ಸ್ಮಾರ್ಟ್‌ಫೋನ್‌ಗಳಲ್ಲಿ ಎಂ-ಆಧಾರ್ (mAadhaar) ಎ೦ಬ ಅ್ಕಪ್ ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಳ್ಳಿ. ಅದರಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆ, ಅದಕ್ಕೆ ಸಂಬಂಧಿಸಿದ 10 ಅಂಕಿಗಳ ಮೊಬೈಲ್ ಸಂಖ್ಯೆ ಸೇರಿಸಿಕೊಂಡು ನೋಂದಾಯಿಸಿಕೊಳ್ಳಿ. ಲಾಗಿನ್ ಆಗಿ, ಸುರಕ್ಷತೆಗಾಗಿ ಪಿನ್ ನಂಬರ್ ಹೊಂದಿಸಬೇಕಾಗುತ್ತದೆ. ಅಲ್ಲಿ ಮ್ಮಆಧಾರ್ ಕಾರ್ಡ್ ಸೇರಿಸಿದ ಬಳಿಕ, "ಮೈ ಆಧಾರ್' ಎಂದಿರುವಲ್ಲಿ ಕ್ಲಿಕ್ ಮಾಡಿದಾಗ, ಪಿನ್ ನಮೂದಿಸಬೇಕಾಗುತ್ತದೆ. ಕೆಳಗೆ ಕೆಂಪು ಬಣ್ಣದಲ್ಲಿ "ಬಯೋಮೆಟ್ರಿಕ್ ಲಾಕ್' ಎಂದಿರುತ್ತದೆ. ಅದನ್ನು ಒತ್ತಿ. ಅಗತ್ಯ ವಿದ್ದಾಗ ಇದನ್ನು ಅನ್‌ಲಾಕ್ ಮಾಡಲು ಆಯ್ಕೆ ಇದೆ. ಅದರಲ್ಲಿ ಕ್ಯಾಪ್ಟಾ ಸಂಖ್ಯೆ ನಮೂದಿಸಿ, ಒಟಿಪಿ ರಚನೆಯಾಗುತ್ತದೆ. ಅದನ್ನು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಎಸ್‌ಎಂಎಸ್‌ನಿಂದ ಪಡೆದು, ಅಲ್ಲಿ ಒಟಿಪಿ ನಮೂದಿಸಿದಾಗ ತಾತ್ಕಾಲಿಕವಾಗಿ ಅನ್‌ಲಾಕ್ ಆಗುತ್ತದೆ. ಈ ರೀತಿ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣ ವ್ಯವಸ್ಥೆಯನ್ನು ಲಾಕ್ ಮಾಡಿದರೆ, ವಂಚಕರಿಗೆ ನಿಮ್ಮ ಕಣ್ಣುಪಾಪೆ ಅಥವಾ ಬೆರಳಚ್ಚು ಬಳಸಿ ಯಾವುದೇ ದಾಖಲೆಗೆ ದೃಢೀಕರಣ ನೀಡುವುದು ಸಾಧ್ಯವಾಗುವುದಿಲ್ಲ.
ಮೈ ಆಧಾರ್ ಅ್ಕಪ್ ಮೂಲಕವಲ್ಲದೆ, ಕಂಪ್ಯೂಟರಿನಲ್ಲಿ myaadhaar.uidai.gov.in ತಾಣದಲ್ಲಿಯೂ ಲಾಗಿನ್ ಆಗಿ, ನೋಂದಾಯಿಸಿಕೊಂಡು ಬಯೋಮೆಟ್ರಿಕ್ ಲಾಕ್/ಅನ್‌ಲಾಕ್ ಮಾಡಿಕೊಳ್ಳಬಹುದು. ತಾತ್ಕಾಲಿಕವಾಗಿ ಅನ್‌ಲಾಕ್ ಮಾಡಿಕೊಳ್ಳಲು resident.uidai.gov.in/aadhaar-lockunlcok ತಾಣದಲ್ಲೂ ಪ್ರಯತ್ನಿಸಬಹುದು. ಆಧಾರ್ ಸೇವಾ ಕೇಂದ್ರಗಳಲ್ಲಿಯೂ ಈ ಸೌಕರ್ಯ ಲಭ್ಯವಿದೆ. ಆದರೆ, ಆಧಾರ್‌ಗೆ ನಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರುವುದು ಕಡ್ಡಾಯ. ಜೊತೆಗೆ, ತಾತ್ಕಾಲಿಕವಾಗಿ ಸೃಷ್ಟಿಯಾಗುವ ವರ್ಚುವಲ್ ಐಡಿ ಬಳಸಿಯೂ ಆಧಾರ್ ದೃಢೀಕರಣ ಮಾಡಬಹುದು.