ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ- 4 ಮತ್ತು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ -48ರ ಸಂಪರ್ಕಿಸುವ ಜಂಕ್ಷನ್ ಎಂದರೆ ತಪ್ಪಾಗಲಾರದು, ನೆಲಮಂಗಲ ಮೂಲಭೂತ ಸೌಕರ್ಯದೊಂದಿಗೆ ಬೆಂಗಳೂರಿನ ಸಬ್ ಸಿಟಿಯಾಗಿ ಬೆಳೆಯುತ್ತಿದೆ, ತುಮಕೂರು ರಸ್ತೆಯ ಬಹುತೇಕ ಎಲ್ಲ ಕಡೆಗಳಲ್ಲೂ ಭೂಮಿಗೆ ಚಿನ್ನದಂತಾ ಬೆಲೆ ಬಂದಿರುವದರಿಂದ ಗ್ರಾಹಕರು ಕೂಡ ಇದೇ ಪ್ರದೇಶದ ಕಡೆ ನಿವೇಶನ ಖರೀದಿಸಲು ಆಸಕ್ತಿ ಹೊಂದಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬಂದಿದೆ.
ನೆಲಮಂಗಲ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವಸತಿ ನಿವೇಶನಗಳನ್ನು ನೀಡುತ್ತಿದೆ. ತುಮಕೂರು ರಸ್ತೆ ಈಗ ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಅತ್ಯಂತ ಹಾಟ್ ಫೇವರೀಟ್ ಆಗಿ ಹೊರಹೊಮ್ಮಿದೆ.
ತುಮಕೂರು ರಸ್ತೆಯಲ್ಲಿ ಮೆಟ್ರೊ, ಚತುಷ್ಪಥ ರಸ್ತೆಗಳು ಹಾಗೂ ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಇರುವುದರಿಂದ ಸ್ವಾಭಾವಿಕವಾಗಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನ ಖರೀದಿಸುತ್ತಿದ್ದಾರೆ, ಈ ಪ್ರದೇಶ ಅತ್ಯಂತ ವೇಗವಾಗಿ ಬೆಳೆಯುತ್ತಿದೆ, ತುಮಕೂರು ರಸ್ತೆಗೆ ಹೊಂದಿ ಕೊಂಡಿರುವ ನೆಲಮಂಗಲ ಸುತ್ತಮುತ್ತ ಸಾಕಷ್ಟು ಅಭಿವೃದ್ಧಿಯಾಗಿದೆ, ಇದಕ್ಕೆ ಕಾರಣ ಸಂಪರ್ಕ ವ್ಯವಸ್ಥೆ. ಮೆಜೆಸ್ಟಿಕ್, ಮಾರುಕಟ್ಟೆಯಿಂದ, ಯಶವಂತಪುರದಿಂದ ಸಾಕಷ್ಟು ಬಸ್, ರೈಲು ಹಾಗೂ ಮೆಟ್ರೊ ಸಂಪರ್ಕ ಇರುವುದರಿಂದ ಕೇವಲ ಅರ್ಧ ಗಂಟೆಯಲ್ಲಿ ತಲುಪಬಹುದಾಗಿದೆ.
ಇದಲ್ಲದೇ ಈ ಭಾಗದ ಪರಿಸರ ವಾಸಯೋಗ್ಯವಾಗಿರುವುದರಿಂದ ಸೈಟು ಖರೀದಿಸಿ ಮನೆ ಕಟ್ಟಿಕೊಂಡು ಆರಾಮವಾಗಿ ಇರಬಹುದು. ಬೆಂಗಳೂರು ತುಮಕೂರು ಹೆದ್ದಾರಿ ವಿಶ್ವಮಟ್ಟದ ಕಾಮಗಾರಿಯನ್ನು ಹೊಂದಿದೆ ಈ ಭಾಗ ಸಾಕಷ್ಟು ಅಭಿವೃಧಿಯಾಗಿರುವ ಬೆನ್ನಲ್ಲೇ ಸರಕಾರ ಕೂಡ ಸಾಕಷ್ಟು ಯೋಜನೆಗಳನ್ನು ಹಾಗೂ ಸೌಕರ್ಯಗಳನ್ನು ಒದಗಿಸಿದೆ. ಇದು ಕೂಡ ತುಮಕೂರು ರಸ್ತೆ ಬೆಳೆಯಲು ಸಹಕಾರಿಯಾಗಿದೆ.
ಈ ಪ್ರದೇಶದಲ್ಲಿ ಶೈಕ್ಷಣಿಕ ಸಂಸ್ಥೆಗಳಾದ ಹಾರ್ವರ್ಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ಹರ್ಷ ಇಂಟರ್ನ್ಯಾಶನಲ್ ಸ್ಕೂಲ್, ಬಿಪಿ ಇಂಡಿಯನ್ ಸ್ಕೂಲ್ ಮತ್ತು ಎಸ್ಬಿಐಟಿ ಎಂಜಿನಿಯರಿಂಗ್ ಕಾಲೇಜು, ಕಣ್ವ ಸ್ಕೂಲ್ಗಳು ಇದೆ. ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೇ ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆ ಇನ್ನೂ ಮುಂತಾದ ಆಸ್ಪತ್ರೆಗಳು ಇದೆ. ಈ ಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳ ಇದೆ.
ತುಮಕೂರು ರಸ್ತೆ ನೆಲಮಂಗಲ ಹತ್ತಿರ ಅಭಿವೃದ್ಧಿ ಪಡಿಸಲಾಗಿರುವ ರಕ್ಷಾ ಎನ್ ಕ್ಲೆವ್ ಬಡಾವಣೆಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಎಲ್ಲ ಸೌಲಭ್ಯಗಳನ್ನು ಹೊಂದಿರುವ ಈ ಬಡಾವಣೆಯಲ್ಲಿ ಅತೀ ಕಡಿಮೆ ಬೆಲೆಗೆ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ.
ನೋಂದಣಿಗೆ ಸಿದ್ಧವಾಗಿರುವ ಸೈಟುಗಳು. ತಕ್ಷಣ ಮನೆ ಕಟ್ಟಲು ರೆಡಿಯಿರುವ ನಿವೇಶನಗಳು, ನಿಮ್ಮ ಕುಟುಂಬದವರ ಕನಸಿನ ಮನೆ ಮಾಡಲು ಅತ್ಯುತ್ತಮ ಸ್ಥಳವಾಗಿದೆ. ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳಿದ್ದು, ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕೆಂದು ಬಯಸುವವರು ಬಡಾವಣೆಯಲ್ಲಿ ನಿಶ್ಚಿಂತೆಯಿಂದ ಮನೆ ಮಾಡಬಹುದಾಗಿದೆ. ನೆಲಮಂಗಲದಲ್ಲಿ ಶುದ್ದಪರಿಸರ ವಾತಾವರಣವಿದೆ.
ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಸುಸಜ್ಜಿತ ರಸ್ತೆಗಳನ್ನು ಈ ಬಡಾವಣೆ ಹೊಂದಿದ್ದು, ನಿವೇಶನಗಳು ಮಾರಾಟಕ್ಕೆ ಸಜ್ಜಗೊಂಡಿವೆ. ಸುತ್ತಮುತ್ತಲಿನ ಪ್ರದೇಶವೂ ಕೂಡ ಸಂಪೂರ್ಣ ಅಭಿವೃದ್ಧಿ ಹೊಂದಿರುವುದರೊಂದಿಗೆ ವಾಸಯೋಗ್ಯ ಬಡಾವಣೆ ಇದಾಗಿದೆ. ಬಡಾವಣೆಯ ಪ್ರತಿ ನಿವೇಶನಕ್ಕೂ ಪ್ರತ್ಯೇಕ ನೀರು, ವಿದ್ಯುತ್ ಸಂಪರ್ಕವನ್ನು ಒದಗಿಸಲಾಗುತ್ತಿದೆ. ಹೂಡಿಕೆಗೂ ಇದು ಪ್ರಶಸ್ತ ಎಂಬ ವಿಶ್ಲೇಷಣೆಯೂ ಇದೆ. ಈ ಬಡಾವಣೆಯಿಂದ ಡಾಬಸ್ ಪೇಟೆ, ದೊಡ್ಡಬಳ್ಳಾಪುರ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ತುಮಕೂರು, ಮಂಗಳೂರಿಗೆ ಹೋಗಲು ಉತ್ತಮ ಸಂಪರ್ಕ ರಸ್ತೆಗಳು ಇದೆ.
ಕೈಗೆಟಕುವ ದರದಲ್ಲಿ ನಿವೇಶನ :
ರಕ್ಷಾ ಎನ್ ಕ್ಲೆವ್ , ಅಭಿವೃದ್ಧಿ ಪಡಿಸಲಾಗಿರುವ ಬಡಾವಣೆಯಲ್ಲಿ ಕೈಗೆಟಕುವ ದರದಲ್ಲಿ ಸೈಟುಗಳನ್ನು ಮಾರಾಟ ಮಾಡಲಾಗುತ್ತಿದೆ. ನಿವೇಶನವು 4.8 ಲಕ್ಷದಿಂದ ಶುರುವಾಗುತ್ತದೆ. ಅತ್ಯಂತ ಕಡಿಮೆ ಬಂಡವಾಳದಲ್ಲಿ ನಿವೇಶನ ಖರೀದಿಸುವ ಕನಸನ್ನು ನನಸಾಗಿಸಿಕೊಳ್ಳುವ ಅವಕಾಶವನ್ನು ರಕ್ಷಾ ಎನ್ ಕ್ಲೆವ್ ಒದಗಿಸಿಕೊಟ್ಟಿದೆ.
ಗೊರಗುಂಟೆಪಾಳ್ಯ ದಿಂದ ಕೇವಲ 25 ನಿಮಿಷದಲ್ಲಿ ಈ ಬಡಾವಣೆ ತಲುಪಬಹುದು, ಇನ್ನೂ ನೆಲಮಂಗಲಕ್ಕೆ ಹತ್ತಿರದಲ್ಲಿರುವ ಡಾಬಸ್ಪೇಟೆ ಏಷ್ಯದ ಅತಿದೊಡ್ಡ ಕೈಗಾರಿಕಾ ಕ್ಷೇತ್ರವಾಗಿ ಮಾರ್ಪಟ್ಟಿರುವದರಿಂದ ಉದ್ಯೋಗಕಾಂಕ್ಷಿಗಳಿಗೆ ಹೆಚ್ಚು ಅನುಕೂಲವಾಗಲಿದೆ, ವಿಕೆಂಡ್ ಕಳೆಯಲು ಕಣ್ವ ರೆಸಾರ್ಟ್, ಹಾಲಿಡೇ ರೆಸಾರ್ಟ್ ಸಮೀಪದಲ್ಲಿದೆ.
ನಿಮ್ಮ ನಿವೃತ್ತಿಯ ನಂತರ ಮನೆಕಟ್ಟಿಕೊಂಡು ಆರಾಮವಾಗಿರಬಹುದು. ಸೈಟುಗಳ ಮೇಲೆ ಹಣ ಹೂಡಿದರೆ ಹೆಚ್ಚಿನ ಲಾಭದ ನಿರೀಕ್ಷೆ ಮಾಡಬಹುದು ಹಾಗೂ ಸುರಕ್ಷಿತವಾಗಿರುತ್ತದೆ, ಬೆಲೆ ಕಡಿಮೆ ಇರುವುದರಿಂದ ಜೊತೆಗೆ ಮನೆ ಕಟ್ಟಲು ಅನುಕೂಲವಿರುವುದರಿಂದ ನಿವೇಶನ ಖರೀದಿಸಲು ಗ್ರಾಹಕರು ತಮ್ಮ ಮುಂಗಡ ಹಣ ಕೊಟ್ಟು ಬುಕಿಂಗ್ ಮಾಡುತ್ತಿದ್ದಾರೆ. ತುಮಕೂರು ರಸ್ತೆಗೆ ಕಿರೀಟ ಇದ್ದ ಹಾಗೆ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಇರುವುದರಿಂದ ಈ ಪ್ರದೇಶ ವಿಶ್ವಮಟ್ಟದಲ್ಲಿ ಹೆಸರು ವಾಸಿಯಾಗಿದೆ, ಇದರಿಂದ ಹೆಚ್ಚು ಅನುಕೂಲ ಆಗಿದೆ.
ನಿವೇಶನ ನೋಡಲು ಮತ್ತು ಖರೀದಿಸಲು ಕರೆ ಮಾಡಿ : 9606442860