ನಿವೇಶನಗಳು ಕೇವಲ ರೂ. 1099 ಚದರ ಅಡಿಗೆ ಮಾರಾಟಕ್ಕೆ ಲಭ್ಯವಿದೆ.
ಲೇಔಟ್ ನ ಮುಖ್ಯಾಂಶಗಳು :
- ತುಮಕೂರು ರಸ್ತೆ NH-4 ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 5 ನಿಮಿಷ
- ದಾಬಸ್ ಪೇಟೆಯ ಸೋಂಪುರ ಇಂಡಸ್ಟ್ರಿಯಲ್ ಏರಿಯಾ ಪಕ್ಕದಲ್ಲಿದೆ
- ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕವಿದೆ.
- ಹತ್ತಿರದಲ್ಲಿ ಕಿರ್ಲೋಸ್ಕರ್ ಮತ್ತು ಏಷ್ಯನ್ ಪೇಂಟ್ ಕೈಗಾರಿಕೆಗಳಿವೆ.
- ನೈಸರ್ಗಿಕವಾಗಿ ಹಸಿರು ತಾಜಾ ಪರಿಸರ ಇದೆ.
ಸೌಲಭ್ಯಗಳು :
- ಬೀದಿ ದೀಪದೊಂದಿಗೆ ವಿದ್ಯುತ್ ಕಂಬಗಳ ಜೋಡಣೆ
- ರಸ್ತೆ, ಪ್ರತಿ ಸೈಟಿಗೂ ನೀರಿನ ಸಂಪರ್ಕ ಮತ್ತು ಒಳಚರಂಡಿ
- ಪಾರ್ಕ್, ದೇವಾಲಯ, 30 ಅಡಿ 50 ಅಡಿ ಅಗಲದ ರಸ್ತೆಗಳು
- ಪ್ರತಿ ನಿವೇಶನಕ್ಕೆ ಒಂದು ಸಸಿ ನೆಡುವ ಕಾರ್ಯಕ್ರಮ
ತುಮಕೂರು ರಸ್ತೆ ಪ್ರದೇಶವು ವೇಗವಾಗಿ ಪ್ರಗತಿ ಕಾಣುತ್ತಿದ್ದು. ನಿವೇಶನ ಖರೀದಿದಾರರ ಅಚ್ಚುಮೆಚ್ಚಿನ ಸ್ಥಳವಾಗಿ ಮಾರ್ಪಟ್ಟಿದೆ. ಜಾಲಹಳ್ಳಿ. ಪೀಣ್ಯ, ಯಶವಂತಪುರ, ಟಿ. ದಾಸರಹಳ್ಳಿ, ಮಾಕಳಿ ಮತ್ತು ನೆಲಮಂಗಲವನ್ನು ಒಳಗೊಂಡ ತುಮಕೂರು ರಸ್ತೆಯು ಬೆಂಗಳೂರಿನ ವಾಯುವ್ಯ ಭಾಗದಲ್ಲಿರುವ ಪ್ರಮುಖ ರಿಯಲ್ ಎಸ್ಟೇಟ್ ಕಾರಿಡಾರ್ ಆಗಿ ಪರಿಣಮಿಸಿದೆ. ಮುಖ್ಯವಾಗಿ ಸ್ವಂತ ಮನೆ ಅಥವಾ ನಿವೇಶನ ಖರೀದಿ ಮಾಡುವ ಜನರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ನೆಲಮಂಗಲದಿಂದ ಡಾಬಸ್ ಪೇಟೆಯವರಿಗೂ ರಿಯಲ್ ಎಸ್ಟೇಟ್ ಚಟುವಟಿಕೆಗಳು ಚುರುಕು ಗೊಂಡಿವೆ.
ಸಮೀಪದಲ್ಲಿ ಕೈಗಾರಿಕಾ ಪ್ರದೇಶಗಳು :
ತುಮಕೂರು ರಸ್ತೆಯೆಂದಾಕ್ಷಣ ನಮಗೆ ನೆನಪಿಗೆ ಬರುವುದು ಕೈಗಾರಿಕಾ ಪ್ರದೇಶಗಳು. ಸಣ್ಣ ಕೈಗಾರಿಕೆಗಳಿಂದ ಹಿಡಿದು ಬೃಹತ್ ಕೈಗಾರಿಕೆಗಳು ಇಲ್ಲಿವೆ. ಹಲವು ಬಹುರಾಷ್ಟ್ರೀಯ ಕಂಪನಿಗಳನ್ನು ಹೊಂದಿರುವ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಯನ್ನು ಪೀಣ್ಯ ಕೈಗಾರಿಕಾ ಪ್ರದೇಶ ಪಡೆದಿದೆ. ಇಲ್ಲಿ ಇಸ್ರೊ ಡೇಟಾ ಸೆಂಟರ್, ಹಿಟಾಚಿ, ಎಕ್ಸೈಡ್ ಇಂಡಸ್ಟ್ರೀಸ್, ಹಿಮಾಲಯ, ಪಾರ್ಲೆ, ವೊಲ್ವೊ ಸೇರಿದಂತೆ ಹಲವು ಕಂಪನಿಗಳು ಜನರಿಗೆ ಉದ್ಯೋಗ ನೀಡುತ್ತಿವೆ.
ನೆಲಮಂಗಲ ಪ್ರದೇಶಕ್ಕೆ ನೇರ ಮತ್ತು ಅತಿ ಸಮೀಪದ ಇಂಡಸ್ಟ್ರಿಯಲ್ ಕಾರಿಡಾರ್ ಪ್ರದೇಶವೆಂದರೆ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶ ಇಲ್ಲಿಂದ ಕೇವಲ 15 ಕಿ.ಮೀ. ದೂರದಲ್ಲಿದೆ. ಈ ಕೈಗಾರಿಕೆಗಳನ್ನು, ಉದ್ಯಮಗಳನ್ನು ನಂಬಿಕೊಂಡು ಸಾವಿರಾರು ಜನರು ವೇಗದ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಉದ್ಯೋಗಿಗಳು, ನಿವಾಸಿಗಳು ತಮ್ಮ ಕನಸಿನ ಮನೆಯನ್ನು ಖರೀದಿಸುವ ಪ್ರಕ್ರಿಯೆ ಹೆಚ್ಚಿರುವುದಕ್ಕೆ ಸಾಕ್ಷಿಯಾಗಿ ತುಮಕೂರು ರಸ್ತೆಯಲ್ಲಿ ವಸತಿ ಲೇಔಟ್ ಗಳು ಹಾಗೂ ನಿವೇಶನಗಳು ಕಾಣಸಿಗುತ್ತವೆ. ಜೀವನ ನಿರ್ವಹಣೆಗೆ ಪ್ರಶಾಂತವಾದ ಯೋಗ್ಯ ಸ್ಥಳವೆಂದು ಈ ಪ್ರದೇಶ ಪರಿಗಣಿತವಾಗಿದ್ದು, ಹೆಚ್ಚು ಜನರು ಇಲ್ಲಿ ನಿವೇಶನ ಖರೀದಿಗೆ ಆಸಕ್ತಿ ವಹಿಸುತ್ತಿದ್ದಾರೆ.
ನೆಲಮಂಗಲದಲ್ಲಿ ಅಮೆಜಾನ್, ಫ್ಲಿಪ್ ಕಾರ್ಟ್, ಲಾಜಿಸ್ಟಿಕ್ ಕಂಪನಿಗಳು, ಕಿರ್ಲೋಸ್ಕರ್ ನಂತಹ ಸಂಸ್ಥೆಗಳು ಈಗಾಗಲೇ ಈ ಭಾಗದಲ್ಲಿ ತಳವೂರಿವೆ.
ಸಾರಿಗೆ ಸೌಲಭ್ಯ:
ತುಮಕೂರು ರಸ್ತೆಯಿಂದ ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಸುಮಾರು 30-35 ಕಿ.ಮೀ. ದೂರವಿದೆ. ಬೆಂಗಳೂರು ನಗರ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಕ್ಕೆ 25-30 ಕಿ.ಮೀ.ದೂರವಿದೆ.
ರಾಕ್ ಲೈನ್ ಮಾಲ್, ಗೋಲ್ಡನ್ ಪಾಮ್ ರೆಸಾರ್ಟ್, ಎಪಿಎಂಸಿ ನ್ಯೂ ಮಾರ್ಕೆಟ್, ಕ್ರಿಕೆಟ್ ಸ್ಟೇಡಿಯಂ ಇನ್ನಿತರೇ ಆಕರ್ಷಕ ಸ್ಥಳಗಳು ತುಮಕೂರು ರಸ್ತೆಯನ್ನು ಇನ್ನಷ್ಟು ಆಪ್ತವಾಗಿಸಿವೆ. ಪಿಇಎಸ್ ಇನ್ಸ್ಟಿಟ್ಯೂಷನ್, ಬಿಪಿ ಇಂಡಿಯನ್ ಶಾಲೆ, ಸಿದ್ಧಗಂಗಾ ಹೈಸ್ಕೂಲ್, ಸೇಂಟ್ ಫಿಲೋಮಿನಾಸ್ ಪಬ್ಲಿಕ್ ಸ್ಕೂಲ್, ಮಿಲೇನಿಯಂ ಸ್ಕೂಲ್, ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜುಗಳು ಸುಮಾರು 6-7 ಕಿ.ಮೀ. ಆಸುಪಾಸಿನಲ್ಲಿವೆ. ಸಪ್ತಗಿರಿ ಕಾಲೇಜು, ಆಚಾರ್ಯ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಿಗೂ ಸುಲಭವಾಗಿ ಪ್ರಯಾಣಿಸಬಹುದು. ಒಮೆಗಾ ಸ್ಪೆಷಾಲಿಟಿ ಆಸ್ಪತ್ರೆ, ಎಂಎಸ್ ರಾಮಯ್ಯ ಮತ್ತು ಸಾಗರ್ ಹಾಸ್ಟಿಟಲ್ ಸೇರಿದಂತೆ ಹಲವು ಆಸ್ಪತ್ರೆಗಳು ತುಮಕೂರು ರಸ್ತೆಯ ಸುತ್ತಾ ಮುತ್ತಾ ಇವೆ.
ರಿಯಲ್ ಎಸ್ಟೇಟ್ ಚುರುಕು :
ಬೆಂಗಳೂರು ನಗರದಿಂದ 70 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ತುಮಕೂರು ರಸ್ತೆಯು ದೊಡ್ಡ ವಸತಿ ಕೇಂದ್ರವಾಗಿ ಮಾರ್ಪಾಡುತ್ತಿದೆ. ನಗರದೊಳಗೆ ಜನದಟ್ಟಣೆ ಹೆಚ್ಚಿರುವುದರಿಂದ ಮತ್ತು ಮೆಟ್ರೊ ಇತ್ಯಾದಿಗಳಿಂದ ಪ್ರಯಾಣ ಸರಾಗವಾಗುತ್ತಿರುವುದರಿಂದ ಹೆಚ್ಚಿನ ಜನರು ಈ ಪ್ರದೇಶಗಳತ್ತ ಗಮನ ನೀಡುತ್ತಿದ್ದಾರೆ. ಇತರೆ ಭಾಗಗಳಿಗೆ ಹೋಲಿಸಿದರೆ ತುಮಕೂರು ರಸ್ತೆ ಹೆಚ್ಚು ಪ್ರಶಾಂತ ಸ್ಥಳಗಳೆಂದು ಖ್ಯಾತಿ ಪಡೆದಿದೆ. ಇಲ್ಲಿ ಕಡಿಮೆ ಬಜೆಟ್ ನಲ್ಲಿ ಹೂಡಿಕೆ ಮಾಡುವ ವಸತಿ ಯೋಜನೆಯೊಗಿದೆ. ಹಚ್ಚ ಹಸಿರಾದ ಲ್ಯಾಂಡ್ ಸ್ಕೇಪ್ ಉದ್ಯಾನದೊಂದಿಗೆ ನೀವು ಸಂಪೂರ್ಣ ಪ್ರಶಾಂತತೆಯ ಭಾವನೆಯನ್ನು ಆನಂದಿಸಬಹುದು. ಹಲವಾರು ಮೂಲಭೂತ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ :
ನಮ್ಮ ಪ್ರಾಜೆಕ್ಟ್ ಹತ್ತಿರ ಇರುವ ಸ್ಥಳಗಳು :
- ಬಿಪಿ ಇಂಡಿಯನ್ ಪಬ್ಲಿಕ್ ಸ್ಕೂಲ್
- ನಾರಾಯಣ ರೆಸಿಡೆನ್ಶಿಯಲ್ ಕಾಲೇಜ್
- ಟರ್ಬೊ ಟೆಕ್ ಎಂಜಿನಿಯರಿಂಗ್ ಕಂಪನಿ
- ಸಾರ್ಟೋರಿಯಸ್ ಸ್ಟೇಡಿಯಂ ಪ್ರೈ. ಲಿಮಿಟೆಡ್ (ಎಂಎನ್ಸಿ ಕಂಪನಿ)
- ಮ್ಯಾಕ್ಸ್ ಪ್ರೆಸಿಷನ್ ಕಂಪನಿ
- ವಾನ್ ರೋಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
- ಧರ್ಮಶ್ರೀ ರೆಸಾರ್ಟ್ಸ್
ರಾಷ್ಟ್ರೀಯ ಬ್ಯಾಂಕ್ ಮತ್ತು ಎಂ.ಎನ್.ಸಿ ಬ್ಯಾಂಕುಗಳಿಂದ ನಿವೇಶನ ಖರೀದಿಸಲು 75% ಸಾಲ ಸೌಲಭ್ಯವಿದೆ.
ನಿವೇಶನದ ಅಳತೆಗಳು :
30x40, 34x40, 33x40, 32x40, ODD Sites
ಸೈಟ್ ಭೇಟಿಗಾಗಿ ಸಂಪರ್ಕಿಸಿ :
9740494008, 9740246003