- ಸಂಜೆಯ ನಂತರ ಟೀ, ಕಾಫಿ, ಚಾಟ್, ಸೇವಿಸಬೇಡಿ.
- ಹಗಲು ಹೊತ್ತಲ್ಲಿ ಮಲಗಬೇಡಿ, ಇದರಿಂದ ರಾತ್ರಿ ನಿದ್ದೆ ಬರುವುದಿಲ್ಲ.
- ಮಲಗುವ ಎರಡು ಗಂಟೆ ಮೊದಲು ಭೋಜನ ಮಾಡಿ ಹಾಗೂ ಭೋಜನ ಬಹಳ ಲಘುವಾಗಿರಲಿ
- ಮೊಬೈಲ್, ಟೀವಿ, ಲ್ಯಾಪ್ಟ್ಯಾಪ್ ಬಳಕೆ ಬೇಡವೇ ಬೇಡ.
- ಕೆಟ್ಟದ್ದನ್ನು ಯೋಚನೆ ಮಾಡಬೇಡಿ. ಇದು ನಿದ್ರೆಯನ್ನು ಕೆಡಿಸುತ್ತದೆ.
- ಮಲಗುವ ಕೋಣೆ ಕತ್ತಲೆಯಾಗಿರಬೇಕು. ಒಳ್ಳೆಯ ಗಾಳಿ ಇರಬೇಕು, ಹಾಸಿಗೆ ಮೃದುವಾಗಿರಬೇಕು.
- ಮಲಗಲು ಒಂದು ಸಮಯ ನಿಗದಿಪಡಿಸಿಕೊಳ್ಳುವುದು ಒಳ್ಳೆಯದು.
- ಊಟದ ನಂತರ ಒಂದು ಮೈಲಿ ನಡೆಯುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ.
ನಿದ್ದೆಗೆ ಮನೆಮದ್ದು
- ಮಲಗುವ ಒಂದು ಗಂಟೆ ಮುಂಚಿತವಾಗಿ ಸ್ವಲ್ಪ ಬಾದಾಮಿ ಪುಡಿ ಬೆರೆಸಿ ಹಾಲು ಕುಡಿದರೆ ಒಳ್ಳೆಯ ನಿದ್ರೆ ಖಂಡಿತ ನಿಮ್ಮದಾಗುತ್ತದೆ. ಏಕೆಂದರೆ ಹಾಲಿನಲ್ಲಿ ನಿದ್ರಾಜನಕ ಗುಣವಿದೆ ಹಾಗೂ ರಾತ್ರಿ ಸೇವಿಸಲೇಬೇಕಾದ ಪದಾರ್ಥವಿದು, ಆಯುರ್ವೇದ ರಾತ್ರಿ ವೇಳೆ ಶಿಫಾರಸು ಮಾಡುವ ಏಕೈಕ ಆಹಾರ ಪದಾರ್ಥ ಎಂದರೆ ಹಾಲು. ಇದು ವ್ಯಕ್ತಿಯಲ್ಲಿ ಕಫದೋಷ ಹೆಚ್ಚು ಮಾಡಿ ನಿದ್ರೆಗೆ ಜಾರಿಸುತ್ತದೆ. ಇದರಲ್ಲಿ ಸೆರಾಟೊನಿನ್ ಅಂಶ ಹೆಚ್ಚಾಗಿ ದೊರಕುತ್ತದೆ.
- ಇನ್ನೊಂದು ಪಾದಾಭ್ಯಂಗ ಅಂದರೆ ಎಣ್ಣೆಯನ್ನು ಬಳಸಿ ಮಲಗುವ ಮೊದಲು ಪಾದಗಳನ್ನು ಮಸಾಜ್ ಮಾಡುವುದು. ವಾತದೋಷ ಹೆಚ್ಚಾದರೆ ನಿದ್ರೆ ಕಡಿಮೆಯಾಗುತ್ತದೆ, ಪಾದಾಭ್ಯಂಗದಿಂದ ವಾತದೋಷದ ಪರಿಣಾಮ ಕಡಿಮೆ ಆಗುತ್ತದೆ, ತಮ್ಮ ಮನೆಯಲ್ಲಿ ಇರುವ ಎಳ್ಳೆಣ್ಣೆ, ಸಾಸಿವೆ ಎಣ್ಣೆ ಅಥವಾ ಹರಳೆಣ್ಣೆ ಬಳಸಿ ಮಾಡಬಹುದು.
- ಅರ್ಧ ಇಂಚಿನಷ್ಟು ಶುಂಠಿ, 1/4 ಟೀ ಚಮಚದಷ್ಟು ಮಧು ಚೂರ್ಣ, 1 ಏಲಕ್ಕಿಯನ್ನು 100 ಎಂಎಲ್ ನೀರಿಗೆ ಹಾಕಿ 2-3 ನಿಮಿಷ ಕುದಿಸಿ ಸೋಸಿ ಕುಡಿಯಬೇಕು.
- ಅಶ್ವಗಂಧ ಬೇರಿನ ಚೂರ್ಣವನ್ನು ಅರ್ಧ ಚಮಚದಷ್ಟು ಒಂದು ಲೋಟ ಹಾಲಿಗೆ ಹಾಕಿ ರಾತ್ರಿ ಮಲಗುವ ಮುಂಚೆ ಕುಡಿಯುವುದರಿಂದ ಕುಂಭಕರ್ಣನಂತೆ ನಿದ್ದೆ ಮಾಡಬಹುದು.