಳ್ಳುತ್ತಾರೆ. ನೂತನ ದಂಪತಿಗಳಲ್ಲಿ ನವೋಲ್ಲಾಸ ಉಂಟಾಗುವುದು ಅಗಲಿದ ದಂಪತಿಗಳು ಒಂದಾಗುವರು. ಸಾಲದ ಬಾಧೆಗಳಿಂದ ದೂರವಾಗುವರು, ಅಧಿಕ ಜ್ಞಾಪಕ ಶಕ್ತಿ ಉಂಟಾಗುವುದಲ್ಲದೇ, ಉತ್ತಮ ಆರೋಗ್ಯ ವ್ಯಾಪಾರದಲ್ಲಿ ಲಾಭ ಸಂಭವಿಸುತ್ತವೆ. ಧನಸ್ಸು, ಮಕರ, ಕಟಕ, ಸಿಂಹ, ವೃಶ್ಚಿಕ ರಾಶಿಯವರು ಧರಿಸಬೇಕು.
4 ವೈಡೂರ್ಯ :
ಕೇತುಗ್ರಹಕ್ಕೆ ಪ್ರಿಯವಾದ ರತ್ನ, ಶನಿವಾರ ಅಥವಾ ಮಂಗಳವಾರಗಳಂದು ಖರೀದಿಸಿ ಶನಿವಾರ ರಾತ್ರಿ ಸಮಯದಲ್ಲಿ ಧರಿಸಬೇಕು. ಕಂಕಣ ಭಾಗ್ಯ, ಬಂಡವಾಳ ಹೂಡಿಕೆಯಲ್ಲಿ ಪ್ರಗತಿ, ಚಲನಚಿತ್ರ ನಿರ್ಮಾಣದಲ್ಲಿ ಪ್ರಗತಿ, ಪ್ರವಾಸ, ವಿಜ್ಞಾನ ಮತ್ತು ಸಂಶೋಧನೆಗಳಲ್ಲಿ ದಿವ್ಯಚೇತನ ಮೂಡಿಸುತ್ತದೆಯಲ್ಲದೇ ವಿದೇಶಪ್ರವಾಹ ಸಂಭವ ತರುತ್ತದೆ.  ಶನಿ ಮತ್ತು ಕುಜಗ್ರ, ದೋಷಗಳು ದೂರವಾಗುತ್ತವೆ. ಕ್ರೀಡಾಪಟುಗಳು ಚಲನ ಚಿತ್ರ ನಟರು ಮತ್ತು ನಿರ್ಮಾಪಕರು ಈ ರತ್ನವನ್ನು ಧರಿಸಿದರೆ ಶುಭದಾಯಕವಲ್ಲದೇ ಹೃದಯ ಸಂಬಂಧಿ ರೋಗಗಳು ಗುಣವಾಗುತ್ತದೆ. ವೃಷಭ, ಮಿಥುನ, ಕನ್ಯಾ, ತುಲಾ, ಧನಸ್ಸು ಮತ್ತು ಮಕರ ರಾಶಿಯವರು ಧರಿಸಬೇಕು.
5 ಗೋಮೇದ (ಪುಷ್ಯರಾಗ):
ರಾಹುವಿಗೆ ಪ್ರಿಯವಾದ ರತ್ನ, ಮಂಗಳವಾರ ಮತ್ತು ರವಿವಾರಗಳ ರಾತ್ರಿ ಸಮಯದಲ್ಲಿ ಖರೀದಿಸಿ ವೃದ್ಧಿ ಚಂದ್ರ ಎಲ್ಲಾ ದಿನಗಳ ರಾತ್ರಿ ಸಮಯದಲ್ಲಿ ಧರಿಸಬೇಕು. ಗ್ರಹ ದೋಷ, ದುಷ್ಟಶಕ್ತಿಗಳಿಂದ ದೂರವಾಗಿಸುವುದಲ್ಲದೇ, ಕೆಟ್ಟ ಕನಸುಗಳನ್ನು ಇಲ್ಲವಾಗಿಸಿ, ಮಾಟ ಮಂತ್ರ, ದುಷ್ಟರ ನೇತ್ರದೃಷ್ಟಿ ದೂರಸರಿಸುತ್ತದೆ. ಸಪ್ತ ಚಕ್ರಗಳು ಉದ್ದೀಪನ ಗೊಂಡು ಸರ್ವಚೇತನ, ನವಚೈತನ್ಯ ಉಂಟಾಗುವುದು. ಸಂಶೋಧನೆಗಳು ಪ್ರಗತಿದಾಯಕ ವಾಗುವುದಲ್ಲದೇ, ಮಾನಸಿಕ ಉದ್ವೇಗದಿಂದ ದೂರವಾಗುವರು. ಕನ್ಯಾ, ವೃಷಭ, ಮಿಥುನ, ತುಲ, ಮಕರ, ವೃಶ್ಚಿಕ ರಾಶಿಯವರು ಧರಿಸಬೇಕು.
6 ಪುಷ್ಪರಾಗ:
ಗುರುಗ್ರಹಕ್ಕೆ ಪ್ರಿಯವಾದ ರತ್ನ. ಗುರುವಾರ ಖರೀದಿಸಿ ಗುರುವಾರವೇ ಧರಿಸಬೇಕು. ಬಿಳಿ ಮತ್ತು ಹೊಳಪಿನ ಬಳಿ, ಅಧಿಕ ಜ್ಞಾಪಕ ಶಕ್ತಿ, ಸಿರಿವಂತಿಕೆ, ದುಷ್ಟರ ನೇರದೃಷ್ಟಿ ದೂರವಾಗುತ್ತದೆ. ಪುಷ್ಪರಾಗವನ್ನು ಪೌರ್ಣಮಿ ರಾತ್ರಿ ಧರಿಸಿದರೆ ಪ್ರಿಯತಮರು ಹೆಚ್ಚಿನ ಒಲವು ತೋರಿಸುತ್ತಾರೆ. ಅಗಲಿದ ದಂಪತಿಗಳು ಒಂದಾಗುವರು. ಜೀವನವಿಡೀ ನವೋಲ್ಲಾಸ, ಅಧಿಕ ಸಂಪತ್ತು ಲಭಿಸುತ್ತದೆ. ಚರ್ಮವ್ಯಾಧಿಗಳಿಂದ ದೂರವಾಗುವರು. ವಿದ್ಯಾಭ್ಯಾಸ ಸಂಶೋಧನೆಗಳಲ್ಲಿ ಪ್ರಗತಿ ಕಾಣುವುದಲ್ಲದೇ ಹೆಂಗಸರಲ್ಲಿ ಸೌಂದರ್ಯ ದ್ವಿಗುಣಗೊಳ್ಳುವುದು. ಮೇಷ, ಕಟಕ, ಸಿಂಹ, ವೃಶ್ಚಿಕ, ಧನಸ್ಸು ರಾಶಿಯವರು ಧರಿಸಬೇಕು.
7 ಬಿಳಿಯ ವಜ್ರ :
ಶುಕ್ರ ಗ್ರಹಕ್ಕೆ ಪ್ರಿಯವಾದ ರತ್ನ, ಬಿಳಿ, ಅಧಿಕಬಿಳಿ ಮತ್ತು ತಿಳಿ ನೀಲಿ ಬಣ್ಣದ ವಜ್ರವನ್ನು ಶುಕ್ರವಾರ, ರವಿವಾರ ಮತ್ತು ಗುರುವಾರಗಳಂದು ಖರೀದಿಸಿ ಶುಕ್ರವಾರದ ಸೂರ್ಯೋದಯಕ್ಕೆ ಮುಂಚೆ ಧರಿಸಬೇಕು. ಸಿರಿವಂತಿಕೆ ವೃದ್ಧಿಗೊಂಡು, ಶತ್ರುಭಯದಿಂದ ದೂರ, ಕೆಡಕು ವಿದ್ಯೆಗಳಿಂದ ದೂರ ಧೈರ್ಯ ತಾನಾಗಿ ವೃದ್ಧಿಸುತ್ತದೆ. ಸಿರಿ, ಸಂಪತ್ತು ಮತ್ತು ಅಧಿಕಾರದಲ್ಲಿ ಪ್ರಗತಿ, ರಾಜಕೀಯ ಸಮಾಜ ಸೇವೆ, ವೈಭವೀಕರಣ ಮತ್ತು ಸನ್ಮಾನಗಳ ಸ್ವೀಕಾರ ಕುಜ ಮತ್ತು ಶನಿದೋಷಗಳಿಂದ ದೂರ, ಸದಾ ಜೀವನದಲ್ಲಿ ನವೋಲ್ಲಾಸ, ವೃಷಭ, ಮಿಥುನ, ಕನ್ಯಾ, ತುಲ, ಮಕರ ಮತ್ತು ಕುಂಭ, ಸಿಂಹ ರಾಶಿಯವರು ಧರಿಸಬೇಕು.
8 ನೀಲಂ :
ಶನಿಗ್ರಹಕ್ಕೆ ಪ್ರಿಯವಾದದ್ದು, ಈ ರತ್ನವನ್ನು ಕ್ಷೀಣ ಚಂದ್ರ ದಿನಗಳಲ್ಲಿ ದಿನಗಳಲ್ಲಿ ಖರೀದಿಸಿ, ಕ್ಷೀಣ ಚಂದ್ರ ಶನಿವಾರವೇ ಧರಿಸಬೇಕು. ರಾತ್ರಿ ವೇಳೆಯಲ್ಲಿ ಧರಿಸಿದರೆ ಶತ್ರು ಭಯ, ಸಾಲಗಳ ಬಾಧೆಗಳಿಂದ ದೂರಗುವರು. ನೀಲಂ ರತ್ನವನ್ನು ಅಮಾವಾಸ್ಯೆ ಮತ್ತು ಪೌರ್ಣಮಿಗಳಂದು ಧರಿಸಬಾರದು. ಈ ರತ್ನದಿಂದ ಉತ್ತಮ ಆರೋಗ್ಯ ಧನಾಗಮನ ಸಂಭವಿಸುತ್ತವೆ. ಶನಿದೋಷದಿಂದ ದೂರ. ಕಾಲಗಣನಾ ಚಕ್ರದಲ್ಲಿ ಜ್ಞಾನ, ಛಲ, ವೀರ, ಐಶ್ವರ್ಯ ವೃದ್ಧಿಸುತ್ತವೆ. ಶತ್ರು ಭಯದಿಂದ, ಸಾಲದ ಬಾಧೆಗಳಿಂದ ದೂರವಾಗುವರು. ಚರ್ಮವ್ಯಾಧಿಗಳು ಮೈಗ್ರೇನ್ ಮತ್ತು ಬೆನ್ನು ನೋವುಗಳಿಂದ ದೂರವಾಗುವರು. ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯವರು ಧರಿಸಬೇಕು.
9 ಪಚ್ಚೆ :
ಬುಧಗ್ರಹಕ್ಕೆ ಪ್ರಿಯವಾದ ರತ್ನ, ಪಚ್ಚೆಯಲ್ಲಿ ವಿಶೇಷ ಗುಣಗಳಿವೆ. ಈ ರತ್ನವನ್ನು ವರ್ಷಪೂರ್ತಿ ಧರಿಸಬಹುದು. ಬುಧವಾರ ಖರೀದಿಸಿ ಬುಧವಾರವೇ ಧರಿಸಬೇಕು. ಪ್ರಮುಖವಾಗಿ ಸ್ತ್ರೀಯರು ತಮ್ಮ ಪತಿ ಮತ್ತು ಮಕ್ಕಳನ್ನು ಅಮಿತಾನಂದದಿಂದ ನೋಡಿಕೊಳ್ಳುತ್ತಾರೆ. ಜಮೀನ ವ್ಯವಹಾರ, ಬಂಡವಾಳ ಹೂಡಿಕೆ, ಹಣದ ಲೇವಾದೇವಿ ವ್ಯಾಪಾರದಲ್ಲಿ ಪ್ರಗತಿ, ಹಸಿರು ಮತ್ತು ತಿಳಿ ಹಸಿರು ಶ್ರೇಷ್ಠ ರತ್ನಗಳಲ್ಲೆ ಮರಗತಂ ಶ್ರೇಷ್ಠವಾದ ರತ್ನ ತನ್ನ ಯಾವುದೇ ಸಮಸ್ಯೆಗಳನ್ನು ಈಡೇರಿಸಿಕೊಳ್ಳಲು ಈ ರತ್ನವು ಉಪಯುಕ್ತವಾಗಲಿದೆ. ಮಾಟ, ಮಂತ್ರ ಮತ್ತು ಕೆಡಕು ವಿದ್ಯೆಗಳನ್ನು ದಮನ ಮಾಡುವ ಶಕ್ತಿ ಇದೆ. ಸ್ತ್ರೀ ಪುರುಷರಲ್ಲಿ ಮನೋವಿಕಲ್ಪನಾ ವಿಚಾರಗಳಿಂದ ದೂರ ಮಾಡುತ್ತದೆ. ವೃಷಭ, ಮಿಥುನ, ಸಿಂಹ, ಕನ್ಯಾ, ತುಲ, ಮಕರ ಮತ್ತು ಮೀನ ರಾಶಿಯವರು ಧರಿಸಬೇಕು.

Share on:

City Information

(Private)