ನೆಲಮಂಗಲ To ದೊಡ್ಡಬಳ್ಳಾಪುರ ರಸ್ತೆಯಲ್ಲಿ ನಿವೇಶನಗಳ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭದಾಯಕ, ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಸೇರಿರುವ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಉದ್ಯಾನ ನಗರಿಯ ಜನತೆಗೆ ಬಹುತೇಕ ನಗರ ಪ್ರದೇಶಗಳಾಗಿಯೇ ಪರಿಣಮಿಸಿವೆ. ಅಲ್ಲಿನ ಸಾರಿಗೆ ಸಂಪರ್ಕ, ಮೂಲಭೂತ ಸೌಕರ್ಯಗಳಿಂದಾಗಿ ಬೆಂಗಳೂರಿಗರು ನೆಲಮಂಗಲದಿಂದ ದೊಡ್ಡಬಳ್ಳಾಪುರ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಪರ್ಟಿ ಖರೀದಿಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.
ಅಭಿವೃದ್ಧಿಗೆ ಎಸ್.ಟಿ.ಆರ್.ಆರ್. ಯೋಜನೆ ವರದಾನವಾಯಿತು
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 'ಭಾರತ್ ಮಾಲಾ' ಯೋಜನೆಯ ಮೂಲಕ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ದಾಬಸ್ ಪೇಟೆ (ತುಮಕೂರು ರಸ್ತೆ), ದೊಡ್ಡಬಳ್ಳಾಪುರ (ಹಿಂದೂಪುರ ರಸ್ತೆ), ದೇವನಹಳ್ಳಿ (ಹೈದರಾಬಾದ್ ರಸ್ತೆ) ಮತ್ತು ಹೊಸಕೋಟೆಯನ್ನು (ಕೋಲಾರ ರಸ್ತೆ) ಸಂಪರ್ಕ ಆಗಲಿದೆ. ಮೊದಲ ಹಂತದಲ್ಲಿ ಈ ರಸ್ತೆಯು ದಾಬಸ್ ಪೇಟೆ ಮತ್ತು ದೊಡ್ಡಬಳ್ಳಾಪುರದ ನಡುವೆ ಕನೆಕ್ಟ್ ಆಗುತ್ತದೆ. ದೊಡ್ಡಬಳ್ಳಾಪುರದಲ್ಲಿ 2.5 ಕಿ.ಮೀ. ಉದ್ದದ ಫ್ಲೈಓವರ್ ಕೂಡ ನಿರ್ಮಾಣವಾಗಲಿದೆ. ಒಟ್ಟಿನಲ್ಲಿ ಎಸ್.ಟಿ.ಆರ್.ಆರ್. ಯೋಜನೆ ಕೇವಲ ನೆಲಮಂಗಲಕ್ಕೆ ಮಾತ್ರವಲ್ಲದೆ ದೊಡ್ಡಬಳ್ಳಾಪುರದ ಪ್ರಗತಿಪಥಕ್ಕೆ ಸಾಕಷ್ಟು ಬೆಂಬಲ ನೀಡುತ್ತಿದೆ. ಇವೆಲ್ಲವೂ ಈ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳು ಗರಿಗೆದರಲು ಕಾರಣವಾಗಿವೆ ಎನ್ನಲಾಗಿದೆ.
ಅತ್ಯುತ್ತಮ ಸಂಪರ್ಕ ಜಾಲ, ಕೈಗಾರಿಕೆಗಳ ಬೆಳವಣಿಗೆ, ಹೆಚ್ಚಿನ ವಾಣಿಜ್ಯ ಚಟುವಟಿಕೆ, ಮೂಲಸೌಕರ್ಯ ಪ್ರಗತಿ, ವಿವಿಧ ಅಭಿವೃದ್ಧಿ ಯೋಜನೆ ಇತ್ಯಾದಿಗಳು ಯಾವುದೇ ಪ್ರದೇಶದ ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಪೂರಕವಾಗಿ ಪರಿಣಮಿಸುತ್ತವೆ. ಇಂಥ ಜಾಗಗಳಲ್ಲಿ ಜನರು ನಿವೇಶನ ಹೊಂದಲು ಮತ್ತು ಅಲ್ಲಿ ಮನೆ ನಿರ್ಮಿಸಿ ವಾಸಿಸಲು ಬಯಸುತ್ತಾರೆ. ಇಂಥ ಅತ್ಯುತ್ತಮ ವಾಸಯೋಗ್ಯ ತಾಣವಾಗಿ ನೆಲಮಂಗಲದಿಂದ ದೊಡ್ಡಬಳ್ಳಾಪುರದವರೆಗಿನ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳು ಅಭಿವೃದ್ಧಿ ಪಥದತ್ತ ಸಾಗುತ್ತಿರುವುದರಿಂದ ಪ್ರಾಪರ್ಟಿ ಹೂಡಿಕೆದಾರರಿಗೆ ಫೇವರಿಟ್ ಆಗಿದೆ.
ಇದೇ ರೀತಿ ಫೆರಿಫೆರಲ್ ರಿಂಗ್ ರಸ್ತೆಯು ನೆಲಮಂಗಲದ ಚಿತ್ರಣವನ್ನೇ ಬದಲಾಯಿಸಿದೆ. ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಈ ರಿಂಗ್ ರೋಡ್ ಸಾಕಷ್ಟು ಪ್ರಯೋಜನಕಾರಿಯಾಗಿದ್ದು, ಬೆಂಗಳೂರ ವಿಮಾನ ನಿಲ್ದಾಣವನ್ನು ಶೀಘ್ರದಲ್ಲಿ ತಲುಪುವ ಹೊಸ ಕಾರಿಡಾರ್ ಯೋಜನೆಯೂ ಈ ಪ್ರದೇಶದ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಮುಖ್ಯ ಕಾರಣವಾಗಿದೆ.
ಉತ್ತಮ ಕನೆಕ್ಟಿವಿಟಿ:
ನೆಲಮಂಗಲಕ್ಕೆ ಕಿರ್ಲೋಸ್ಕರ್ ಕಂಪೆನಿ, ದಾಬಸ್ ಪೇಟೆ ಇಂಡಸ್ಟ್ರಿಯಲ್ ಏರಿಯಾ ಹತ್ತಿರವಿದೆ, ಅದೇ ರೀತಿ ಇಲ್ಲಿಗೆ ಬರಲಿರುವ ಔಟರ್ ರಿಂಗ್ ರೋಡ್ ಕೂಡ ಈ ಪ್ರದೇಶದವರಿಗೆ ಹತ್ತಿರವಾಗಲಿದ್ದು, ಇದರಿಂದ ಅವರಿಗೆ ನಗರದ ವಿವಿಧ ಭಾಗಗಳಿಗೆ ಅತ್ಯುತ್ತಮ ಕನೆಕ್ಟಿವಿಟಿ ಸಿಗಲಿದೆ. ಮುಂಬರುವ ದಿನಗಳಲ್ಲಿ ಈ ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳು ನಡೆಯಲಿದ್ದು, ಇಲ್ಲಿ ಕನೆಕ್ಟಿವಿಟಿಯೂ ಚೆನ್ನಾಗಿದೆ ಹಾಗೂ ಕೈಗಾರಿಕಾ ಪ್ರದೇಶವೂ ಹತ್ತಿರವಿದೆ. ಆದ್ದರಿಂದ ಇದು ಪ್ರಾಪರ್ಟಿ ಹೂಡಿಕೆಗೆ ಅತ್ಯುತ್ತಮ ಪ್ರದೇಶವಾಗಿ ಹೊರಹೊಮ್ಮಿದೆ.
ಕೈಗಾರಿಕಾ ತಾಣ ದೊಡ್ಡಬಳ್ಳಾಪುರ:
ಇದು ಪ್ರಮುಖ ಕೈಗಾರಿಕಾ ಪ್ರದೇಶವನ್ನೂ ಹೊಂದಿದ್ದು, ಸಾಕಷ್ಟು ಉದ್ಯೋಗ ಅವಕಾಶವನ್ನೂ ಸೃಷ್ಟಿಸುತ್ತಿದೆ. ಟ್ರ್ಯಾಕ್ಟರ್ ಆ್ಯಂಡ್ ಫಾರ್ಮ್ ಎಕ್ವಿಪ್ಮೆಂಟ್ ಲಿಮಿಟೆಡ್, ಆಲ್ಟ್ರಾಟೆಕ್ ಸಿಮೆಂಟ್, ಸುಪ್ರೀಂ ಸೋಲಾರ್, ಕಣ್ವ ಪ್ಲಾಸ್ಟಿಕ್ಸ್, ಜೆಕೆ ಪೇಂಟ್ಸ್ ಸೇರಿದಂತೆ ನೂರಾರು ಇಂಡಸ್ಟ್ರಿಗಳು ಇಲ್ಲಿವೆ. ಇದರಿಂದಾಗಿ ಈ ಪ್ರದೇಶದ ಸುತ್ತಮುತ್ತ ನಿವೇಶನ ಖರೀದಿಯು ಭವಿಷ್ಯದಲ್ಲಿ ಅತ್ಯಂತ ಲಾಭದಾಯಕವಾಗಲಿದೆ.
ಬೆಂಗಳೂರು ಬಿಐಎಎಲ್ ಐಟಿಐಆರ್ ಯೋಜನೆಯೂ ದೊಡ್ಡಬಳ್ಳಾಪುರದ ಅಭಿವೃದ್ಧಿಗೆ ಬೆಂಬಲವಾಗಿದೆ :
ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 12 ಸಾವಿರ ಎಕರೆ ಪ್ರದೇಶದಲ್ಲಿ ಇನ್ಫಾರ್ಮೆಷನ್ ಟೆಕ್ನಾಲಜಿ ಇನ್ವೆಸ್ಟ್ಮೆಂಟ್ ರೀಜನ್ (ಐಟಿಐಆರ್) ನಿರ್ಮಾಣ ಗೊಳ್ಳಲಿದೆ. ರಾಜ್ಯದ ಇತಿಹಾಸದಲ್ಲಿಯೇ ಇದೊಂದು ಬೃಹತ್ ಮೂಲಸೌಕರ್ಯ ಪ್ರಾಜೆಕ್ಟ್ ಆಗಿದ್ದು, ಪ್ರತ್ಯಕ್ಷವಾಗಿ 1.2 ದಶಲಕ್ಷ ಮತ್ತು ಪರೋಕ್ಷವಾಗಿ 2.8 ದಶಲಕ್ಷ ಉದ್ಯೋಗ ಸೃಷ್ಟಿಸಲಿದೆ. 'ಐಟಿಐಆರ್ ಎನ್ನುವುದು ಐಟಿ, ಐಟಿಯೇತರ ಕಂಪನಿಗಳ ಮತ್ತು ಹಾರ್ಡ್ವೇರ್ ಕಂಪನಿಗಳ ಪಾರ್ಕ್ ಆಗಿದೆ. ಇದರಡಿಯಲ್ಲಿ ವಸತಿ ಟೌನ್ ಶಿಪ್, ಮಿನಿ ಏರ್ಪೋರ್ಟ್, ಶಾಪಿಂಗ್ ಮಾಲ್, ಆಸ್ಪತ್ರೆ, ಶೈಕಣಿಕ ಸಂಸ್ಥೆ ಇತ್ಯಾದಿಗಳೂ ಇರಲಿವೆ. ದೊಡ್ಡಬಳ್ಳಾಪುರದ ಪ್ರಗತಿಪಥಕ್ಕೆ ಐಟಿಐಆರ್ ಯೋಜನೆಯು ಮಹತ್ವವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರದೇಶದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಅಸೆಟ್ ಡೆವೆಲಪರ್ಸ್ ಸಂಸ್ಥೆಯು ಕೈಗೆಟಕುವ ಬೆಲೆಗೆ ನಿವೇಶನಗಳನ್ನು ನೀಡುತ್ತಿದೆ. ಲೇಔಟ್ ಸುಸಚ್ಚಿತವಾಗಿದೆ, ಅಭಿವೃದ್ಧಿಯಾಗಿದೆ, ಒಳ್ಳೆಯ ಲೊಕೇಶನ್ ನಲ್ಲಿ ನಿರ್ಮಾಣವಾಗಿದೆ, ನೋಂದಣೆಗೆ ಸಿದ್ಧಿವಿರುವ ಸೈಟುಗಳು, ಮನೆ ಕಟ್ಟಲು ಅನುಕೂಲಕರವಾಗಿದೆ, ಕೇವಲ ರೂ. 4.2 ಲಕ್ಷಕ್ಕೆ 20x30 ಸೈಟು ಸಿಗುತ್ತಿದೆ ಮತ್ತು ರೂ. 8.4 ಲಕ್ಷಕ್ಕೆ 30x40 ನಿವೇಶನ ಸಿಗುತ್ತಿದೆ, ಇಂದೇ ಸ್ಪಾಟ್ ಬುಕಿಂಗ್ ಮಾಡಿ ಡಿಸ್ಕೌಂಟ್ ಪಡೆಯಿರಿ.
ಲೇಔಟ್ ನ ಪ್ರಮುಖ ಮುಖ್ಯಾಂಶಗಳು :
DR SMCE (ಚೆನ್ನಿಂಗಪ್ಪ ಇಂಜಿನಿಯರಿಂಗ್ ಕಾಲೇಜು), ಹೊಸ ಎಪಿಎಂಸಿ ಯಾರ್ಡ್ ಮತ್ತು ಗೋಲ್ಡನ್ ಪಾಮ್ಸ್ ಹತ್ತಿರವಿದೆ, ತ್ಯಾಮಗೊಂಡ್ಲು ಕೈಗಾರಿಕಾ ಪಟ್ಟಣ ಮತ್ತು ದಾಬಸ್‌ಪೇಟ್ ಇಂಡಸ್ಟ್ರಿಯಲ್ ಟೌನ್ ಸಮೀಪವಿದೆ, KSCA ಕ್ರೀಡಾಂಗಣ, ಮಧುರೈ ದೇವಸ್ಥಾನ, ರಾಜ್ಯ ಹೆದ್ದಾರಿ - 9, 330 ಅಡಿ PRR ರಸ್ತೆಗೆ ಸಂಪರ್ಕವಿದೆ.
ಲೇಔಟ್ ನಲ್ಲಿ ಸಿಗುವ ಸೌಕರ್ಯಗಳು :
ಎಂಟ್ರನ್ಸ್ ಆರ್ಚ್, ಮೆಟಲಿಂಗ್ ರಸ್ತೆಗಳು, ವಿದ್ಯುತ್, ಸ್ಯಾನಿಟರಿ ಸಂಪರ್ಕ , ಪ್ರತಿ ಸೈಟ್‌ಗೆ ನೀರು ಸರಬರಾಜು ವ್ಯವಸ್ಥೆ, 30* 25 ಅಡಿ ಅಗಲದ ರಸ್ತೆಗಳು.
ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ :
ಅಸೆಟ್ ಡೆವೆಲಪರ್ಸ್
#29, ಕೃಷ್ಣ ಕಾಂಪ್ಲೆಕ್ಸ್, 1ನೇ ಮಹಡಿ, ರಹೇಜಾ ಪಾರ್ಕ್ ಎದುರು, ವಿಜಯನಗರ, ಬೆಂಗಳೂರು.
ಮೊಬೈಲ್ ಸಂಖ್ಯೆ : 8884055599