ಹಿಂದೂ ಧರ್ಮದ ಪ್ರಕಾರ ಗೃಹಪ್ರವೇಶ ಸಮಾರಂಭ ಮಾಡುತ್ತಾರೆ. ಕಾರಣವೇನೆಂದರೆ, ಶುಭ ಲಗ್ನದಲ್ಲಿ ಮತ್ತು ತಿಥಿಯಲ್ಲಿ ನಿಮ್ಮ ಹೊಸ ಮನೆಗೆ ಪ್ರವೇಶಿಸುವುದರಿಂದ ಸಂತೋಷ, ಶಾಂತಿ ಮತ್ತು ಐಶ್ವರ್ಯವನ್ನು ತರುತ್ತದೆ. ಗೃಹ ಪ್ರವೇಶ ಮುಹೂರ್ತವನ್ನು ತಿಥಿ, ದಿನಗಳು, ಲಗ್ನ ಮತ್ತು ನಕ್ಷತ್ರ ಅಥವಾ ನಕ್ಷತ್ರಪುಂಜಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಇತರ ಯಾವುದೇ ಅರ್ಥಪೂರ್ಣ ಕ್ಷಣಗಳಂತೆ, ಗೃಹ ಪ್ರವೇಶ ಕೂಡ ಒಂದು ಪ್ರಮುಖ ಸಮಾರಂಭವಾಗಿದೆ.
2023 ಡಿಸೆಂಬರ್ ತಿಂಗಳಿನ ಹೊಸ ಮನೆಯ ಗೃಹ ಪ್ರವೇಶ ಮಾಡಲು ಶುಭ ಮಹೂರ್ತದ ದಿನಾಂಕಗಳು ಈ ಕೆಳಗಿನಂತಿವೆ.
ಡಿಸೆಂಬರ್ 6, 2023, ಬುಧವಾರ, ನಕ್ಷತ್ರ: ಉತ್ತರ ಫಲ್ಗುಣಿ, ತಿಥಿ: ದಶಮಿ
ಶುಭ ಮುಹೂರ್ತ: ಬೆಳಗ್ಗೆ 03:04 ರಿಂದ ಡಿಸೆಂಬರ್ 07, ಬೆಳಗ್ಗೆ 06:29 ವರೆಗೆ
ಡಿಸೆಂಬರ್ 8, 2023, ಶುಕ್ರವಾರ, ನಕ್ಷತ್ರ: ಚಿತ್ರಾ, ತಿಥಿ: ಏಕಾದಶಿ
ಶುಭ ಮುಹೂರ್ತ: ಬೆಳಗ್ಗೆ 08:54 ರಿಂದ ಡಿಸೆಂಬರ್ 09, ಬೆಳಗ್ಗೆ 06: 30 ವರೆಗೆ
ಡಿಸೆಂಬರ್ 15, 2023, ಶುಕ್ರವಾರ, ನಕ್ಷತ್ರ: ಉತ್ತರ ಆಷಾಢ, ತಿಥಿ: ತೃತೀಯಾ
ಶುಭ ಮುಹೂರ್ತ: ಬೆಳಗ್ಗೆ 08:10 ರಿಂದ ರಾತ್ರಿ 10:30 ವರೆಗೆ
ಡಿಸೆಂಬರ್ 21, 2023, ಗುರುವಾರ, ನಕ್ಷತ್ರ: ರೇವತಿ, ತಿಥಿ: ದಶಮಿ
ಶುಭ ಮುಹೂರ್ತ: ಬೆಳಗ್ಗೆ 09:37 ರಿಂದ ರಾತ್ರಿ 10:09 ವರೆಗೆ