ನಿವೇಶನ / ಸೈಟು ಖರೀದಿಗೆ ಮುಂಚೆ ಯಾವೆಲ್ಲಾ ಅಂಶಗಳ ಬಗ್ಗೆ ಗಮನ ಹರಿಸಿದರೆ ಮುಂದಿನ
ದಿನಗಳಲ್ಲಿ ನೆಮ್ಮದಿಯಿಂದ ಇರಬಹುದು ?
- ನೀವು ನಿವೇಶನ ಬುಕ್ ಮಾಡಲು ನೋಡಿರುವ ಲೇಔಟ್‌ನಲ್ಲಿ ಅಕ್ಕ ಪಕ್ಕ ಕೆರೆ, ಒತ್ತುವರೆ ಪ್ರದೇಶ ಇದ್ದರೆ ಗಮನಿಸಿ.
- ಲೇಔಟ್ ಎತ್ತರ, ತಗ್ಗು ಪ್ರದೇಶ ಇದ್ದರೆ ಮಳೆ ಕಾಲದಲ್ಲಿ ಸಮಸ್ಯೆಯಾಗುತ್ತದೆ. ಸಮತಟ್ಟಾಗಿದ್ದರೆ ಒಳ್ಳೆಯದು.
- ಸೈಟಿನ ಜಾಗ ಯಾರ ಹೆಸರಿನಲ್ಲಿ ಇದೆ, ಭೂಮಿಯ ಒರಿಜಿನಲ್ ಮಾಲೀಕರು ಯಾರು ತಿಳಿದುಕೊಳ್ಳಿ.
- ಸ್ಥಳೀಯ ಯೋಜನಾ ಪ್ರಾಧಿಕಾರದಿಂದ (Town Planning) ಲೇಔಟ್ ನ ಅಭಿವೃದ್ಧಿಗೆ ಅಂಗೀಕೃತವಾಗಿದೇಯೇ?
- ನಿವೇಶನಗಳು ಅಭಿವೃದ್ಧಿ ಪ್ರಾಧಿಕಾರದಿಂದ (BMRDA) ಡಿಸಿ ಅವರಿಂದ ಅನುಮೋದಿಸಲ್ಪಟ್ಟಿದೆಯೇ?
- ರೇರಾ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದಿದೆಯೇ ?
- ಸರ್ಕಾರಿ ಸಂಸ್ಥೆಗಳಿಂದ ಅನುಮತಿ ಪಡೆದಿದೆಯೇ ?
- 100% ಕಾನೂನಾತ್ಮಕ ದಾಖಲೆ ಪತ್ರಗಳು ಇದೆಯೋ ?
- ನಿವೇಶನ ನೋಂದಣಿಗೆ ಪರಿಪೂರ್ಣವಾಗಿ ಸಿದ್ಧವಾಗಿದೆಯೇ ?
- ಲೇಔಟ್ ನಲ್ಲಿ ಸೈಟುಗಳು ಮನೆ ನಿರ್ಮಾಣಕ್ಕೆ ಸಿದ್ಧವಾಗಿದೆಯೇ ?
- ಸೂಕ್ತವಾದ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿದೆಯೇ ?
- ತಾವು ಸೈಟು ಖರೀದಿ ಮಾಡುವ ಡೆವೆಲಪರ್ ಅಥವಾ ಲ್ಯಾಂಡ್ ಓನರ್ ಬಳಿ
ಎಲ್ಲಾ ಸಂಬಂಧಪಟ್ಟ ಎನ್ಒಸಿ ಗಳು ಲಭ್ಯವಿದೆಯೇ ? - ಸೈಟು ನೋಂದಣಿ ಆಗುವುದಿದ್ದರೆ ಇ-ಖಾತಾ ಸಿಗುತ್ತಾ ನೋಡಬೇಕು.
- ಬ್ಯಾಂಕಿನಲ್ಲಿ ಈ ಲೇಔಟ್‌ಗೆ ಹೋಮ್ ಲೋನ್ ದೊರೆಯುತ್ತಾ ಕೇಳಬೇಕು.
- ನೀವು ನಿವೇಶನ ಬುಕ್ ಮಾಡುವ ಮುಂಚೆ ಆವತ್ತಿನ ದಿನದಂದು EC ಯನ್ನು ತೆಗೆಸಿ ಪರಿಶೀಲಿಸಿ,
ಸೈಟು ಯಾರ ಹೆಸರಿನಲ್ಲಿದೆ ತಿಳಿಯುತ್ತದೆ. - ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವೆಲ್ಲಾ ಸ್ಕೂಲ್, ಕಾಲೇಜುಗಳು ಎಷ್ಟು ಹತ್ತಿರದಲ್ಲಿವೆ ?
ಇದರ ಜೊತೆಗೆ ಯಾವುದೇ ಖಾಸಗಿಯಾಗಿ ಅಭಿವೃದ್ಧಿಗೊಂಡು ಅನುಮೋದನೆ ಆದ ಲೇಔಟ್ ನಲ್ಲಿ ಶೇಕಡ 55% ಜಾಗ ಮಾತ್ರ ಮಾರಲು ಅವಕಾಶವಿರುತ್ತದೆ, ಉಳಿದ ಶೇಕಡ 25 ರಷ್ಟು ಜಾಗ ರಸ್ತೆಗಳಿಗಾಗಿ, ಸಿಎ ನಿವೇಶನಕ್ಕಾಗಿ ಶೇಕಡ 10 ರಷ್ಟು ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ ಶೇಕಡ 10ರಷ್ಟು ಜಾಗ ಮೀಸಲಿರುತ್ತದೆ.
ಮುನ್ನೇಚ್ಚರಿಕೆ ಕ್ರಮವಾಗಿ ಕಾನೂನಾತ್ಮಕವಾಗಿ ದಾಖಲೆಗಳನ್ನು ಪರಿಶೀಲನೆ ಮಾಡಿಸಿ. ನಿಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆ ಇದೊಂದು ಹೆಚ್ಚಿನ ಹೊರೆ ಎಂದು ನಿರ್ಲಕ್ಷವಹಿಸಿದೆ ಒಂದು ದಿವಸ ಶ್ರಮಪಟ್ಟು ದಾಖಲೆಗಳನ್ನು ಸಂಗ್ರಹಿಸಿದರೆ ನಿಮಗೆ ಮುಂದಿನ ಭವಿಷ್ಯದ ದಿನಗಳಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸುವ ಸಮಸ್ಯೆ ಇರುವುದಿಲ್ಲ.
ಮೇಲಿರುವ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನಿವೇಶನ ಖರೀದಿಸಿ, ಭವಿಷ್ಯದಲ್ಲಿ ನೆಮ್ಮದಿಯ ಜೀವನ ನಿಮ್ಮದಾಗಿಸಿಕೊಳ್ಳಿ.
#how to buy land
#tips to buy land
#plots buying tips
#how to buy plots in bangalore
#pot buy tips
#plot buying tips
#tips to buy land in karnataka
#plots
#can i buy farm plots
#land buying tips
#tips on buying land
#vastu tips for purchasing plots
#buy land
#plot sale tips
#plot purchase precautions and tips
#is buying farm plots safe
#how to buy a plot
#land purchase tips
#site for sale